logo
ಕನ್ನಡ ಸುದ್ದಿ  /  ಕರ್ನಾಟಕ  /  ಚಾರ್ಮಾಡಿ ಘಾಟಿಯಲ್ಲಿ ಸರಕಾರಿ ಬಸ್‌ಗೆ ಅಡ್ಡ ಬಂದ ಒಂಟಿ ಸಲಗ; ಚಿಕ್ಕಮಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌

ಚಾರ್ಮಾಡಿ ಘಾಟಿಯಲ್ಲಿ ಸರಕಾರಿ ಬಸ್‌ಗೆ ಅಡ್ಡ ಬಂದ ಒಂಟಿ ಸಲಗ; ಚಿಕ್ಕಮಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌

Praveen Chandra B HT Kannada

Jun 13, 2024 10:26 AM IST

google News

ಚಾರ್ಮಾಡಿ ಘಾಟಿಯಲ್ಲಿ ಸರಕಾರಿ ಬಸ್‌ಗೆ ಅಡ್ಡ ಬಂದ ಒಂಟಿಸಲಗ

    • Lone tusker on road: ದಕ್ಷಿಣ ಕನ್ನಡ ಜಿಲ್ಲೆಯನ್ನು ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕಿಸುವ ಚಾರ್ಮಾಡಿ ಘಾಟಿ ಪರಿಸರದಲ್ಲಿ ನಿರಂತರ ಕಾಡಾನೆ ಪ್ರತ್ಯಕ್ಷವಾಗುತ್ತಿದೆ. ಬುಧವಾರ ರಾತ್ರಿ ಸರಕಾರಿ ಬಸ್ಸಿಗೆ ಕಾಡಾನೆಯೊಂದು ಅಡ್ಡಗಟ್ಟಿ ಪ್ರಯಾಣಿಕರನ್ನು ಭೀತಗೊಳಿಸಿದ ಘಟನೆಯೂ ನಡೆಯಿತು.
ಚಾರ್ಮಾಡಿ ಘಾಟಿಯಲ್ಲಿ ಸರಕಾರಿ ಬಸ್‌ಗೆ ಅಡ್ಡ ಬಂದ ಒಂಟಿಸಲಗ
ಚಾರ್ಮಾಡಿ ಘಾಟಿಯಲ್ಲಿ ಸರಕಾರಿ ಬಸ್‌ಗೆ ಅಡ್ಡ ಬಂದ ಒಂಟಿಸಲಗ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯನ್ನು ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕಿಸುವ ಚಾರ್ಮಾಡಿ ಘಾಟಿ ಪರಿಸರದಲ್ಲಿ ನಿರಂತರ ಕಾಡಾನೆ ಪ್ರತ್ಯಕ್ಷವಾಗುತ್ತಿದೆ. ಬುಧವಾರ ರಾತ್ರಿ ಸರಕಾರಿ ಬಸ್ಸಿಗೆ ಕಾಡಾನೆಯೊಂದು ಅಡ್ಡಗಟ್ಟಿ ಪ್ರಯಾಣಿಕರನ್ನು ಭೀತಗೊಳಿಸಿದ ಘಟನೆಯೂ ನಡೆಯಿತು.

ಅರಣ್ಯ ಇಲಾಖೆ ವತಿಯಿಂದ ರಾತ್ರಿ ಗಸ್ತು ಆರಂಭವಾಗಿದೆ. ಆದಾಗ್ಯೂ ಕಾಡಾನೆಗಳ ಉಪಟಳ ನಿಂತಿಲ್ಲ. ಕಾಡು ಕಡಿದು ರಸ್ತೆ ಮಾಡಿದ ಕಾರಣ ಇದು ಆನೆಗಳು ಸಂಚರಿಸುವ ಜಾಗ, ಹೀಗಾಗಿ ಆನೆ ಕಾಣಿಸಿಕೊಳ್ಳುವುದು ಕಾಮನ್ ಎಂದು ಪರಿಸರವಾದಿಗಳು ಹೇಳುತ್ತಿದ್ದರೆ, ಪ್ರಯಾಣಿಕರು ಬದಲಿ ದಾರಿ ಎಲ್ಲಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಕಳೆದ ಕೆಲವು ದಿನಗಳಿಂದ ಕಾಡಾನೆ ಚಾರ್ಮಾಡಿ ಘಾಟಿಯ ಒಂದನೇ ತಿರುವಿನಿಂದ ಒಂಬತ್ತನೇ ತಿರುವಿನ ತನಕ ಸಂಚರಿಸುತ್ತಿರುವುದು ಕಂಡುಬಂದಿದೆ.

