ರೈಲು ಟಿಕೆಟ್‌ ಕೋಡ್‌ಗಳು ಮತ್ತು ಅರ್ಥ: CNF ಅಂದ್ರೆ ಖಚಿತ, GNWL ಕಂಡ್ರೆ ಕಾಯಿರಿ, RAC ಸಿಗ್ತಾ? ಮಲಗಿ ನಿದ್ರಿಸಿರೋರನ್ನ ನೋಡ್ತಾ ತೂಕಡಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ರೈಲು ಟಿಕೆಟ್‌ ಕೋಡ್‌ಗಳು ಮತ್ತು ಅರ್ಥ: Cnf ಅಂದ್ರೆ ಖಚಿತ, Gnwl ಕಂಡ್ರೆ ಕಾಯಿರಿ, Rac ಸಿಗ್ತಾ? ಮಲಗಿ ನಿದ್ರಿಸಿರೋರನ್ನ ನೋಡ್ತಾ ತೂಕಡಿಸಿ

ರೈಲು ಟಿಕೆಟ್‌ ಕೋಡ್‌ಗಳು ಮತ್ತು ಅರ್ಥ: CNF ಅಂದ್ರೆ ಖಚಿತ, GNWL ಕಂಡ್ರೆ ಕಾಯಿರಿ, RAC ಸಿಗ್ತಾ? ಮಲಗಿ ನಿದ್ರಿಸಿರೋರನ್ನ ನೋಡ್ತಾ ತೂಕಡಿಸಿ

Railway ticket codes and meaning: ರೈಲು ಟಿಕೆಟ್‌ನಲ್ಲಿರುವ ಸಿಎನ್‌ಎಫ್‌, ಆರ್‌ಎಸಿ, ಜಿಎನ್‌ಡಬ್ಲ್ಯುಎಲ್‌, ಪಿಕ್ಯುಡಬ್ಲ್ಯುಎಲ್‌ ಸೇರಿದಂತೆ ಹಲವು ಕೋಡ್‌ಗಳ ಅರ್ಥ ತಿಳಿದುಕೊಳ್ಳಿ. ಆರ್‌ಎಸಿ ಸಿಕ್ಕರೆ ಟಿಕೆಟ್‌ ಖಚಿತಗೊಂಡಿದೆ, ಆದರೆ, ನಿಮಗೆ ನಿದ್ದೆ ಮಾಡಲು ಫುಲ್‌ ಸೀಟ್‌ ಇಲ್ಲ, ಕುಳಿತುಕೊಂಡು ಪ್ರಯಾಣಿಸಬಹುದು ಎಂದರ್ಥವಾಗಿದೆ.

ರೈಲು ಟಿಕೆಟ್‌ ಕೋಡ್‌ಗಳು ಮತ್ತು ಅರ್ಥ (Gupreet Singh/Hindustan Times)
ರೈಲು ಟಿಕೆಟ್‌ ಕೋಡ್‌ಗಳು ಮತ್ತು ಅರ್ಥ (Gupreet Singh/Hindustan Times) (HT_PRINT)

Railway ticket codes and meaning: ಭಾರತೀಯ ರೈಲು ಟಿಕೆಟ್‌ಗಳನ್ನು ಬುಕ್‌ ಮಾಡುವ ಸಂದರ್ಭದಲ್ಲಿ ವಿವಿಧ ಕೋಡ್‌ಗಳು ಕೆಲವರಿಗೆ ಗೊಂದಲ ಹುಟ್ಟಿಸಬಹುದು. ಮೊದಲ ಬಾರಿ ಬುಕ್‌ ಮಾಡುವವರಿಗೆ, ರೈಲು ಕೋಡ್‌ಗಳ ಅರ್ಥ ತಿಳಿಯದವರಿಗೆ ಈ ಕೋಡ್‌ಗಳು ಗೊಂದಲ ಹುಟ್ಟಿಸಬಹುದು. ರೈಲು ಟಿಕೆಟ್‌ನಲ್ಲಿ ವಿವಿಧ ಕೋಡ್‌ಗಳು ಇರುತ್ತವೆ. ಆ ಕೋಡ್‌ಗಳ ಆಧಾರದಲ್ಲಿ ನಿಮಗೆ ಟಿಕೆಟ್‌ ಖಚಿತವಾಯ್ತೇ, ವೇಟಿಂಗ್‌ ಲಿಸ್ಟ್‌ನಲ್ಲಿದ್ದೀರ, ಟಿಕೆಟ್‌ ದೊರಕೋದಿಲ್ವ ಇತ್ಯಾದಿ ಮಾಹಿತಿಗಳು ದೊರಕುತ್ತವೆ. ನನ್ನ ಬ್ಯಾಂಕ್‌ ಖಾತೆಯಿಂದ ಹಣ ಕಟ್‌ ಆಗಿದೆ, ಟಿಕೆಟ್‌ ಕನ್‌ಫರ್ಮ್‌ ಎಂದು ರೈಲು ಹತ್ತುವಂತೆ ಇಲ್ಲ. ಬನ್ನಿ ರೈಲಿನ ಜನಪ್ರಿಯ ಕೋಡ್‌ಗಳನ್ನು ಅರ್ಥ ಸಹಿತ ತಿಳಿದುಕೊಳ್ಳೋಣ.

