PNR status: ರೈಲ್ವೆ ಟಿಕೆಟ್‌ನ ಪಿಎನ್‌ಆರ್‌ ಸ್ಟೇಟಸ್‌ ತಿಳಿಯಲು ಅತ್ಯುತ್ತಮ, ಅಧಿಕೃತ ಆ್ಯಪ್‌ ಯಾವುದು? ಈ ವಿಧಾನಗಳು ನಿಮಗೆ ತಿಳಿದಿರಲಿ
ಕನ್ನಡ ಸುದ್ದಿ  /  ಜೀವನಶೈಲಿ  /  Pnr Status: ರೈಲ್ವೆ ಟಿಕೆಟ್‌ನ ಪಿಎನ್‌ಆರ್‌ ಸ್ಟೇಟಸ್‌ ತಿಳಿಯಲು ಅತ್ಯುತ್ತಮ, ಅಧಿಕೃತ ಆ್ಯಪ್‌ ಯಾವುದು? ಈ ವಿಧಾನಗಳು ನಿಮಗೆ ತಿಳಿದಿರಲಿ

PNR status: ರೈಲ್ವೆ ಟಿಕೆಟ್‌ನ ಪಿಎನ್‌ಆರ್‌ ಸ್ಟೇಟಸ್‌ ತಿಳಿಯಲು ಅತ್ಯುತ್ತಮ, ಅಧಿಕೃತ ಆ್ಯಪ್‌ ಯಾವುದು? ಈ ವಿಧಾನಗಳು ನಿಮಗೆ ತಿಳಿದಿರಲಿ

PNR status: ಭಾರತೀಯ ರೈಲ್ವೆ ಟಿಕೆಟ್‌ ಬುಕ್‌ ಮಾಡಿದ ಬಳಿಕ ಪಿಎನ್‌ಆರ್‌ ಸ್ಟೇಟಸ್‌ ತಿಳಿಯಲು ಬಯಸುವವರು ವಿವಿಧ ಆ್ಯಪ್‌ಗಳ ಮೊರೆ ಹೋಗುತ್ತಾರೆ. ಭಾರತೀಯ ರೈಲ್ವೆಯ ವೆಬ್‌ಸೈಟ್‌, ಐಆರ್‌ಸಿಟಿಸಿ ವೆಬ್‌ಸೈಟ್‌, ಟ್ರೈನ್‌ಮ್ಯಾನ್‌, ರೈಲ್‌ಯಾತ್ರಿ, ಕನ್‌ಫರ್ಮ್‌ಟಿಕೆಟ್‌, ಇಕ್ಸಿಗೊಟ್ರೈನ್‌ ಇತ್ಯಾದಿಗಳನ್ನು ಸಾಕಷ್ಟು ಜನರು ಬಳಸುತ್ತಾರೆ.

ಚೆನ್ನೈನ ವೆಲಚೆರ್ರಿ ರೈಲು ಸ್ಟೇಷನ್‌ನಲ್ಲಿ ಕಂಡ ಜನದಟ್ಟಣೆ, ಸಾಂದರ್ಭಿಕ ಚಿತ್ರ.
ಚೆನ್ನೈನ ವೆಲಚೆರ್ರಿ ರೈಲು ಸ್ಟೇಷನ್‌ನಲ್ಲಿ ಕಂಡ ಜನದಟ್ಟಣೆ, ಸಾಂದರ್ಭಿಕ ಚಿತ್ರ. (PTI)

