ಕನ್ನಡ ಸುದ್ದಿ  /  Sports  /  Vijayapura News All India Ipsc Table Tennis Tournament Held In Vijayapura Sainik School Sports News In Kannada Smu

ವಿಜಯಪುರದ ಸೈನಿಕ ಶಾಲೆಯಲ್ಲಿ ಗಮನ ಸೆಳೆದ ಟೇಬಲ್ ಟೆನಿಸ್ ಪಂದ್ಯಾವಳಿ

Vijayapura: ವಿಜಯಪುರ ಸೈನಿಕ ಶಾಲೆ ಆವರಣದ ಒಳಾಂಗಣ ಕ್ರೀಡಾಂಗಣದಲ್ಲಿ ಅಖಿಲ ಭಾರತ ಮಟ್ಟದ ಐಪಿಎಸ್‌ಸಿ ಒಕ್ಕೂಟದ ಶಾಲೆಗಳ ಬಾಲಕಿಯರ ಟೇಬಲ್ ಟೆನಿಸ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು.

ವಿಜಯಪುರದಲ್ಲಿ ಗಮನ ಸೆಳೆದ ಟೇಬಲ್ ಟೆನಿಸ್ ಪಂದ್ಯಾವಳಿ
ವಿಜಯಪುರದಲ್ಲಿ ಗಮನ ಸೆಳೆದ ಟೇಬಲ್ ಟೆನಿಸ್ ಪಂದ್ಯಾವಳಿ

ವಿಜಯಪುರ: ದೇಶಕ್ಕೆ ಶ್ರೇಷ್ಠ ವೀರಯೋಧರನ್ನು ಕೊಡುಗೆಯಾಗಿ ನೀಡಿದ ಹೆಮ್ಮೆಯ ಸೈನಿಕ ಶಾಲೆಯ ಆವರಣದಲ್ಲಿ ಅಖಿಲ ಭಾರತ ಮಟ್ಟದ ಟೇಬಲ್ ಟೆನಿಸ್ ಪಂದ್ಯಾವಳಿ ಗಮನ ಸೆಳೆಯಿತು. ಸೈನಿಕ ಶಾಲೆಯ ಆವರಣದಲ್ಲಿ ಅತ್ಯಾಧುನಿಕ ಟೇಬಲ್ ಟೆನಿಸ್ ಪ್ರಾಂಗಣ ಸಜ್ಜುಗೊಳಿಸಲಾಗಿದ್ದು, ಈ ಒಳಾಂಗಣ ಕ್ರೀಡಾಂಗಣದಲ್ಲಿ ಅಖಿಲ ಭಾರತ ಮಟ್ಟದ ಐಪಿಎಸ್‌ಸಿ ಒಕ್ಕೂಟದ ಶಾಲೆಗಳ ಬಾಲಕಿಯರ ಟೇಬಲ್ ಟೆನಿಸ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕದ ಹಲವಾರು ಜಿಲ್ಲೆ, ಮಧ್ಯಪ್ರದೇಶ, ಒಡಿಶಾ ಮೊದಲಾದ ಭಾಗಗಳಿಂದ ಕ್ರೀಡಾಪಟುಗಳು ಭಾಗವಹಿಸಿದರು. ವಿವಿಧ ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಧ್ಯಪ್ರದೇಶದ ಇಂದೋರ್‌ನ ಎಂಬ್ರಾಲ್ಡ್ ಹೈಟ್ ಇಂಟರ್ನ್ಯಾಷನಲ್ ಸ್ಕೂಲ್, ಗ್ವಾಲಿಯರ್‌ನ ಸಿಂಧ್ಯಾ ಕನ್ಯಾ ವಿದ್ಯಾಲಯ ಸೇರಿದಂತೆ ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ರೆಸಿಡೆನ್ಸಿ ಸೈನಿಕ ಶಾಲೆಯ ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.

ಹಲವಾರು ವಿಭಾಗಗಳಲ್ಲಿ ಅಗ್ರಗಣ್ಯ ಸಾಧನೆ ಮಾಡಿದ ಮಧ್ಯಪ್ರದೇಶ ತಂಡವು ಬಂಗಾರ ಮುಡಿಗೇರಿಸಿಕೊಂಡರೆ, ಆತಿಥೇಯ ಸೈನಿಕ ಶಾಲೆಗೆ ಬೆಳ್ಳಿ ಪದಕ ಲಭಿಸಿತು.

12 ವರ್ಷ, 14 ವರ್ಷ, 17 ವರ್ಷ ಹಾಗೂ 19 ವರ್ಷದೊಳಗಿನ ಯುವ ಬಾಲಕಿಯರ ಸಿಂಗಲ್ಸ್‌ನಲ್ಲಿ ಪ್ರಥಮ ಸ್ಥಾನವನ್ನು ಇಂದೋರ್‌ನ ಎಂಬ್ರಾಲ್ಡ್ ಹೈಟ್ ಇಂಟರ್ನ್ಯಾಷನಲ್ ಶಾಲೆ ಪಡೆದುಕೊಳ್ಳುವ ಮೂಲಕ ಬಂಗಾರದ ಪದಕ ಮುಡಿಗೇರಿಸಿಕೊಂಡಿತು. 12 ವರ್ಷ ಹಾಗೂ 14 ವರ್ಷದೊಳಗಿನ ಯುವ ಬಾಲಕಿಯರ ಸಿಂಗಲ್ಸ್‌ಲ್ಲಿ ಅತಿಥೇಯ ವಿಜಯಪುರದ ಸೈನಿಕ ಶಾಲೆ ಬೆಳ್ಳಿ ಪದಕ ತನ್ನದಾಗಿಸಿಕೊಂಡಿತು. 17 ವರ್ಷ ಹಾಗೂ 19 ವರ್ಷದೊಳಗಿನ ಯುವ ಬಾಲಕಿಯರ ಸಿಂಗಲ್ಸ್‌ನನಲ್ಲಿ ಮಧ್ಯಪ್ರದೇಶದ ಗ್ವಾಲಿಯರ್‌ನ ಸಿಂಧ್ಯಾ ಕನ್ಯಾ ವಿದ್ಯಾಲಯ ತಂಡ ಬೆಳ್ಳಿ ಪದಕ ಪಡೆಯಿತು. 12 ವರ್ಷ, 14 ವರ್ಷ ಹಾಗೂ 17 ವರ್ಷದೊಳಗಿನ ಯುವ ಬಾಲಕಿಯರ ಸಿಂಗಲ್ಸ್‌ನಲ್ಲಿ ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ರೆಸಿಡೆನ್ಸಿ ಸೈನಿಕ ಸ್ಕೂಲ್ ತಂಡ ಕಂಚಿನ ಪದಕ ಪಡೆದುಕೊಂಡಿತು.

ಸೈನಿಕ ಶಾಲೆ ವಿಜಯಪುರದ ಕ್ರೀಡಾಪಟುಗಳಾದ 12 ವರ್ಷದೊಳಗಿನ ಯುವ ಬಾಲಕಿಯರ ಸಿಂಗಲ್ಸ್‌ನಲ್ಲಿ ಲಾವಣ್ಯ, ಪ್ರಿಯಾಂಕ, ಸಾನ್ವಿ ಹೂಗಾರ್ ಮತ್ತು ಗಾಯತ್ರಿ, 14 ರ‍್ಷದೊಳಗಿನ ಯುವ ಬಾಲಕಿಯರ ಸಿಂಗಲ್ಸ್‌ನಲ್ಲಿ ಸುಪ್ರಿಯಾ ಹಾಗೂ ಅಭಿಜ್ಞಾ, 17 ವರ್ಷದೊಳಗಿನ ಯುವ ಬಾಲಕಿಯರ ಸಿಂಗಲ್ಸ್‌ನಲ್ಲಿ ಕ್ರೀಡಾಪಟು ಪ್ರಿಯರ‍್ಶಿನಿ ಸ್ಥಾನ ಗಿಟ್ಟಿಸಿಕೊಂಡರು.

ಸಮಾರೋಪ ಸಮಾರಂಭದಲ್ಲಿ ಸೈನಿಕ ಶಾಲೆಯ ಪ್ರಾಚಾರ್ಯರಾದ ಪ್ರತಿಭಾ ಬಿಸ್ಟ್ ಅವರು ವಿಜೇತ ತಂಡಗಳಿಗೆ ಪಾರಿತೋಷಕ ವಿತರಿಸಿ ಹಾಗೂ ಶುಭಕೋರಿದರು. ಉದಯೋನ್ಮುಖ ಕ್ರೀಡಾಪಟುಗಳು ಕ್ರೀಡಾ ಪ್ರತಿಭೆ ಮೈಗೂಡಿಸಿಕೊಳ್ಳಬೇಕು. ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿ ಮುನ್ನಡೆಯಬೇಕು. ಅಲ್ಲದೆ ವಿಶ್ವಮಟ್ಟದಲ್ಲಿ ಮಿಂಚಬೇಕು ಎಂದರು.

ವರದಿ: ಸಮಿ ಉಸ್ತಾದ್‌, ವಿಜಯಪುರ

ಸಂಬಂಧಿತ ಲೇಖನ