logo
ಕನ್ನಡ ಸುದ್ದಿ  /  ಕರ್ನಾಟಕ  /  Ugcet 2024; ಸೀಟು ಹಂಚಿಕೆ ನಂತರದ ಪ್ರಕ್ರಿಯೆಗೆ ಸಂಬಂಧಿಸಿದ ಟೈಮ್ ಟೇಬಲ್ ಪ್ರಕಟಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ

UGCET 2024; ಸೀಟು ಹಂಚಿಕೆ ನಂತರದ ಪ್ರಕ್ರಿಯೆಗೆ ಸಂಬಂಧಿಸಿದ ಟೈಮ್ ಟೇಬಲ್ ಪ್ರಕಟಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ

Umesh Kumar S HT Kannada

Aug 30, 2024 11:29 PM IST

google News

UGCET 2024 Post seat allotment; ಸೀಟು ಹಂಚಿಕೆ ನಂತರದ ಪ್ರಕ್ರಿಯೆಗೆ ಸಂಬಂಧಿಸಿದ ಟೈಮ್ ಟೇಬಲ್ kರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.

  • UGCET 2024 Post seat allotment; ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ್, ಬಿ.ಎಸ್.ಸಿ (ನರ್ಸಿಂಗ್), ಯೋಗ ಮತ್ತು ನ್ಯಾಚುರೋಪತಿ ಮುಂತಾದ ಕೋರ್ಸುಗಳಿಗೆ ಸೀಟು ಹಂಚಿಕೆ ನಂತರದ ಪ್ರಕ್ರಿಯೆಗೆ ಸಂಬಂಧಿಸಿದ ಟೈಮ್ ಟೇಬಲ್ ಅನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಪ್ರಕಟಿಸಿದೆ.

     

UGCET 2024 Post seat allotment;  ಸೀಟು ಹಂಚಿಕೆ ನಂತರದ ಪ್ರಕ್ರಿಯೆಗೆ ಸಂಬಂಧಿಸಿದ ಟೈಮ್ ಟೇಬಲ್ kರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.
UGCET 2024 Post seat allotment; ಸೀಟು ಹಂಚಿಕೆ ನಂತರದ ಪ್ರಕ್ರಿಯೆಗೆ ಸಂಬಂಧಿಸಿದ ಟೈಮ್ ಟೇಬಲ್ kರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.

ಬೆಂಗಳೂರು: ಯುಜಿಸಿಇಟಿ 2024ಕ್ಕೆ ಸಂಬಂಧಿಸಿದಂತೆ ಸೀಟು ಹಂಚಿಕೆ ನಂತರದ 1ನೇ ಸುತ್ತಿನ ಟೈಮ್ ಟೇಬಲ್ ಅನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ (ಆಗಸ್ಟ್ 30) ಪ್ರಕಟಿಸಿದೆ. ಈ ಪ್ರಕ್ರಿಯೆ ಶನಿವಾರ (ಆಗಸ್ಟ್ 31) ಶುರುವಾಗಲಿದ್ದು, ಸೆಪ್ಟೆಂಬರ್ 5ಕ್ಕೆ ಕೊನೆಯಾಗಲಿದೆ.

ಯುಜಿಸಿಇಟಿ 2024ರಲ್ಲಿ ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ್, ಬಿಎಸ್ಸಿ (ನರ್ಸಿಂಗ್), ಯೋಗ ಮತ್ತು ನ್ಯಾಚುರೋಪತಿ ಮುಂತಾದ ಕೋರ್ಸುಗಳಿಗೆ ಸೀಟು ಹಂಚಿಕೆಯಾದ ನಂತರದ ಪ್ರಕ್ರಿಯೆ ನಡೆಸುವುದಕ್ಕೆ ಪರೀಕ್ಷಾ ಪ್ರಾಧಿಕಾರ ಸಮಯ ನಿಗದಿ ಮಾಡಿದೆ.

ಇದರಂತೆ, ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ್, ಬಿಎಸ್ಸಿ (ನರ್ಸಿಂಗ್), ಯೋಗ ಮತ್ತು ನ್ಯಾಚುರೋಪತಿ ಮುಂತಾದ ಕೋರ್ಸುಗಳಿಗೆ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಚಾಯ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ನಂತರ ಶುಲ್ಕ ಪಾವತಿ ಮಾಡಲು ಹಾಗು ಆಯಾ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಕಾಲ ಮಿತಿಯ ವೇಳಾಪಟ್ಟಿಯನ್ನು ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.

UGCET 2024; ಸೀಟು ಹಂಚಿಕೆ ನಂತರದ ಪ್ರಕ್ರಿಯೆಯ ವೇಳಾಪಟ್ಟಿ

1) ಪೋಷಕರ ಜೊತೆ ಚರ್ಚಿಸಿ ಸೂಕ್ತವಾದ ಚಾಯ್ಸ್‌ (CHOICE) ಅನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಶನಿವಾರ (ಆಗಸ್ಟ್ 31 ಬೆಳಗ್ಗೆ 11 ಗಂಟೆಯಿಂದ ಸೆಪ್ಟೆಂಬರ್ 3ರ ರಾತ್ರಿ 11.59ರ ತನಕ ಕಾಲಾವಕಾಶವಿದೆ. ಈ ಅವಧಿಯಲ್ಲಿ ಅಭ್ಯರ್ಥಿಗಳು ನಾಲ್ಕು Choice ಗಳಲ್ಲಿ ತಮಗೆ ಸರಿ ಎನಿಸುವ ಯಾವುದಾದರೂ ಒಂದು Choice ಅನ್ನು ಆಯ್ಕೆ ಮಾಡುವ ಮೊದಲು, ಪ್ರತಿ Choice ಗಳ ವಿವರಣೆಯನ್ನು ಓದಿ ಸರಿಯಾಗಿ ಅರ್ಥೈಸಿಕೊಂಡು, ತಮಗೆ ಸೂಕ್ತವೆನಿಸಿದ Choice ಅನ್ನು ಆಯ್ಕೆ ಮಾಡಿಕೊಳ್ಳುವಂತೆ ಪ್ರಾಧಿಕಾರ ಸೂಚಿಸಿದೆ.

2) ಚಾಯ್ಸ್ 1 ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳಿಗೆ ಮಾತ್ರ ಅನ್ವಯವಾಗುವ ವಿಷಯ ಇದು. ಅವರು ಆಗಸ್ಟ್‌ 31ರ ಮಧ್ಯಾಹ್ನ 1 ಗಂಟೆಯಿಂಧ ಸೆಪ್ಟೆಂಬರ್ 4 ರ ಸಂಜೆ 4 ಗಂಟೆ ಒಳಗಾಗಿ ಶುಲ್ಕ ಪಾವತಿಸಬೇಕು. ಇದು ಕೆಲಸದ ಅವಧಿಯಲ್ಲಿ ಮಾತ್ರ ಸಾಧ್ಯವಾಗುವಂಥದ್ಧು.

3) ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳುವುದು ಚಾಯ್ಸ್‌-1 ಆಯ್ಕೆ ಮಾಡಿಕೊಂಡು ಶುಲ್ಕ ಪಾವತಿಸಿದ ಅಭ್ಯರ್ಥಿಗಳಿಗೆ ಮಾತ್ರ ಅನ್ವಯ. ಇದಕ್ಕೆ ಆಗಸ್ಟ್ 31 ರಿಂದ ಸೆಪ್ಟೆಂಬರ್ 5ರ ತನಕ ಸಮಯ ನಿದಗಿ ಮಾಡಲಾಗಿದೆ.

4) ಚಾಯ್ಸ್ -1 ಆಯ್ಕೆ ಮಾಡಿಕೊಂಡು, ಶುಲ್ಕ ಪಾವತಿಸಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿದ ಅಭ್ಯರ್ಥಿಗಳು ಕಾಲೇಜಿನಲ್ಲಿ ಪ್ರವೇಶ ಪಡೆಯಲು ಕೊನೆಯ ದಿನಾಂಕ ಸೆಪ್ಟೆಂಬರ್ 5. ಈ ದಿನ ಸಂಜೆ 5.30ರ ಒಳಗಾಗಿ ಪ್ರವೇಶ ಪಡೆಯಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ವಿದ್ಯಾರ್ಥಿಗಳ ಗಮನಕ್ಕೆ

ಸಮಯದ ವೇಳಾಪಟ್ಟಿಯನ್ನು ಯಥಾವತ್ ಅನುಸರಿಸಬೇಕು. ಕೌನ್ಸಿಲಿಂಗ್‌ ಪ್ರಕ್ರಿಯೆಯಲ್ಲಿ ಎಲ್ಲ ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ಪಾಲ್ಗೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿದ್ಯಾರ್ಥಿಗಳಿಗೆ ಸೂಚಿಸಿದೆ. ಅದೇ ರೀತಿ, ಕೌನ್ಸೆಲಿಂಗ್ ನಡೆಸಲು ಲಭ್ಯವಿರುವ ಸೀಮಿತ ಸಮಯವನ್ನು ಗಮನದಲ್ಲಿಟ್ಟುಕೊಂಡು, ಭಾಗವಹಿಸುವ ಎಲ್ಲಾ ಶಿಕ್ಷಣ ಸಂಸ್ಥೆಗಳ ಕಾಲೇಜುಗಳಿಗೆ ಎಲ್ಲಾ ಶನಿವಾರ ಮತ್ತು ಭಾನುವಾರ ಮತ್ತು ಗೆಜೆಟೆಡ್ ರಜಾದಿನಗಳನ್ನು ಕೆಲಸದ ದಿನಗಳಾಗಿ ಪರಿಗಣಿಸಲು ನಿರ್ದೇಶಿಸಲಾಗಿದೆ ಎಂದು ಬೆಂಗಳೂರಿನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