logo
ಕನ್ನಡ ಸುದ್ದಿ  /  ಕರ್ನಾಟಕ  /  ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರಿಂದ ಹಲ್ಲೆ; ಕೊಲೆ ಯತ್ನ ಆರೋಪಿಸಿ ಸಿಟಿ ರವಿ ಧರಣಿ, ಯಾವುದಕ್ಕೂ ಹೆದರಲ್ಲ ಎಂದ ಎಂಎಲ್‌ಸಿ

ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರಿಂದ ಹಲ್ಲೆ; ಕೊಲೆ ಯತ್ನ ಆರೋಪಿಸಿ ಸಿಟಿ ರವಿ ಧರಣಿ, ಯಾವುದಕ್ಕೂ ಹೆದರಲ್ಲ ಎಂದ ಎಂಎಲ್‌ಸಿ

Jayaraj HT Kannada

Dec 19, 2024 05:24 PM IST

google News

ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರಿಂದ ಹಲ್ಲೆ; ಕೊಲೆ ಯತ್ನ ಆರೋಪಿಸಿ ಎಂಎಲ್‌ಸಿ ಸಿಟಿ ರವಿ ಧರಣಿ

    • ‌ನನ್ನ ಮೇಲೆ ಕೊಲೆ ಯತ್ನ ನಡೆದಿದೆ. ಒಬ್ಬ ಶಾಸಕನಿಗೆ ರಕ್ಷಣೆ ಇಲ್ಲ ಎಂದಾದರೆ, ರಾಜ್ಯದ ಇತರ ಜನರ ಪರಿಸ್ಥಿತಿ ಏನು? ಸುವರ್ಣ ಸೌಧದ ಮೊಗಸಾಲೆಯಲ್ಲಿ ಹೋಗುತ್ತಿದ್ದಾಗ ನನ್ನ ಮೇಲೆ ಹಲ್ಲೆ ಮಾಡಲು ಬಂದಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್‌ ಹೆಸರು ಹೇಳಿಕೊಂಡು ದಾಳಿ ನಡೆಸಿದ್ದಾರೆ ಎಂದು ಸಿಟಿ ರವಿ ಹೇಳಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರಿಂದ ಹಲ್ಲೆ; ಕೊಲೆ ಯತ್ನ ಆರೋಪಿಸಿ ಎಂಎಲ್‌ಸಿ ಸಿಟಿ ರವಿ ಧರಣಿ
ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರಿಂದ ಹಲ್ಲೆ; ಕೊಲೆ ಯತ್ನ ಆರೋಪಿಸಿ ಎಂಎಲ್‌ಸಿ ಸಿಟಿ ರವಿ ಧರಣಿ

ಡಾ. ಬಿಆರ್ ಅಂಬೇಡ್ಕರ್ ಅವರ ಕುರಿತು ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿದ ಹೇಳಿಕೆಯು ರಾಜ್ಯ ವಿಧಾನ ಪರಿಷತ್‌ನಲ್ಲಿ ದೊಡ್ಡ ಗದ್ದಲವನ್ನು ಸೃಷ್ಟಿಸಿದೆ. ಬಿಜೆಪಿ ನಾಯಕನ ಹೇಳಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ಎಂಎಲ್‌ಸಿ ಸಿಟಿ ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಮಾತಿನ ಚಕಮಕಿ ನಡೆದಿದೆ. ಸಚಿವೆ ಹೆಬ್ಬಾಳ್ಕರ್ ವಿರುದ್ಧ ಸಿಟಿ ರವಿ ಅವಾಚ್ಯ ಪದ ಬಳಸಿ ನಿಂದಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಅದರ ಬೆನ್ನಲ್ಲೇ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಆಕ್ರೋಶಗೊಂಡು ಸಿಟಿ ರವಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನ ಪರಿಷತ್‌ನಿಂದ ಹೊರ ಬಂದ ಸಿಟಿ ರವಿ ಅವರ ಮೇಲೆ ಕಾರಿಡಾರ್‌ ಬಳಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಮುತ್ತಿಗೆ ಹಾಕಿ ಹಲ್ಲೆ ನಡೆಸಲು ಪ್ರಯತ್ನಿಸಿದ್ದಾರೆ. ಆ ಬಳಿಕ ಭಾರಿ ಹೈಡ್ರಾಮಾ ನಡೆದಿದೆ. ಸಿಟಿ ರವಿ ಮೇಲೆ ಹೆಬ್ಬಾಳ್ಕರ್‌ ಬೆಂಬಲಿಗರು ಹಲ್ಲೆ ನಡೆಸಲು ಯತ್ನಿಸಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಪೊಲೀಸರು ತಕ್ಷಣ ಅವರನ್ನು ಬಂಧಿಸಿದ್ದಾರೆ. ಸುವರ್ಣಸೌಧದ ಸಿಬ್ಬಂದಿ ತಕ್ಷಣವೇ ಸಿಟಿ ರವಿ ಅವರನ್ನು ಒಳಗೆ ಕಳುಹಿಸಿದ್ದಾರೆ.

