ಬಾಗಲಕೋಟೆ-ವಿಜಯಪುರ ನಡುವೆ ಅಕ್ಟೋಬರ್ 2ರವರೆಗೂ ರೈಲು ಸಂಚಾರದಲ್ಲಿ ವ್ಯತ್ಯಯ ಮುಂದುವರಿಕೆ; ಬೆಂಗಳೂರು, ಮೈಸೂರು, ಮಂಗಳೂರು ರೈಲುಗಳ ಸೇವೆ ಕಡಿತ
Sep 23, 2024 05:10 PM IST
ಬಾಗಲಕೋಟೆ ಹಾಗೂ ವಿಜಯಪುರ ನಡುವೆ ರೈಲುಗಳ ಸೇವೆಯಲ್ಲಿ ವ್ಯತ್ಯಯ ಮುಂದುವರಿಯಲಿದೆ.
ಭಾರತೀಯ ರೈಲ್ವೆ ಹುಬ್ಬಳ್ಳಿ ನೈರುತ್ಯ ವಲಯದ ವಿಜಯಪುರ-ಬಾಗಲಕೋಟೆ ರೈಲು ನಿಲ್ದಾಣ ನಡುವಿನ ಕೂಡಗಿ ಬಳಿ ಕಾಮಗಾರಿ ನಡೆದಿರುವುದರಿಂದ ಕೆಲವು ರೈಲುಗಳ ಭಾಗಶಃ ರದ್ದತಿ ಮುಂದುವರಿಯಲಿದೆ.
ಬೆಂಗಳೂರ: ಈಗಾಗಲೇ ಹುಬ್ಬಳ್ಳಿ ವಿಭಾಗದ ಕೂಡಗಿ ರೈಲ್ವೆ ಯಾರ್ಡ್ ನಲ್ಲಿ ಇಂಜಿನಿಯರಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ, ಕೆಲ ರೈಲುಗಳನ್ನು ಭಾಗಶಃ ರದ್ದು & ನಿಯಂತ್ರಿಸಲಾಗುತ್ತಿದೆ. ಈ ನಿಯಂತ್ರಣ ಸೇವೆ 2024 ರ ಅಕ್ಟೋಬರ್ 2ರವರೆಗೂ ಮುಂದುವರಿಯಲಿದೆ. ನಾಲ್ಕು ದಿನಗಳ ಮಟ್ಟಿಗೆ ವಿಜಯಪುರ ಹಾಗೂ ಬಾಗಲಕೋಟೆ ನಡುವೆ ಸಂಚರಿಸುವ ಮಂಗಳೂರು, ಬೆಂಗಳೂರು, ಮೈಸೂರು ಸೇರಿದಂತೆ ಹಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿತ್ತು. ಕೆಲ ರೈಲು ವಿಜಯಪುರ,ಬಾಗಲಕೋಟೆ, ಗದಗದವರೆಗೂ ಮಾತ್ರ ಸಂಚರಿಸುವುದಾಗಿ ತಿಳಿಸಲಾಗಿತ್ತು. ಈ ವ್ಯತ್ಯಯ ಇನ್ನೂ ಒಂದು ವಾರ ಕಾಲ ಮುಂದುವರಿಯಲಿದೆ ಎಂದು ನೈರುತ್ಯ ರೈಲ್ವೆ ಹುಬ್ಬಳ್ಳಿ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.
ಭಾಗಶಃ ರದ್ದುರೈಲುಗಳು
1. 2024ರ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 2 ರವರೆಗೆ ಹುಬ್ಬಳ್ಳಿಯಿಂದ ಹೊರಡುವ ರೈಲು ಸಂಖ್ಯೆ 06919 ಎಸ್ಎಸ್ಎಸ್ ಹುಬ್ಬಳ್ಳಿ-ವಿಜಯಪುರ ಪ್ಯಾಸೆಂಜರ್ ವಿಶೇಷ ರೈಲು ಬಾಗಲಕೋಟ ವರೆಗೆ ಮಾತ್ರ ಸಂಚರಿಸಲಿದೆ. ಬಾಗಲಕೋಟ-ವಿಜಯಪುರ ನಿಲ್ದಾಣಗಳ ಮಧ್ಯೆ ಸಂಚಾರ ರದ್ದುಗೊಳಿಸಲಾಗಿದೆ.
