logo
ಕನ್ನಡ ಸುದ್ದಿ  /  ಕರ್ನಾಟಕ  /  ದೀಪಾವಳಿಗೆ ಊರಿಗೆ ಹೊರಟ್ರ? ಕರ್ನಾಟಕದಲ್ಲಿ ಖಾಸಗಿ ಬಸ್‌ ಟಿಕೆಟ್‌ ಬುಕ್‌ ಮಾಡಲು ಯಾವ ಆ್ಯಪ್‌ ಉತ್ತಮವೆಂದು ತಿಳಿಯಿರಿ

ದೀಪಾವಳಿಗೆ ಊರಿಗೆ ಹೊರಟ್ರ? ಕರ್ನಾಟಕದಲ್ಲಿ ಖಾಸಗಿ ಬಸ್‌ ಟಿಕೆಟ್‌ ಬುಕ್‌ ಮಾಡಲು ಯಾವ ಆ್ಯಪ್‌ ಉತ್ತಮವೆಂದು ತಿಳಿಯಿರಿ

Praveen Chandra B HT Kannada

Oct 29, 2024 05:06 PM IST

google News

ಕರ್ನಾಟಕದಲ್ಲಿ ಖಾಸಗಿ ಬಸ್‌ ಟಿಕೆಟ್‌ ಬುಕ್‌ ಮಾಡಲು ಯಾವ ಆ್ಯಪ್‌ ಉತ್ತಮ?

    • ದೀಪಾವಳಿ ಹಬ್ಬದ ಸಮಯದಲ್ಲಿ ಸಾಕಷ್ಟು ಜನರು ಊರಿಗೆ ಹೊರಟಿರಬಹುದು. ಈ ಸಮಯದಲ್ಲಿ ಖಾಸಗಿ ಬಸ್‌ನಲ್ಲಿ ದರ ಹೆಚ್ಚಳವಾಗಿದೆ. ಇದೇ ಸಮಯದಲ್ಲಿ ಖಾಸಗಿ ಬಸ್‌ ಟಿಕೆಟ್‌ ಬುಕ್‌ಮಾಡಲು ಬಯಸುವವರು ರೆಡ್‌ ಬಸ್‌, ಅಭಿಬಸ್‌, ಕ್ಲಿಯರ್‌ಟ್ರಿಪ್‌ನಂತಹ ಆ್ಯಪ್‌ಗಳನ್ನು ಬಳಸಬಹುದು.
ಕರ್ನಾಟಕದಲ್ಲಿ ಖಾಸಗಿ ಬಸ್‌ ಟಿಕೆಟ್‌ ಬುಕ್‌ ಮಾಡಲು ಯಾವ ಆ್ಯಪ್‌ ಉತ್ತಮ?
ಕರ್ನಾಟಕದಲ್ಲಿ ಖಾಸಗಿ ಬಸ್‌ ಟಿಕೆಟ್‌ ಬುಕ್‌ ಮಾಡಲು ಯಾವ ಆ್ಯಪ್‌ ಉತ್ತಮ?

ದೀಪಾವಳಿ ಹಬ್ಬದ ಸಮಯದಲ್ಲಿ ಸಾಕಷ್ಟು ಜನರು ಊರಿಗೆ ಹೊರಟಿರಬಹುದು. ದೀಪಾವಳಿ ಮಾತ್ರವಲ್ಲದೆ ಬೇರೆ ಸಮಯದಲ್ಲೂ ಆಗಾಗ ಬಸ್‌ ಪ್ರಯಾಣ ಕೈಗೊಳ್ಳುವವವರು ಸಾಕಷ್ಟು ಜನರು ಇರುತ್ತಾರೆ. ಬಸ್‌ ಅಂದಾಗ ಕೆಲವರು ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸಲು ಆದ್ಯತೆ ನೀಡುತ್ತಾರೆ. ಕರ್ನಾಟಕದಲ್ಲಿಯೂ ಹಲವು ಖಾಸಗಿ ಬಸ್‌ಗಳು ಸೇವೆ ಸಲ್ಲಿಸುತ್ತವೆ. ಸಾಕಷ್ಟು ಜನರು ಈ ಬಸ್‌ಗಳನ್ನು ಬುಕ್‌ ಮಾಡಲು ಹಲವು ಆ್ಯಪ್‌ಗಳನ್ನು ಬಳಸುತ್ತಾರೆ. ಖಾಸಗಿ ಬಸ್‌ ಬುಕ್ಕಿಂಗ್‌ ಮಾಡಲು ಉತ್ತಮವಾದ ಕೆಲವು ಆ್ಯಪ್‌ಗಳ ವಿವರ ಇಲ್ಲಿದೆ.

ರೆಡ್‌ಬಸ್‌

ಕರ್ನಾಟಕದಲ್ಲಿ ಖಾಸಗಿ ಬಸ್‌ ಬುಕ್‌ಮಾಡಲು ಹೆಚ್ಚು ಜನರು ಬಳಸುವ ಆ್ಯಪ್‌ ಆಗಿದೆ. ಇದರಲ್ಲಿ ಕರ್ನಾಟಕದ ಖಾಸಗಿ ಬಸ್‌ ಟಿಕೆಟ್‌ ಬುಕ್ಕಿಂಗ್‌ ಮಾಡುವುದು ಮಾತ್ರವಲ್ಲದೆ ಕೇರಳದ ಕೆಎಸ್‌ಆರ್‌ಟಿಸಿಯನ್ನೂ ಬುಕ್‌ ಮಾಡಬಹುದು.

