‌ಕನ್ನಡ ರಾಜ್ಯೋತ್ಸವ 2024: ಹೊರ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ಹೆಗ್ಗುರುತು ಮೂಡಿಸಿದ ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳು ಯಾರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ‌ಕನ್ನಡ ರಾಜ್ಯೋತ್ಸವ 2024: ಹೊರ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ಹೆಗ್ಗುರುತು ಮೂಡಿಸಿದ ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳು ಯಾರು

‌ಕನ್ನಡ ರಾಜ್ಯೋತ್ಸವ 2024: ಹೊರ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ಹೆಗ್ಗುರುತು ಮೂಡಿಸಿದ ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳು ಯಾರು

  • ಕರ್ನಾಟಕದಲ್ಲಿ ಹಲವಾರು ವರ್ಷಗಳಿಂದ ಸೇವಾ ನಿರತ ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಹೊರ ರಾಜ್ಯದ ಅಧಿಕಾರಿಗಳಲ್ಲಿ ಹಲವರು ತಮ್ಮ ದಕ್ಷ ಕಾರ್ಯಚಟುವಟಿಕೆ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಅಂತವರ ಪಟ್ಟಿ ಇಲ್ಲಿದೆ

ಟಫ್‌ ಕಾಪ್‌ ಎಂದೇ ಹೆಸರು ಪಡೆದಿರುವ  ಬಿಹಾರದವರಾದ ಅಲೋಕ್‌ ಕುಮಾರ್‌ ಕರ್ನಾಟಕದಲ್ಲಿ ಮೂರು ದಶಕದಿಂದಲೂ ಐಪಿಎಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಚಾರ ಸುಧಾರಣೆ, ರೌಡಿಗಳ ನಿಗ್ರಹ ಸಹಿತ ಪೊಲೀಸೀಂಗ್‌ ವಿಚಾರದಲ್ಲಿ ಇವರ ಹೆಸರು ಮುಂಚೂಣಿಯಲ್ಲಿದೆ. 
icon

(1 / 10)

ಬಿಹಾರ ಮೂಲದವರಾದ ಕುಮಾರಪುಷ್ಕರ್‌ ಭಾರತದ ಅತ್ಯುತ್ತಮ ಐಎಫ್‌ಎಸ್‌ ಅಧಿಕಾರಿಯಲ್ಲಿ ಒಬ್ಬರು. ಇವರೂ ಮೂರು ದಶಕದಿಂದ ಕರ್ನಾಟಕ ಸೇವೆಯಲ್ಲಿದ್ದಾರೆ, ಮುಚ್ಚುವ ಹಂತದಲ್ಲಿದ್ದ ಮೈಸೂರಿನ ಮೃಗಾಲಯಕ್ಕೆ ಮರುಜೀವ ನೀಡಿದವರು ಪುಷ್ಕರ್‌, ಕರ್ನಾಟಕದ ವನ್ಯಜೀವಿ ನಿರ್ವಹಣೆ, ಅರಣ್ಯ ಸಂರಕ್ಷಣೆಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ
icon

(2 / 10)

ಹರ್ಷ ಗುಪ್ತ ಎನ್ನುವ ಹೆಸರು ಕೇಳಿದರೆ ಭಯ ಪಡುವವರು ಇದ್ದಾರೆ. ಏಕೆಂದರೆ ಅಷ್ಟು ಕಠಿಣ ಆಡಳಿತಕ್ಕೆ ಹೆಸರಾದವರು ಹರ್ಷಗುಪ್ತ. ದೆಹಲಿ ಮೂಲದವರಾದರೂ ಕರ್ನಾಟಕದ ಬೀದರ್‌, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು ಡಿಸಿಯಾಗಿ ದಕ್ಷತೆಯಿಂದ ಕೆಲಸ ಮಾಡಿದವರು. ಆಹಾರ ಇಲಾಖೆ ಆಯುಕ್ತರಾಗಿ ಪಡಿತರ ಸೋರಿಕೆ ತಪ್ಪಿಸಿದವರು.
icon