2. , 2024ರ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 2 ರವರೆಗೆ ರೈಲು ಸಂಖ್ಯೆ 06920 ವಿಜಯಪುರ-ಎಸ್ಎಸ್ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ವಿಶೇಷ ರೈಲು ವಿಜಯಪುರದ ಬದಲು ಬಾಗಲಕೋಟ ನಿಲ್ದಾಣದಿಂದ ನಿಗದಿತ ಸಮಯದಲ್ಲಿ ಹೊರಡಲಿದೆ. ವಿಜಯಪುರ ಮತ್ತು ಬಾಗಲಕೋಟ ನಿಲ್ದಾಣಗಳ ಮಧ್ಯೆ ಭಾಗಶಃ ರದ್ದಾಗಲಿದೆ.
3. 2024ರ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 1 ರವರೆಗೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ಬಾಗಲಕೋಟ ವರೆಗೆ ಮಾತ್ರ ಸಂಚರಿಸಲಿದೆ. ಬಾಗಲಕೋಟ-ವಿಜಯಪುರ ನಿಲ್ದಾಣಗಳ ಮಧ್ಯೆ ಸಂಚಾರ ರದ್ದುಗೊಳಿಸಲಾಗಿದೆ.
4. , 2024ರ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 2 ರವರೆಗೆ ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ವಿಶೇಷ ರೈಲು ವಿಜಯಪುರ ಬದಲು ಬಾಗಲಕೋಟ ನಿಲ್ದಾಣದಿಂದ ತನ್ನ ನಿಗದಿತ ವೇಳಾಪಟ್ಟಿ ಪ್ರಕಾರ ಹೊರಡಲಿದೆ. ವಿಜಯಪುರ ಮತ್ತು ಬಾಗಲಕೋಟ ನಿಲ್ದಾಣಗಳ ಮಧ್ಯೆ ಭಾಗಶಃ ರದ್ದಾಗಲಿದೆ.
5. 2024ರ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 1 ರವರೆಗೆ ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 17307 ಮೈಸೂರು-ಬಾಗಲಕೋಟ ಬಸವ ಎಕ್ಸ್ ಪ್ರೆಸ್ ರೈಲು ವಿಜಯಪುರ ವರೆಗೆ ಮಾತ್ರ ಸಂಚರಿಸಲಿದೆ. ವಿಜಯಪುರ-ಬಾಗಲಕೋಟ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ.
6. , 2024 ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 2, 2024 ರವರೆಗೆ ರೈಲು ಸಂಖ್ಯೆ 17308 ಬಾಗಲಕೋಟ-ಮೈಸೂರು ಬಸವ ಎಕ್ಸ್‌ಪ್ರೆಸ್ ರೈಲು ಬಾಗಲಕೋಟ ನಿಲ್ದಾಣದ ಬದಲು ವಿಜಯಪುರ ನಿಲ್ದಾಣದಿಂದ ನಿಗದಿತ ಸಮಯಕ್ಕೆ ಹೊರಡಲಿದೆ. ಬಾಗಲಕೋಟ ಮತ್ತು ವಿಜಯಪುರ ನಿಲ್ದಾಣಗಳ ನಡುವೆ ರೈಲು ಭಾಗಶಃ ರದ್ದಾಗಿದೆ.
7. 2024 ರ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 1 ರವರೆಗೆ ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 06545 ಯಶವಂತಪುರ-ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ಗದಗ ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ. ಗದಗ-ವಿಜಯಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ.
8. 2024 ರ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 2 ರವರೆಗೆ ವಿಜಯಪುರ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 06546 ವಿಜಯಪುರ-ಯಶವಂತಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ವಿಜಯಪುರದ ಬದಲು ಗದಗ ನಿಲ್ದಾಣದಿಂದ ನಿಗದಿತ ಸಮಯಕ್ಕೆ ಹೊರಡಲಿದೆ. ವಿಜಯಪುರ-ಗದಗ ನಿಲ್ದಾಣಗಳ ನಡುವೆ ರೈಲು ಭಾಗಶಃ ರದ್ದಾಗಿದೆ.
ರೈಲು ನಿಯಂತ್ರಣ
1. 2024ರ ಅಕ್ಟೋಬರ್ 2ರಂದು ಪ್ರಾರಂಭವಾಗುವ ರೈಲು ಸಂಖ್ಯೆ 11305 ಸೋಲಾಪುರ-ಹೊಸಪೇಟೆ ಎಕ್ಸ್‌ಪ್ರೆಸ್ ರೈಲು ಮಾರ್ಗ ಮಧ್ಯ 45 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.