Shraddha Das: ಪ್ಲೇ ಬ್ಯಾಕ್ ಸಿಂಗರ್ ಆದ ನಟಿ; ಕಂಗುವಾ ಚಿತ್ರದಲ್ಲಿ ಹಾಡಿದ ಶ್ರದ್ಧಾ ದಾಸ್
ಸೂರ್ಯ ಅಭಿನಯದ ಕಂಗುವಾ ಸಿನಿಮಾದ ಯೋಲೋ ಹಾಡು ಎಲ್ಲೆಡೆ ವೈರಲ್ ಆಗುತ್ತಿದೆ. ಈ ಹಾಡನ್ನು ನಟಿ ಶ್ರದ್ಧಾ ಅವರೇ ಹಾಡಿದ್ದಾರೆ. ನಟನೆ ಜೊತೆಗೆ ಸಿಂಗಿಂಗ್ ಕೂಡ ಮಾಡಿದ್ದಾರೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಮತ್ತೊಮ್ಮೆ ಆ ಹಾಡನ್ನು ಕೇಳುತ್ತಿದ್ದಾರೆ.
ಇತ್ತೀಚೆಗಷ್ಟೇ ಸೂರ್ಯ ನಾಯಕನಾಗಿ ನಟಿಸಿರುವ ‘ಕಂಗುವಾ’ ಚಿತ್ರಕ್ಕೆ ನಟಿ ಶ್ರದ್ಧಾ ದಾಸ್ ಹಾಡು ಹಾಡಿದ್ದಾರೆ. ದೇವಿಶ್ರೀ ಪ್ರಸಾದ್, ಶ್ರದ್ಧಾ ದಾಸ್ ಅವರನ್ನು ಗಾಯಕಿಯಾಗಿ ಪರಿಚಯಿಸುತ್ತಿದ್ದಾರೆ. ನಟನೆಗೆ ಮಾತ್ರ ಮಾಡುತ್ತಾರೆ ಎಂದುಕೊಂಡಿದ್ದ ಅಭಿಮಾನಿಗಳಿಗೆ ಶ್ರದ್ಧಾ ಹಾಡನ್ನೂ ಹಾಡಿದ್ದಾರೆ ಎಂದು ಕೇಳಿ ಆಶ್ಚರ್ಯವಾಗಿದೆ. ಸೂರ್ಯ ಮತ್ತು ದಿಶಾ ಪಟಾನಿ ನಟನೆಯ ಶಿವ ನಿರ್ದೇಶನದ ಪ್ಯಾನ್ ಇಂಡಿಯಾ ಚಲನಚಿತ್ರ ಕಂಗುವಾದಲ್ಲಿ ಶ್ರದ್ಧಾ ದಾಸ್ ಹಾಡನ್ನು ಹಾಡಿದ್ದಾರೆ. ಶ್ರದ್ಧಾ ಹಾಡಿರುವ ಯೋಲೋ ಹಾಡು ಈಗಾಗಲೇ ಬಿಡುಗಡೆಯಾಗಿದ್ದು ಲಕ್ಷಾಂತರ ಜನ ವೀಕ್ಷಣೆ ಮಾಡಿದ್ದಾರೆ. ಸಾಕಷ್ಟು ಜನ ಈ ಹಾಡನ್ನು ಡೌನ್ಲೋಡ್ ಕೂಡ ಮಾಡಿದ್ದಾರೆ.
ಹಲವಾರು ಕಲಾವಿದರು ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಉದಾಹರಣೆಗಳು ಸಾಕಷ್ಟಿದೆ. ಕೆಲ ನಟರು ಬರಹದಲ್ಲಿ ಇನ್ನು ಕೆಲವರು ನಿರ್ದೇಶನದಲ್ಲಿ ಹಾಗೂ ಇನ್ನೂ ಕೆಲವರು ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಈಗ ಆ ಸಾಲಿಗೆ ಶ್ರದ್ಧಾ ಕೂಡ ಸೇರಿದ್ದಾರೆ. ಪ್ಲೇ ಬ್ಯಾಕ್ ಸಿಂಗರ್ ಆಗಿ ಅವರು ಈ ಸಿನಿಮಾದಲ್ಲಿ ಹಾಡಿದ್ದಾರೆ.
