ಕನ್ನಡ ರಾಜ್ಯೋತ್ಸವ 2024: ಕರ್ನಾಟಕದಲ್ಲಿರುವ ಪ್ರಮುಖ ಪಕ್ಷಿಧಾಮಗಳು; ಏಷ್ಯಾದ ಅತಿ ದೊಡ್ಡ ಪಕ್ಷಿಧಾಮ ಯಾವುದು ಗೊತ್ತೆ?
- ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್ ಟೈಮ್ಸ್ ಕನ್ನಡವು ಕರ್ನಾಟಕದಲ್ಲಿ ನೈಸರ್ಗಿಕವಾಗಿ ರೂಪುಗೊಂಡು ರಾಮ್ಸಾರ್ ಸೈಟ್‌ನಲ್ಲೂ ಸೇರಿರುವ ಪಕ್ಷಿಧಾಮಗಳ ವಿವರಗಳನ್ನು ಇಲ್ಲಿ ನೀಡಿದೆ.
- ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್ ಟೈಮ್ಸ್ ಕನ್ನಡವು ಕರ್ನಾಟಕದಲ್ಲಿ ನೈಸರ್ಗಿಕವಾಗಿ ರೂಪುಗೊಂಡು ರಾಮ್ಸಾರ್ ಸೈಟ್‌ನಲ್ಲೂ ಸೇರಿರುವ ಪಕ್ಷಿಧಾಮಗಳ ವಿವರಗಳನ್ನು ಇಲ್ಲಿ ನೀಡಿದೆ.
(1 / 9)
ಅತ್ತಿವೇರಿ ಉತ್ತರ ಕನ್ನಡ//ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ಅತ್ತಿವೇರಿ ಪಕ್ಷಿಧಾಮ. ಧಾರವಾಡ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿದೆ. ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ ರೂಪುಗೊಂಡಿರುವ ಇಲ್ಲಿಗೆ ಹಲವು ಬಗೆಯ ಪಕ್ಷಿಗಳು ವಲಸೆ ಬರುತ್ತವೆ. ಸ್ಥಳೀಯವಾಗಿ ಇರುವ ಹಕ್ಕಿಗಳೂ ಇವೆ. ಪ್ರವಾಸಿಗರನ್ನು ಅತ್ತಿವೇರಿ ಪಕ್ಷಿಧಾಮ ಆಕರ್ಷಿಸುತ್ತದೆ.(Shreya photo)
(2 / 9)
ಕೊಕ್ಕರೆ ಬೆಳ್ಳೂರು//ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಊರು ಬೆಳ್ಳೂರು. ಈ ಗ್ರಾಮಕ್ಕೆ ಕೊಕ್ಕರೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತವೆ. ಇದರಿಂದ ಇದು ಕೊಕ್ಕರೆ ಬೆಳ್ಳೂರು ಎಂದೇ ಜನಜನಿತವಾಗಿದೆ. ಇಲ್ಲಿಗೆ ಹಲವಾರು ಭಾಗಗಳಿಂದ ಕೊಕ್ಕರೆಗಳು ಆಗಮಿಸುತ್ತವೆ.
(3 / 9)
ಮಂಡಗದ್ದೆ//ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ರಸ್ತೆಯಲ್ಲಿರುವ ಮಂಡಗದ್ದೆ ಪಕ್ಷಿಧಾಮವೂ ಹಳೆಯದು. ತುಂಗಾ ನದಿ ತೀರದ ಮಂಡಗದ್ದೆಯಲ್ಲಿ ಹಲವಾರು ವರ್ಷಗಳಿಂದ ಹಕ್ಕಿಗಳ ವಲಸೆ ನಡೆದಿದೆ. ಇದು ಕೂಡ ಪ್ರಮುಖ ಪ್ರವಾಸಿ ಆಕರ್ಷಣೆಯೇ ಆಗಿ ರೂಪುಗೊಂಡಿದೆ
(4 / 9)
ಕಗ್ಗಲಡು //ದಕ್ಷಿಣ ಏಷ್ಯಾದ ಎರಡನೇ ಅತಿ ದೊಡ್ಡ ಬಣ್ಣದ ಕೊಕ್ಕರೆ ಪಕ್ಷಿಧಾಮಗಳ ಪಟ್ಟಿಯಲ್ಲಿರುವುದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಕಗ್ಗಲಡು ಪಕ್ಷಿ ಧಾಮ. ಕೊಕ್ಕರೆಗಳೇ ಇಲ್ಲಿಗೆ ಹೆಚ್ಚಿಗೆ ಬರುತ್ತವೆ. ಇಲ್ಲಿನ ಕೆರೆಯ ನೀರಿನ ವಾತಾವರಣದಿಂದ ಪಕ್ಷಿಗಳನ್ನು ಆಕರ್ಷಿಸುತ್ತದೆ.
