logo
ಕನ್ನಡ ಸುದ್ದಿ  /  ಕರ್ನಾಟಕ  /  ಅಯೋಧ್ಯೆ ರಾಮ್ ಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್ ಸೇರಿ 69 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ - ಇಲ್ಲಿದೆ ಪಟ್ಟಿ

ಅಯೋಧ್ಯೆ ರಾಮ್ ಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್ ಸೇರಿ 69 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ - ಇಲ್ಲಿದೆ ಪಟ್ಟಿ

Prasanna Kumar P N HT Kannada

Oct 30, 2024 05:36 PM IST

google News

ಅಯೋಧ್ಯೆ ರಾಮ್ ಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್ ಸೇರಿ 69 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

  • Kannada Rajyotsava Award 2024 Winners List: ಅಯೋಧ್ಯೆ ರಾಮ್ ಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್ ಸೇರಿದಂತೆ 69 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ. ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ದಿನದಂದು ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ.

ಅಯೋಧ್ಯೆ ರಾಮ್ ಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್ ಸೇರಿ 69 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಅಯೋಧ್ಯೆ ರಾಮ್ ಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್ ಸೇರಿ 69 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಶಸ್ತಿ (Kannada Rajyotsava Award) ವಿಜೇತರ ಪಟ್ಟಿಯನ್ನು ಕರ್ನಾಟಕ ಸರ್ಕಾರ ಇಂದು (ಅಕ್ಟೋಬರ್​ 30) ಪ್ರಕಟಿಸಿದೆ. ಸುದ್ದಿಗೋಷ್ಠಿ ನಡೆಸಿ ವಿಜೇತರ ಪಟ್ಟಿಯನ್ನು ಘೋಷಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಕಲೆ ಸಾಹಿತ್ಯ, ಜಾನಪದ, ಕೃಷಿ, ವಿಜ್ಞಾನ, ತಂತ್ರಜ್ಞಾನ, ಕ್ರೀಡೆ ಸೇರಿ ಒಟ್ಟು 69 ಸಾಧಕರಿಗೆ ಪ್ರಶಸ್ತಿ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅಯೋಧ್ಯೆ ರಾಮ್ ಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಸೇರಿದಂಯೆ ಈ ಪ್ರಶಸ್ತಿಗೆ ಆಯ್ಕೆಯಾದ 69 ಸಾಧಕರನ್ನು ನವೆಂಬರ್​ 1ರಂದು ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. 2024-25ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಈ ಮುಂದಿದೆ ನೋಡಿ.

