MBBS: ಭಾರತದ ಮೆಡಿಕಲ್ ಕಾಲೇಜುಗಳಲ್ಲಿ ಸೀಟ್ ಸಿಕ್ಕಿಲ್ವಾ; ಈ ದೇಶಗಳಲ್ಲೂ ಎಂಬಿಬಿಎಸ್ ಓದಬಹುದು, ಫೀಸ್ ಕೂಡಾ ಕಡಿಮೆ-education popular countries can consider for mbbs studies if you failed to secure seat in indian medical colleges jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Mbbs: ಭಾರತದ ಮೆಡಿಕಲ್ ಕಾಲೇಜುಗಳಲ್ಲಿ ಸೀಟ್ ಸಿಕ್ಕಿಲ್ವಾ; ಈ ದೇಶಗಳಲ್ಲೂ ಎಂಬಿಬಿಎಸ್ ಓದಬಹುದು, ಫೀಸ್ ಕೂಡಾ ಕಡಿಮೆ

MBBS: ಭಾರತದ ಮೆಡಿಕಲ್ ಕಾಲೇಜುಗಳಲ್ಲಿ ಸೀಟ್ ಸಿಕ್ಕಿಲ್ವಾ; ಈ ದೇಶಗಳಲ್ಲೂ ಎಂಬಿಬಿಎಸ್ ಓದಬಹುದು, ಫೀಸ್ ಕೂಡಾ ಕಡಿಮೆ

MBBS: ಭಾರತದ ವೈದ್ಯಕೀಯ ಕಾಲೇಜುಗಳಲ್ಲಿ ಸೀಟ್‌ಗೆ ಭಾರಿ ಬೇಡಿಕೆ ಇದೆ. ಸರ್ಕಾರಿ ಕಾಲೇಜುಗಳ ಸೀಟ್‌ಗಳು ಬೇಗನೆ ಭರ್ತಿಯಾಗುತ್ತವೆ. ಹೀಗಾಗಿ ದುಬಾರಿ ಶುಲ್ಕ ಪಾವತಿಸಿ ಖಾಸಗಿ ಕಾಲೇಜು ಪ್ರವೇಶ ಪಡೆಯುವುದು ಎಲ್ಲರಿಂದ ಸಾಧ್ಯವಿಲ್ಲ. ಇಂಥಾ ಸಂದರ್ಭಗಳಲ್ಲಿ ವಿದೇಶಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವುದು ವಿದ್ಯಾರ್ಥಿಗಳ ಆಯ್ಕೆಯಾಗುತ್ತದೆ.

MBBS: ಈ ದೇಶಗಳಲ್ಲೂ ಎಂಬಿಬಿಎಸ್ ಓದಬಹುದು, ಫೀಸ್ ಕೂಡಾ ಕಡಿಮೆ
MBBS: ಈ ದೇಶಗಳಲ್ಲೂ ಎಂಬಿಬಿಎಸ್ ಓದಬಹುದು, ಫೀಸ್ ಕೂಡಾ ಕಡಿಮೆ

ಡಾಕ್ಟರ್‌ ಆಗುವ ಕನಸು ಹಲವರಿಗಿರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಸಾಮರ್ಥ್ಯವಿದ್ದರೂ ದುಬಾರಿ ಶುಲ್ಕವು ವೈದ್ಯಕೀಯ ಶಿಕ್ಷಣ ಪಡೆಯುವ ಹಲವರ ಆಸೆ-ಕನಸುಗಳಿಗೆ ಕೊಳ್ಳಿ ಇಡುತ್ತದೆ. ಡಾಕ್ಟರ್‌ ಆಗಲು ಎಂಬಿಬಿಎಸ್‌ ಓದಬೇಕು. ಭಾರತದಲ್ಲಿ‌ ಮೆಡಿಕಲ್‌ ಕಾಲೇಜುಗಳಲ್ಲಿ ಸೀಟ್‌ ಸಿಗುವುದು ಭಾರಿ ಕಷ್ಟ. ಒಂದು ವೇಳೆ ಸಿಕ್ಕರೂ ದುಬಾರಿ ಶುಲ್ಕ ಭರಿಸಬೇಕು. ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(NEET)ಯು ಭಾರತದಲ್ಲಿ ವೈದ್ಯಕೀಯ ವೃತ್ತಿಜೀವನ ಪ್ರವೇಶಿಸಲು ಪ್ರಮುಖ ದ್ವಾರ. ಕಳೆದ ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ನಂತರ ಹಲವು ವಿವಾದಗಳು ಎದ್ದಿದ್ದವು. ಇದು ವಿದ್ಯಾರ್ಥಿಗಳಿಗೆ ನಿರಾಶೆ ಮೂಡಿಸಿತ್ತು. ಭಾರತದ ಸರ್ಕಾರಿ ಮೆಡಿಕಲ್‌ ಕಾಲೇಜುಗಳಲ್ಲಿ ಕೆಲವೇ ಸೀಟುಗಳಿದ್ದು, ಲಭ್ಯವಿರುವ ಸೀಮಿತ ಸೀಟುಗಳಿಗಾಗಿ ಸ್ಪರ್ಧಿಸುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಖಾಸಗಿ ಮೆಡಿಕಲ್‌ ಕಾಲೇಜುಗಳಲ್ಲಿ ದುಬಾರಿ ಶುಲ್ಕವಿರುವ ಕಾರಣ ಎಲ್ಲರಿಂದಲೂ ಭರಿಸಲು ಸಾಧ್ಯವಾಗುವುದಿಲ್ಲ.