(5 / 9)
ಬೋನಾಲ್ ಪಕ್ಷಿಧಾಮ ಯಾದಗಿರಿ//ರಂಗನತಿಟ್ಟು ಪಕ್ಷಿಧಾಮದ ನಂತರ ಎರಡನೇ ಅತಿ ದೊಡ್ಡ ಪಕ್ಷಿಧಾಮವೆಂದರೆ ಯಾದಗಿರಿ ಜಿಲ್ಲೆಯ ಶೋರಾಪುರ ತಾಲೂಕಿನ ಬೋನಾಲ್ ಗ್ರಾಮದ ಬಳಿ ಇರುವ ಪಕ್ಷಿಧಾಮ ಮತ್ತು ಜೌಗು 21 ಜಾತಿಯ ಪಕ್ಷಿಗಳು ಬರುವ ಈ ಕೆರೆಯನ್ನು 17 ನೇ ಶತಮಾನದಲ್ಲಿ ಸುರಪುರ ರಾಜ ರಾಜ ಪಂ ನಾಯಕ್ ನಿರ್ಮಿಸಿದರು. 700 ಎಕರೆ ದೊಡ್ಡ ಕೆರೆ. ಸುಮಾರು 10,000 ಜಾತಿಯ ವಿದೇಶಿ ವಲಸೆ ಹಕ್ಕಿಗಳು ಇಲ್ಲಿಗೆ ಬರುತ್ತವೆ
(6 / 9)
ರಂಗನತಿಟ್ಟು// ಕಾವೇರಿ ತೀರದ ಪ್ರಮುಖ ಪಕ್ಷಿಧಾಮ. ಭಾರತ ಮಾತ್ರವಲ್ಲದೇ ಹಲವಾರು ದೇಶಗಳಿಂದ ಪಕ್ಷಿಗಳು ಇಲ್ಲಿಗೆ ಸಂತಾನಾಭಿವೃದ್ದಿಗೆ ಬರುತ್ತವೆ. ಐದು ಸಾವಿರಕ್ಕೂ ಹೆಚ್ಚು ಹಕ್ಕಿಗಳಿಗೆ ಇದು ಆಶ್ರಯ ತಾಣ. ಸಲೀಂ ಆಲಿ ಅವರು ಗುರುತಿಸಿದ ಈ ಪಕ್ಷಿಧಾಮ ಪ್ರಮುಖ ಪ್ರವಾಸಿ ತಾಣವೂ ಆಗಿದೆ. ರಾಮ್ಸಾರ್ ತಾಣವಾಗಿಯೂ ಇದನ್ನು ಗುರುತಿಸಲಾಗಿದೆ
(7 / 9)
ಗುಡವಿ//ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಗುಡವಿ ಪಕ್ಷಿಧಾಮಕ್ಕೂ ಎರಡು ನೂರಕ್ಕೂ ಅಧಿಕ ಪಕ್ಷಿಗಳು ಬರುತ್ತವೆ. ಗ್ರಾಮದಲ್ಲಿರುವ ವಿಶಾಲವಾದ ಕೆರೆ, ಅದಕ್ಕೆ ಹೊಂದಿಕೊಂಡಂತೆ ಇರುವ ಮರಗಳ ವಾತಾವರಣದಿಂದ ಇದು ಪಕ್ಷಿಧಾಮ ಹಾಗೂ ಪ್ರವಾಸಿ ತಾಣವಾಗಿ ರೂಪುಗೊಂಡು ದಶಕಗಳೇ ಕಳೆದಿವೆ.
(8 / 9)
ಅಂಕ ಸಮುದ್ರವಿಜಯನಗರ ಜಿಲ್ಲೆಯ ತುಂಗಭದ್ರಾ ಹಿನ್ನೀರಿನ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕ ಸಮುದ್ರವೂ ಮೀಸಲು ಅರಣ್ಯ ಹಾಗೂ ಪಕ್ಷಿಧಾಮವಾಗಿದೆ. ಇಲ್ಲಿಗೆ ನೂರಾರು ಬಣ್ಣದ ಕೊಕ್ಕರೆಗಳು, ಬೂದು ಬಕಗಳು, ರಾತ್ರಿ ಬೆಳ್ಳಕ್ಕಿಗಳು, ಕೊಳದ ಬಕಗಳು, ಬಾತುಕೋಳಿಗಳು, ಬೆಳ್ಳಕ್ಕಿಗಳು ಬರುತ್ತವೆ. ನೀರಿನ ಲಭ್ಯತೆಯೂ ಪಕ್ಷಿಧಾಮ ಬೆಳೆಯಲು ಕಾರಣ. ರಾಮ್ಸಾರ್ ತಾಣಗಳ ಪಟ್ಟಿಯಲ್ಲಿ ಇದೂ ಇದೆ.(ಸಮದ್ ಕೊಟ್ಟೂರು ಚಿತ್ರ)
(9 / 9)
ಮಾಗಡಿ ಪಕ್ಷಿಧಾಮ// ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲ್ಲೂಕಿನ ಮಾಗಡಿ ಗ್ರಾಮದ ಕೆರೆ ಪಕ್ಷಿಧಾಮದ ರೂಪ ಪಡೆದಿದೆ. ಈ ಗ್ರಾಮಕ್ಕೆ ವರ್ಷವಿಡೀ ಪಕ್ಷಿಗಳು ಬರುತ್ತವೆ. ಪಟ್ಟೆತಲೆ ಹೆಬ್ಬಾತುಗಳು ಹೆಚ್ಚು ಕಾಣಸಿಕೊಳ್ಳುತ್ತವೆ. ಇಲ್ಲಿನ ನೀರಿನ ಸೌಲಭ್ಯ, ಆಹಾರ ಲಭ್ಯತೆ ಕಾರಣಕ್ಕೆ ಹೊರ ದೇಶಗಳಿಂದಲೂ ಹಕ್ಕಿಗಳು ಬರುತ್ತವೆ. ಇದೂ ಕೂಡ ಪ್ರಮುಖ ಪ್ರವಾಸಿ ತಾಣವೇ ಆಗಿ ಮಾರ್ಪಟ್ಟಿದೆ. ಇದು ಕೂಡ ರಾಮ್ಸಾರ್ ತಾಣ.
ಇತರ ಗ್ಯಾಲರಿಗಳು