ಬಾಗಲಕೋಟೆ, ವಿಜಯಪುರ ಮಾರ್ಗದಲ್ಲಿ ಸೆಪ್ಟೆಂಬರ್ 22ರಿಂದ 4 ದಿನ ರೈಲುಗಳ ಸಂಚಾರ ವ್ಯತ್ಯಯ;ಬೆಂಗಳೂರು, ಮಂಗಳೂರು, ಮೈಸೂರು ರೈಲು ಭಾಗಶಃ ರದ್ದು-indian railways due to engineering work trains of vijayapura bagalkot from bangalore mangalore mysore diverted 4 day kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಬಾಗಲಕೋಟೆ, ವಿಜಯಪುರ ಮಾರ್ಗದಲ್ಲಿ ಸೆಪ್ಟೆಂಬರ್ 22ರಿಂದ 4 ದಿನ ರೈಲುಗಳ ಸಂಚಾರ ವ್ಯತ್ಯಯ;ಬೆಂಗಳೂರು, ಮಂಗಳೂರು, ಮೈಸೂರು ರೈಲು ಭಾಗಶಃ ರದ್ದು

ಬಾಗಲಕೋಟೆ, ವಿಜಯಪುರ ಮಾರ್ಗದಲ್ಲಿ ಸೆಪ್ಟೆಂಬರ್ 22ರಿಂದ 4 ದಿನ ರೈಲುಗಳ ಸಂಚಾರ ವ್ಯತ್ಯಯ;ಬೆಂಗಳೂರು, ಮಂಗಳೂರು, ಮೈಸೂರು ರೈಲು ಭಾಗಶಃ ರದ್ದು

ವಿಜಯಪುರ ಹಾಗೂ ಬಾಗಲಕೋಟೆ ನಡುವಿನ ಕೂಡಗಿ ನಿಲ್ದಾಣದ ಸಮೀಪ ಕಾಮಗಾರಿ ಕಾರಣದಿಂದ ಎರಡು ನಗರಗಳ ನಡುವಿನ ಹಲವು ರೈಲುಗಳ ಸಂಚಾರದಲ್ಲಿ ನಾಲ್ಕು ದಿನಗಳ ಕಾಲ ವ್ಯತ್ಯಯವಾಗಲಿದೆ.

ಬಾಗಲಕೋಟೆ ಹಾಗೂ ವಿಜಯಪುರ ನಡುವೆ ನಾಲ್ಕು ದಿನ ರೈಲು ಸಂಚಾರದಲ್ಲಿ ವ್ಯತ್ಯಯ ಆಗಲಿದೆ.
ಬಾಗಲಕೋಟೆ ಹಾಗೂ ವಿಜಯಪುರ ನಡುವೆ ನಾಲ್ಕು ದಿನ ರೈಲು ಸಂಚಾರದಲ್ಲಿ ವ್ಯತ್ಯಯ ಆಗಲಿದೆ.

