logo
ಕನ್ನಡ ಸುದ್ದಿ  /  ಕರ್ನಾಟಕ  /  ಅಡಿಕೆ ಜಗಿಯುವುದು ಆರೋಗ್ಯಕ್ಕೆ ಹಾನಿಕರವೇ? ಹೀಗೆ ನಮೂದಿಸಬೇಕೆನ್ನುವ ನಿಯಮ ಎಲ್ಲಿದೆ? ಮಲೆನಾಡು ರೈತರ ವಲಯದಲ್ಲಿ ಮತ್ತೆ ಚರ್ಚೆ ಆರಂಭ

ಅಡಿಕೆ ಜಗಿಯುವುದು ಆರೋಗ್ಯಕ್ಕೆ ಹಾನಿಕರವೇ? ಹೀಗೆ ನಮೂದಿಸಬೇಕೆನ್ನುವ ನಿಯಮ ಎಲ್ಲಿದೆ? ಮಲೆನಾಡು ರೈತರ ವಲಯದಲ್ಲಿ ಮತ್ತೆ ಚರ್ಚೆ ಆರಂಭ

Umesha Bhatta P H HT Kannada

Feb 22, 2024 04:33 PM IST

ಅಡಿಕೆ ಬಳಕೆ ಬಗ್ಗೆ ಕರ್ನಾಟಕದ ಮಲೆನಾಡು ಭಾಗದಲ್ಲೀಗ ಚರ್ಚಾ ಪರ್ವ.

    • arecanut ಅಡಿಕೆ ಕರ್ನಾಟಕದ ಬಹುದೊಡ್ಡ ಕೃಷಿ ವಾಣಿಜ್ಯ ಉತ್ಪನ್ನ. ಲಕ್ಷಾಂತರ ಬೆಳೆಗಾರರು, ಕೋಟ್ಯಂತರ ರೂ. ವಹಿವಾಟು ಇರುವ ಅಡಿಕೆ ಬಳಕೆ ಕುರಿತು ಆಗಾಗ ಚರ್ಚೆಗಳು ಆಗುತ್ತಲೇ ಇರುತ್ತವೆ. ಈ ಬಾರಿಯೂ ಮಲೆನಾಡು ಭಾಗದಲ್ಲಿಅಡಿಕೆ ಬಳಕೆ ಕುರಿತು ಚರ್ಚೆ ನಡೆದಿದೆ. 
ಅಡಿಕೆ ಬಳಕೆ ಬಗ್ಗೆ ಕರ್ನಾಟಕದ ಮಲೆನಾಡು ಭಾಗದಲ್ಲೀಗ ಚರ್ಚಾ ಪರ್ವ.
ಅಡಿಕೆ ಬಳಕೆ ಬಗ್ಗೆ ಕರ್ನಾಟಕದ ಮಲೆನಾಡು ಭಾಗದಲ್ಲೀಗ ಚರ್ಚಾ ಪರ್ವ.

ಚಿಕ್ಕಮಗಳೂರು: ಅಡಿಕೆ ಬಳಕೆ ಆರೋಗ್ಯಕರವೇ ಅಥವಾ ಅನಾರೋಗ್ಯಕರವೇ ಎನ್ನುವ ವಿಚಾರ ಹಲವಾರು ವರ್ಷಗಳಿಂದ ಗೊಂದಲವಾಗಿಯೇ ಉಳಿದಿವೆ. ಬೆಳೆಯವವರು, ಬಳಸವವರು ಹಾಗೂ ವಹಿವಾಟಿನಲ್ಲಿ ತೊಡಗಿರುವ ಮೂರೂ ವಲಯಗಳಿಗೂ ಇದೊಂದು ಯಕ್ಷಪ್ರಶ್ನೆಯೇ. ಆದರೆ ಆಗಾಗ ಅಡಿಕೆ ವಿಚಾರವಾಗಿ ಬರುವ ಹೇಳಿಕೆಗಳು ಇಂತಹ ಗೊಂದಲಗಳನ್ನು ಇನ್ನಷ್ಟು ಆಳಕ್ಕೆ ದೂಡಿ ಚರ್ಚೆಗೂ ದಾರಿ ಮಾಡಿಕೊಡುತ್ತಿವೆ. ಅಡಿಕೆ ಸಹಿತ ಇತರೆ ಉತ್ಪನ್ನಗಳಲ್ಲಿ ದಕ್ಷಿಣ ಕನ್ನಡ ಮೂಲದ ಪ್ರಮುಖ ಉದ್ಯಮ ಸಂಸ್ಥೆಯಾಗಿರುವ 'ಸೆಂಟ್ರಲ್ ಅರೆಕಾನಟ್ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋಆಪರೇಟಿವ್ (CAMPCO) ಲಿಮಿಟೆಡ್‌' ನೀಡಿರುವ ಅಡಿಕೆ ಪುಡಿ ಪ್ಯಾಕೇಟ್‌ ಮೇಲೆ ನೀಡಿರುವ ಸಾಲು ಚರ್ಚೆಯನ್ನು ಹುಟ್ಟಿಸಿದೆ.

