logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Election 2023: ಕಾಂಗ್ರೆಸ್‌ ದೇಶವನ್ನು ಹಿಂದಕ್ಕೆ ಕರೆದೊಯ್ಯುವ ರಿವರ್ಸ್‌ ಗೇರ್‌ ಸರ್ಕಾರ; ಅಮಿತ್‌ ಶಾ ಆರೋಪ

Karnataka Election 2023: ಕಾಂಗ್ರೆಸ್‌ ದೇಶವನ್ನು ಹಿಂದಕ್ಕೆ ಕರೆದೊಯ್ಯುವ ರಿವರ್ಸ್‌ ಗೇರ್‌ ಸರ್ಕಾರ; ಅಮಿತ್‌ ಶಾ ಆರೋಪ

Reshma HT Kannada

Apr 29, 2023 12:31 PM IST

ಅಮಿತ್‌ ಶಾ

    • Reverse Gear Sarkar: ʼಕಾಂಗ್ರೆಸ್‌ ದೇಶವನ್ನು ಹಿಂದಕ್ಕೆ ಕರೆದೊಯ್ಯುವ ರಿವರ್ಸ್‌ ಗೇರ್‌ ಸರ್ಕಾರ. ಮೋದಿ ನೇತೃತ್ವದ ಡಬಲ್‌ ಎಂಜಿನ್‌ ಸರ್ಕಾರ ಕರ್ನಾಟಕವನ್ನು ಅಭಿವೃದ್ಥಿ ಪಥದತ್ತ ಕರೆದೊಯುತ್ತದೆ. ನಿಮಗೆ ಯಾವ ಸರ್ಕಾರ ಬೇಕು ಎಂಬುದನ್ನು ಈ ಚುನಾವಣೆಯಲ್ಲಿ ನೀವೇ ಆಯ್ಕೆ ಮಾಡಿʼ ಎಂದು ಅಮಿತ್‌ ಶಾ ನವಲಗುಂದದಲ್ಲಿ ನಡೆದ ರ್‍ಯಾಲಿಯಲ್ಲಿ ತಿಳಿಸಿದ್ದಾರೆ. 
 ಅಮಿತ್‌ ಶಾ
ಅಮಿತ್‌ ಶಾ ( ANI )

ಧಾರವಾಡ: ಕರ್ನಾಟಕ ವಿಧಾನಸಭಾ ಚುನವಾಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕಾಂಗ್ರೆಸ್‌ ಪಕ್ಷವನ್ನು ʼರಿವರ್ಸ್‌ ಗೇರ್‌ʼ ಸರ್ಕಾರ ಎಂದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನೂರಾರು ವಿದ್ಯಾರ್ಥಿಗಳ ನೆನಪಿನಂಗಳದಲ್ಲಿ ಉಳಿದಿರುವ ಗುರುಮಾತೆ; ದಿವಂಗತ ವಿದ್ಯಾ ಸರಸ್ವತಿ ಚೂಂತಾರು - ವ್ಯಕ್ತಿ ವ್ಯಕ್ತಿತ್ವ ಅಂಕಣ

Hassan Scandal: ವಾಟ್ಸ್‌ ಆಪ್‌ ಮೂಲಕವೂ ವಿಡಿಯೋ ಹಂಚಿದರೆ ಕ್ರಮ, ಎಸ್‌ಐಟಿ ಎಚ್ಚರಿಕೆ

ಸೋಮವಾರ ರಾತ್ರಿಯಿಂದ 108 ಆಂಬುಲೆನ್ಸ್ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ಆರೋಗ್ಯ ಸೇವೆಯಲ್ಲಿ ವ್ಯತ್ಯಯ; ಅವರ ಬೇಡಿಕೆಗಳೇನು?

Hassan Scandal: 4 ದಿನ ಎಸ್‌ಐಟಿ ವಶಕ್ಕೆ ಮಾಜಿ ಸಚಿವ ರೇವಣ್ಣ, ತೀವ್ರ ವಿಚಾರಣೆ ಸಾಧ್ಯತೆ

ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ನಡೆದ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್‌ ಶಾ ʼಒಂದು ಕಡೆ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌, ಇನ್ನೊಂದು ಕಡೆ ಮೋದಿ ನೇತೃತ್ವದಲ್ಲಿ ಬಿಜೆಪಿ ಇದೆ. ಕರ್ನಾಟಕವನ್ನು ಮುಂದಕ್ಕೆ ಕೊಂಡೊಯ್ಯುವ ಪ್ರಧಾನಿ ಮೋದಿ ನೇತೃತ್ವದ ಡಬಲ್‌ ಎಂಜಿನ್‌ ಸರ್ಕಾರ ಬೇಕೇ ಅಥವಾ ಕರ್ನಾಟಕವನ್ನು ಹಿಂದಕ್ಕೆ ಕೊಂಡೊಯ್ಯುವ ಕಾಂಗ್ರೆಸ್‌ನ ರಿವರ್ಸ್‌ ಗೇರ್‌ ಸರ್ಕಾರ ಬೇಕೇ ಎಂಬುದನ್ನು ನಿರ್ಧರಿಸಲು ಈ ಬಾರಿ ವಿಧಾನಸಭಾ ಚುನಾವಣೆ ಒಂದು ಉತ್ತಮ ಅವಕಾಶವಾಗಿದೆʼ ಎಂದಿದ್ದಾರೆ.

