logo
ಕನ್ನಡ ಸುದ್ದಿ  /  ಕರ್ನಾಟಕ  /  Davanagere News: ದಾವಣಗೆರೆಯಲ್ಲಿ ಉಲ್ಬಣಿಸುತ್ತಿದೆ ಮದ್ರಾಸ್ ಐ; ಸೋಂಕಿನ ಲಕ್ಷಣ, ಚಿಕಿತ್ಸಾ ಪರಿಹಾರ, ಮುಂಜಾಗ್ರತಾ ಕ್ರಮ ಏನೇನು

Davanagere News: ದಾವಣಗೆರೆಯಲ್ಲಿ ಉಲ್ಬಣಿಸುತ್ತಿದೆ ಮದ್ರಾಸ್ ಐ; ಸೋಂಕಿನ ಲಕ್ಷಣ, ಚಿಕಿತ್ಸಾ ಪರಿಹಾರ, ಮುಂಜಾಗ್ರತಾ ಕ್ರಮ ಏನೇನು

HT Kannada Desk HT Kannada

Jul 25, 2023 07:18 PM IST

google News

ಮದ್ರಾಸ್‌ ಐ ಸೋಂಕು (ಸಾಂಕೇತಿಕ ಚಿತ್ರ)

  • Davanagere News: ದಾವಣಗೆರೆಯಲ್ಲಿ ಮದ್ರಾಸ್‌ ಐ ಸೋಂಕು ಉಲ್ಬಣವಾಗಿದೆ. 3 ಸಾವಿರಕ್ಕೂ ಹೆಚ್ಚು ಜನರಿಗೆ ಈ ವರ್ಷ ಈ ಸೋಂಕು ತಗುಲಿದ್ದು, ಚಿಕಿತ್ಸೆಗೊಳಗಾಗಿದ್ದಾರೆ. ಮದ್ರಾಸ್‌ ಐ ಸೋಂಕಿನ ಗುಣಲಕ್ಷಣ, ಪರಿಹಾರ ಚಿಕಿತ್ಸೆ, ಮುಂಜಾಗ್ರತಾ ಕ್ರಮಗಳೇನು ಎಂಬಿತ್ಯಾದಿ ವಿವರ ಇಲ್ಲಿದೆ.

ಮದ್ರಾಸ್‌ ಐ ಸೋಂಕು (ಸಾಂಕೇತಿಕ ಚಿತ್ರ)
ಮದ್ರಾಸ್‌ ಐ ಸೋಂಕು (ಸಾಂಕೇತಿಕ ಚಿತ್ರ) (PTI)

ದಾವಣಗೆರೆ: ಮಧ್ಯಕರ್ನಾಟಕದ ದಾವಣಗೆರೆ (Davanagere) ಯಲ್ಲಿ ಕಣ್ಣಿನ ಸೋಂಕಾಗಿರುವ ‘ಮದ್ರಾಸ್ ಐ’ (Madras Eye) ಉಲ್ಬಣವಾಗುತ್ತಿದ್ದು, ಮಕ್ಕಳಲ್ಲಿ ಅತೀ ಹೆಚ್ಚಾಗಿ ಕಂಡುಬರುತ್ತಿರುವುದರಿಂದ ಪೋಷಕರು ಆತಂಕಕ್ಕೀಡಾಗಿದ್ದಾರೆ.

ಸಾಮಾನ್ಯವಾಗಿ ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಂಜಕ್ವಿಟಿಸ್ ಎಂದು ಕರೆಯಲಾಗುವ ಮದ್ರಾಸ್ ಐ ಅಥವಾ ಕಣ್ಣು ವೈರಾಣುಗಳಿಂದ ಹರಡುವ ಕಣ್ಣಿನ ಸಮಸ್ಯೆ ತೇವಾಂಶ ಹೆಚ್ಚಾದಾಗ ಅಥವಾ ಚಳಿಗಾಲದ ವಾತಾವರಣದಲ್ಲಿ ಹುಟ್ಟಿಕೊಳ್ಳುವ ಈ ವೈರಾಣುಗಳು ನೇರವಾಗಿ ಕಣ್ಣಿನ ಮೇಲೆ ಪರಿಣಾಮವುಂಟು ಮಾಡುತ್ತವೆ. ಮದ್ರಾಸ್ ಐ ಈಗ ಮಳೆಗಾಲದಲ್ಲಿ ಹೆಚ್ಚಾಗಿದ್ದು, ಹಿಂದಿನ ವರ್ಷಗಳಿಗೆ ಹೋಲಸಿದರೆ ಅಧಿಕವಾಗಿ ಈ ವರ್ಷ ಕಾಣಿಸಿಕೊಂಡಿದೆ. ಸುಮಾರು 3ಸಾವಿರಕ್ಕೂ ಅಧಿಕ ಜನರು ಮದ್ರಾಸ್ ಐ ಸೋಂಕಿಗೆ ಸಿಲುಕಿದ್ದು, ಅದರಲ್ಲಿ ವಿದ್ಯಾರ್ಥಿಗಳೇ ಹೆಚ್ಚಾಗಿದ್ದಾರೆ.