ರೈಲು ಟಿಕೆಟ್‌ ಕೋಡ್‌ಗಳು ಮತ್ತು ಅರ್ಥ

CNF: ಸಿಎನ್‌ಎಫ್‌ ಕಂಡ್ರೆ ಖುಷಿಪಡಿ, ನಿಮಗೆ ಟಿಕೆಟ್‌ ಖಚಿತಗೊಂಡಿದೆ ಎಂದರ್ಥ

RAC: ಆರ್‌ಎಸಿ ಸಿಕ್ಕರೆ ನಿಮಗೆ ಟಿಕೆಟ್‌ ಸಿಗುತ್ತದೆ. ಆದರೆ, ಉದ್ದವಾದ ಸೀಟು ನಿಮಗೆ ನಿದ್ದೆ ಮಾಡಲು ದೊರಕುವುದಿಲ್ಲ. ಕುಳಿತುಕೊಂಡು ಪ್ರಯಾಣಿಸಬೇಕು. ಈ ಟಿಕೆಟ್‌ ನಿಮಗೆ ಬೇಡ ಅಂದರೆ ಕ್ಯಾನ್ಸಲ್‌ ಮಾಡಬಹುದು. ಫುಲ್‌ ಅಮೌಂಟ್‌ ರಿಫಂಡ್‌ ಆಗುತ್ತದೆ.

GNWL: ಜನರಲ್‌ ವೇಟಿಂಗ್‌ ಲಿಸ್ಟ್‌. ಕಾಯುವಿಕೆ ಪಟ್ಟಿ ಇದಾಗಿದೆ. ಈ ಪಟ್ಟಿಯಲ್ಲಿರುವವರಿಗೆ ಟಿಕೆಟ್‌ ದೊರಕುವ ಸಾಧ್ಯತೆ ಇರುತ್ತದೆ. ಆದರೆ, ಖಚಿತವಲ್ಲ.

PQWL: ಪೂಲ್‌ಡ್‌ ಕ್ವೋಟಾ ವೇಟಿಂಗ್‌ ಲಿಸ್ಟ್‌: ತುಂಬಾ ದೂರ ಪ್ರಯಾಣಿಸುವ ರೈಲುಗಳಲ್ಲಿ ಈ ಕಾಯುವಿಕೆ ಪಟ್ಟಿ ಇರುತ್ತದೆ.

RSWL: ರೋಡ್‌ಸೈಡ್‌ ಸ್ಟೇಷನ್‌ ವೇಟಿಂಗ್‌ ಲಿಸ್ಟ್‌. ಮೂಲ ನಿಲ್ದಾಣದಿಂದ ರೋಡ್‌ಸೈಡ್‌ ಸ್ಟೇಷನ್‌ನಲ್ಲಿ ಇಳಿಯುವ ಸ್ಥಳ.

CKWL: ತತ್ಕಾಲ್‌ ಕೋಟಾ ವೇಟಿಂಗ್‌ ಲಿಸ್ಟ್‌. ತತ್ಕಾಲ್‌ ಟಿಕೆಟ್‌ ಬುಕ್ಕಿಂಗ್‌ ಮಾಡಿದಾಗ ಕಾಯುವಿಕೆ ಪಟ್ಟಿ.

