logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka 2nd Puc Results2024: ದ್ವಿತೀಯ ಪಿಯುಸಿ ಫಲಿತಾಂಶ ನೋಡುವುದು ಹೇಗೆ? ಎಲ್ಲಿ? -ಇಲ್ಲಿದೆ ವಿವರ

Karnataka 2nd Puc Results2024: ದ್ವಿತೀಯ ಪಿಯುಸಿ ಫಲಿತಾಂಶ ನೋಡುವುದು ಹೇಗೆ? ಎಲ್ಲಿ? -ಇಲ್ಲಿದೆ ವಿವರ

Umesha Bhatta P H HT Kannada

Apr 10, 2024 11:17 AM IST

google News

ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ (ಸಂಗ್ರಹ ಚಿತ್ರ)

    • 2nd PUC Results 2024: ಕರ್ನಾಟಕದಲ್ಲಿ ಕಳೆದ ಮಾರ್ಚ್ ತಿಂಗಳು ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶ ಏಪ್ರಿಲ್ 10 ರಂದು ಪ್ರಕಟವಾಗಿದೆ. ಪಿಯು ಮಂಡಳಿಯ ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ಅಪ್‌ಲೋಡ್ ಮಾಡಲಾಗಿದೆ.
ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ (ಸಂಗ್ರಹ ಚಿತ್ರ)
ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ (ಸಂಗ್ರಹ ಚಿತ್ರ)

ಬೆಂಗಳೂರು: ಮಾರ್ಚ್‌ 2024ರಲ್ಲಿ ನಡೆದಿದ್ದ 2023-24 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯಮಾಪನ ಮಂಡಳಿಯು (KSEAB) ಏಪ್ರಿಲ್ 10 ರಂದು ಪ್ರಕಟಿಸಿದೆ. ಕೆಲ ಜಾಲತಾಣಗಳಲ್ಲಿ ಈ ಹಿಂದೆ (ಏಪ್ರಿಲ್ 3) ಫಲಿತಾಂಶ ಪ್ರಕಟವಾಗಲಿದೆ ಎಂಬ ಮಾಹಿತಿ ಹರಿದಾಡಿತ್ತು. ಈ ಸುದ್ದಿಯನ್ನು ‘ಅನಧಿಕೃತ ಮತ್ತು ತಪ್ಪು ಮಾಹಿತಿ’ ಎಂದು ಮಂಡಳಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದರು. ಆನ್‌ಲೈನ್‌ ಮೂಲಕವೇ ಫಲಿತಾಂಶವನ್ನು ವೀಕ್ಷಿಸಲು ಅವಕಾಶವಿದೆ. ಮಂಡಳಿಯ ಜಾಲತಾಣ https://karresults.nic.in ಮೂಲಕ ನಿಮ್ಮ ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಬಹುದು.

ಕೋವಿಡ್‌ ಕಾರಣದಿಂದ ಮೂರು ವರ್ಷದಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಸಮರ್ಪಕವಾಗಿ ನಡೆದಿರಲಿಲ್ಲ. ಈ ಬಾರಿ ದ್ವಿತೀಯ ಪಿಯುಸಿಗೆ ಸಂಬಂಧಿಸಿದ ತರಗತಿಗಳು, ಪರೀಕ್ಷೆಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯಮಾಪನ ಮಂಡಳಿಯು ವ್ಯವಸ್ಥಿತವಾಗಿಯೇ ನಡೆಸಿಕೊಂಡು ಬಂದಿತ್ತು. ನಿಗದಿತ ಅವಧಿಯೊಳಗೆ ತರಗತಿಗಳನ್ನು ಮುಗಿಸಿ ಪರೀಕ್ಷೆಗಳ ದಿನಾಂಕಗಳನೂ ಪ್ರಕಟಿಸಲಾಗಿತ್ತು. ಅದರಂತೆ ಮಾರ್ಚ್‌ 01 ರಿಂದ 23ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು 1,124 ಕೇಂದ್ರಗಳಲ್ಲಿ ನಡೆದಿದ್ದವು. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಷಯದ ಪರೀಕ್ಷೆಗಳಿಗೆ ರಾಜದಾದ್ಯಂತ ವ್ಯವಸ್ಥಿತವಾಗಿ ನಡೆದಿದ್ದವು. ಅಂದಾಜು 7 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಎದುರಿಸಿದ್ದರು. ಈ ಬಾರಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳು ಒಟ್ಟು 7 ಲಕ್ಷ ಮಂದಿ ಪರೀಕ್ಷೆ ತೆಗೆದುಕೊಂಡಿದ್ದರು ಎಂದು ಮಂಡಳಿ ತಿಳಿಸಿತ್ತು. ಮಾರ್ಚ್‌ 25ರಿಂದ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯಮಾಪನ ಮಂಡಳಿಯು ಮೌಲ್ಯಮಾಪನವನ್ನೂ ಆರಂಭಿಸಿತ್ತು.

ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡು, ಫಲಿತಾಂಶ ಸಿದ್ಧವಾದ ನಂತರ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯಮಾಪನ ಮಂಡಳಿಯ ಅಧ್ಯಕ್ಷೆ ಐಎಎಸ್‌ ಅಧಿಕಾರಿ ಎನ್‌.ಮಂಜುಶ್ರೀ ಅವರು ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶವನ್ನು ಪ್ರಕಟಿಸಲಿದ್ದಾರೆ. ಈ ವೇಳೆ ಮೂರು ವಿಭಾಗಗಳ (ಕಲೆ, ವಾಣಿಜ್ಯ ಮತ್ತು ವಿಜ್ಞಾನ) ಟಾಪರ್‌ಗಳು, ಜಿಲ್ಲಾವಾರು ಫಲಿತಾಂಶದ ವಿವರ ಲಭ್ಯವಾಗಲಿದೆ.

ಇದಾದ ನಂತರ ಬೆಳಿಗ್ಗೆ 11ಕ್ಕೆ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಆಯಾ ಜಿಲ್ಲೆಗಳ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಿಂದ ಕಾಲೇಜುಗಳಿಗೆ ಫಲಿತಾಂಶದ ವಿವರ ಸಿಗಲಿದ್ದು, ಮಧ್ಯಾಹ್ನದ ನಂತರ ಕಾಲೇಜುಗಳಲ್ಲಿಯೂ ಫಲಿತಾಂಶಗಳನ್ನು ಪ್ರಕಟಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳು, ಪೋಷಕರು ಫಲಿತಾಂಶವನ್ನು ಪಡೆದುಕೊಳ್ಳಬಬಹುದು.

ಫಲಿತಾಂಶ ಹೀಗೆ ನೋಡಿ

  • https://karresults.nic.in ವೆಬ್‌ಸೈಟ್‌ ಕ್ಲಿಕ್‌ ಮಾಡಿ
  • ದ್ವಿತೀಯ ಪಿಯುಸಿ ಫಲಿತಾಂಶ ಎನ್ನುವ ಲಿಂಕ್‌ ಕ್ಲಿಕ್‌ ಮಾಡಿ
  • ನಿಮ್ಮ ರೋಲ್‌ ನಂಬರ್‌ ಅನ್ನು ನಮೂದಿಸಿ
  • ನಿಮ್ಮ ವಿಷಯ ಯಾವುದು ಎನ್ನುವುದನ್ನು ತಿಳಿಸಿ
  • ಅಲ್ಲಿ ಕಲಾ, ವಿಜ್ಞಾನ, ವಾಣಿಜ್ಯ ಎನ್ನುವ ವಿಷಯ ಬರಲಿದೆ
  • ಅದರ ಮೇಲೆ ನಿಮ್ಮ ವಿಷಯ ಕ್ಲಿಕ್‌ ಮಾಡಿ
  • ನಿಮ್ಮ ಫಲಿತಾಂಶ ಸಿಗಲಿದೆ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