ಹಲ್ಲೆ ಮತ್ತು ಕೊಲೆ ಯತ್ನಕ್ಕೆ ಪ್ರಯತ್ನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಎಂಎಲ್‌ಸಿ ಸಿಟಿ ರವಿ, ಸುವರ್ಣ ಸೌಧದ ಕಾರಿಡಾರ್‌ನಲ್ಲಿ ಧರಣಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ನನ್ನ ಮೇಲೆ ಕೊಲೆ ಯತ್ನ ನಡೆದಿದೆ. ಇದು ರಾಜ್ಯ ಕಾಂಗ್ರೆಸ್‌ ಸರ್ಕಾರದ ಕುಮ್ಮಕ್ಕು ಎಂದಿದ್ದಾರೆ.

ಕೊಲೆ ಯತ್ನ ನಡೆದಿದೆ, ಇದು ಕಾಂಗ್ರೆಸ್‌ ಸರ್ಕಾರದ ಕುಮ್ಮಕ್ಕು

ಹಲ್ಲೆ ಕುರಿತು ಮಾತನಾಡಿದ ಸಿಟಿ ರವಿ, ‌"ನನ್ನ ಮೇಲೆ ಕೊಲೆ ಯತ್ನ ನಡೆದಿದೆ. ಒಬ್ಬ ಶಾಸಕನಿಗೆ ರಕ್ಷಣೆ ಇಲ್ಲ ಎಂದಾದರೆ, ರಾಜ್ಯದ ಇತರ ಜನರ ಪರಿಸ್ಥಿತಿ ಏನು ಎಂಬುದನ್ನು ನೀವೇ ಲೆಕ್ಕ ಹಾಕಿ. ಸುವರ್ಣ ಸೌಧದ ಮೊಗಸಾಲೆಯಲ್ಲಿ ಹೋಗುತ್ತಿದ್ದಾಗ ನನ್ನ ಮೇಲೆ ಹಲ್ಲೆ ಮಾಡಲು ಬಂದಿದ್ದಾರೆ. ಈಗಲೂ ಹಲ್ಲೆ ಮಾಡುತ್ತಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್‌ ಹೆಸರು ಹೇಳಿಕೊಂಡು ದಾಳಿ ನಡೆಸಿದ್ದಾರೆ ಎಂದರು.

ಸಭಾಪತಿಗೆ ದೂರು

ನನ್ನ ಮೇಲೆ ಆದ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಸಭಾಪತಿಗೆ ದೂರು ಸಲ್ಲಿಸುತ್ತೇನೆ. ಸಂಪೂರ್ಣ ಘಟನೆಯು ಸುವರ್ಣ ಸೌಧ ಆವರಣದಲ್ಲೇ ಆಗಿರುವುದರಿಂದ ಮೊದಲಿಗೆ ಸಭಾಪತಿಗೆ ದೂರು ನೀಡಿ ಸೂಕ್ತ ಕ್ರಮಕ್ಕೆ ಆಗ್ರಹಿಸುತ್ತೇನೆ. ಒಬ್ಬ ಶಾಸಕನಿಗೆ ರಕ್ಷಣೆ ಕೊಡದ ಸರ್ಕಾರ, ಜನಸಾಮಾನ್ಯರಿಗೆ ರಕ್ಷಣೆ ಕೊಡುತ್ತಾ? ಅದಕ್ಕಾಗಿಯೇ ಸರ್ಕಾರದ ವಿರುದ್ಧ ಧರಣಿ ಕೂತಿದ್ದೇನೆ. ಪೂರ್ವಾಪರ ವಿಚಾರಿಸದೆ ನನ್ನ ಮೇಲೆ ಲಕ್ಷ್ಮೀ‌ ಹೆಬ್ಬಾಳ್ಕರ್‌ ಸುಳ್ಳು ಆರೋಪ ಮಾಡಿದ್ದಾರೆ. ಅದಕ್ಕೆ ಸರ್ಕಾರ ಕೂಡಾ ಕುಮ್ಮಕ್ಕು ಕೊಟ್ಟು ಈ ದಾಳಿ ನಡೆಸಿದ್ದಾರೆ.

ಎಲ್ಲವೂ ಶಡ್ಯಂತ್ರ, ನಾನು ಯಾವುದಕ್ಕೂ ಹೆದರಲ್ಲ

ನನ್ನ ಮೇಲೆ ಸುಳ್ಳು ಆರೋಪ ಹೊರಿಸಿ ಹಲ್ಲೆ ಮಾಡಿದ್ದಾರೆ. ಗೂಂಡಾಗಿರಿ ಮಾಡುತ್ತಿದ್ದಾರೆ. ಇದು ಎಲ್ಲವೂ ಶಡ್ಯಂತ್ರ. ನಾನು ಎಲ್ಲಿ ಏನು ಹೇಳಿದ್ದೇನೆ ಎಂಬುದನ್ನು ಅವರೇ ಹೇಳಲಿ. ನಾನು ಯಾವುದಕ್ಕೂ ಹೆದರಲ್ಲ. ರಾಜಕಾರಣದಲ್ಲಿ ಹೆದರುವ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಅನ್ಯಾಯ ಮಚ್ಚಿಹಾಕಲು ಈ ರೀತಿ ಮಾಡುತ್ತಿದ್ದಾರೆ. ಅದಕ್ಕಾಗಿ ಧರಣಿ ಕೂತಿದ್ದೇನೆ ಎಂದು ಸಿಟಿ ರವಿ ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