ಭಾರತಕ್ಕೆ ಹೋಲಿಸಿದರೆ ಹಲವು ದೇಶಗಳಲ್ಲಿ ಎಂಬಿಬಿಎಸ್‌ ಶುಲ್ಕ ಕಡಿಮೆ. ವಿದೇಶದಲ್ಲಿ MBBS ಅಧ್ಯಯನ ಮಾಡಲು ಬಯಸುವವರು ಸರಿಯಾದ ದೇಶವನ್ನು ಆಯ್ಕೆ ಮಾಡುವುದು ಮುಖ್ಯ. ರಷ್ಯಾ, ಉಕ್ರೇನ್, ಜರ್ಮನಿ, ಚೀನಾ, ಫಿಲಿಪೈನ್ಸ್ ಮತ್ತು ಕಿರ್ಗಿಸ್ತಾನ್‌ನಂತಹ ದೇಶಗಳಲ್ಲಿ ಬೋಧನಾ ಶುಲ್ಕ ಕಡಿಮೆ. ಇಲ್ಲಿ ಜೀವನ ವೆಚ್ಚವೂ ಕಡಿಮೆ ಇದ್ದು, ಯುಎಸ್, ಯುಕೆಗಿಂದ ಎಂಬಿಬಿಎಸ್ ಓದಲು ಪ್ರಮುಖ ಆಯ್ಕೆಗಳಾಗಿವೆ. ಸ್ಪರ್ಧಾತ್ಮಕ ಅಂಕಗಳನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಇಲ್ಲಿ ಓದಬಹುದು. ಕೆಲವೊಂದು ದೇಶಗಳು ಭಾರತೀಯ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ಸೌಲಭ್ಯವನ್ನೂ ನೀಡಿ ಕರೆಸಿಕೊಳ್ಳುತ್ತಿವೆ.

ಕೋರ್ಸ್‌ ಅವಧಿಯು ಐದರಿಂದ ಆರು ವರ್ಷಗಳು ಇರುತ್ತವೆ. ಮುಖ್ಯವಾಗಿ ಎಂಬಿಬಿಎಸ್‌ ಫೀಸ್‌ ಈ ದೇಶಗಳಲ್ಲಿ ವರ್ಷಕ್ಕೆ 2.50 ಲಕ್ಷದಿಂದ 8.30 ​​ಲಕ್ಷದವರೆಗೆ ಇರುತ್ತದೆ. ಭಾರತಕ್ಕಿಂತ ಇದು ತೀರಾ ಕಡಿಮೆ. ಭಾರತೀಯ ವಿದ್ಯಾರ್ಥಿಗಳು ಕಡಿಮೆ ವೆಚ್ಚದಲ್ಲಿ ಎಂಬಿಬಿಎಸ್‌ ಓದಲು ವಿದೇಶಗಳನ್ನೇ ಹೆಚ್ಚು ನೆಚ್ಚಿಕೊಳ್ಳುವುದು ಈ ಕಾರಣಕ್ಕೆ. ಹಾಗಿದ್ದರೆ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಪದವಿ ಪಡೆಯಬಹುದಾದ ದೇಶಗಳು ಯಾವುವು ಎಂಬುದನ್ನು ನೋಡೋಣ. ಈ ದೇಶಗಳಲ್ಲಿ ಬೋಧನಾ ಶುಲ್ಕವು ಭಾರತದಲ್ಲಿರುವ ಶುಲ್ಕದ ಅರ್ಧಕ್ಕಿಂತ ಕಡಿಮೆಯಾಗುತ್ತದೆ.