RLWL: ರಿಮೋಟ್‌ಲೊಕೆಷನ್‌ ವೇಟಿಂಗ್‌ ಲಿಸ್ಟ್‌. ಆರಂಭ ಮತ್ತು ನಡುವಿನ ನಿಲ್ದಾಣಗಳ ನಡುವಿನ ಸ್ಟೇಷನ್‌ಗಳಲ್ಲಿ ಟಿಕೆಟ್‌ ಪಡೆದವರಿಗೆ ದೊರಕುವ ಕಾಯುವಿಕೆ ಪಟ್ಟಿ.

NOSB: 11 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸೀಟು ಇಲ್ಲದ ಬರ್ತ್‌. ಈ ಮಕ್ಕಳಿಗೆ ಸೀಟು ದೊರಕುವುದಿಲ್ಲ.

ಪಿಎನ್‌ಆರ್‌: ಹತ್ತು ಅಂಕಿಯ ಮಾಹಿತಿ. ಟಿಕೆಟ್‌ ಮಾಹಿತಿ ಪಡೆಯಲು ಈ ಸಂಖ್ಯೆ ಬಳಸಬಹುದು. ಪಿಎನ್‌ಆರ್‌ ಎಂದರೆ ಪ್ಯಾಸೆಂಜರ್‌ ನೇಮ್‌ ರೆಕಾರ್ಡ್‌, ಅಂದ್ರೆ ಪ್ರಯಾಣಿಕರ ಹೆಸರು ದಾಖಲೆ. ರೈಲ್ವೆಯಲ್ಲಿ ಇದು 10 ಅಂಕಿಗಳ ಸಂಖ್ಯೆ. ಬುಕ್ಕಿಂಗ್‌ವಿವರ, ಪ್ರಯಾಣಿಕರ ವಿವರ, ಸೀಟ್‌ ಮಾದರಿ, ರಿಸರ್ವೇಷನ್‌ ಕೋಟಾ, ಟ್ರೇನ್‌ ನಂಬರ್‌, ಪ್ರಯಾಣ ದಿನಾಂಕ, ತಲುಪಬೇಕಾದ ಸ್ಟೇಷನ್‌, ರೈಲು ಹೊರಡುವ ಸ್ಟೇಷನ್‌, ಯಾವ ಸ್ಟೇಷನ್‌ನಿಂದ ನೀವು ಹತ್ತಬೇಕಾದ ವಿವರ, ವಹಿವಾಟು ವಿವರ ಈ ಪಿಎನ್‌ಆರ್‌ನಲ್ಲಿ ಇರುತ್ತದೆ.

ಇನ್ನಷ್ಟು ಕೋಡ್‌ಗಳು

LD: ಲೇಡಿಸ್‌ ಕೋಟಾ

HO: ಪ್ರಮುಖ ಅಧಿಕಾರಿಗಳ ಕೋಟಾ

DF: ರಕ್ಷಣಾ ಪಡೆಯವರ ಕೋಟಾ

PH: ಪಾರ್ಲಿಮೆಂಟ್‌ ಹೌಸ್‌ ಕೋಟಾ

FT: ಫಾರಿನ್‌ ಟೂರಿಸ್ಟ್‌, ವಿದೇಶಿ ಪ್ರವಾಸಿಗರ ಕೋಟಾ

DP: ಡ್ಯೂಟಿ ಪಾಸ್‌ ಕೋಟಾ

SS: ಸೀನಿಯರ್‌ ಸಿಟಿಜನ್ಸ್‌. ಹಿರಿಯ ಮಹಿಳೆಯರು/ಹಿರಿಯ ನಾಗರಿಕರು/ ಒಂಟಿಯಾಗಿ ಪ್ರಯಾಣಿಸುವವರ ಕೋಟಾ

HP: ವಿಶೇಷ ಚೇತನರ ಕೋಟಾ

RE: ಡ್ಯೂಟಿಯಲ್ಲಿರುವ ರೈಲ್ವೆ ಉದ್ಯೋಗಿಗಳ ಕೋಟಾ

Whats_app_banner