ಜಾನಪದ

1. ಇಮಾಮಸಾಬ ಎಮ್ ವಲ್ಲೆಪನವರ - ಧಾರವಾಡ

2. ಅಶ್ವ ರಾಮಣ್ಣ - ಬಳ್ಳಾರಿ

3. ಕುಮಾರಯ್ಯ - ಹಾಸನ

4. ವೀರಭದ್ರಯ್ಯ - ಚಿಕ್ಕಬಳ್ಳಾಪುರ

5. ನರಸಿಂಹಲು (ಅಂಧ ಕಲಾವಿದ) - ಬೀದರ್​

6. ಬಸವರಾಜ ಸಂಗಪ್ಪ ಹಾರಿವಾಳ - ವಿಜಯಪುರ

7. ಎಸ್​ಜಿ ಲಕ್ಷ್ಮೀದೇವಮ್ಮ - ಚಿಕ್ಕಮಗಳೂರು

8. ಪಿಚ್ಚಳ್ಳಿ ಶ್ರೀನಿವಾಸ - ಕೋಲಾರ

9. ಲೋಕಯ್ಯ ಶೇರ (ಭೂತಾರಾಧನೆ) - ದಕ್ಷಿಣ ಕನ್ನಡ

ಚಲನಚಿತ್ರ /ಕಿರುತೆರೆ

10. ಹೇಮಾ ಚೌದರಿ - ಬೆಂಗಳೂರು ನಗರ

11. ಎಂಎಸ್ ನರಸಿಂಹಮೂರ್ತಿ - ಬೆಂಗಳೂರು ನಗರ

ಸಂಗೀತ

12. ಪಿ ರಾಜಗೋಪಾಲ - ಮಂಡ್ಯ

13. ಎ.ಎನ್ ಸದಾಶಿವಪ್ಪ - ರಾಯಚೂರು

ನೃತ್ಯ

14. ವಿದುಷಿ ಲಲಿತಾ ರಾವ್ - ಮೈಸೂರು

ಆಡಳಿತ

15. ಎಸ್​ವಿ ರಂಗನಾಥ್‌ ಭಾ.ಆ.ಸೇ (ನಿ) - ಬೆಂಗಳೂರು ನಗರ

ವೈದ್ಯಕೀಯ

16. ಡಾ. ಜಿಬಿ ಬಿಡಿನಹಾಳ - ಗದಗ

17. ಡಾ. ಮೈಸೂರು ಸತ್ಯನಾರಾಯಣ - ಮೈಸೂರು

18. ಡಾ. ಲಕ್ಷ್ಮಣ್ ಹನುಮಪ್ಪ ಬಿದರಿ - ವಿಜಯಪುರ

ಸಮಾಜಸೇವೆ

19. ವೀರಸಂಗಯ್ಯ - ವಿಜಯನಗರ

20. ಹೀರಾಚಂದ್‍ ವಾಗ್ಮಾರೆ - ಬೀದರ್​

21. ಮಲ್ಲಮ್ಮ ಸೂಲಗಿತ್ತಿ - ರಾಯಚೂರು

22. ದಿಲೀಪ್ ಕುಮಾರ್ - ಚಿತ್ರದುರ್ಗ

ಸಂಕೀರ್ಣ

23. ಹುಲಿಕಲ್ ನಟರಾಜ - ತುಮಕೂರು

24. ಡಾ. ಹೆಚ್​​ಆರ್‌ ಸ್ವಾಮಿ - ಚಿತ್ರದುರ್ಗ

25. ಆ.ನ ಪ್ರಹ್ಲಾದ ರಾವ್ - ಕೋಲಾರ

26. ಕೆ ಅಜೀತ್ ಕುಮಾರ್ ರೈ - ಬೆಂಗಳೂರು ನಗರ

27. ಇರ್ಫಾನ್ ರಜಾಕ್ (ವಾಸ್ತುಶಿಲ್ಪ) - ಬೆಂಗಳೂರು ನಗರ

28. ವಿರೂಪಾಕ್ಷ ರಾಮಚಂದ್ರಪ್ಪ ಹಾವನೂರ - ಹಾವೇರಿ

ಹೊರದೇಶ-ಹೊರನಾಡು

29. ಕನ್ಹಯ್ಯ ನಾಯ್ಡು -

30. ಡಾ. ತುಂಬೆ ಮೊಹಿಯುದ್ದೀನ್‌ - ತುಂಬೆ ಗ್ರೂಪ್ಸ್ ಯುಎಇ

31. ಚಂದ್ರಶೇಖರ ನಾಯಕ್ - ಅಮೆರಿಕ

ಪರಿಸರ

32. ಆಲ್ಮಿತಾ ಪಟೇಲ್​ - ಬೆಂಗಳೂರು ನಗರ

ಸಾಹಿತ್ಯ

33. ಬಿಟಿ ಲಲಿತಾ ನಾಯಕ್ - ಚಿಕ್ಕಮಗಳೂರು

34. ಅಲ್ಲಮಪ್ರಭು ಬೆಟ್ಟದೂರು - ಕೊಪ್ಪಳ

35. ಡಾ.ಎಂ ವೀರಪ್ಪ ಮೊಯ್ಲಿ - ಉಡುಪಿ

