SSLC Exam time table 2025: ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ, ಎಕ್ಸಾಂ ಟೈಂಟೇಬಲ್ ಪಿಡಿಎಫ್ ಇಲ್ಲಿ ಲಭ್ಯ
Dec 02, 2024 01:32 PM IST
SSLC Exam time table 2025: ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ
- SSLC exam time table 2025 karnataka pdf download: ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿಯು ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆ 2025ರ ತಾತ್ಕಾಲಿಕ ವೇಳಾಪಟ್ಟಿಯನ್ನು kseab.karnataka.gov.in ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಪರೀಕ್ಷಾ ವೇಳಾಪಟ್ಟಿಯ ಪಿಡಿಎಫ್ ಪ್ರತಿ, ಪರೀಕ್ಷಾ ದಿನಗಳ ಮಾಹಿತಿ ಮತ್ತು ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ.
SSLC Exam time table 2025: ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿಯು ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆ 2025ರ ತಾತ್ಕಾಲಿಕ ವೇಳಾಪಟ್ಟಿಯನ್ನು kseab.karnataka.gov.in ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತಿದೆ. 2025 ರ ಮಾರ್ಚ್ 20ರಿಂದ ಆರಂಭಗೊಂಡು ಏಪ್ರಿಲ್ 2ರವರೆಗೆ ಪರೀಕ್ಷೆಗಳು ನಡೆಯಲಿವೆ. 25 ದಿನಗಳ ಅವಧಿಯಲ್ಲಿ ಪರೀಕ್ಷೆಯನ್ನು ನಡೆಸಲು ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿಯು ನಿರ್ಧರಿಸಿದೆ. ಹದಿನೈದು ದಿನಗಳ ಆಕ್ಷೇಪಣೆ ಅವಧಿ ನಂತರ ಅಂತಿಮ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಿದೆ. ಇನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸುಮಾರು 3-4 ತಿಂಗಳು ಮಾತ್ರ ಉಳಿದಿರುವುದರಿಂದ ವಿದ್ಯಾರ್ಥಿಗಳು ಓದಲು ವೇಳಾಪಟ್ಟಿ ಸಿದ್ಧಪಡಿಸಿಕೊಂಡು ಶಿಸ್ತಿನಿಂದ ಅಧ್ಯಯನ ನಡೆಸಿದರೆ ಅತ್ಯುತ್ತಮ ಅಂಕ ಪಡೆಯಬಹುದು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿಯು ಪರೀಕ್ಷೆಯ ದಿನಾಂಕ, ಸಮಯ ಮತ್ತು ಪರೀಕ್ಷೆಗಳಿಗೆ ಸೂಚನೆಗಳಂತಹ ವಿವರಗಳನ್ನು ಒಳಗೊಂಡಿದ್ದು, ಶಾಲಾ ಅಭ್ಯರ್ಥಿಗಳು, ಪುನಾರವರ್ತಿತ ಅಭ್ಯರ್ಥಿಗಳು, ಖಾಸಗಿ ಅಭ್ಯರ್ಥಿಗಳಿಗೆ ಈ ವೇಳಾಪಟ್ಟಿ ಅನ್ವಯವಾಗುತ್ತದೆ.ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಇನ್ನು ಮೂರು ತಿಂಗಳಿಗಿಂತ ತುಸು ಹೆಚ್ಚು ಸಮಯವಿದ್ದು, ವಿದ್ಯಾರ್ಥಿಗಳು ಈಗಲೇ ಓದಲು ಟೈಂಟೇಬಲ್ ಹಾಕಿಕೊಳ್ಳಬಹುದು. ಕರ್ನಾಟಕ ಎಸ್‌ಎಸ್‌ಎಲ್‌ಸಿ ಫೈನಲ್ ಎಗ್ಸಾಂ ಟೈಮ್ ಟೇಬಲ್ 2025 pdf ಈ ಸುದ್ದಿಯ ಕೊನೆಗೆ ಅಟ್ಯಾಚ್ ಮಾಡಲಾಗಿದೆ. ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆ- ತಾತ್ಕಾಲಿಕ ವೇಳಾಪಟ್ಟಿ
ಮೊದಲ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ ( ಎನ್‌ಸಿಇಆರ್‌ಟಿ), ಸಂಸ್ಕೃತ
ದ್ವಿತೀಯ ಭಾಷೆ: ಇಂಗ್ಲಿಷ್, ಕನ್ನಡ
ತೃತೀಯ ಭಾಷೆ: ಹಿಂದಿ, ಕನ್ನಡ, ಇಂಗ್ಲಿಷ್, ಪರ್ಷಿಯನ್, ಅರೇಬಿಕ್, ತುಳು, ಉರ್ದು, ಸಂಸ್ಕೃತ, ಕೊಂಕಣಿ, ಎನ್‌ಎಸ್‌ಕ್ಯೂಎಫ್ ವಿಷಯಗಳು.
- ಮಾರ್ಚ್ 20 ಗುರುವಾರ ಪ್ರಥಮ ಭಾಷೆ
- ಮಾರ್ಚ್ 22 ಶನಿವಾರ ಸಮಾಜ ವಿಜ್ಞಾನ
- ಮಾರ್ಚ್ 24 ಸೋಮವಾರ ದ್ವಿತೀಯ ಭಾಷೆ
- ಮಾರ್ಚ್ 27 ಗುರುವಾರ ಗಣಿತ
- ಮಾರ್ಚ್ 29 ಶನಿವಾರ ತೃತೀಯ ಭಾಷೆ
- ಏಪ್ರಿಲ್ 2 ಬುಧವಾರ ವಿಜ್ಞಾನ