ಕಂಗುವಾ ಮುಂಗಡ ಬುಕ್ಕಿಂಗ್; ಅಮೆರಿಕದಲ್ಲಿ 70 ಲಕ್ಷ ರೂ ಗಳಿಕೆ, ತಮಿಳುನಾಡಿಗಿಂತ ಆಂಧ್ರ, ತೆಲಂಗಾಣ, ಬೆಂಗಳೂರಲ್ಲೇ ಹೆಚ್ಚು ಕ್ರೇಜ್
Nov 11, 2024 12:03 PM IST
ಕಂಗುವಾ ಮುಂಗಡ ಬುಕ್ಕಿಂಗ್ ಶುರುವಾಗಿದೆ ಅಮೆರಿಕದಲ್ಲಿ 70 ಲಕ್ಷ ರೂ ಗಳಿಕೆಯಾಗಿರುವ ವರದಿ ಇದೆ. ತಮಿಳುನಾಡಿಗಿಂತ ಆಂಧ್ರ, ತೆಲಂಗಾಣ, ಬೆಂಗಳೂರಲ್ಲೇ ಹೆಚ್ಚು ಕ್ರೇಜ್ ಕಂಡುಬಂದಿದೆ.
ಕಂಗುವಾ ಮುಂಗಡ ಬುಕ್ಕಿಂಗ್ ಶುರುವಾಗಿದ್ದು, ಮೊದಲ ದಿನ ಭಾರತದಲ್ಲಿ ಸಾಧಾರಣ ಪ್ರತಿಕ್ರಿಯೆ ಕಂಡುಬಂದಿದೆ. ತಮಿಳು, ಹಿಂದಿ, ತೆಲುಗು ಭಾಷೆಯ ಚಿತ್ರಗಳ ಬುಕ್ಕಿಂಗ್ ನಡೆದಿದೆ. ಅಮೆರಿಕದಲ್ಲಿ ಎರಡು ದಿನ ಮೊದಲೇ ಮುಂಗಡ ಬುಕ್ಕಿಂಗ್ ಶುರುವಾಗಿದ್ದು, ಮೊದಲ ದಿನವೇ 70 ಲಕ್ಷ ರೂ ಗಳಿಕೆ ತೋರಿಸಿದೆ. ತಮಿಳುನಾಡಿಗಿಂತ ಆಂಧ್ರ, ತೆಲಂಗಾಣ, ಬೆಂಗಳೂರಲ್ಲೇ ಹೆಚ್ಚು ಕ್ರೇಜ್ ಕಂಡಿದೆ.
ಬೆಂಗಳೂರು: ಸೂರ್ಯ, ಬಾಬಿ ಡಿಯೋಲ್, ದಿಶಾ ಪಟಾನಿ ಅಭಿನಯದ ಕಂಗುವಾ ಸಿನಿಮಾ ಬಗ್ಗೆ ತಮಿಳುನಾಡಿಗಿಂತ ಆಂಧ್ರ, ತೆಲಂಗಾಣದಲ್ಲೇ ಹೆಚ್ಚು ಕ್ರೇಜ್ ಕಾಣಿಸಿದೆ. ನಗರಗಳ ಪೈಕಿ ಬೆಂಗಳೂರಿನಲ್ಲಿ ಹೆಚ್ಚು ಕ್ರೇಜ್ ಇದೆ. ಮುಂಗಡ ಬುಕ್ಕಿಂಗ್ ಗಮನಿಸಿದರೆ ಈ ವಿಷಯ ಅರ್ಥವಾದೀತು. ಶುಕ್ರವಾರ (ನವೆಂಬರ್ 8)ದ ವರದಿ ಪ್ರಕಾರ, ಕಂಗುವಾ ಸಿನಿಮಾದ ಮುಂಗಡ ಬುಕ್ಕಿಂಗ್ ಅಮೆರಿಕದಲ್ಲಿ 70 ಲಕ್ಷ ರೂಪಾಯಿ ಗಳಿಕೆ ಒದಗಿಸಿದೆ. ಇತ್ತೀಚಿನ ಮಾಹಿತಿ ಪ್ರಕಾರ, ಭಾರತದಲ್ಲಿ ಮುಂಗಡ ಬುಕ್ಕಿಂಗ್‌ಗೆ ನಿಗದಿ ಮಾಡಿರುವ 68 ಲಕ್ಷ ಸೀಟುಗಳ ಪೈಕಿ 19 ಲಕ್ಷ ಸೀಟುಗಳು ಬುಕ್ ಆಗಿವೆ. ನಿಧಾನವಾಗಿ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ ವೇಗ ಪಡೆದುಕೊಳ್ಳತೊಡಗಿದೆ. ಪ್ರಪಂಚದಾದ್ಯಂತ 11,000 ಕ್ಕೂ ಹೆಚ್ಚು ಪರದೆಗಳಲ್ಲಿ ಪ್ರದರ್ಶನಗೊಳ್ಳಲಿದೆ. ತಮಿಳು, ಮಲಯಾಳಂ, ತೆಲುಗು, ಕನ್ನಡ, ಹಿಂದಿ, ಇಂಗ್ಲಿಷ್, ಫ್ರೆಂಚ್ ಮತ್ತು ಸ್ಪ್ಯಾನಿಷ್ ಸೇರಿ ಎಂಟು ಭಾಷೆಗಳಲ್ಲಿ 2D, 3D and IMAX ಫಾರ್ಮಾಟ್‌ಗಳಲ್ಲಿ ಚಿತ್ರ ತೆರೆ ಕಾಣಲಿದೆ. ಸ್ಯಾಕ್ನಿಲ್ಕ್ ತಾಣದ ಮಾಹಿತಿ ಪ್ರಕಾರ, ನವೆಂಬರ್ 14 ರಂದು ತಮಿಳು, ತೆಲುಗು, ಹಿಂದಿ ಭಾಷೆಯ ಸಿನಿಮಾ ತೆರೆ ಕಾಣುತ್ತಿದೆ.