36. ಹನುಮಂತರಾವ್ ದೊಡ್ಡಮನಿ - ಕಲಬುರಗಿ

37. ಡಾ.ಬಾಳಾಸಾಹೇಬ್ ಲೋಕಾಪುರ - ಬೆಳಗಾವಿ

38. ಬೈರಮಂಗಲರಾಮೇಗೌಡ - ರಾಮನಗರ

39. ಡಾ. ಪ್ರಶಾಂತ್ ಮಾಡ್ತಾ - ದಕ್ಷಿಣ ಕನ್ನಡ

ಕೃಷಿ

40. ಶಿವನಾಪುರ ರಮೇಶ - ಬೆಂಗಳೂರು ಗ್ರಾಮಾಂತರ

41. ಪುಟ್ಟೀರಮ್ಮ - ಚಾಮರಾಜನಗರ

ಮಾಧ್ಯಮ

42. ಎನ್​​ಎಸ್​ ಶಂಕರ್​ - ದಾವಣಗೆರೆ

43. ಸನತ್​ಕುಮಾರ್ ಬೆಳಗಲಿ - ಬಾಗಲಕೋಟೆ

44. ಎಜಿ ಕಾರಟಗಿ (ಅಮರ ಗುಂಡಪ್ಪ ಕಾರಟಗಿ) - ಕೊಪ್ಪಳ

45. ರಾಮಕೃಷ್ಣ ಬಡಕೇಶಿ - ಕಲಬುರಗಿ

ವಿಜ್ಞಾನ-ತಂತ್ರಜ್ಞಾನ

46. ಟಿವಿ ರಾಮಚಂದ್ರ - ಬೆಂಗಳೂರು ನಗರ

47. ಸುಬ್ಬಯ್ಯ ಅರುಣನ್ - ಬೆಂಗಳೂರು ನಗರ

ಸಹಕಾರ

48. ವೀರೂಪಾಕ್ಷಪ್ಪ ನೇಕಾರ - ಬಳ್ಳಾರಿ

ಯಕ್ಷಗಾನ

49. ಕೇಶವ್ ಹೆಗಡೆ - ಉತ್ತರ ಕನ್ನಡ

50. ಸೀತಾರಾಮ ತೋಳ್ಪಾಡಿ - ದಕ್ಷಿಣ ಕನ್ನಡ

ಬಯಲಾಟ

51. ಸಿದ್ದಪ್ಪ ಕರಿಯಪ್ಪ ಕುರಿ (ಅಂಧ ಕಲಾವಿದರು) - ಬಾಗಲಕೋಟೆ

52. ನಾರಾಯಣಪ್ಪ ಶಿಳ್ಳೆಕ್ಯಾತ - ವಿಜಯನಗರ

ರಂಗಭೂಮಿ

53. ಸರಸ್ವತಿ ಜುಲೈಕ ಬೇಗಂ - ಯಾದಗಿರಿ

54. ಓಬಳೇಶ್ ಹೆಚ್​ಬಿ - ಚಿತ್ರದುರ್ಗ

55. ಭಾಗ್ಯಶ್ರೀ ರವಿ - ಕೋಲಾರ

56. ಡಿ ರಾಮು - ಮೈಸೂರು

57. ಜನಾರ್ಧನ ಎಚ್​ - ಮೈಸೂರು

58. ಹನುಮಾನದಾಸ ವ ಪವಾರ - ಬಾಗಲಕೋಟೆ

ಶಿಕ್ಷಣ

59. ವಿ ಕಮಲಮ್ಮ - ಬೆಂಗಳೂರು ನಗರ

60. ರಾಜೇಂದ್ರ ಶೆಟ್ಟಿ - ದಕ್ಷಿಣ ಕನ್ನಡ

61. ಪದ್ಮಾ ಶೇಖರ್​ - ಕೊಡಗು

ಕ್ರೀಡೆ

62. ಜೂಡ್ ಫೆಲಿಕ್ಸ್ ಸೆಬಾಸ್ಟಿಯನ್ (ಹಾಕಿ) - ಬೆಂಗಳೂರು ನಗರ

63. ಗೌತಮ್ ವರ್ಮಾ - ರಾಮನಗರ

64. ಆರ್​ ಉಮಾದೇವಿ (ಬಿಲಿಯಡ್ಸ್) - ಬೆಂಗಳೂರು ನಗರ

ನ್ಯಾಯಾಂಗ

65. ಬಾಲನ್ - ಕೋಲಾರ

ಶಿಲ್ಪಕಲೆ

66. ಬಸವರಾಜ್ ಬಡಿಗೇರ - ಬೆಂಗಳೂರು ನಗರ

67. ಅರುಣ್ ಯೋಗಿರಾಜ್ - ಮೈಸೂರು

ಚಿತ್ರಕಲೆ

68. ಪ್ರಭು ಹಸರೂರು - ತುಮಕೂರು

ಕರಕುಶಲ

69. ಚಂದ್ರಶೇಖರ ಸಿರಿವಂತೆ - ಶಿವಮೊಗ್ಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