Davanagere News: ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ್‌ಗೆ ಯುವತಿಯಿಂದ ಅಶ್ಲೀಲ ವಿಡಿಯೋ ಕಾಲ್; ದೂರು ದಾಖಲು
Jul 26, 2023 09:00 PM IST
ಸಂಸದ ಜಿಎಂ ಸಿದ್ದೇಶ್ವರ್‌ಗೆ ಅಶ್ಲೀಲ ವಿಡಿಯೋ ಕಾಲ್
- Davanagere Crime News: ದಾವಣಗೆರೆ ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ್ ಅವರಿಗೆ ಯುವತಿಯೊಬ್ಬಳು ವಾಟ್ಸಪ್ ವಿಡಿಯೋ ಕಾಲ್ ಮಾಡಿರುವ ಬಗ್ಗೆ ದೂರು ದಾಖಲಾಗಿದೆ.
ದಾವಣಗೆರೆ: ದಾವಣಗೆರೆಯ (Davanagere) ಸಂಸದ ಡಾ.ಜಿಎಂ ಸಿದ್ದೇಶ್ವರ್ (GM Siddeshwara) ಅವರಿಗೆ ಅಪರಿಚಿತ ಯುವತಿಯೊಬ್ಬಳು ವಾಟ್ಸಪ್ ಮೂಲಕ ವಿಡಿಯೋ ಕಾಲ್ ಮಾಡಿದ್ದಾಳೆ. ಕಾಲ್‌ನಲ್ಲಿ ಅಶ್ಲೀಲವಾಗಿ ವರ್ತಿಸಿ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆಯೊಡ್ಡಿರುವ ಬಗ್ಗೆ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರಿನ ನಿವಾಸದಲ್ಲಿದ್ದ ವೇಳೆ ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ್‌ಗೆ ಜುಲೈ 20ರಂದು ರಾತ್ರಿ 10:16ರ ವೇಳೆ ಹೌ ಆರ್ ಯು ಅಂತಾ ಮೆಸೇಜ್ ಬಂದಿದೆ. ನಂತರ 10:20ಕ್ಕೆ ಕಾಲ್ ಬಂದಿದೆ. ಆ ನಂತರ ವಿಡಿಯೋ ಕಾಲ್ ಮಾಡಿ, ಯುವತಿ ಅಶ್ಲೀಲವಾಗಿ ವರ್ತಿಸಿ, ಸಂಸದರಿಗೆ ಬೆದರಿಕೆ ಹಾಕಿದ್ದಾಳೆ.
ವಿಡಿಯೋ ಕಾಲ್ ಬಂದಾಗ ತಮ್ಮ ಮನೆಯಲ್ಲಿ ಒಳಗಿದ್ದರೆ ಸರಿಯಾಗಿ ಧ್ವನಿ ಕೇಳದೆಂಬ ಕಾರಣಕ್ಕೆ, ಸಂಸದ ಸಿದ್ದೇಶ್ವರ್ ಯಾರೋ ಕರೆ ಮಾಡಿದ್ದಾರೆಂದು ಪತ್ನಿ ಗಾಯತ್ರಿ ಸಿದ್ದೇಶ್ವರ್ ಜೊತೆಗೆ ಮನೆಯ ಹಾಲ್‌ಗೆ ಬಂದಿದ್ದಾರೆ. ಆಗ ಅಪರಿಚಿತ ಯುವತಿ ವಾಟ್ಸಪ್ ವಿಡಿಯೋ ಕಾಲ್ ಮಾಡಿದ್ದಾಳೆ. ಅಲ್ಲದೆ ಅಸಭ್ಯವಾಗಿ ವರ್ತಿಸಿದ್ದಾಳೆ. ಯುವತಿಯ ಇಂತಹ ವರ್ತನೆಯಿಂದ ಸಿಟ್ಟಿಗೆದ್ದ ಸಂಸದ ಸಿದ್ದೇಶ್ವರ್ ಮತ್ತು ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್, ಯುವತಿಗೆ ಜೋರು ಮಾಡಿದ್ದಾರೆ.
ನಂತರ ಮತ್ತೆ ಕರೆ ಮಾಡಿದ ಅಪರಿಚಿತ ಯುವತಿ, ಸಂಸದರಿಗೆ ಬ್ಲ್ಯಾಕ್ ಮಾಡಿದ್ದಾಳೆ. ವಿಡಿಯೋವನ್ನು ಸೋಷಿಯಲ್ ಮೀಡಿಯಾಗೆ ಹಾಕುವುದಾಗಿ ಸಂಸದರಿಗೆ ಬೆದರಿಕೆ ಹಾಕಿದ್ದಾಳೆ. ರಾಜಸ್ಥಾನದಿಂದ ಕರೆ ಮಾಡುತ್ತಿರುವುದಾಗಿ ಹೇಳಿ, ವಿಡಿಯೋ ಕಾಲ್‌ನಲ್ಲಿ ಅಶ್ಲೀಲವಾಗಿ ವರ್ತಿಸಿದ್ದಾಳೆ. ಈ ಬಗ್ಗೆ ಬೆಂಗಳೂರಿನಲ್ಲಿ ಸಂಸದ ಸಿದ್ದೇಶ್ವರ ಪ್ರಕರಣ ದಾಖಲಿಸಿದ್ದಾರೆ.