ಬೆಂಗಳೂರು: ಉತ್ತರ ಕರ್ನಾಟಕದ ರೈಲ್ವೆ ಪ್ರಮುಖ ಮಾರ್ಗವಾಗಿರುವ ವಿಜಯಪುರ ಹಾಗೂ ಬಾಗಲಕೋಟೆ ನಡುವಿನ ಕೂಡಗಿ ಯಾರ್ಡ್‌ನಲ್ಲಿ ತುರ್ತು ಕಾಮಗಾರಿಗಳು ಇರುವುದರಿಂದ ನಾಲ್ಕು ದಿನಗಳ ಕಾಲ ಈ ಮಾರ್ಗದ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.ಆಲಮಟ್ಟಿ ಸಮೀಪದ ಕೂಡಿಗೆ ರಸ್ತೆ 5 ಮತ್ತು 6 ರ ಕಾರ್ಯಾರಂಭಕ್ಕೆ ಇಂಜಿನಿಯರಿಂಗ್ ಕೆಲಸಗಳ ಕಾರಣ, ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಇದಲ್ಲದೇ ಕೆಲವು ರೈಲುಗಳನ್ನು ನಿಯಂತ್ರಿಸಲಾಗುತ್ತದೆ. ಇದರಿಂದ ಹುಬ್ಬಳ್ಳಿ, ಮಂಗಳೂರು, ಯಶವಂತಪುರ, ಮೈಸೂರು ಬಸವ ಎಕ್ಸ್‌ಪ್ರೆಸ್‌ ಸಹಿತ ಹಲವು ರೈಲುಗಳ ಸಂಚಾರದಲ್ಲಿ 2024 ರ ಸೆಪ್ಟೆಂಬರ್ 22 ರಿಂದ 25 ರವರೆಗೆ ವ್ಯತ್ಯಯ ಆಗಲಿದೆ.ಈ ಕುರಿತು ಯಾವ್ಯಾವ ರೈಲುಗಳ ಸಮಯದಲ್ಲಿ ಬದಲಾವಣೆಯಾಗಲಿವೆ.ಸಂಚಾರ ಎಲ್ಲಿಂದ ಎಲ್ಲಿಗೆ ಎನ್ನುವ ಮಾಹಿತಿಯನ್ನು ನೀಡಲಾಗಿದ್ದು. ಪ್ರಯಾಣಿಕರು ಸಹಕರಿಸಬೇಕು ಎಂದು ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ಮನವಿ ಮಾಡಿದ್ದಾರೆ.

ಭಾಗಶಃ ರದ್ದತಿ ರೈಲುಗಳು

1. ರೈಲು ಸಂಖ್ಯೆ 06919 ಹುಬ್ಬಳ್ಳಿ-ವಿಜಯಪುರ ಪ್ಯಾಸೆಂಜರ್ ರೈಲು ಪ್ರಾರಂಭವಾಗುವ ವಿಶೇಷ ಪ್ರಯಾಣವನ್ನು ಬಾಗಲಕೋಟೆ-ವಿಜಯಪುರ ನಿಲ್ದಾಣಗಳ ನಡುವೆ 2024 ರ ಸೆಪ್ಟೆಂಬರ್ 22 ರಿಂದ 25 ರವರೆಗೆ ಭಾಗಶಃ ರದ್ದುಗೊಳಿಸಲಾಗುತ್ತದೆ. ರೈಲು ಬಾಗಲಕೋಟೆ ನಿಲ್ದಾಣದಿಂದಲೇ ವಾಪಾಸಾಗಲಿದೆ.

2. ರೈಲು ಸಂಖ್ಯೆ 06920 ವಿಜಯಪುರ- ಹುಬ್ಬಳ್ಳಿ ಪ್ಯಾಸೆಂಜರ್ ರೈಲು ವಿಜಯಪುರದ ಬದಲಿಗೆ ಬಾಗಲಕೋಟೆ ನಿಲ್ದಾಣದಿಂದ 2024 ರ ಸೆಪ್ಟೆಂಬರ್ 22 ರಿಂದ 25 ರವರೆಗೆ ಹೊರಡಲಿದೆ. ಈ ರೈಲು ವಿಜಯಪುರ ಮತ್ತು ಬಾಗಲಕೋಟೆ ನಿಲ್ದಾಣಗಳ ನಡುವೆ ರೈಲು ಭಾಗಶಃ ರದ್ದಾಗಲಿದೆ.

3. ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್‌ಪ್ರೆಸ್ ಪ್ರಯಾಣವನ್ನು ಸೆಪ್ಟೆಂಬರ್ 21 ರಿಂದ 24, 2024 ರವರೆಗೆ ಬಾಗಲಕೋಟೆ-ವಿಜಯಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತದೆ. ರೈಲು ಬಾಗಲಕೋಟೆ ನಿಲ್ದಾಣದಿಂದಲೇ ಹೊರಡಲಿದೆ.

4. ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಪ್ರಯಾಣ ವೇಳಾಪಟ್ಟಿಯ ಸಮಯದಲ್ಲಿ ವಿಜಯಪುರದ ಬದಲಿಗೆ ಬಾಗಲಕೋಟೆ ನಿಲ್ದಾಣದಿಂದ 2024 ರ ಸೆಪ್ಟೆಂಬರ್ 22 ರಿಂದ 25 ರವರೆಗೆ ಹೊರಡಲಿದೆ. ವಿಜಯಪುರ ಮತ್ತು ಬಾಗಲಕೋಟೆ ನಿಲ್ದಾಣಗಳ ನಡುವೆ ರೈಲು ಭಾಗಶಃ ರದ್ದಾಗಲಿದೆ.

5. ರೈಲು ಸಂಖ್ಯೆ 17307 ಮೈಸೂರು-ಬಾಗಲಕೋಟ ಬಸವ ಎಕ್ಸ್‌ಪ್ರೆಸ್ ಪ್ರಯಾಣವು ಸೆಪ್ಟೆಂಬರ್ 21 ರಿಂದ 24, 2024 ರವರೆಗೆ ವಿಜಯಪುರ-ಬಾಗಲಕೋಟ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳುತ್ತದೆ. ಈ ರೈಲು ವಿಜಯಪುರ ನಿಲ್ದಾಣದಲ್ಲಿ ಕೊನೆಗೊಳ್ಳಲಿದೆ.

6. ರೈಲು ಸಂಖ್ಯೆ 17308 ಬಾಗಲಕೋಟ-ಮೈಸೂರು ಬಸವ ಎಕ್ಸ್‌ಪ್ರೆಸ್ ಪ್ರಯಾಣವು ಸೆಪ್ಟೆಂಬರ್ 22 ರಿಂದ 25, 2024 ರವರೆಗಿನ ವೇಳಾಪಟ್ಟಿಯ ಸಮಯದಲ್ಲಿ ಬಾಗಲಕೋಟೆಯ ಬದಲಿಗೆ ವಿಜಯಪುರ ನಿಲ್ದಾಣದಿಂದ ಹೊರಡಲಿದೆ. ಬಾಗಲಕೋಟೆ ಮತ್ತು ವಿಜಯಪುರ ನಿಲ್ದಾಣಗಳ ನಡುವೆ ರೈಲು ಭಾಗಶಃ ರದ್ದಾಗಲಿದೆ.

7. ರೈಲು ಸಂಖ್ಯೆ 06545 ಯಶವಂತಪುರ-ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ಪ್ರಯಾಣ ಸೆಪ್ಟೆಂಬರ್ 21 ರಿಂದ 24, 2024 ರವರೆಗೆ ಗದಗ-ವಿಜಯಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತದೆ. ರೈಲು ಗದಗ ನಿಲ್ದಾಣದಲ್ಲಿ ಕೊನೆಗೊಳ್ಳುತ್ತದೆ.

8. ರೈಲು ಸಂಖ್ಯೆ. 06546 ವಿಜಯಪುರ-ಯಶವಂತಪುರ ಎಕ್ಸ್‌ಪ್ರೆಸ್ ವಿಶೇಷ ಪ್ರಯಾಣವು ಸೆಪ್ಟೆಂಬರ್ 22 ರಿಂದ 25, 2024 ರವರೆಗೆ ಅದರ ವೇಳಾಪಟ್ಟಿಯ ಸಮಯದಲ್ಲಿ ವಿಜಯಪುರದ ಬದಲಿಗೆ ಗದಗ ನಿಲ್ದಾಣದಿಂದ ಹೊರಡಲಿದೆ. ವಿಜಯಪುರ-ಗದಗ ನಿಲ್ದಾಣಗಳ ನಡುವೆ ರೈಲು ಭಾಗಶಃ ರದ್ದಾಗಲಿದೆ.