ಟ್ರೆಂಡಿಂಗ್​ ಸುದ್ದಿ

ಪ್ರಜ್ವಲ್ ರೇವಣ್ಣ ಕೇಸ್‌; ಜರ್ಮನಿಯಿಂದ ಲಂಡನ್‌ಗೆ ಹೊರಟ್ರಾ ಹಾಸನ ಸಂಸದ, 2 ದಿನಗಳ 10 ವಿದ್ಯಮಾನಗಳು

Raghunandan S Kamath Death: ಐಸ್ ಕ್ರೀಮ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ನ್ಯಾಚುರಲ್ ಐಸ್ ಕ್ರೀಂನ ರಘುನಂದನ್ ಕಾಮತ್ ಇನ್ನಿಲ್ಲ

ಪ್ರಜ್ವಲ್‌ ರೇವಣ್ಣ ಕೇಸ್‌; ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ; ಕಾನೂನು ಕ್ರಮಕ್ಕೆ ತಕರಾರು ಇಲ್ಲ

ಬಂಟ್ವಾಳ: 3 ವರ್ಷದ ಮಗುವನ್ನು ರಕ್ಷಿಸಲು ಪ್ರಾಣದ ಹಂಗುತೊರೆದು ಬಾವಿಗಳಿದ ಯುವಕ, ಉಮೇಶ್ ಮಠದಬೆಟ್ಟು ಕಾರ್ಯಕ್ಕೆ ಶ್ಲಾಘನೆ

ಅಡಿಕೆ ಚರ್ಚೆ ಜೋರು

ಅಡಿಕೆಯನ್ನು ಕರ್ನಾಟಕದ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬೆಳೆಯಲಾಗುತ್ತದೆ. ಅದರಲ್ಲೂ ಕರಾವಳಿ, ಮಲೆನಾಡು, ಮಧ್ಯಕರ್ನಾಟಕದ ಭಾಗದಲ್ಲಿ ಅಡಿಕೆ ಲಕ್ಷಾಂತರ ಕುಟುಂಬಗಳ ಪ್ರಮುಖ ವಾಣಿಜ್ಯ ಬೆಳೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆಯಲ್ಲಿ ಅಡಿಕೆ ಪ್ರಮಾಣ ಅಧಿಕವಾಗಿದೆ. ಅಡಿಕೆ ಆರೋಗ್ಯಕ್ಕೆ ಹಾನಿಕರವೇ, ಅನುಕೂಲಕರವೇ ಎನ್ನುವ ಚರ್ಚೆ ನಡೆದಿದೆ.

ಅಡಿಕೆ ಬಳಕೆ ಹಾನಿಕರ ಎನ್ನುವ ಅಂಶ ಯಾವುದೇ ಅಧಿಕೃತ ಸಂಸ್ಥೆಯಿಂದ ಪ್ರಕಟವಾಗಿಲ್ಲ. ಯಾವುದೇ ಸಂಸ್ಥೆಗಳು ಅಡಿಕೆ ಬಳಕೆಯಿಂದ ಆಗುವ ತೊಂದರೆಗಳ ಕುರಿತು ಹೇಳಿಲ್ಲ. ಆದರೆ ಅಡಿಕೆ ಬಳಕೆಯಿಂದ ಆಗಬಹುದಾಗ ಒಳಿತುಗಳ ಕುರಿತು ಇದರಲ್ಲಿ ಪ್ರಯೋಗ ಮಾಡಿರುವವರು ಹಲವರು ಈಗಾಗಲೇ ಹೇಳುತ್ತಲೇ ಬರುತ್ತಿದ್ದಾರೆ. ಆದರೂ ಅಡಿಕೆ ಬಳಕೆ ವಿಚಾರದಲ್ಲಿ ಇರುವ ಗೊಂದಲಕ್ಕೆ ತೆರೆ ಬಿದ್ದಿಲ್ಲ.

ಈ ಚರ್ಚೆ ಮತ್ತೆ ಮುನ್ನಲೆ ಬರಲು ಕಾರಣ ಕ್ಯಾಂಪ್ಕೋದವರು ಕೊಟ್ಟ ಉಚಿತ ಉಡುಗೊರೆಯಲ್ಲಿನ ಒಂದು ಅಡಿಕೆ ಪುಡಿ ಪ್ಯಾಕೇಟ್ ಮೇಲೆ ಮುದ್ರಣವಾಗಿರುವ ಅಡಿಕೆ ಜಗಿಯುವುದು ಆರೋಗ್ಯಕ್ಕೆ ಹಾನಿಕರ ಎನ್ನುವ ಎಚ್ಚರಿಕೆ.( chewing of supari is injurious to health ) ಇದು ಮಲೆನಾಡು ಸೇರಿದಂತೆ ಹಲವು ಕಡೆಗೆ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಒಂದು ಸಾಲು, ಹತ್ತು ಪ್ರಶ್ನೆ

ಚಿಕ್ಕಮಗಳೂರು ಜಿಲ್ಲೆಯ ಮೇಲುಕೊಪ್ಪದ ಅರವಿಂದ ಸಿಗದಾಳ್ ಅವರು ಅಡಿಕೆ ಕುರಿತಾಗಿ ಅನಗತ್ಯ ಹೇಳಿಕೆ ನೀಡುವ ಬಗ್ಗೆ ಪ್ರಶ್ನೆಗಳನ್ನೂ ಮಾಡಿದ್ದಾರೆ.

  • ಈ ರೀತಿ ಅಡಿಕೆ ಪ್ಯಾಕ್ ಮಾಡುವಾಗ ನಿಯಮಾವಳಿಯಲ್ಲಿ ಅಡಿಕೆ ಹಾನಿಕಾರಕ ಎಂದು ಸೂಚಿಸಲು ಎಲ್ಲಿ ತಿಳಿಸಲಾಗಿದೆ? ಕೋರ್ಟ್ ಆದೇಶ ಇದೆಯಾ? ಸರಕಾರದ ಆಹಾರ ಇಲಾಖೆಯ ಆದೇಶವಾ?
  • ಸರಕಾರದ್ದೇ ಆದರೆ, ಈ ರೀತಿ ನಿಯಮಾಡಲು ಮೂಲ ವರದಿ ಯಾವುದು?ಈ ಹಾನಿಕಾರಕ ಅಡಿಕೆ ಪ್ಯಾಕನ್ನು ಕ್ಯಾಂಪ್ಕೋ ಉಚಿತವಾಗಿ ಮಾರಾಟಕ್ಕಲ್ಲ ಎಂದು ನಮೂದಿಸಿ ಕೊಟ್ಟಿದ್ದೇಕೆ? ಹಾನಿಕಾರಕ ವಾಗಿದ್ದನ್ನು ಉಡುಗೊರೆಯಾಗಿ ಆಗಿ ಕೊಡುವುದೇಕೆ?
  • ಪ್ಯಾಕ್‌ನಲ್ಲಿ ಅಡಿಕೆ ಜಗಿಯುವುದು ಆರೋಗ್ಯಕ್ಕೆ ಹಾನಿಕರ ಎಂದಿದೆ. ಕ್ಯಾಂಪ್ಕೋ ಪ್ಯಾಕ್‌ನಲ್ಲಿ ಅಡಿಕೆ ಜೊತೆ ಬೇರೆ ಯಾವುದಾದರು ಹಾನಿಕಾರಕ ಉತ್ಪನ್ನಗಳನ್ನು ಸೇರಿಸಲಾಗಿದೆಯಾ? ಹೌದಾದರೆ ಯಾವುದು?
  • ಈಗಾಗಲೇ ಅನೇಕ ಸಂಶೋಧನೆಗಳಿಂದ ಜನರಲ್ ಆಗಿ, ಅಡಿಕೆ ಹಾನಿಕಾರಕ ಅಲ್ಲ ಅಂತ ವರದಿ ಕೊಟ್ಟಿವೆ ಮತ್ತು ಅವುಗಳನ್ನು ಸುಪ್ರೀಂ ಕೋರ್ಟಿಗೂ ಕೊಡಲಾಗಿದೆಯಂತೆ ಎನ್ನುವ ಸುದ್ದಿಗಳಿವೆ.
  • ಆ ವರದಿಗಳ ಆಧಾರದ ಮೇಲೆ ತಂಬಾಕು ಅಥವಾ ಇನ್ಯಾವುದೇ ಹಾನಿಕಾರಕ ವಸ್ತುಗಳ ಮಿಶ್ರಣವಿಲ್ಲದ ಪ್ಯಾಕ್ಡ್ ಅಡಿಕೆಗೆ ಅಡಿಕೆ ಜಗಿಯುವುದು ಆರೋಗ್ಯಕ್ಕೆ ಹಾನಿಕರವಲ್ಲ ಅಂತ ನಿಯಮಗಳನ್ನು ಬದಲಾಯಿಸಬಹುದಲ್ವಾ?

ಇದನ್ನೂ ಓದಿರಿ: ಗೆಲ್ಲಲೇಬೇಕಾದ ಒತ್ತಡದಲ್ಲಿ ಇಂಗ್ಲೆಂಡ್; 4ನೇ ಟೆಸ್ಟ್​ ಪಂದ್ಯಕ್ಕೆ ಪ್ಲೇಯಿಂಗ್ XI ಪ್ರಕಟಿಸಿದ ಆಂಗ್ಲರು, ಎರಡು ಬದಲಾವಣೆ

  • ಅಡಿಕೆ ಔಷಧಿ ಸಮಾನ, ಅಡಿಕೆ ಕ್ಯಾನ್ಸರ್ ಗುಣಪಡಿಸುವ ಗುಣ ಇರುವಂತಹದ್ದು, ಅಡಿಕೆ ಆಹಾರ ಪಚನಕ್ಕೆ, ಜೀರ್ಣಕ್ರಿಯೆಗೆ ಅನುಕೂಲ ಅಂತೆಲ್ಲ ಆರೋಗ್ಯ ಮಾಹಿತಿ ಇರುವಾಗ, ಅಡಿಕೆ ಜಗಿಯುವುದು ಆರೋಗ್ಯಕ್ಕೆ ಹಾನಿಕಾರಕ ಅನ್ನುವ ಎಚ್ಚರಿಕೆಯನ್ನು ಪ್ಯಾಕ್‌ಗಳಿಂದ ತೆಗೆಸಬಹುದಲ್ಲವಾ?
  • ನಾಳೆ ಸುಪ್ರೀಂ ಕೋರ್ಟ್ ಅಡಿಕೆ ಜಗಿಯುವುದು ಆರೋಗ್ಯಕ್ಕೆ ಹಾನಿಕರವಲ್ಲ ಅಂತ ತೀರ್ಪು ನೀಡಿದರೂ ಈ ಪ್ಯಾಕೇಟ್ ಮೇಲೆ ಇರುವ ಶಾಸನ ವಿಧಿಸಿದ ಎಚ್ಚರಿಕೆ ಹಾಗೇ ಇರುತ್ತದಾ?
  • ಅಡಿಕೆ ಹಾನಿಕಾರಕ ವಿಚಾರದಲ್ಲಿ ಸರಕಾರ, ಸಹಕಾರಿ ಸಂಘಗಳು ತ್ವರಿತ ತೀರ್ಪಿಗೆ ಒತ್ತಾಯಿಸಿ, ರೈತರ ಆತಂಕಗಳನ್ನು ಕಡಿಮೆ ಮಾಡಬಹುದು. ಕೋರ್ಟ್ ತೀರ್ಪು ಇದೇ ರೀತಿ ಬರುತ್ತದೆ ಅಂತ ನೂರಕ್ಕೆ ನೂರು ಭಾಗ ಹೇಳಲು ಸಾಧ್ಯವಿಲ್ಲ.
  • ಆದರೆ, ತ್ವರಿತವಾಗಿ ತೀರ್ಪು ಬರುವಂತೆ ಮಾಡಿದರೆ, ರೈತರು 'ತೋಳ ಬಂತು ತೋಳ' ಅನ್ನುವಂತೆ ಆಗಾಗ ಭಯ ಬೀಳುವುದು/ಆತಂಕ ಪಡುವುದು ತಪ್ಪಬಹುದು?ಅಡಿಕೆ ಹಾನಿಕಾರಕ ಅಲ್ಲ ಅಲ್ಲ ಅನ್ನುವ ತೀರ್ಪು ಬಂದರೂ ಅಡಿಕೆ ಹಾನಿಕಾರಕ ಆದರೆ, ಬೀಡಿ, ಸಿಗರೇಟ್, ಮದ್ಯಗಳಂತೆ ಬಳಕೆಗೆ ಸಮಸ್ಯೆ ಇಲ್ಲ. ಕೇವಲ ಕ್ಯಾಂಪ್ಕೋ ಪ್ಯಾಕೇಟ್ ಮೇಲೆ ಮುದ್ರಿಸಿದಂತೆ ಎಚ್ಚರಿಕೆಯ ಚಿತ್ರ ಮತ್ತು ಶಬ್ದಗಳ ಸೂಚನೆ ಮುದ್ರಿಸಿದರಾಯ್ತು ಎಂದರೂ ಸಮಸ್ಯೆ ಇಲ್ಲ.
  • ಅಡಿಕೆ ವಿಪರೀತ ವಿಸ್ತರಣೆ ಆಗಿರುವ, ಆಗುತ್ತಿರುವ ಕಾಲದಲ್ಲಿ ಲಕ್ಷಾಂತರ ರೈತರು ಬೀದಿ ಬಿಕಾರಿಗಳಾಗಬೇಕಾಗುತ್ತೆ. ಈ ಆತಂಕದ ಹಿನ್ನಲೆಯಲ್ಲಿಯೂ ಅಡಿಕೆ ಬೆಳೆ ವಿಸ್ತರಣೆಯನ್ನು ಪ್ರಜ್ಞಾವಂತ ಸರಕಾರಗಳು, ಪ್ರಜ್ಞಾವಂತ ಸಚಿವರುಗಳು ನಿಯಂತ್ರಿಸುವಲ್ಲಿ ಗಮನ ಹರಿಸುವಲ್ಲಿ ಪ್ರಯತ್ನಿಸುವುದು ಒಳ್ಳೆಯದು.

    ಇದನ್ನೂ ಓದಿರಿ: Gokak News: ಶಾಸಕರಿಗೆ ಏಕವಚನದಲ್ಲಿ ನಿಂದನೆ, ಗೋಕಾಕ ಡಿಸಿಎಫ್‌ ಅಮಾನತು

ಅಡಿಕೆಗೆ ಹಲವು ರೂಪ

ಅಡಿಕೆಯಿಂದ ಹಲ್ಲುಜ್ಜುವ ಪುಡಿ , ಅಡಿಕೆ ಸಿಪ್ಪೆಯಿಂದ ಪ್ರಾಯೋಗಿಕವಾಗಿ ವೈನ್‌ ತಯಾರಿ, ಹಣ್ಣಡಿಕೆ ಸಿಪ್ಪೆ ಬಳಕೆ ಮಾಡಿ ಸೋಪು ತಯಾರಿ, ಅಡಿಕೆಯಿಂದ ಔಷಧಿ ಉತ್ಪಾದನೆ, ಅಡಿಕೆ ಬಣ್ಣ ಬಟ್ಟೆಗಳಿಗೆ ಬಳಕೆ, ಅಡಿಕೆ ಬಳಸಿ ಸೋಪು ತಯಾರಿಸುವ ಪ್ರಯೋಗಗಳಲ್ಲಿ ಹಲವರು ಯಶಸ್ವಿ ಕೂಡ ಆಗಿದ್ದಾರೆ. ಇವೆಲ್ಲವೂ ಆಯಾ ಭಾಗದಲ್ಲಿ ಬಳಕೆಯಾಗುತ್ತಿವೆ.

ಅಡಿಕೆಯನ್ನು ವಿವಿಧ ದೇಶಗಳಲ್ಲಿ ಬಳಕೆ ಮಾಡಲಾಗುತ್ತದೆ. ತಿಂದು ಉಗುಳುವುದಕ್ಕೆ ಮಾತ್ರಾ ಅಡಿಕೆಯನ್ನು ಬಳಕೆ ಮಾಡುವುದಲ್ಲ, ಅಡಿಕೆಯನ್ನು ಔಷಧ ಸೇರಿದಂತೆ ವಿವಿಧ ರೂಪದಲ್ಲಿ ವಿದೇಶದಲ್ಲೂ ಬಳಕೆ ಮಾಡಲಾಗುತ್ತಿದೆ. ನಮ್ಮಲ್ಲಿ ಮಾತ್ರಾ ಅಡಿಕೆ ಹಾನಿಕಾರಕ ಎಂದು ಏಕೆ ಪರಿಗಣನೆಯಾಗಬೇಕು ?. ಅಡಿಕೆಯಿಂದಲೂ ಹಲವು ಉತ್ಪನ್ನಗಳ ತಯಾರಿ ಸಾಧ್ಯವಿದೆ. ಅಡಿಕೆ ಬಣ್ಣದದ ವ್ಯಾಪಕತೆಯೂ ದೊಡ್ಡದಿದೆ ಎನ್ನುವ ಸಲಹೆ ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಅವರದ್ದು.

ಅಡಿಕೆ ಉಪಯೋಗಗಳ ಮೇಲೆಯೇ ಇನ್ನಷ್ಟು ಬೆಳಕು ಚೆಲ್ಲುವ ಪ್ರಯತ್ನ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಂದ ಆಗಬೇಕು ಎಂಬ ಸಲಹೆಯೂ ಅಡಿಕೆ ಬೆಳೆಗಾರರ ವಲಯದಲ್ಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