ಇನ್ನು ಸೂರ್ಯ ಅಭಿನಯದ 'ಕಂಗುವಾ' ಚಿತ್ರದ ಬಗ್ಗೆ ಹೇಳುವುದಾದರೆ. ಈ ಚಿತ್ರದಲ್ಲಿ ಬಾಬಿ ಡಿವೋಲ್ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಇದೇ ತಿಂಗಳ 14 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ನಟ ಸೂರ್ಯ ದ್ವಿಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ದ್ವಿಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ ಸೂರ್ಯ
ಸೂರ್ಯ ಈ ಬಾರಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಫ್ರಾನ್ಸಿಸ್ ಜೊತೆಗೆ 'ಕಂಗುವಾ' ಪಾತ್ರದಲ್ಲಿ ನಟಿಸಲಿದ್ದಾರೆ. ದಿಶಾ ಪಟಾನಿ ಏಂಜೆಲಿಯಾ ಪಾತ್ರದಲ್ಲಿ ಕಾಣಿಸಿಕೊಂಡರೆ, ಬಾಬಿ ಡಿಯೋಲ್ ಖಳನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 'ಉಧಿರನ್' ಪಾತ್ರದಲ್ಲಿ ಬಾಬಿ ಡಿಯೋಲ್ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಯೋಗಿ ಬಾಬು, ನಟರಾಜನ್, ಕೋವೈ ಸರಳಾ, ಆನಂದರಾಜ್, ದೀಪಾ ವೆಂಕಟ್, ಪ್ರೇಮ್ ಕುಮಾರ್ ಸೇರಿದಂತೆ ಹಲವು ಕಲಾವಿದರಿದ್ದಾರೆ.
ಕಂಗುವಾ ಬಜೆಟ್ ಮಾಹಿತಿ ಇಲ್ಲಿದೆ
ಕಂಗುವಾ ಈ ವರ್ಷದ ದುಬಾರಿ ಚಿತ್ರಗಳಲ್ಲೊಂದು ಎನ್ನಲಾಗಿದೆ. ಇವರ ಬಜೆಟ್ 350 ಕೋಟಿಗೂ ಹೆಚ್ಚು. ಭಾರತವಲ್ಲದೆ, 7 ವಿವಿಧ ದೇಶಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಆಕ್ಷನ್ ಮತ್ತು ಸಿನಿಮಾಟೋಗ್ರಫಿಯಂತಹ ತಾಂತ್ರಿಕ ವಿಭಾಗಗಳಿಗೆ ತಯಾರಕರು ಹಾಲಿವುಡ್ ತಜ್ಞರನ್ನು ನೇಮಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಒಟ್ಟು 10 ಸಾವಿರಕ್ಕೂ ಹೆಚ್ಚು ಜನರೊಂದಿಗೆ ಚಿತ್ರೀಕರಿಸಲಾದ ಅತಿ ದೊಡ್ಡ ವಾರ್ ಸೀಕ್ವೆನ್ಸ್ ಕೂಡ ಚಿತ್ರದಲ್ಲಿದೆ.
ಪಾರ್ಟಿ ಸಾಂಗ್
ಕಂಗುವ ತಂಡವು ಪ್ರಚಾರದ ಪ್ರಯತ್ನಗಳನ್ನು ಹೆಚ್ಚಿಸುತ್ತಿದೆ. ಹೊಸ ಹಾಡು, ಯೋಲೋ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಹಾಡಿನ ಬೀಟ್ ಇಷ್ಟಪಟ್ಟ ಜನರು ಹಾಡು ಕೇಳುತ್ತ ತಮ್ಮ ಕೈಕಾಲು ಕುಣಿಸುತ್ತಿದ್ದಾರೆ. ಇದು ಪಾರ್ಟಿ ಸಾಂಗ್ ರೀತಿಯಲ್ಲಿದೆ. ಆಧುನಿಕ ಶೈಲಿಯ ಈ ಸಾಂಗ್ನ ಬೀಟ್ ತುಂಬಾ ಚೆನ್ನಾಗಿದೆ ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ.