logo
ಕನ್ನಡ ಸುದ್ದಿ  /  ಕರ್ನಾಟಕ  /  Sainik School Admission: ಸೈನಿಕ ಶಾಲೆಗಳಿಗೆ ಪ್ರವೇಶ, ಅಧಿಸೂಚನೆ ಶೀಘ್ರದಲ್ಲಿ ಪ್ರಕಟ; ಈ ಪ್ರಮಾಣಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಿ

Sainik School Admission: ಸೈನಿಕ ಶಾಲೆಗಳಿಗೆ ಪ್ರವೇಶ, ಅಧಿಸೂಚನೆ ಶೀಘ್ರದಲ್ಲಿ ಪ್ರಕಟ; ಈ ಪ್ರಮಾಣಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಿ

Praveen Chandra B HT Kannada

Dec 12, 2024 05:55 PM IST

google News

Sainik School Admission: ಸೈನಿಕ ಶಾಲೆಗಳಿಗೆ ಪ್ರವೇಶ, ಅಧಿಸೂಚನೆ ಶೀಘ್ರ ಪ್ರಕಟ

    • Sainik School Admission 2025: ಸೈನಿಕ ಶಾಲೆಗಳಿಗೆ ಪ್ರವೇಶ ಪಡೆಯಲು ಪ್ರಯತ್ನಿಸುವವರು  "ಸೈನಿಕ್‌ ಸ್ಕೂಲ್‌ ಅಡ್ಮಿಷನ್‌ 2025" ಅಧಿಸೂಚನೆಗೆ ಕಾಯುತ್ತಿರಬಹುದು. ಎನ್‌ಟಿಎ ವೆಬ್‌ಸೈಟ್‌ನಲ್ಲಿ ಸೈನಿಕ ಶಾಲಾ ಪ್ರವೇಶ 2025-26 ಆನ್‌ಲೈನ್‌ ಅರ್ಜಿ ಆಹ್ವಾನಿಸಲಾಗುತ್ತದೆ.  AISSEE 2025 ಪರೀಕ್ಷೆ ಕುರಿತು ಹೆಚ್ಚಿನ ವಿವರ ಇಲ್ಲಿದೆ.
Sainik School Admission: ಸೈನಿಕ ಶಾಲೆಗಳಿಗೆ ಪ್ರವೇಶ, ಅಧಿಸೂಚನೆ ಶೀಘ್ರ ಪ್ರಕಟ
Sainik School Admission: ಸೈನಿಕ ಶಾಲೆಗಳಿಗೆ ಪ್ರವೇಶ, ಅಧಿಸೂಚನೆ ಶೀಘ್ರ ಪ್ರಕಟ

Sainik School Admission 2025: ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್‌ಟಿಎ) ಭಾರತದದ್ಯಂತ ಇರುವ ಸೈನಿಕ ಶಾಲೆಗಳಲ್ಲಿ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆ ನಡೆಸುತ್ತದೆ. ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀಕ್ಷೆ (AISSEE 2025) ಭಾರತದಾದ್ಯಂತ ಸೈನಿಕ ಶಾಲೆಗಳಲ್ಲಿ ಪ್ರವೇಶಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ಪ್ರವೇಶ ಪರೀಕ್ಷೆಯಾಗಿದೆ. ಸೈನಿಕ್ ಶಾಲೆಯು ತನ್ನ ಅಧಿಕೃತ ವೆಬ್‌ಸೈಟ್ https://aissee.ntaonline.in/ ನಲ್ಲಿ 2025-26 ಪ್ರವೇಶ ಆನ್‌ಲೈನ್ ಅಪ್ಲಿಕೇಶನ್ ಅನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡುತ್ತದೆ. ಸೈನಿಕ್ ಶಾಲೆಯಲ್ಲಿ 6 ನೇ ತರಗತಿ, 9 ನೇ ತರಗತಿಯಲ್ಲಿ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು ಎಐಎಸ್‌ಎಸ್‌ಇಇ 2025 ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.

6 ಮತ್ತು 9ನೇ ತರಗತಿಗೆ ಸೇರ್ಪಡೆ

ಸೈನಿಕ ಶಾಲೆಯ ಪ್ರವೇಶ ಪರೀಕ್ಷೆ 2025 ಅನ್ನು ಕರ್ನಾಟಕ ಸೇರಿದಂತೆ ದೇಶಾದ್ಯಂತ ಇರುವ 33 ಸೈನಿಕ ಶಾಲೆಗಳಲ್ಲಿ 6 ಮತ್ತು 9 ನೇ ತರಗತಿಗಳಿಗೆ ಪ್ರವೇಶಕ್ಕಾಗಿ ಎನ್‌ಐಎ ನಡೆಸುತ್ತದೆ. ಸೈನಿಕ್‌ ಶಾಲೆಯಲ್ಲಿ 9ನೇ ತರಗತಿ ಸೇರಲು ವಿದ್ಯಾರ್ಥಿಗಳು 13ರಿಂದ 15 ವರ್ಷ ವಯಸ್ಸಿನವರಾಗಿರಬೇಕು.

ಎನ್‌ಟಿಎ ಅಧಿಕೃತ ವೆಬ್‌ಸೈಟ್‌ನಲ್ಲಿ ಸೈನಿಕ್ ಶಾಲೆಯ ಪ್ರವೇಶ ನಮೂನೆ 2025-26 ಶೀಘ್ರದಲ್ಲ ಪ್ರಕಟಗೊಳ್ಳಲಿದೆ. 5 ಮತ್ತು 8 ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು (ಪೋಷಕರು) ಈ ವೆಬ್‌ಸೈಟ್‌ಗೆ ನಿಯಮಿತವಾಗಿ ಭೇಟಿ ನೀಡುತ್ತ ಇರಿ.

ಆರನೇ ತರಗತಿಗೆ ಪ್ರವೇ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ 5ನೇ ತರಗತಿಯ ಪಠ್ಯಕ್ರಮ (ಗಣಿತ, ಇಂಟಲಿಜೆನ್ಸ್‌- ಬುದ್ಧಿಮತ್ತೆ, ಭಾಷೆ, ಸಾಮಾನ್ಯ ಜ್ಞಾನ) ಆಧರಿತ ಪ್ರಶ್ನೆಗಳನ್ನು ಹೊಂದಿರುತ್ತದೆ. 9ನೇ ತರಗತಿಗೆ ಸೇರಲು ಪ್ರವೇಶ ಪರೀಕ್ಷೆಯು 8ನೇ ತರಗತಿಯ ಪಠ್ಯಕ್ರಮ (ಗಣಿತ, ಇಂಟಲಿಜೆನ್ಸ್‌, ಇಂಗ್ಲಿಷ್, ಸಮಾಜ ವಿಜ್ಞಾನ) ಆಧರಿತ ಪ್ರಶ್ನೆಪತ್ರಿಕೆ ಹೊಂದಿರುತ್ತದೆ. ಇವೆರಡೂ ಒಎಂಆರ್‌ ಆಧರಿತ ಪರೀಕ್ಷೆ. ಶಾರ್ಟ್‌ಲಿಸ್ಟ್ ಮಾಡಿದ ವಿದ್ಯಾರ್ಥಿಗಳು ವೈದ್ಯಕೀಯ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಪರೀಕ್ಷೆಯೂ ಇರುತ್ತದೆ. ಕೆಲವು ಶಾಲೆಗಳಲ್ಲಿ ವ್ಯಕ್ತಿತ್ವ ಪರೀಕ್ಷೆಗಾಗಿ ಸಂದರ್ಶನವೂ ಇರುತ್ತದೆ.

ಸೈನಿಕ್‌ ಶಾಲೆ ಪ್ರವೇಶ ಅರ್ಜಿಯನ್ನು ಭರ್ತಿ ಮಾಡುವುದು ಹೇಗೆ?

  • ಹಂತ 1 : ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಅಧಿಕೃತ ಸೈಟ್ https://aissee.ntaonline.in ಗೆ ಹೋಗಿ.
  • ಹಂತ 2 : ಮುಖಪುಟದಲ್ಲಿ ನೀವು AISSEE 2025ಗಾಗಿ ಅರ್ಜಿ ನಮೂನೆ ಎಂಬ ಲಿಂಕ್ ಕಾಣಿಸುತ್ತದೆ ( ಡಿಸೆಂಬರ್‌ ಕೊನೆಯ ವಾರ ಬಿಡುಗಡೆಯಾಗುವ ಸೂಚನೆ ಇದೆ). ಅದರ ಮೇಲೆ ಕ್ಲಿಕ್ ಮಾಡಿ.
  • ಹಂತ 3 : 2025 ರ ಸೈನಿಕ್ ಸ್ಕೂಲ್ ಅರ್ಜಿ ನಮೂನೆಯು ಪರದೆಯ ಮೇಲೆ ಕಾಣಿಸುತ್ತದೆ. ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿ.
  • ಹಂತ 4: ಸೈನಿಕ ಶಾಲೆಯ ಅರ್ಜಿ ನಮೂನೆ 2025 ಶುಲ್ಕ ಪಾವತಿ ಮಾಡಿ.
  • ಹಂತ 5: ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ಅರ್ಜಿ ನಮೂನೆಯ ಶುಲ್ಕವನ್ನು ಸಲ್ಲಿಸಿ, ಬಟನ್ ಕ್ಲಿಕ್ ಮಾಡಿ.
  • ಹಂತ 6: ಅಂತಿಮವಾಗಿ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ.

ಅರ್ಜಿ ಶುಲ್ಕ ಎಷ್ಟು?: ಸಾಮಾನ್ಯ/ರಕ್ಷಣಾ ವರ್ಗದ ಅಭ್ಯರ್ಥಿಗಳು ರೂ.650 ರೂಪಾಯಿ, ಎಸ್‌ಸಿ ಮತ್ತು ಎಸ್‌ಟಿ ವರ್ಗದ ಅಭ್ಯರ್ಥಿಗಳು 500 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು.

ಸೈನಿಕ ಶಾಲೆಯಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಕೆಲವು ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ನೀವು ಅವುಗಳನ್ನು ಮುಂಚಿತವಾಗಿ ಸಿದ್ಧಪಡಿಸಿದರೆ ಕೊನೆಕ್ಷಣದ ಪರದಾಟ ತಪ್ಪುತ್ತದೆ. ಅಂದರೆ.. ವಿದ್ಯಾರ್ಥಿ ಫೋಟೋ ಸ್ಕ್ಯಾನ್ ಮಾಡಿದ ಛಾಯಾಚಿತ್ರಗಳು, ವಿದ್ಯಾರ್ಥಿಯ ಸಹಿ, ಎಡಗೈ ಹೆಬ್ಬೆರಳು ಮುದ್ರೆ, ಆಧಾರ್ ಕಾರ್ಡ್, ವಾಸ ಪ್ರಮಾಣಪತ್ರ, ಜನನ ಪ್ರಮಾಣಪತ್ರ, ವರ್ಗಾವಣೆ ಪ್ರಮಾಣಪತ್ರ, ಸೇವಾ ಪ್ರಮಾಣಪತ್ರ (ಮಾಜಿ ಸೈನಿಕರ ಮಕ್ಕಳಿಗೆ), ವರ್ಗಕ್ಕೆ (ಅನ್ವಯಿಸಬಹುದಾದ ಪ್ರಮಾಣಪತ್ರ) ಪಾವತಿಗಳನ್ನು ಮಾಡಿ ಕ್ರೆಡಿಟ್/ಡೆಬಿಟ್ ಕಾರ್ಡ್, ವೈದ್ಯಕೀಯ ಫಿಟ್ನೆಸ್ ಪ್ರಮಾಣಪತ್ರವನ್ನು ಹೊಂದಿರಬೇಕು.

ಕರ್ನಾಟಕದಲ್ಲಿರುವ ಸೈನಿಕ ಶಾಲೆಗಳು

ಕರ್ನಾಟಕದಲ್ಲಿ ಕೊಡಗು, ವಿಜಯಪುರ, ಖಾಸಗಿ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಹಾಗೂ ಮೈಸೂರು ಜಿಲ್ಲೆ ಸರಗೂರಿನಲ್ಲಿ ವಿವೇಕಾನಂದ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಸೈನಿಕ ಶಾಲೆಗಳು ಆರಂಭವಾಗಿವೆ.  ರಾಜ್ಯದಲ್ಲಿ ಐದನೇ ಸೈನಿಕ ಶಾಲೆ ಬೀದರ್‌ ಜಿಲ್ಲೆಯಲ್ಲಿ ಆರಂಭವಾಗುತ್ತಿದೆ. ಭಾರತದಲ್ಲಿರುವ ಎಲ್ಲಾ ಸೈನಿಕ ಶಾಲೆಗಳ ಪಟ್ಟಿಯ ಪಿಡಿಎಫ್‌ ನೋಡಲು ಇಲ್ಲಿ ಕ್ಲಿಕ್‌ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