logo
ಕನ್ನಡ ಸುದ್ದಿ  /  ಕರ್ನಾಟಕ  /  ಜೀವಬಲಿ ಪಡೆದ ಪ್ಲೈಓವರ್ ಕಾಮಗಾರಿ ನಿರ್ಲಕ್ಷ್ಯ: ಗಾಯಾಳು ಎಎಸ್‌ಐ ಚಿಕಿತ್ಸೆ ಫಲಕಾರಿಯಾಗದೆ ಸಾವು

ಜೀವಬಲಿ ಪಡೆದ ಪ್ಲೈಓವರ್ ಕಾಮಗಾರಿ ನಿರ್ಲಕ್ಷ್ಯ: ಗಾಯಾಳು ಎಎಸ್‌ಐ ಚಿಕಿತ್ಸೆ ಫಲಕಾರಿಯಾಗದೆ ಸಾವು

Prasanna Kumar P N HT Kannada

Sep 15, 2024 05:05 PM IST

google News

ಗಾಯಾಳು ಎಎಸ್‌ಐ ಚಿಕಿತ್ಸೆ ಫಲಕಾರಿಯಾಗದೆ ಸಾವು

    • Hubballi News: ರಸ್ತೆಯಲ್ಲಿ ತೆರಳುತ್ತಿದ್ದ ಅವಧಿಯಲ್ಲಿ ಫ್ಲೈಓವರ್​ ಕಾಮಗಾರಿಯ ಕಬ್ಬಿಣದ ತುಂಡು ತಲೆಗೆ ಬಿದ್ದ ಪರಿಣಾಮ ಎಎಸ್​​ಐ ನಾಭಿರಾಜ್ ದಯಣ್ಣವರ ಅವರು ಮೃತಪಟ್ಟಿದ್ದಾರೆ.
 ಗಾಯಾಳು ಎಎಸ್‌ಐ ಚಿಕಿತ್ಸೆ ಫಲಕಾರಿಯಾಗದೆ ಸಾವು
ಗಾಯಾಳು ಎಎಸ್‌ಐ ಚಿಕಿತ್ಸೆ ಫಲಕಾರಿಯಾಗದೆ ಸಾವು

ಹುಬ್ಬಳ್ಳಿ: ಹಳೆ ಕೋರ್ಟ್ ಬಳಿಯಲ್ಲಿ ತೆರಳುತ್ತಿದ್ದಾಗ ಫ್ಲೈ ಓವರ್ ಕಾಮಗಾರಿಯ ಕಬ್ಬಿಣದ ರಾಡ್ ತಲೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಎಎಸ್‌ಐ ನಾಭಿರಾಜ್ ದಯಣ್ಣವರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಧಾರವಾಡ ಜಿಲ್ಲೆಯ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರ ಭದ್ರತಾ ಕರ್ತವ್ಯ ನಿರ್ವಹಿಸಿ ಠಾಣೆಗೆ ತೆರೆಳುತ್ತಿದ್ದ ಅವಧಿಯಲ್ಲಿ ಘಣನೆ ಸಂಭವಿಸಿದೆ.

ಸೆಪ್ಟೆಂಬರ್ 10 ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಭದ್ರತಾ ಕರ್ತವ್ಯ ನಿರ್ವಹಿಸಿದ್ದರು. ತದನಂತರ ಠಾಣೆಗೆ ತೆರಳುತ್ತಿದ್ದ ನಾಭಿರಾಜ್ ದಯಣ್ಣವರ ಮೇಲೆ ಕೋರ್ಟ್ ವೃತ್ತದ ಬಳಿಯ ಫ್ಲೈಓವರ್ ಕಾಮಗಾರಿ ಸ್ಥಳದಲ್ಲಿ ಮೇಲಿನಿಂದ ಕಬ್ಬಿಣದ ರಾಡ್ ಬಿದಿತ್ತು. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಎಎಸ್‌ಐ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಫ್ಲೈಓವರ್ ಕಾಮಗಾರಿ ನಡೆಸುವ ವೇಳೆ ನಿರ್ಲಕ್ಷ್ಯ ವಹಿಸಿದ ಝಂಡು ಕನ್ಸಕ್ಷನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಎಸ್‌ಐ ನಾಭಿರಾಜ್ ಬೆಳಗಿನ ನಾಲ್ಕು ಗಂಟೆಗೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಸತ್ತೂರಿನ ನಿವಾಸಿಯಾಗಿರುವ ದಯಣ್ಣವರ ಒಂದು ವರ್ಷದಿಂದ ಉಪನಗರ ಠಾಣೆಯಲ್ಲಿ ಎಎಸ್​​ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