ಉಕ್ರೇನ್

ರಷ್ಯಾ-ಉಕ್ರೇನ್‌ ಯುದ್ಧದ ಸಂದರ್ಭದಲ್ಲಿ ಉಕ್ರೇನ್‌ನಲ್ಲಿದ್ದ ಹಲವು ಭಾರತೀಯ ಎಂಬಿಬಿಎಸ್‌ ವಿದ್ಯಾರ್ಥಿಗಳು ಭಾರತಕ್ಕೆ ಬರಲು ಪರದಾಡಿದ್ದರು. ಅಲ್ಲಿ ಹಲವು ಭಾರತೀಯ ವಿದಾರ್ಥಿಗಳು ನೆಲೆಸಿದ್ದಾರೆ. ಕಡಿಮೆ ವೆಚ್ಚ, ಗುಣಮಟ್ಟದ ಶಿಕ್ಷಣ, ಉತ್ತಮ ಜೀವನ ಗುಣಮಟ್ಟ ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಉಕ್ರೇನ್ ಅತ್ಯುತ್ತಮ ಆಯ್ಕೆಯಾಗಿದೆ. ಉಕ್ರೇನ್‌ನಲ್ಲಿ ಎಂಬಿಬಿಎಸ್‌ ವೆಚ್ಚವು ಆರು ವರ್ಷಗಳ ಕೋರ್ಸ್‌ಗೆ 15ರಿಂದ 20 ಲಕ್ಷ ವೆಚ್ಚವಾಗುತ್ತದೆ.

ರಷ್ಯಾ

ವೈದ್ಯಕೀಯ ಅಧ್ಯಯನಕ್ಕಾಗಿ ಭಾರತದ ಆಪ್ತ ದೇಶ ರಷ್ಯಾ ಪ್ರಮುಖ ಆಯ್ಕೆಗಳಲ್ಲಿ ಒಂದು. ಇತರ ಯುರೋಪಿಯನ್ ರಾಷ್ಟ್ರಗಳಿಗೆ ಹೋಲಿಸಿದರೆ, ರಷ್ಯಾವು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಆರೋಗ್ಯಕರ ವೆಚ್ಚದಲ್ಲಿ ನೀಡುತ್ತದೆ. ರಷ್ಯಾ ಸರ್ಕಾರವು ತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಸಹ ನೀಡುತ್ತದೆ. ಸಾಮಾನ್ಯವಾಗಿ ಯುರೋಪ್‌ನಲ್ಲಿ MBBS ಪದವಿ ಅಧ್ಯಯನ ಮಾಡುವುದು ದುಬಾರಿ. ಆದರೂ ದೊಡ್ಡ ದೇಶ ರಷ್ಯಾದಲ್ಲಿ ಹಾಗಿಲ್ಲ. ಇಲ್ಲಿ ಸರಾಸರಿ ವಾರ್ಷಿಕ ಬೋಧನಾ ಶುಲ್ಕವು 2 ಲಕ್ಷ ರೂಪಾಯಿಯಿಂದ 5 ಲಕ್ಷದವರೆಗೆ ಇರುತ್ತದೆ.

ಜರ್ಮನಿ

ಜರ್ಮನಿಯಲ್ಲಿ ವೈದ್ಯಕೀಯ ಶಿಕ್ಷಣ ಶುಲ್ಕ ಕಡಿಮೆ. ಇದೇ ಕಾರಣಕ್ಕೆ ವಿದೇಶಿ ವಿದ್ಯಾರ್ಥಿಗಳು ಯುರೋಪಿಯನ್ ರಾಷ್ಟ್ರಕ್ಕೆ ತೆರಳುತ್ತಾರೆ. ಜರ್ಮನಿಯಲ್ಲಿ ಜೀವನ ವೆಚ್ಚ ಕೂಡಾ ತುಸು ಕಡಿಮೆ. ಇಲ್ಲಿ ಶಿಕ್ಷಣ ಗುಣಮಟ್ಟದ ಜೊತೆಗೆ ಜೀವನ ಗುಣಮಟ್ಟ ಕೂಡಾ ಉತ್ತಮವಾಗಿದ್ದು, ವಿದೇಶಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಗ್ಗದ ದೇಶಗಳಲ್ಲಿ ಒಂದಾಗಿದೆ. ಭಾರತೀಯ ವಿದ್ಯಾರ್ಥಿಗಳಿಗೆ ಜರ್ಮನಿಯಲ್ಲಿ ಎಂಬಿಬಿಎಸ್ ಓದಲು ಬೋಧನಾ ಶುಲ್ಕವು ವರ್ಷಕ್ಕೆ 5 ಲಕ್ಷಗಳಿಂದ 10 ಲಕ್ಷಗಳವರೆಗೆ ಇರುತ್ತದೆ. ಕಾಲೇಜಿಗೆ ಅನುಗುಣವಾಗಿ ಬದಲಾವಣೆ ಇರುತ್ತದೆ.

ಫಿಲಿಪೈನ್ಸ್

ಆಗ್ನೇಯ ಏಷ್ಯಾದ ರಾಷ್ಟ್ರದಲ್ಲಿ ವೈದ್ಯಕೀಯ ಪದವಿಗೆ ಹೆಚ್ಚು ಬೇಡಿಕೆ ಇದೆ. ಇಲ್ಲಿನ ಅನೇಕ ವಿಶ್ವವಿದ್ಯಾನಿಲಯಗಳು ಇಂಗ್ಲಿಷ್‌ನಲ್ಲಿ ವೈದ್ಯಕೀಯ ಶಿಕ್ಷಣ ನೀಡುತ್ತವೆ. ಫಿಲಿಪೈನ್ಸ್ ವೈದ್ಯಕೀಯ ಪರವಾನಗಿ ಪರೀಕ್ಷೆ (PMLE) ಯಶಸ್ವಿಯಾಗಿ ಪೂರ್ಣಗೊಂಡ ನಂತರ ಭಾರತದಲ್ಲಿ ವೈದ್ಯಕೀಯ ಅಭ್ಯಾಸ ಮಾಡಲು ಪದವೀಧರರಿಗೆ ಅವಕಾಶ ನೀಡುತ್ತದೆ. ಫಿಲಿಪೈನ್ಸ್‌ನಲ್ಲಿ MBBS ಪದವಿಗೆ ಐದು ವರ್ಷಗಳಿಗೆ 15ರಿಂದ 22 ಲಕ್ಷ ರೂ. ವೆಚ್ಚವಾಗುತ್ತದೆ.

ಚೀನಾ

ಚೀನಾದಲ್ಲಿ ವೈದ್ಯಕೀಯ ಅಧ್ಯಯನವು ಭಾರತೀಯರಿಗೆ ಸುಲಭ. ಗುಣಮಟ್ಟದ ಶಿಕ್ಷಣದ ಜೊತೆಗೆ ಅಂತಾರಾಷ್ಟ್ರೀಯ ಮನ್ನಣೆ ಖಾತ್ರಿಪಡಿಸುತ್ತದೆ. ಚೀನಾದಲ್ಲಿ ವೈದ್ಯಕೀಯ ಶಿಕ್ಷಣದ ಒಟ್ಟು ವೆಚ್ಚವು 15ರಿಂದ 24 ಲಕ್ಷ ರೂಪಾಯಿ ಆಗುತ್ತದೆ.

ಟರ್ಕಿ

ಟರ್ಕಿ ದೇಶ ಕೂಡಾ ಭಾರತೀಯ ವಿದ್ಯಾರ್ಥಿಗಳಿಗೆ ಎಂಬಿಬಿಎಸ್‌ ಶಿಕ್ಷಣ ಆಫರ್‌ ಮಾಡುತ್ತದೆ. ಭಾರತಕ್ಕಿಂತ ಟರ್ಕಿಯಲ್ಲಿ ಎಂಬಿಬಿಎಸ್‌ ಶುಲ್ಕ ತೀರಾ ಕಡಿಮೆ. ಇಲ್ಲಿ ಶುಲ್ಕವು ವರ್ಷಕ್ಕೆ 4 ಲಕ್ಷದಿಂದ 30 ಲಕ್ಷದವರೆಗೂ ಇದೆ. ಕೈಗೆಟಕುವ ದರದಲ್ಲಿ ವೈದ್ಯಕೀಯ ಶಿಕ್ಷಣ ಇಲ್ಲಿ ಪಡೆಯಬಹುದು.

mysore-dasara_Entry_Point