Dog Bite in Dharwad: ಕುಂದಗೋಳದ ಸಂಶಿ ಗ್ರಾಮದಲ್ಲಿ 15ಕ್ಕೂ ಹೆಚ್ಚು ಮಂದಿಗೆ ಕಚ್ಚಿದ ಹುಚ್ಚು ನಾಯಿ
Oct 08, 2024 09:56 PM IST
ಕುಂದಗೋಳದ ಸಂಶಿ ಗ್ರಾಮದಲ್ಲಿ 15ಕ್ಕೂ ಹೆಚ್ಚು ಮಂದಿಗೆ ಕಚ್ಚಿದ ಹುಚ್ಚು ನಾಯಿ
- Dog Bite: ಧಾರವಾಡದ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ 15ಕ್ಕೂ ಹೆಚ್ಚು ಮಂದಿಗೆ ಹುಚ್ಚು ನಾಯಿ ಕಡಿದಿದ್ದು, ಆತಂಕದ ವಾತಾವರಣ ಸೃಷ್ಟಿಸಿದೆ.
ಕುಂದಗೋಳ: ತಾಲೂಕಿನ ಸಂಶಿ ಗ್ರಾಮದಲ್ಲಿ ಹುಚ್ಚು ನಾಯಿ ಹಾವಳಿಯಿಂದ ಸುಮಾರು 15 ಜನ ಗಾಯಗೊಂಡ ಘಟನೆ ನಡೆದಿದೆ. ಭಾನುವಾರ (ಅಕ್ಟೋಬರ್ 6) ರಾತ್ರಿ ಹಾಗೂ ಸೋಮವಾರ (ಅಕ್ಟೋಬರ್ 7) ಮುಂಜಾನೆ ನಡೆದ ದಾಳಿಯಲ್ಲಿ ಅಶೋಕ ಬಸವಾ, ನೀಲವ್ವ ಹೊನ್ನಳ್ಳಿ, ಈರಪ್ಪ ಪುಟ್ಟಣ್ಣನವರ, ರೇಖಾ ಕಮ್ಮಾರ, ಚಂದ್ರಕಲಾ ಹಡಪದ, ಶೋಭಾ ಕಮ್ಮಾರ, ಅಲ್ಲಾಭಕ್ಷೀ ಸೂರಣಗಿ, ಮಂಜುನಾಥ ಕಾಡದ, ಚನ್ನಪ್ಪ ಹಾವೇರಿ, ಪಲ್ಲವಿ ಎ, ರಾಜೇಸಾಭ ಭಂಗೀ ಸೇರಿದಂತೆ 15ಕ್ಕೂ ಅಧಿಕ ಜನರಿಗೆ ಹುಚ್ಚು ನಾಯಿ ಕಚ್ಚಿದೆ.
ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಒಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜು ಪುಟ್ಟಣ್ಣನವರ ಮಾತನಾಡಿ, ಈಗಾಗಲೇ ಗ್ರಾಮದಲ್ಲಿ ಹುಚ್ಚು ನಾಯಿ ಬಗ್ಗೆ ಪ್ರತಿ ಓಣಿಯಲ್ಲಿ ಡಂಗೂರ ಸಾರಿದ್ದು. ಅದಕ್ಕೆ ಸಂಬಂಧಿಸಿದ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಸಂಶಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆರೋಗ್ಯ ಆಸ್ಪತ್ರೆಯಲ್ಲಿ ಔಷಧ ಅಲಭ್ಯತೆಯಿಂದ ಸಮರ್ಪಕ ಚಿಕಿತ್ಸೆ ಸಿಗದೇ ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಗೆ ಕಳಿಸಲಾಗುತ್ತಿದೆ ಎಂದು ಹುಚ್ಚು ನಾಯಿ ಕಡಿತಕ್ಕೆ ಒಳಗಾದ ಅಶೋಕ ಬಸವ ಅಳಲು ತೊಡಗಿಕೊಂಡರು.
ಸಂಶಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುಧಾ ಕೋಟೆಗೌಡ್ರು ಮಾತನಾಡಿ, ಹುಚ್ಚು ನಾಯಿ ಕಡಿತದಿಂದ 12 ಜನ ಚಿಕಿತ್ಸೆ ಪಡೆದಿಕೊಂಡಿದ್ದು, ಇಲ್ಲಿ ತುರ್ತು ಚಿಕಿತ್ಸೆಗೆ ಬೇಕಾಗುವ ಎಆರ್‌ವಿ (ರ್‍ಯಾಬಿಫ್ಯೂವರ್) ಔಷಧ ಮಾತ್ರ ಲಭ್ಯವಿದೆ ಎಂದು ಹೇಳಿದ್ದಾರೆ.
ಕ್ರಿಶ್ಚಿಯನ್ ಮಿಷನರಿಗಳ ವಿರುದ್ಧ ಪ್ರಮೋದ ಮುತಾಲಿಕ್ ಆಕ್ರೋಶ
ಧಾರವಾಡ: ಸೇವೆಯ ನೆಪದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಹಿಂದೂ ಸಂಪ್ರದಾಯಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಹಬ್ಬಕ್ಕೆ ಸರ್ಕಾರ ಅಧಿಕೃತ ರಜೆ ಘೋಷಣೆ ಮಾಡಿದ್ದು, ಈ ಕುರಿತು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ. ದಸರಾ ರಜೆಯ ಆದೇಶ ಉಲ್ಲಂಘಿಸುವ ಯಾವ ಯಾವ ಸಂಸ್ಥೆಗಳ ಶಾಲೆಗಳು ಇವೆಯೋ ಅವುಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.