ಕಣ್ಣಿನ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದರಿಂದ ಕೆಲವೆಡೆ ಶಾಲೆಗೂ ತಾತ್ಕಾಲಿಕ ರಜೆ ಘೋಷಿಸಲಾಗಿದೆ. ಹಲವರಿಗೆ ಈ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಆದಷ್ಟು ಜಾಗೃತೆಯಿಂದ ಇರುವುದು ಉತ್ತಮ ಎಂದು ನೇತ್ರ ತಜ್ಞರು ಸಲಹೆ ನೀಡಿದ್ದಾರೆ.

ಮದ್ರಾಸ್ ಐ ರೋಗದ ಲಕ್ಷಣಗಳು:

ಕಸ ಬಿದ್ದದಂತೆ ಆಗುವ ರೀತಿಯಾಗಿ ಕಣ್ಣು ಚುಚ್ಚುವುದು, ಬೆಳಿಗ್ಗೆ ಎದ್ದಾಗ ಹೆಚ್ಚು ಬಿಳಿದ್ರವ ಉತ್ಪತ್ತಿ ಆಗುವುದು. ಕಣ್ಣುಗಳು ಕೆಂಪಾಗಿ, ಕಿರಿಕಿರಿ ಹೆಚ್ಚುವುದು, ಕಣ್ಣಲ್ಲಿ ನೀರು ಬರುವುದು, ರೆಪ್ಪೆ ಕಣ್ಣು ದಪ್ಪ ಆಗುವುದು ಕಂಡು ಬರುತ್ತದೆ.

ಮದ್ರಾಸ್ ಐ ಸೋಂಕು ತಗುಲದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು:

ಸಮಸ್ಯೆ ಇರುವವರು ಕೆಲದಿನ ಪ್ರತ್ಯೇಕ ವಾಸ ಮಾಡಿ, ಲಕ್ಷಣಗಳು ಕಾಣಿಸಿಕೊಳ್ಳದಿದ್ದರೆ, ಕಣ್ಣಿಗೆ ಐಡ್ರಾಪ್ ಹಾಕಿಸಿಕೊಳ್ಳಬೇಡಿ, ದಿನಕ್ಕೆ 8-10 ಬಾರಿ ಸ್ಯಾನಿಟೈಸರ್, ಸೋಪು ಬಳಸಿ ಕೈ ತೊಳೆದುಕೊಳ್ಳಿ, ವೈರಸ್ ಕಾಣಿಸಿಕೊಂಡಾಗ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಸಲಹೆ ಪಡೆಯಬೇಕು, ವೈದ್ಯರ ತಪಾಸಣೆ ಮಾಡಿಸದೇ, ಔಷಧಿ ಅಂಗಡಿಗಳಲ್ಲಿ ಸಿಗುವ ಡ್ರಾಪ್ಸ್ಗಳನ್ನು ಬಳಸಬಾರದು, ಕಣ್ಣು ಮುಟ್ಟಿಕೊಳ್ಳುವುದನ್ನು ಕಡಿಮೆ ಮಾಡಬೇಕು.

ಮದ್ರಾಸ್ ಐ ಪರಿಹಾರಕ್ಕೆ ಏನು ಮಾಡಬೇಕು..

ಸಮಸ್ಯೆ ಉಳ್ಳವರು ಇತರರಿಂದದೂರಇರಬೇಕು, ವೈದ್ಯರ ಬಳಿ ತೋರಿಸಿ, ಐ ಡ್ರಾಪ್ಸ್ ಮಾತ್ರ ಹಾಕಬೇಕು, ಸಮಸ್ಯೆ ಕಡಿಮೆ ಆಗುವವರೆಗೆ ಗಾಳಿಗೆ ಹೋಗಬಾರದು, ದ್ವಿಚಕ್ರ ವಾಹನ ಓಡಿಸಬಾರದು, ಟಿ.ವಿ,ಮೊಬೈಲ್, ಕಂಪ್ಯೂಟರ್‌ಗಳನ್ನು ನೋಡುವುದನ್ನ ಕಡಿಮೆ ಮಾಡಿ ಕಣ್ಣಿಗೆ ವಿಶ್ರಾಂತಿಕೊಡಬೇಕು.

ರೋಗದ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ಸಮೀಪದ ನಗರ, ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯಆರೋಗ್ಯ ಕೇಂದ್ರಗಳು, ತಾಲ್ಲೂಕು ಆಸ್ಪತ್ರೆಗಳು ಹಾಗೂ ಜಿಲ್ಲಾ ಆಸ್ಪತ್ರೆಗೆ ಭೇಟಿ, ವೈದ್ಯರ ಹತ್ತಿರತಪಾಸಣೆ ಮಾಡಿಸಿ ಚಿಕಿತ್ಸೆ ಪಡೆಯುವುದು ಸೂಕ್ತ.

ವೈರಾಣುವಿನ ಸಮಸ್ಯೆ ಆಗಿರುವ ಕಾರಣ ನಿರ್ದಿಷ್ಟ ಚಿಕಿತ್ಸೆ ಇಲ್ಲ ಮುನ್ನೆಚ್ಚರಿಕೆಯೇ ಮದ್ದಾಗಿದೆ. ಆದರೆ, ಯಾರೂ ಭಯಪಡಬೇಕಿಲ್ಲ ಎಂದು ಡಿಹೆಚ್‌ಓ ಡಾ. ನಾಗರಾಜ್ ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