logo
ಕನ್ನಡ ಸುದ್ದಿ  /  ಕರ್ನಾಟಕ  /  Suchana Seth: ಕೊಲೆ ಪ್ರಕರಣ ಸುತಾರಾಂ ಒಪ್ಪದ ಸುಚನಾ: ಗೋವಾ ಪೊಲೀಸ್‌ ಸುಪರ್ದಿ ಅವಧಿ 5ದಿನ ವಿಸ್ತರಣೆ

Suchana Seth: ಕೊಲೆ ಪ್ರಕರಣ ಸುತಾರಾಂ ಒಪ್ಪದ ಸುಚನಾ: ಗೋವಾ ಪೊಲೀಸ್‌ ಸುಪರ್ದಿ ಅವಧಿ 5ದಿನ ವಿಸ್ತರಣೆ

Umesha Bhatta P H HT Kannada

Jan 15, 2024 05:17 PM IST

google News

ಮಗುವಿನ ಕೊಲೆ ಆರೋಪ ಎದುರಿಸುತ್ತಿರುವ ಸುಚನಾ ಸೇಥ್‌ ಪೊಲೀಸ್‌ ಕಸ್ಟಡಿ ಅವಧಿ ವಿಸ್ತರಿಸಲಾಗಿದೆ.

    • Goa murder case ಗೋವಾದಲ್ಲಿ ಮಗುವಿನ ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಬೆಂಗಳೂರು ಮೂಲದ ಕಂಪೆನಿ ಸಿಇಒ ಸುಚನಾ ಸೇಥ್‌ ಅವರ ಪೊಲೀಸ್‌ ಕಸ್ಟಡಿ ಅವಧಿಯನ್ನು ಐದು ದಿನ ವಿಸ್ತರಿಸಿ ಗೋವಾ ನ್ಯಾಯಾಲಯ ಆದೇಶಿಸಿದೆ.
ಮಗುವಿನ ಕೊಲೆ ಆರೋಪ ಎದುರಿಸುತ್ತಿರುವ ಸುಚನಾ ಸೇಥ್‌ ಪೊಲೀಸ್‌ ಕಸ್ಟಡಿ ಅವಧಿ ವಿಸ್ತರಿಸಲಾಗಿದೆ.
ಮಗುವಿನ ಕೊಲೆ ಆರೋಪ ಎದುರಿಸುತ್ತಿರುವ ಸುಚನಾ ಸೇಥ್‌ ಪೊಲೀಸ್‌ ಕಸ್ಟಡಿ ಅವಧಿ ವಿಸ್ತರಿಸಲಾಗಿದೆ.

ಪಣಜಿ: ತನ್ನದೇ ಮಗುವನ್ನು ಕೊಂದು ಸಾಗಿಸುವ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಬೆಂಗಳೂರು ಮೂಲದ ಕಂಪೆನಿಯೊಂದರ ಸಿಇಒ ಸುಚನಾ ಸೇಥ್‌ ಅವರ ಪೊಲೀಸ್‌ ಕಸ್ಟಡಿಯನ್ನು ಇನ್ನೂ 5 ದಿನ ವಿಸ್ತರಣೆ ಮಾಡಲಾಗಿದೆ. ಗೋವಾ ಪೊಲೀಸರ ಮನವಿಯನ್ನು ಪುರಸ್ಕರಿಸಿದ ಗೋವಾ ಸ್ಥಳೀಯ ನ್ಯಾಯಾಲಯವು ಸುಚನಾ ಅವರನ್ನು ಇನ್ನೂ 5 ದಿನ ಪೊಲೀಸ್‌ ಸುಪರ್ದಿಯಲ್ಲಿಯೇ ಇಟ್ಟುಕೊಂಡು ವಿಚಾರಣೆ ನಡೆಸುವಂತೆ ಆದೇಶಿಸಿದೆ. ಈಗಾಗಲೇ ಆರು ದಿನದಿಂದ ಗೋವಾ ಪೊಲೀಸರ ವಶದಲ್ಲಿಯೇ ಇರುವ ಸುಚನಾ ಈ ವಾರವೂ ಗೋವಾ ಪೊಲೀಸರ ಕಸ್ಟಡಿಯಲ್ಲಿಯೇ ಇರಲಿದ್ದಾರೆ ಎಂದು ಮಿರರ್‌ ನೌ ವರದಿ ಮಾಡಿದೆ.

ಕಳೆದ ವಾರ ಮೂರು ದಿನ ಗೋವಾದಲ್ಲಿ ಇದ್ದ ಬೆಂಗಳೂರಿನ ಮೈಂಡ್‌ಫುಲ್‌ ಕೃತಿಕ ಬುದ್ದಿಮತ್ತೆ ಸಂಸ್ಥೆಯ ಸಿಇಒ ಸುಚನಾ ಸೇಥ್‌ ಅವರು ವಾಪಾಸಾಗುವ ಮಗುವಿನ ಶವವನ್ನು ಸಾಗಿಸುತ್ತಿದ್ದರು. ಚಿತ್ರದುರ್ಗ ಬಳಿ ಅವರನ್ನು ವಶಕ್ಕೆ ಪಡೆದಾಗ ಸೂಟ್‌ಕೇಸ್‌ನಲ್ಲಿ ಮಗು ಸಾಗಿಸುತ್ತಿರುವುದು ಕಂಡು ಬಂದಿತ್ತು. ಜನವರಿ 8ರಂದು ಚಿತ್ರದುರ್ಗ ಜಿಲ್ಲೆ ಐಮಂಗಲ ಪೊಲೀಸರು ಸುಚನಾ ಅವರನ್ನು ಬಂಧಿಸಿ ನಂತರ ಗೋವಾದ ಕಲ್ಲಂಗೂಟ್‌ ಪೊಲೀಸರ ವಶಕ್ಕೆ ನೀಡಿದ್ದರು. ಚಿತ್ರದುರ್ಗದಲ್ಲಿಯೇ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿದಾಗ ಕೊಲೆಯಾಗಿರುವುದನ್ನು ಖಚಿತವಾಗಿತ್ತು.

ಇದಾದ ಬಳಿಕ ಸುಚನಾ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಆರು ದಿನ ಪೊಲೀಸ್‌ ಸುಪರ್ದಿಗೆ ನೀಡಲಾಗಿತ್ತು. ಅಲ್ಲಿಂದ ನಿರಂತರವಾಗಿ ಸುಚನಾ ಅವರನ್ನು ಘಟನೆ ನಡೆದ ಸ್ಥಳಗಳಿಗೆ ಕರೆದೊಯ್ದು ಮಾಹಿತಿ ಕಲೆ ಹಾಕಲಾಗಿತ್ತು.

ಆದರೆ ಸುಚನಾ ಈವರೆಗೂ ಕೊಲೆಯನ್ನು ಒಪ್ಪಿಕೊಳ್ಳುತ್ತಿಲ್ಲ. ಸರಿಯಾದ ಮಾಹಿತಿಯನ್ನು ನೀಡುತ್ತಿಲ್ಲ. ಒಮ್ಮೆ ಒಂದು ರೀತಿ ಹೇಳಿದರೆ, ಮತ್ತೊಂದು ಬಾರಿ ಇನ್ನೊಂದು ಹೇಳಿಕೆ ನೀಡುತ್ತಿದ್ದಾರೆ. ಮಗನನ್ನು ನಾನು ಕೊಲೆ ಮಾಡೇ ಇಲ್ಲ ಎನ್ನುವ ರೀತಿ ಹೇಳುತ್ತಿದ್ದಾರೆ. ಇದರಿಂದ ತನಿಖೆ ವಿಳಂಬವಾಗಿದೆ ಎಂದು ಗೋವಾ ಪೊಲೀಸರು ಹೇಳಿದ್ದರು. ತನಿಖೆ ಇನ್ನೂ ಪೂರ್ಣಗೊಳ್ಳದೇ ಇರುವುದರಿಂದ ಇನ್ನಷ್ಟು ದಿನ ಪೊಲೀಸ್‌ ಸುಪರ್ದಿಗೆ ನೀಡುವಂತೆ ನ್ಯಾಯಾಲಯದ ಮುಂದೆ ಗೋವಾ ಪೊಲೀಸರು ಮೇಲ್ಮನವಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು ಸುಚನಾ ಅವರ ಪೊಲೀಸ್‌ ಕಸ್ಟಡಿ ಅವಧಿ ವಿಸ್ತರಿಸಿತು.

ಇನ್ನೂ ಐದು ದಿನ ಕಾಲ ಘಟನೆ ನಡೆದ ಸ್ಥಳಗಳಿಗೆ, ಅಲ್ಲಿ ಸಿಕ್ಕಿರುವ ಸಾಕ್ಷ್ಯಗಳು, ಪತಿ ವೆಂಕಟರಮಣ ನೀಡಿರುವ ಹೇಳಿಕೆಗಳನ್ನು ಆಧರಿಸಿ ಸುಚನಾ ಅವರನ್ನು ಇನ್ನಷ್ಟು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆ ಹಾಕುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ವೆಂಕಟರಮಣ ಹಾಗೂ ವಕೀಲ ಮೀರ್‌ ಅವರು ಈಗಾಗಲೇ ಗೋವಾ ಪೊಲೀಸರನ್ನು ಭೇಟಿ ಮಾಡಿ ಸುಚನಾ ನಡುವಳಿಕೆ, ಮಗುವಿನ ಭೇಟಿಗೆ ಬಂದಾಗ ಆಕೆ ನಡೆದುಕೊಳ್ಳುತ್ತಿದ್ದ ರೀತಿ, ಆನಂತರದ ಬೆಳವಣಿಗೆಗಳ ವಿವರಗಳನ್ನು ನೀಡಿದ್ದಾರೆ. ಈ ಎಲ್ಲಾ ಅಂಶಗಳನ್ನು ಆಧರಿಸಿ ತನಿಖೆಯನ್ನು ಭಿನ್ನ ಆಯಾಮಗಳಲ್ಲಿ ನಡೆಸಲು ಗೋವಾ ಪೊಲೀಸರು ಮುಂದಾಗಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