(3 / 10)

ಉತ್ತರ ಪ್ರದೇಶದವರಾದ ಮುನೀಷ್‌ ಮೌದ್ಗಿಲ್‌ ಕರ್ನಾಟಕದಲ್ಲಿ ಐಎಎಸ್‌ ಅಧಿಕಾರಿಯಾಗಿ ವಿಭಿನ್ನವಾಗಿ ಕೆಲಸ ಮಾಡಿದವರು. ಕಂದಾಯ ಇಲಾಖೆಯಲ್ಲಿ ತಂತ್ರಜ್ಞಾನ ಸುಧಾರಣೆ ಹಿಂದೆ ಇವರ ಪಾತ್ರ ದೊಡ್ಡದು. ದೇಶಕ್ಕೆ ಮಾದರಿಯಾಗುವ ಹಲವು ಸುಧಾರಣೆ ತಂದಿದ್ದಾರೆ. ಇವರ ಪತ್ನಿ ಐಪಿಎಸ್‌ ಅಧಿಕಾರಿ ಡಿ.ರೂಪಾ. ಇದರಿಂದ ಮುನೀಷ್‌ ಕರ್ನಾಟಕದ ಅಳಿಯ.
icon

(4 / 10)

ಒಂದು ಕಾಲಕ್ಕೆ ಡೆಮಾಲಿಷನ್‌ ಮ್ಯಾನ್‌ ಎಂದೇ ಹೆಸರು ಮಾಡಿದ್ದವರು ತಮಿಳುನಾಡು ಮೂಲದವರಾದರ ಕ್ಯಾಪ್ಟನ್‌ ಮಣಿವಣ್ಣನ್‌, ಹುಬ್ಬಳ್ಳಿಯ  ನಂತರ ಮೈಸೂರಲ್ಲೂ ಒತ್ತುವರಿ, ರಸ್ತೆ ಅಗಲೀಕರದ ತೆರವಿಗೆ ಒತ್ತು ನೀಡಿದವರು. ಜನಮುಖಿ ಆಡಳಿತಕ್ಕೆ ಹೆಸರುವಾಸಿ. ಈಗ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ. 
icon

(5 / 10)

ಅರಣ್ಯ ಇಲಾಖೆಯೂ ತಂತ್ರಜ್ಞಾನದ ಮೂಲಕ ಹತ್ತಾರು ಚಟುವಟಿಕೆಗಳನ್ನು ಜನರಿಗೆ ಸಿಗುವಂತೆ ಮಾಡಿದವರು ದಕ್ಷ ಅಧಿಕಾರಿ ಬಿಸ್ವಜಿತ್‌ ಮಿಶ್ರ. ಒರಿಶಾದವರಾದರೂ ಕರ್ನಾಟಕದಲ್ಲಿ ಕೆಲಸ ಮಾಡಿ ಕಳೆದ ವರ್ಷ ಎಕೋ ವಾರಿಯರ್‌ ಪ್ರಶಸ್ತಿ ಪಡೆದಿದ್ದರು. ಇವರ ಪತ್ನಿ ಶಾಶ್ವತಿ ಮಿಶ್ರ ಕೂಡ ದಕ್ಷ ಐಎಫ್‌ಎಸ್‌ ಅಧಿಕಾರಿ.
icon

(6 / 10)