ಭಾಗಶಃ ರದ್ದು ಮುಂದುವರಿಕೆ

ರೈಲು ಸಂಖ್ಯೆ 17347/17348 ಎಸ್‌ಎಸ್‌ಎಸ್ ಹುಬ್ಬಳ್ಳಿ-ಚಿತ್ರದುರ್ಗ-ಹುಬ್ಬಳ್ಳಿ ಎಕ್ಸ್‌ಪ್ರೆಸ್ ಅನ್ನು ಚಿಕ್ಕಜಾಜೂರು-ಚಿತ್ರದುರ್ಗ-ಚಿಕ್ಕಜಾಜೂರು ನಡುವೆ ಕಡಿಮೆ ಪ್ರಯಾಣಿಕರಿಂದ ಕಾರಣದಿಂದ ಭಾಗಶಃ ರದ್ದುಗೊಳಿಸುವುದು ಮುಂದುವರಿಯಲಿದೆ.

1. ರೈಲು ಸಂಖ್ಯೆ 17347 ಹುಬ್ಬಳ್ಳಿ-ಚಿತ್ರದುರ್ಗ ಎಕ್ಸ್‌ಪ್ರೆಸ್ ಚಿಕ್ಕಜಾಜೂರು-ಚಿತ್ರದುರ್ಗ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳುತ್ತದೆ. ರೈಲು ಚಿತ್ರದುರ್ಗ ನಿಲ್ದಾಣದ ಬದಲು ಚಿಕ್ಕಜಾಜೂರಿನಲ್ಲಿ ಕೊನೆಗೊಳ್ಳುತ್ತದೆ. ಈ ಭಾಗಶಃ ರದ್ದತಿಯನ್ನು ಈ ಹಿಂದೆ ಸೆಪ್ಟೆಂಬರ್ 30, 2024 ರವರೆಗೆ ನಿರ್ಧರಿಸಲಾಗಿತ್ತು, ಇದೀಗ ಅಕ್ಟೋಬರ್ 1, 2024 ರಿಂದ ಮಾರ್ಚ್ 31, 2025 ರವರೆಗೆ ವಿಸ್ತರಿಸಲಾಗಿದೆ.

2. ರೈಲು ಸಂಖ್ಯೆ 17348 ಚಿತ್ರದುರ್ಗ-ಹುಬ್ಬಳ್ಳಿ ಎಕ್ಸ್‌ಪ್ರೆಸ್ ಕೂಡ ಚಿತ್ರದುರ್ಗ ಮತ್ತು ಚಿಕ್ಕಜಾಜೂರು ನಡುವೆ ಭಾಗಶಃ ರದ್ದುಗೊಳ್ಳುತ್ತದೆ. ಈ ರೈಲು ಚಿತ್ರದುರ್ಗ ನಿಲ್ದಾಣದ ಬದಲಾಗಿ ಚಿಕ್ಕಜಾಜೂರಿನಿಂದ ಹೊರಡಲಿದೆ. ಈ ಹಿಂದೆ ಸೆಪ್ಟೆಂಬರ್ 30, 2024 ರವರೆಗೆ ಸೂಚಿಸಲಾದ ಈ ಭಾಗಶಃ ರದ್ದತಿಯನ್ನು ಅಕ್ಟೋಬರ್ 1, 2024 ರಿಂದ ಮಾರ್ಚ್ 31, 2025 ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಿಯಂತ್ರಣವಾಗುವ ರೈಲು

1. ಸೆಪ್ಟೆಂಬರ್ 25, 2024 ರಂದು ಪ್ರಾರಂಭವಾಗುವ ರೈಲು ಸಂಖ್ಯೆ. 11305 ಸೋಲಾಪುರ-ಹೊಸಪೇಟೆ ಎಕ್ಸ್‌ಪ್ರೆಸ್ ಪ್ರಯಾಣವನ್ನು 45 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ

mysore-dasara_Entry_Point