ಅಭಿಬಸ್‌

ಇದು ಕೂಡ ಇನ್ನೊಂದು ಜನಪ್ರಿಯ ಖಾಸಗಿ ಬಸ್‌ ಬುಕ್ಕಿಂಗ್‌ ಆ್ಯಪ್‌ ಆಗಿದೆ. ದೇಶಾದ್ಯಂತ ಸುಮಾರು 3,500ಕ್ಕೂ ಹೆಚ್ಚು ಆಪರೇಟರ್‌ಗಳ ಜತೆ ಕಾರ್ಯನಿರ್ವಹಿಸುತ್ತಿದೆ.

ಕ್ಲಿಯರ್‌ಟ್ರಿಪ್‌

ಇದು ಕೂಡ ಇನ್ನೊಂದು ಜನಪ್ರಿಯ ಆ್ಯಪ್‌ ಆಗಿದೆ. ಈ ಆ್ಯಪ್‌ನಲ್ಲಿ ಬಸ್‌, ರೈಲು, ವಿಮಾನ, ಹೋಟೆಲ್‌ ಬುಕ್ಕಿಂಗ್‌ ಮಾಡಬಹುದು.

ಗೋಐಬಿಐಬಿಒ

ಇದು ಕೂಡ ಇನ್ನೊಂದು ಜನಪ್ರಿಯ ಟ್ರಾವೆಲ್‌ ಆ್ಯಪ್‌ ಆಗಿದೆ. ಇದರಲ್ಲೂ ಖಾಸಗಿ ಬಸ್‌ ಬುಕ್‌ ಮಾಡಬಹುದು.

ಯಾತ್ರಾ

ಈ ಆ್ಯಪ್‌ನಲ್ಲೂ ಬಸ್‌ ಟಿಕೆಟ್‌ ಬುಕ್ಕಿಂಗ್‌ ಮಾಡಬಹುದು.

ಟ್ಯುಮೊಕ್‌

ಇದು ಕೂಡ ಬಸ್‌ ಟಿಕೆಟ್‌ ಬುಕ್ಕಿಂಗ್‌ ಮಾಡಲು ಸೂಕ್ತವಾದ ಆ್ಯಪ್‌ ಆಗಿದೆ. ಇದರಲ್ಲಿ ಮೆಟ್ರೋ ಟಿಕೆಟ್‌ ಕೂಡ ಖರೀದಿಸಬಹುದು.

ಬಸ್‌ ಕಂಪನಿಗಳ ಟಿಕೆಟ್‌ ಬುಕ್ಕಿಂಗ್‌ ಆ್ಯಪ್‌ಗಳು

ಕರ್ನಾಟಕದ ಬಹುತೇಕ ಬಸ್‌ ಆಪರೇಟರ್‌ಗಳು ತಮ್ಮದೇ ಆದ ಟಿಕೆಟ್‌ ಬುಕ್ಕಿಂಗ್‌ ವ್ಯವಸ್ಥೆ ಹೊಂದಿವೆ. ಉದಾಹರಣೆಗೆ ಎಸ್‌ಆರ್‌ಎಸ್‌ ಟ್ರಾವೆಲ್ಸ್‌ ಎಸ್‌ಆರ್‌ಎಸ್‌ ಬುಕ್ಕಿಂಗ್‌ ವ್ಯವಸ್ಥೆ ಹೊಂದಿದೆ. ವಿಜಯಾನಂದ ಟ್ರಾವೆಲ್ಸ್‌ ಕೂಡ ತನ್ನದೇ ಟಿಕೆಟ್‌ ಬುಕ್ಕಿಂಗ್‌ ವ್ಯವಸ್ಥೆ ಹೊಂದಿವೆ. ಸುಗಮ ಬಸ್‌ನಲ್ಲಿ ಹೋಗಬೇಕೆನ್ನುವವರು ಸುಗಮ ಟೂರಿಸ್ಟ್‌ ಮೂಲಕ ಬುಕ್ಕಿಂಗ್‌ ಮಾಡಿಕೊಳ್ಳಬಹುದು. ಸಾಮಾನ್ಯವಾಗಿ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುವರು ಯಾವುದಾದರೂ ಒಂದು ಖಾಸಗಿ ಬಸ್‌ನಲ್ಲಿ ಹೆಚ್ಚಾಗಿ ಪ್ರಯಾಣಿಸುತ್ತಾರೆ. ಅಂತಹ ಪ್ರಯಾಣಿಕರು ಆಯಾ ಬಸ್‌ ಕಂಪನಿಗಳ ಆ್ಯಪ್‌ ಇಟ್ಟುಕೊಳ್ಳಬಹುದು. ಕೆಲವೊಮ್ಮೆ ರೆಡ್‌ಬಸ್‌ನಂತಹ ಆ್ಯಪ್‌ಗಳಲ್ಲಿ ಡಿಸ್ಕೌಂಟ್‌ಗಳು, ಆಫರ್‌ಗಳು ಇರುತ್ತವೆ. ನೇರವಾಗಿ ಟಿಕೆಟ್‌ ಬುಕ್ಕಿಂಗ್‌ ಮಾಡುವ ಮುನ್ನ ಬೇರೆ ಆ್ಯಪ್‌ಗಳಲ್ಲಿ ಒಮ್ಮೆ ದರ ಮತ್ತು ಆಫರ್‌ ಪರೀಕ್ಷಿಸಿಕೊಳ್ಳಿ. ದೀಪಾವಳಿ ಹಬ್ಬದ ಸಮಯದಲ್ಲಿ ಬಸ್‌ ಟಿಕೆಟ್‌ ದೊರಕುವುದೇ ಕಷ್ಟ ಎನ್ನುವಂತಹ ಪರಿಸ್ಥಿತಿಯಲ್ಲಿರುವವರಿಗೆ ಹ್ಯಾಪಿ ಜರ್ನಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