logo
ಕನ್ನಡ ಸುದ್ದಿ  /  ಕರ್ನಾಟಕ  /  Academy Awards: ಉಮಾಶ್ರೀ, ಶಿವಪ್ರಕಾಶ್, ಕೋಟಗಾನಹಳ್ಳಿರಾಮಯ್ಯ, ಪ್ರಕಾಶ್‌ ರೈ, ಸುರೇಶ್‌, ರಮೇಶ್‌ ಪಂಡಿತ್‌ಗೆ ನಾಟಕ ಅಕಾಡೆಮಿ ಪ್ರಶಸ್ತಿ

Academy Awards: ಉಮಾಶ್ರೀ, ಶಿವಪ್ರಕಾಶ್, ಕೋಟಗಾನಹಳ್ಳಿರಾಮಯ್ಯ, ಪ್ರಕಾಶ್‌ ರೈ, ಸುರೇಶ್‌, ರಮೇಶ್‌ ಪಂಡಿತ್‌ಗೆ ನಾಟಕ ಅಕಾಡೆಮಿ ಪ್ರಶಸ್ತಿ

Umesha Bhatta P H HT Kannada

Aug 09, 2024 07:06 AM IST

google News

ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು. ಉಮಾಶ್ರೀ, ಪ್ರಕಾಶ್‌ ರೈ, ರಮೇಶ್‌ ಪಂಡಿತ್‌, ಬಿ.ಸುರೇಶ್‌ ಅವರನ್ನು ಆಯ್ಕೆ ಮಾಡಲಾಗಿದೆ,

  • Culture News ಕರ್ನಾಟಕ ನಾಟಕ ಅಕಾಡೆಮಿಯು ಮೂರು ವರ್ಷಗಳ ವಾರ್ಷಿಕ ಪ್ರಶಸ್ತಿ ಹಾಗೂ ಜೀವಮಾನ ಸಾಧಕರ ಪ್ರಶಸ್ತಿ ಪಟ್ಟಿ ಪ್ರಕಟಿಸಿದೆ. 

ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು. ಉಮಾಶ್ರೀ, ಪ್ರಕಾಶ್‌ ರೈ, ರಮೇಶ್‌ ಪಂಡಿತ್‌, ಬಿ.ಸುರೇಶ್‌ ಅವರನ್ನು ಆಯ್ಕೆ ಮಾಡಲಾಗಿದೆ,
ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು. ಉಮಾಶ್ರೀ, ಪ್ರಕಾಶ್‌ ರೈ, ರಮೇಶ್‌ ಪಂಡಿತ್‌, ಬಿ.ಸುರೇಶ್‌ ಅವರನ್ನು ಆಯ್ಕೆ ಮಾಡಲಾಗಿದೆ,

ಬೆಂಗಳೂರು: ವಿಧಾನಪರಿಷತ್‌ ಸದಸ್ಯೆ ಹಾಗೂ ಹಿರಿಯ ಕಲಾವಿದೆ ಉಮಾಶ್ರೀ, ಹಿರಿಯ ಸಾಹಿತಿ ಹಾಗೂ ನಾಟಕಕಾರ ಎಚ್‌.ಎಸ್.ಶಿವಪ್ರಕಾಶ್‌, ಕೋಟಗಾನಹಳ್ಳಿ ರಾಮಯ್ಯ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿಯೂ ಮೂರು ವರ್ಷದ ಜೀವಮಾನ ಸಾಧನೆಗೆ ಆಯ್ಕೆ ಮಾಡಿದೆ. ಇದಲ್ಲದೇ ಕಳೆದ ಮೂರು ವರ್ಷಗಳ ಸಾಲಿನ ನಾಟಕ ಅಕಾಡಮಿ ಪ್ರಶಸ್ತಿಯನ್ನೂ ಪ್ರಕಟಿಸಲಾಗಿದೆ. 75 ವಾರ್ಷಿಕ ಪ್ರಶಸ್ತಿಗಳು ಮತ್ತು 15 ದತ್ತಿನಿಧಿ ಪ್ರಶಸ್ತಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ. ಕರ್ನಾಟಕದ ನಾನಾ ಭಾಗಗಳಲ್ಲಿ ರಂಗ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರಂಗಕರ್ಮಿಗಳು ವಾರ್ಷಿಕ ಹಾಗೂ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸದ್ಯವೇ ಮೂರು ವರ್ಷಗಳ ಪ್ರಶಸ್ತಿಗಳನ್ನು ಸಾಧಕರಿಗೆ ಪ್ರದಾನ ಮಾಡಲಾಗುತ್ತದೆ.

, 2022ನೇ ಸಾಲಿಗೆ ಪ್ರಖ್ಯಾತ ನಟಿ ಉಮಾಶ್ರೀ, 2023ನೇ ಸಾಲಿಗೆ ನಾಟಕಕಾರ ಹೆಚ್.ಎಸ್.ಶಿವಪ್ರಕಾಶ್ ಹಾಗೂ 2024ನೇ ಸಾಲಿಗೆ ಪ್ರಸಿದ್ಧ ರಂಗಸಂಘಟಕ, ನಾಟಕಕಾರ ಮತ್ತು ಕೋಲಾರದ ಆದಿಮ ಸಾಂಸ್ಕೃತಿಕ ಪ್ರತಿಷ್ಠಾನದ ರೂವಾರಿ ಕೆ.ರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.