ಭಾರತದಲ್ಲಿ ಕಂಗುವಾ ಮುಂಗಡ ಬುಕ್ಕಿಂಗ್; ಮೊದಲ ದಿನ ಹೀಗಿತ್ತು
ಪಿಂಕ್‌ವಿಲ್ಲಾ ವರದಿ ಪ್ರಕಾರ, ನಿನ್ನೆ (ನವೆಂಬರ್ 10) ಬೆಳಗ್ಗೆ 11 ಗಂಟೆಗೆ ತಮಿಳುನಾಡಿನಲ್ಲಿ 7 ಚಿತ್ರ ಮಂದಿರಗಳಲ್ಲಿ 5500 ಟಿಕೆಟ್ ಮಾರಾಟವಾಗಿದೆ. ಮೊದಲ ದಿನವೇ 12.5 ಲಕ್ಷ ರೂಪಾಯಿ ಗಳಿಸಿದೆ. 7 ಸಿನಿಮಾಸ್‌ನಲ್ಲಿ 30 ಪ್ರದರ್ಶನಗಳಿಗೆ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಪೂರ್ಣ ಪ್ರಮಾಣದ ಮುಂಗಡ ಬುಕ್ಕಿಂಗ್ ಇನ್ನಷ್ಟೆ ಶುರುವಾಗಬೇಕಿದೆ.
ಕರ್ನಾಟಕದಲ್ಲಿ ಇದೇ ರೀತಿಯ ಮುಂಗಡ ಬುಕ್ಕಿಂಗ್ ಶುರುವಾಗಿದ್ದು, ಆರಂಭದಲ್ಲಿ 30 ಪ್ರದರ್ಶನಗಳ 15 ಲಕ್ಷ ರೂಪಾಯಿ ಮೌಲ್ಯದ ಟಿಕೆಟ್ ಮಾರಾಟವಾಗಿದೆ. ಆಂಧ್ರ, ತೆಲಂಗಾಣದಲ್ಲೂ ನಿಧಾನಗತಿಯ ಸ್ಪಂದನೆ ಇದ್ದರೂ, ತಮಿಳುನಾಡಿಗಿಂತ ಹೆಚ್ಚು ಟಿಕೆಟ್ ಮುಂಗಡ ಬುಕ್ಕಿಂಗ್ ಆಗಿವೆ ಎಂದು ಪಿಂಕ್ ವಿಲ್ಲಾ ವರದಿ ಮಾಡಿದೆ.