ರಸ್ತೆಯಲ್ಲಿ ನಿಂತು ಈಚಲ ಮರ ತಿನ್ನುವುದೂ ಕೆಲವರಿಗೆ ಕಂಡು ಬಂದಿದೆ. ಹಲವು ಬಾರಿ ಹಗಲು ಹೊತ್ತಿನಲ್ಲೂ ಸಂಚರಿಸುತ್ತಾ, ಪ್ರಯಾಣಿಕರು, ವಾಹನ ಸವಾರರ ಭೀತಿಗೆ ಕಾರಣವಾಗಿದೆ. ಬುಧವಾರ ರಾತ್ರಿ ಚಾರ್ಮಾಡಿ ಘಾಟಿಯಲ್ಲಿ ಸರ್ಕಾರಿ ಬಸ್ಸಿಗೆ ಅಡ್ಡ ಬಂದ ಕಾಡಾನೆ ಬಸ್ಸಿನ ಪಕ್ಕದಲ್ಲೇ ಹೋಗಿದೆ. ಕಾಡಾನೆ ಕಂಡು ಗಾಬರಿಗೊಂಡ ಪ್ರಯಾಣಿಕರು ಉಸಿರುಬಿಗಿ ಹಿಡಿದು ನಿಂತರು. ಚಾರ್ಮಾಡಿ ಘಾಟಿಯ 7 ಮತ್ತು 8ನೇ ತಿರುವಿನಲ್ಲಿ ಘಟನೆ ನಡೆದಿದೆ. ಸುಮಾರು ಅರ್ಧ ಗಂಟೆ ರಸ್ತೆಯಲ್ಲೇ ನಿಂತಿದ್ದ ಒಂಟಿ ಸಲಗವನ್ನು ನೋಡಿ ತಕ್ಷಣ ಬಸ್ ನಿಲ್ಲಿಸಿದ ಚಾಲಕ ಪ್ರಯಾಣಿಕರ ಗಮನ ಸೆಳೆದರು.

ಇದರಿಂದಾಗಿ ಚಾರ್ಮಾಡಿ ಘಾಟಿಯಲ್ಲಿ ಎರಡು ಕಿ.ಮೀ. ನಷ್ಟು ಟ್ರಾಫಿಕ್ ಜಾಮ್ ಉಂಟಾಯಿತು. ಚಿಕ್ಕಮಗಳೂರು-ಮಂಗಳೂರು ಎರಡೂ ಕಡೆಯಲ್ಲೂ ಟ್ರಾಫಿಕ್ ಜಾಮ್ ಬೆಳೆಯಿತು. ಅರ್ಧ ಗಂಟೆ ಬಳಿಕ ಅರಣ್ಯಕ್ಕೆ ಇಳಿದ ಒಂಟಿ ಸಲಗ ಹೋದ ಮೇಲೆ ವಾಹನಗಳು ಸಾಗಿದವು.

ಕಳೆದ ಎರಡು ತಿಂಗಳಿಂದಲೂ ಚಾರ್ಮಾಡಿಯಲ್ಲೇ ಇರೋ ಸಲಗ ಹಗಲಿರುಳೆನ್ನದೇ ಚಾರ್ಮಾಡಿ ರಸ್ತೆಯಲ್ಲಿ ಸಂಚಾರ ಮಾಡುತ್ತಿದೆ. ಚಾರ್ಮಾಡಿ ಘಾಟ್ ತಪ್ಪಲಿನ ಗ್ರಾಮದೊಳಕ್ಕೂ ಬಂದಿದ್ದ ಆನೆಯನ್ನು ಸ್ಥಳಾಂತರಿಸುವಂತೆ ಸ್ಥಳಿಯರ ಒತ್ತಾಯಕ್ಕೆ ಶೀಘ್ರ ಅರಣ್ಯ ಇಲಾಖೆ ಸ್ಪಂದಿಸಬೇಕಾಗಿದೆ.

ವರದಿ: ಹರೀಶ್‌ ಮಾಂಬಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