ಕಲಾವಿದರಾದ ಪ್ರಕಾಶ ರೈ, ಡಾ. ಲಕ್ಷ್ಮಿಪತಿ ಕೋಲಾರ , ರಮೇಶ್‌ ಪಂಡಿತ್‌, ನೂರ್‌ ಅಹಮದ್‌ ಶೇಖ್‌, ಶಂಕರ ಹಲಗತ್ತಿ, ಪ್ರಸಾದ್‌ ಕುಂದೂರು, ಬಿ.ಸುರೇಶ್, ಅಚ್ಯುತ ಕುಮಾರ್ ರಜನಿ ಗರುಡ, ಚಂದ್ರಶೇಖರ ಹೊನ್ನಾಳಿ, ಬೇಲೂರು ರಘುನಂದನ್‌, ರಾಜಗುರು ಹೊಸಕೋಟಿ. ಡಾಲೇಟೂರ, ರಂಗಸ್ವಾಮಿ ಜಿ ಸಹಿತ ಹಲವರು ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹೊರನಾಡ ಕಲಾವಿದರಲ್ಲಿ ಮುಂಬೈನ ಪ್ರಸಿದ್ಧ ರಂಗನಿರ್ದೇಶಕಿ ಕನ್ನಡತಿ ನಂದಿತಾ ಯಾದವ್ ಮತ್ತು ಪಾಂಡಿಚೇರಿ ವಿಶ್ವವಿದ್ಯಾನಿಲಯದ ರಂಗತಜ್ಞೆ ಪ್ರಾಧ್ಯಾಪಕಿ ಡಾ. ಪವಿತ್ರಾ ಅವರನ್ನು ಆಯ್ಕೆ ಮಾಡಲಾಗಿದೆ.

2022, 2023 ಮತ್ತು 2024ನೇ ಸಾಲಿನ ಅಕಾಡೆಮಿಯ ಗೌರವ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿ, ದತ್ತಿನಿಧಿ„ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎನ್ನುವುದು ಕಲಾವಿದರೂ ಆಗಿರುವ ಕರ್ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ ನಾಗರಾಜ ಮೂರ್ತಿ ವಿವರಣೆ.

ಬೇಕಾಗಿದ್ದು, ಆ.3ರಂದು ನಡೆದ ಅಕಾಡೆಮಿಯ ಸರ್ವಸದಸ್ಯರ ಸಭೆಯಲ್ಲಿ ಕಲಾವಿದರನ್ನು ಮತ್ತು ನಾಟಕಕಾರರನ್ನು ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಿದೆ. ವರ್ಷದ ಪ್ರಶಸ್ತಿಗಳನ್ನು ಬಹುತೇಕ ಎಲ್ಲಾ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಲಾಗಿದ್ದು, ಸಾಮಾಜಿಕ ನ್ಯಾಯ ಮತ್ತು ಜಿಲ್ಲಾವಾರುಗಳಿಗೆ ಅನ್ವಯವಾಗುವಂತೆ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಈ ಸಾಲಿನಲ್ಲಿ ಯುವಪ್ರಶಸ್ತಿ ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗೆ ಪ್ರಶಸ್ತಿಗೆ ಆಯ್ಕೆ ಮಾಡುತ್ತಿರುವುದು ವಿಶೇಷ ಎನ್ನುವುದು ಅವರ ವಿವರಣೆ.

ಕರ್ನಾಟಕ ನಾಟಕ ಅಕಾಡೆಮಿ ಪುನರ್ ರಚನೆಯಾಗಿದ್ದು, 2024-25ನೇ ಸಾಲಿಗೆ ಹಲವಾರು ಮಹತ್ವದ ಯೋಜನೆಗಳನ್ನು ರೂಪಿಸಿದೆ. ಭಾರತೀಯ ರಂಗಭೂಮಿಯಲ್ಲಿಯೇ ಅತ್ಯಂತ ಕ್ರಿಯಾಶೀಲವಾಗಿರುವ ಕನ್ನಡ ರಂಗಭೂಮಿ ಕಳೆದ 5 ದಶಕಗಳಲ್ಲಿ ಸಾ„ಸಿರುವ ಯಶಸ್ಸು ಅತ್ಯಂತ ಮಹತ್ತರವಾದುದು. ಈಗಾಗಲೇ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ತನ್ನದೇ ಆದ ಮಹತ್ತರವಾದ ಕೊಡುಗೆಗಳ ಮೂಲಕ ಶ್ರೀಮಂತವಾಗಿರುವ ರಂಗಭೂಮಿಗೆ ಕೊಡುಗೆ ಕೊಟ್ಟವರನ್ನು ಗುರುತಿಸಿ, ಕರ್ನಾಟಕ ಸರ್ಕಾರ ನಾಟಕ ಅಕಾಡೆಮಿಯ ಮೂಲಕ ಪ್ರತಿವರ್ಷ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದೆ ಎನ್ನುತ್ತಾರೆ ಅವರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