ಮೂಲತಃ ಮಧ್ಯಪ್ರದೇಶದವರಾದರೂ ತಮಿಳುನಾಡು ಕೇಡರ್‌ ಐಪಿಎಸ್‌ ಅಧಿಕಾರಿಯಾಗಿದ್ದ ಚಂದ್ರಮೋಹನ್‌ ಅವರ ಪುತ್ರಿ, ಕರ್ನಾಟಕ ಐಎಎಸ್‌ ಅಧಿಕಾರಿ ಸಿ.ಶಿಖಾ. ಧಾರವಾಡದಲ್ಲಿ ನರೇಗಾ ಯೋಜನೆಗಳ ಜಾರಿಗೆ ರಾಷ್ಟ್ರಪ್ರಶಸ್ತಿ ಪಡೆದು, ಮೈಸೂರಿನಲ್ಲಿ ಡಿಸಿಯಾಗಿ ಸಮರ್ಥವಾಗಿ ಕೆಲಸ ಮಾಡಿದವರು. ಈಗ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾಗಿ ಇಡೀ ದೇಶವೇ ಗಮನ ಸೆಳೆಯುವಂತೆ ತೆರಿಗೆ ಸಂಗ್ರಹದಲ್ಲಿ ಸುಧಾರಣೆ ಮಾಡಿದ್ದಾರೆ. ಇವರ ಪತಿ, ಐಎಎಸ್‌ ಅಧಿಕಾರಿಯಾಗಿರುವ ಡಾ.ಅಜಯನಾಗಭೂಷಣ್‌ ಕೂಡ ದಕ್ಷ ಅಧಿಕಾರಿ.
icon

(7 / 10)

ಹರಿಯಾಣದ ಮೂಲದವರಾದ ರಮಣ್‌ ಗುಪ್ತ ಕರ್ನಾಟಕದ ಐಪಿಎಸ್‌ ಅಧಿಕಾರಿ. ಎರಡು ದಶಕದಿಂದ ಕರ್ನಾಟಕದ ದಕ್ಷಿಣ ಕನ್ನಡ, ಹುಬ್ಬಳ್ಳಿ ಸಹಿತ ಹಲವು ಕಡೆ ಕಟ್ಟುನಿಟ್ಟಿನ ಕ್ರಮದೊಂದಿಗೆ ಕೆಲಸ ಮಾಡಿದವರು. ಈಗ ಬೆಂಗಳೂರು ಅಪರ ಪೊಲೀಸ್‌ ಆಯುಕ್ತ.
icon

(8 / 10)

ಆಂಧ್ರಪ್ರದೇಶ ಮೂಲದವರಾದ ತುಳಸಿ ಮದ್ದಿನೇನಿ ಅವರು ಕೂಡ ಎರಡು ದಶಕದಿಂದ ಕರ್ನಾಟಕದಲ್ಲಿ ಕೆಲಸ ಮಾಡುತ್ತಿರುವವರು. ತುಮಕೂರಿನಲ್ಲಿ ರಸ್ತೆ ಅಗಲೀಕರಣ, ಕೊಪ್ಪಳದಲ್ಲಿ ಪ್ರಭಾವಿಗಳ ಒತ್ತುವರಿ ತೆರವು ಮಾಡಿದವರು. ಸದ್ಯ ಬೆಂಗಳೂರು ಬಿಬಿಎಂಪಿಯಲ್ಲಿ ಹೆಚ್ಚುವರಿ ಆಯುಕ್ತರು.
icon

(9 / 10)

ಆಂಧ್ರ ಪ್ರದೇಶ ಮೂಲದವರಾದ ವಿ.ಏಡುಕುಂಡಲು ಅವರು ಕರ್ನಾಟಕ ಕೇಡರ್‌ಐ ಎಫ್‌ಎಸ್‌ ಅಧಿಕಾರಿ. ಮಲೈಮಹದೇಶ್ವರ ವನ್ಯಧಾಮದಲ್ಲಿ ಪ್ರವಾಸೋದ್ಯಮದ ಜತೆಗೆ ಗುಡ್ಡಗಾಡು ಜನರಿಗೆ ಗೌರವಯುತ ಸೌಲಭ್ಯ ನೀಡಿ, ಕೋಲಾರದಂತ ಜಿಲ್ಲೆಯಲ್ಲಿ ಎರಡು ಸಾವಿರ ಎಕರೆ ಒತ್ತುವರಿ ತೆರವಿಗೆ ಸದ್ದಿಲ್ಲದೇ ಕೆಲಸ ಮಾಡಿದವರು.
icon

(10 / 10)

ಇತರ ಗ್ಯಾಲರಿಗಳು