ಬುಕ್ ಮೈ ಶೋ ಗಮನಿಸಿದರೆ ಕಂಗುವಾ ಸಿನಿಮಾ ನೋಡಬೇಕು ಎಂದು 2.31 ಲಕ್ಷ ಸಿನಿಮಾ ರಸಿಕರು ಆಸಕ್ತಿ ತೋರಿರುವುದು ಕಂಡುಬಂದಿದೆ. ಸ್ಯಾಕ್ನಿಲ್ಕ್ ತಾಣದ ಮಾಹಿತಿ ಪ್ರಕಾರ ಮೊದಲ ದಿನದ ಒಟ್ಟು ಬುಕ್ಕಿಂಗ್ ಮಾಹಿತಿ ಹೀಗಿದೆ
ಕಂಗುವಾ ಸಿನಿಮಾ: ತಮಿಳುನಾಡಿಗಿಂತ ಆಂಧ್ರ, ತೆಲಂಗಾಣ, ಬೆಂಗಳೂರಲ್ಲೇ ಹೆಚ್ಚು ಕ್ರೇಜ್
ಕಂಗುವಾ ಸಿನಿಮಾ ಮುಂಗಡ ಬುಕ್ಕಿಂಗ್ ಗಮನಿಸಿದರೆ ತಮಿಳುನಾಡಗಿಂತ ಆಂಧ್ರ ಮತ್ತು ತೆಲಂಗಾಣದಲ್ಲಿ ಹೆಚ್ಚು ಕ್ರೇಜ್ ಇರುವಂತ ಕಾಣಿಸುತ್ತಿದೆ. ಆಂಧ್ರ ಪ್ರದೇಶದಲ್ಲಿ ಮುಂಗಡ ಬುಕ್ಕಿಂಗ್‌ನ 9.42 ಲಕ್ಷ ಸೀಟುಗಳ ಪೈಕಿ 4.52 ಲಕ್ಷ ಸೀಟುಗಳು ಬುಕ್ ಆಗಿವೆ. 2 ಪ್ರದರ್ಶನ ಪೂರ್ಣ ಬುಕ್ ಆಗಿದ್ದು, ಇನ್ನು 3 ಶೀಘ್ರವೇ ಭರ್ತಿಯಾಗಲಿದೆ. ತೆಲಂಗಾಣದಲ್ಲಿ 3.64 ಲಕ್ಷ ಸೀಟುಗಳಿದ್ದು 1.8 ಲಕ್ಷ ಸೀಟುಗಳು ಮುಂಗಡ ಬುಕ್ ಆಗಿವೆ. 4 ಪ್ರದರ್ಶನಗಳು ಭರ್ತಿಯಾಗಿವೆ. ಕರ್ನಾಟಕದಲ್ಲಿ 31.52 ಲಕ್ಷ ಸೀಟುಗಳನ್ನು ಮುಂಗಡ ಬುಕ್ಕಿಂಗ್‌ಗೆ ತೆರೆದಿಡಲಾಗಿದ್ದು, 5.42 ಲಕ್ಷ ಸೀಟುಗಳು ಬುಕ್ ಆಗಿವೆ. 1 ಪ್ರದರ್ಶನ ಪೂರ್ತಿ ಬುಕ್ ಆಗುವ ಸಾಧ್ಯತೆ ಇದೆ. ಇನ್ನು ತಮಿಳುನಾಡಿನಲ್ಲಿ 18.62 ಲಕ್ಷ ಸೀಟುಗಳಿದ್ದು 6.84 ಲಕ್ಷ ಸೀಟುಗಳು ಬುಕ್ ಆಗಿವೆ. 2 ಪ್ರದರ್ಶನ ಪೂರ್ಣ ಬುಕ್ ಆಗಿದ್ದು, 3 ಪ್ರದರ್ಶನ ಶೀಘ್ರವೇ ಭರ್ತಿಯಾಗಲಿದೆ ಎಂದು ಸ್ನಾಕ್ನಿಲ್ ವರದಿ ಹೇಳಿದೆ.
ಬುಕ್ ಮೈ ಶೋದಲ್ಲಿರುವ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ ನಿನ್ನೆಯೆಷ್ಟೆ ಕಂಗುವಾ ಬುಕ್ಕಿಂಗ್ ಶುರುವಾಗಿದೆ. ತಮಿಳು ಮತ್ತು ತೆಲುಗು ಚಿತ್ರಗಳ ಬುಕ್ಕಿಂಗ್ ಆರಂಭವಾಗಿದೆ. ಸ್ನಾಕ್ನಿಲ್ ಮಾಹಿತಿ ಪ್ರಕಾರ ಮೊದಲ ದಿನ (ನವೆಂಬರ್ 10)ಕ್ಕೆ ಕರ್ನಾಟಕದ ನಿಗದಿತ 31.52 ಲಕ್ಷ ಸೀಟುಗಳ ಪೈಕಿ 5.42 ಲಕ್ಷ ಸೀಟುಗಳು ಬುಕ್ ಆಗಿವೆ. 1 ಪ್ರದರ್ಶ ಪೂರ್ಣವಾಗುವ ಹಂತದಲ್ಲಿತ್ತು. ಈ ಪೈಕಿ ಬೆಂಗಳೂರಿನ 20.39 ಲಕ್ಷ ಸೀಟುಗಳ ಪೈಕಿ 4.69 ಲಕ್ಷ ಸೀಟುಗಳು ಬುಕ್ ಆಗಿವೆ.