ಇದಕ್ಕೂ ಮುನ್ನ ಶಿರಹಟ್ಟಿಯಲ್ಲಿ ಬಿಜೆಪಿಯ ಸ್ಟಾರ್‌ ಪ್ರಚಾರಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾ ʼಬಿಜೆಪಿ ನೀಡುವ ಪ್ರತಿ ಮತವೂ ನಿಷೇದಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ)ದಿಂದ ರಾಜ್ಯವನ್ನು ರಕ್ಷಿಸಲು ಸಲ್ಲುತ್ತದೆʼ ಎಂದಿದ್ದರು.

ʼಪ್ರತಿಯೊಂದು ಮತವೂ ಎಣಿಕೆಯಾಗುತ್ತದೆ. ಹಾಗಾಗಿ ನಿಮ್ಮ ಮತವನ್ನು ಸಮರ್ಪಕ ನಾಯಕರಿಗೆ ಸಲ್ಲುವಂತೆ ನೋಡಿಕೊಳ್ಳಿ. ನೀವು ಕಮಲದ (ಬಿಜೆಪಿಯ ಚಿಹ್ನೆ) ಪರವಾಗಿ ಮತ ಚಲಾಯಿಸಿದಾಗ ನೀವು ಶಾಸಕ ಅಥವಾ ಮಂತ್ರಿ ಅಥವಾ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಮತ ಹಾಕುವುದಿಲ್ಲ. ನಿಮ್ಮ ಮತವು ಮತ್ತಷ್ಟು ಬಲಗೊಳ್ಳುತ್ತದೆ. ʼಮಹಾನ್‌ ಕರ್ನಾಟಕ ರಚನೆಯಲ್ಲಿ ಮೋದಿಯವರ ಪಾತ್ರ ದೊಡ್ಡದುʼ. ನಿಮ್ಮ ಮತವು ಕರ್ನಾಟಕವನ್ನು ಪಿಎಫ್‌ಐನಿಂದ ರಕ್ಷಿಸುತ್ತದೆʼ ಎಂದು ಬಿಜೆಪಿಯ ಪರ ಮತಯಾಚಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ಮೋದಿಯವರನ್ನು ʼವಿಷಪೂರಿತ ಹಾವುʼ ಎಂದು ಸಂಭೋಧಿಸಿದ್ದಕ್ಕೆ ಸಂಬಂಧಿಸಿ ʼಇಡೀ ಜಗತ್ತು ಮೋದಿಯವರನ್ನು ಮೆಚ್ಚುತ್ತದೆ, ಆದರೆ ಕಾಂಗ್ರೆಸ್ ಮತ್ತು ಅದರ ನಾಯಕತ್ವವು ಯಾವ ಮಟ್ಟಕ್ಕೆ ಕುಸಿದಿದೆ ಎಂಬುದನ್ನು ನೋಡಿ. ಮೋದಿಯವರ ಬಗ್ಗೆ ಅವರ ನಾಯಕರು ಮಾಡಿರುವ ಟೀಕೆಗಳು ನಾಚಿಕೆಗೇಡಿನ ಸಂಗತಿ, ಖರ್ಗೆಯವರು ಮೋದಿಯವರನ್ನು ವಿಷಪೂರಿತ ಹಾವು ಎಂದು ಕರೆದಿದ್ದಾರೆ, ಅಂತಹ ಪಕ್ಷಕ್ಕೆ ನೀವು ಮತ ಹಾಕುತ್ತೀರಾ?ʼ ಎಂದು ನೆರೆದಿದ್ದ ಜನರಲ್ಲಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ

Amit Shah: ಕರ್ನಾಟಕ ಚುನಾವಣೆ; ರಾಹುಲ್ ಬಳಿಕ ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಸರದಿ; ಮಂಗಳೂರಿನಲ್ಲಿಂದು ಬೃಹತ್ ರೋಡ್ ಶೋ

ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಮತ್ತು ಉಡುಪಿ (Udupi) ಜಿಲ್ಲೆಗಳಲ್ಲಿ ಚುನಾವಣಾ ಕಾವು ಏರತೊಡಗಿದ್ದು, ರಾಜಕೀಯ ಪಕ್ಷಗಳ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಕೆಲ ದಿನಗಳಿಂದ ಕಾಂಗ್ರೆಸ್‌ನ ವರಿಷ್ಠ ರಾಹುಲ್ ಗಾಂಧಿ (Rahul Gandhi) ತಿರುಗಾಟ ನಡೆಸಿ ಮತಯಾಚನೆ ಮಾಡಿದ್ದಾರೆ. ಇದೀಗ ಬಿಜೆಪಿ (BJP) ಚುನಾವಣೆಯ ಚಾಣಕ್ಯ ಅಮಿತ್ ಶಾ (Amit Shah) ಅವರ ಎಂಟ್ರಿಯಾಗುತ್ತಿದೆ.

ಇಂದು (ಏ.29, ಶನಿವಾರ) ಸಂಜೆ ಮಂಗಳೂರಿಗೆ ಅಮಿತ್ ಶಾ ಆಗಮಿಸುತ್ತಿದ್ದು, ಬೃಹತ್ ರೋಡ್ ಶೋ ನಡೆಸಿ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಇದರ ಭಾಗವಾಗಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಮಂಗಳೂರಿನಲ್ಲಿ ಶಕ್ತಿ ಪ್ರದರ್ಶನ ಮಾಡಲಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು