logo
ಕನ್ನಡ ಸುದ್ದಿ  /  ಕರ್ನಾಟಕ  /  Hassan Scandal: ಮಹಿಳೆ ಅಪಹರಣ ಪ್ರಕರಣ, ಮೇ31ಕ್ಕೆ ಭವಾನಿ ರೇವಣ್ಣ ಜಾಮೀನು ತೀರ್ಪು

Hassan Scandal: ಮಹಿಳೆ ಅಪಹರಣ ಪ್ರಕರಣ, ಮೇ31ಕ್ಕೆ ಭವಾನಿ ರೇವಣ್ಣ ಜಾಮೀನು ತೀರ್ಪು

Umesha Bhatta P H HT Kannada

May 29, 2024 04:42 PM IST

google News

ಹಾಸನದ ಭವಾನಿ ರೇವಣ್ಣ

  • Court News ಹಾಸನದಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಭವಾನಿ ರೇವಣ್ಣ( Bhavani Revanna) ಅವರ ಜಾಮೀನು ಅರ್ಜಿ ತೀರ್ಪು ಮೇ 31ಕ್ಕೆ ಕಾಯ್ದಿರಿಸಲಾಗಿದೆ.

ಹಾಸನದ ಭವಾನಿ ರೇವಣ್ಣ
ಹಾಸನದ ಭವಾನಿ ರೇವಣ್ಣ

ಬೆಂಗಳೂರು: ಹಾಸನದಲ್ಲಿ ನಡೆದಿರುವ ಸಂಸದ ಪ್ರಜ್ವಲ್‌ ರೇವಣ್ಣ ಅವರ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆ ಅಪಹರಣ ವಿಚಾರವಾಗಿ ಈಗಾಗಲೇ ನೀಡಿರುವ ಎಸ್‌ಐಟಿ ನೊಟೀಸ್‌ ಹಿನ್ನೆಲೆಯಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಭವಾನಿ ರೇವಣ್ಣ ಅವರ ಜಾಮೀನು ಅರ್ಜಿ ತೀರ್ಪು ಮೇ31ಕ್ಕೆ ಪ್ರಕಟವಾಗಲಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಈ ಕುರಿತು ವಿಚಾರಣೆ ನಡೆಸಿ ತೀರ್ಪನ್ನು ಶುಕ್ರವಾರಕ್ಕೆ ಕಾಯ್ದಿರಿಸಿದೆ.

ಕಳೆದ ತಿಂಗಳು ಹೊಳೆನರಸೀಪುರ ಪೊಲೀಸ್‌ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ವಿಚಾರವಾಗಿ ಪ್ರಜ್ವಲ್‌ ರೇವಣ್ಣ ಹಾಗೂ ಮಾಜಿ ಸಚಿವ ಎಚ್‌.ಡಿ.ರೇವಣ್ಣ ವಿರುದ್ದ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣದಲ್ಲಿ ಮೈಸೂರು ಜಿಲ್ಲೆ ಕೆಆರ್‌ನಗರ ತಾಲ್ಲೂಕಿನ ಸಂತ್ರಸ್ತ ಮಹಿಳೆಯ ಅಪಹರಣ ಆರೋಪದಡಿ ರೇವಣ್ಣ ಅವರನ್ನು ಬಂಧಿಸಲಾಗಿತ್ತು.

ವಿಶೇಷ ತನಿಖಾ ತಂಡ ರೇವಣ್ಣ ಅವರ ಪತ್ನಿ ಭವಾನಿ ಅವರಿಗೂ ನೊಟೀಸ್‌ ಜಾರಿ ಮಾಡಿತ್ತು. ಆದರೆ ಭವಾನಿ ರೇವಣ್ಣ ಈವರೆಗೂ ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗಿಲ್ಲ. ಆದರೂ ಈ ಪ್ರಕರಣದಲ್ಲಿ ಎಸ್‌ಐಟಿ ಪ್ರಕರಣ ದಾಖಲಿಸಿ ಬಂಧಿಸಬಹುದು ಎನ್ನುವ ಭೀತಿಯಿಂದ ಭವಾನಿ ರೇವಣ್ಣ ಅವರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಕಳೆದ ವಾರವೇ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಈ ಕುರಿತು ವಿಚಾರಣೆ ನಡೆದಿತ್ತು. ಬುಧವಾರವೂ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಅರ್ಜಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದರು.

ನನ್ನ ಕಕ್ಷಿದಾರರು ಯಾವುದೇ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಆದರೂ ಅವರಿಗೆ ನೊಟೀಸ್‌ ಅನ್ನು ನೀಡಲಾಗಿದೆ. ಇದೇ ಪ್ರಕರಣದಲ್ಲಿ ಬಂಧಿಸುವ ಆತಂಕವೂ ಇದೆ. ಈ ಕಾರಣದಿಂದಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿದ್ದು, ಇದನ್ನು ಪರಿಗಣಿಸಬೇಕು ಎಂದು ಭವಾನಿ ರೇವಣ್ಣ ಪರ ವಕೀಲರು ವಾದಿಸಿದರು. ಅಲ್ಲದೇ ಪ್ರತಿವಾದವನ್ನೂ ಆಲಿಸಿದರು. ಈ ಕುರಿತಾಗಿಮೇ31ಕ್ಕೆ ಜಾಮೀನು ತೀರ್ಪು ಪ್ರಕಟಿಸುವುದಾಗಿ ನ್ಯಾಯಾಧೀಶರು ಹೇಳಿದರು.

ಈಗಾಗಲೇ ಈ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್‌ ರೇವಣ್ಣ ಒಂದು ತಿಂಗಳ ಬಳಿಕ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಸದ್ಯವೇ ಭಾರತಕ್ಕೆ ಮರಳುವುದಾಗಿ ಹೇಳಿದ್ದರು. ಮೇ31ಕ್ಕೆ ವಾಪಾಸಾಗಿ ಎಸ್‌ಐಟಿ ವಿಚಾರಣೆ ಎದುರಿಸುವುದಾಗಿಯೂ ಹೇಳಿದ್ದರು. ರೇವಣ್ಣ ಅವರಿಗೆ ಎರಡು ಪ್ರಕರಣದಲ್ಲಿ ಈಗಾಗಲೇ ಜಾಮೀನು ದೊರೆತಿದೆ. ಆದರೆ ಯಾವುದೇ ಪ್ರಕರಣದಲ್ಲೂ ತಮ್ಮ ಹೆಸರು ಇಲ್ಲದೇ ಇದ್ದರೂ ಕೆಆರ್‌ನಗರ ಮೂಲದವರಾದ ಭವಾನಿ ರೇವಣ್ಣ ಅವರನ್ನು ಈ ಪ್ರಕರಣದಲ್ಲಿ ಬಂಧಿಸುವ ಭಯವೂ ಇರುವುರಿಂದ ಕಾನೂನು ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ಪ್ರಜ್ವಲ್‌ ರೇವಣ್ಣ ಅವರ ತಾಯಿಯಾದ ಭವಾನಿ ರೇವಣ್ಣ ಅವರು ಜಿಲ್ಲಾಪಂಚಾಯತಿ ಸದಸ್ಯೆಯಾಗಿಯೂ ಕೆಲಸ ಮಾಡಿದ್ದಾರೆ. ಹಾಸನ ಕ್ಷೇತ್ರದಿಂದ ಕಳೆದ ವರ್ಷ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಇರಾದೆಯನ್ನು ಹೊಂದಿದ್ದರೂ ಅವರಿಗೆ ಅವಕಾಶ ನೀಡಿರಲಿಲ್ಲ.


(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