PNR status: ಭಾರತೀಯ ರೈಲ್ವೆ ಟಿಕೆಟ್‌ ಬುಕ್‌ ಮಾಡಿದ ಬಳಿಕ ಪಿಎನ್‌ಆರ್‌ ಸ್ಟೇಟಸ್‌ ತಿಳಿಯಲು ಬಯಸುವವರು ವಿವಿಧ ಆ್ಯಪ್‌ಗಳ ಮೊರೆ ಹೋಗುತ್ತಾರೆ. ಭಾರತೀಯ ರೈಲ್ವೆಯ ವೆಬ್‌ಸೈಟ್‌, ಐಆರ್‌ಸಿಟಿಸಿ ವೆಬ್‌ಸೈಟ್‌, ಟ್ರೈನ್‌ಮ್ಯಾನ್‌, ರೈಲ್‌ಯಾತ್ರಿ, ಕನ್‌ಫರ್ಮ್‌ಟಿಕೆಟ್‌, ಇಕ್ಸಿಗೊಟ್ರೈನ್‌ ಇತ್ಯಾದಿಗಳನ್ನು ಸಾಕಷ್ಟು ಜನರು ಬಳಸುತ್ತಾರೆ. ಈ ಲೇಖನದಲ್ಲಿ ಪಿಎನ್‌ಆರ್‌ ಸ್ಟೇಟಸ್‌ ತಿಳಿಯಲು ಯಾವುದು ಅಧಿಕೃತ ಆ್ಯಪ್‌, ಯಾವುದು ಜನಪ್ರಿಯ ಆ್ಯಪ್‌, ಯಾವೆಲ್ಲ ಆ್ಯಪ್‌ಗಳನ್ನು ಬಳಸಬಹುದು ಎನ್ನುವುದನ್ನು ನೋಡೋಣ.

ಪಿಎನ್‌ಆರ್‌ ಎಂದರೇನು?

ರೈಲು, ಬಸ್‌ ಟಿಕೆಟ್‌ಗಳಲ್ಲಿ ಪಿಎನ್‌ಆರ್‌ ಪದವನ್ನು ನೋಡಿರಬಹುದು. ಪಿಎನ್‌ಆರ್‌ ವಿಸ್ತೃತ ರೂಪ ಬಹುತೇಕರಿಗೆ ತಿಳಿಯದೆ ಇರಬಹುದು. ಪಿಎನ್‌ಆರ್‌ ಎಂದರೆ ಪ್ಯಾಸೆಂಜರ್‌ ನೇಮ್‌ ರೆಕಾರ್ಡ್‌, ಅಂದ್ರೆ ಪ್ರಯಾಣಿಕರ ಹೆಸರು ದಾಖಲೆ. ರೈಲ್ವೆಯಲ್ಲಿ ಇದು 10 ಅಂಕಿಗಳ ಸಂಖ್ಯೆ. ಬುಕ್ಕಿಂಗ್‌ವಿವರ, ಪ್ರಯಾಣಿಕರ ವಿವರ, ಸೀಟ್‌ ಮಾದರಿ, ರಿಸರ್ವೇಷನ್‌ ಕೋಟಾ, ಟ್ರೇನ್‌ ನಂಬರ್‌, ಪ್ರಯಾಣ ದಿನಾಂಕ, ತಲುಪಬೇಕಾದ ಸ್ಟೇಷನ್‌, ರೈಲು ಹೊರಡುವ ಸ್ಟೇಷನ್‌, ಯಾವ ಸ್ಟೇಷನ್‌ನಿಂದ ನೀವು ಹತ್ತಬೇಕಾದ ವಿವರ, ವಹಿವಾಟು ವಿವರ ಈ ಪಿಎನ್‌ಆರ್‌ನಲ್ಲಿ ಇರುತ್ತದೆ.

ಪಿಎನ್‌ಆರ್‌ ಸ್ಟೇಟಸ್‌ ತಿಳಿಯಲು ಅಧಿಕೃತ ಆ್ಯಪ್‌ ಯಾವುದು?

IRCTC Rail Connect ಎನ್ನುವುದು ರೈಲು ಟಿಕೆಟ್‌ ಬುಕ್ಕಿಂಗ್‌ ಮಾಡಲು, ಕ್ಯಾನ್ಸಲ್‌ ಮಾಡಲು, ಪಿಎನ್‌ಆರ್‌ ಸ್ಥಿತಿ ವಿವರ ಪಡೆಯಲು ಇರುವ ಅಧಿಕೃತ ಆ್ಯಪ್‌ ಆಗಿದೆ. ನಿಮ್ಮ ಮೊಬೈಲ್‌ನ ಗೂಗಲ್‌ ಪ್ಲೇಸ್ಟೋರ್‌ ಅಥವಾ ಆಪಲ್‌ ಸ್ಟೋರ್‌ಗೆ ಹೋಗಿ ಐಆರ್‌ಸಿಟಿಸಿ ರೈಲ್‌ ಸ್ಟೇಟಸ್‌ ಕನೆಕ್ಟ್‌ ಆ್ಯಪ್‌ ಡೌನ್‌ಲೋಡ್‌ ಮಾಡಬಹುದು. ಈ ಆ್ಯಪ್‌ನ ಟ್ಯಾಬ್‌ ತೆರೆದಾಗ ಪಿಎನ್‌ಆರ್‌ ಸ್ಟೇಟಸ್‌ ಆಯ್ಕೆ ದೊರಕುತ್ತದೆ.

ಭಾರತೀಯ ರೈಲ್ವೆ ಟಿಕೆಟ್‌ ವಿವರವನ್ನು ಮೊಬೈಲ್‌ ಬ್ರೌಸರ್‌ ಅಥವಾ ಕಂಪ್ಯೂಟರ್‌ನಲ್ಲಿ ಐಆರ್‌ಸಿಟಿಸಿ ವೆಬ್‌ಸೈಟ್‌ ಮೂಲಕ ಪಡೆಯಬಹುದು. ಈ ವೆಬ್‌ಸೈಟ್‌ನ ಟ್ಯಾಬ್‌‌ ಕ್ಲಿಕ್‌ ಮಾಡಿದಾಗ ಪಿಎನ್‌ಆರ್‌ ಎನ್‌ಕ್ವಯರಿ ಆಯ್ಕೆ ದೊರಕುತ್ತದೆ.

ಭಾರತೀಯ ರೈಲ್ವೆ ವೆಬ್‌ಸೈಟ್‌ ನಲ್ಲೂ ಪಿಎನ್‌ಆರ್‌ ಎನ್ವಕಯರಿ ಆಯ್ಕೆ ದೊರಕುತ್ತದೆ. ಇದು ಕೂಡ ಟ್ಯಾಬ್‌ನಲ್ಲಿ ಎನ್ವಕಯರಿ ಆಯ್ಕೆಯಲ್ಲಿದೆ.

ಯುಟಿಎಸ್‌

 ಸೆಂಟರ್‌ ಫಾರ್‌ ರೈಲ್ವೆ ಇನ್‌ಫಾರ್ಮೆಷನ್‌ ಸಿಸ್ಟಮ್‌ನ ಯುಟಿಎಸ್‌ ಕೂಡ ರೈಲು ಟಿಕೆಟ್‌ ಪಡೆಯಲು ಇರುವ ಅಧಿಕೃತ ಮೊಬೈಲ್‌ ಅಪ್ಲಿಕೇಷನ್‌ ಆಗಿದೆ.  ಇದರ ಬುಕ್ಕಿಂಗ್‌ ಹಿಸ್ಟರಿ ವಿಭಾಗದ ಮೂಲಕ ಪಿಎನ್‌ಆರ್‌ ಸ್ಟೇಟಸ್‌ ಪಡೆಯಬಹುದು.

ಪಿಎನ್‌ಆರ್‌ ಸ್ಟೇಟಸ್‌ ತಿಳಿಯಲು ಜನಪ್ರಿಯ ಆ್ಯಪ್‌ ಯಾವುದು?

ಕೆಲವರು ಐಆರ್‌ಸಿಟಿಸಿ ವೆಬ್‌ಸೈಟ್‌, ಅಪ್ಲಿಕೇಷನ್‌ ಹೊರತುಪಡಿಸಿ ಮೂರನೇ ಪಾರ್ಟಿಯ ಆ್ಯಪ್‌ಗಳ ಮುಖಾಂತರ ರೈಲ್ವೆ ಟಿಕೆಟ್‌ನ ಪಿಎನ್‌ಆರ್‌ ಸ್ಟೇಟಸ್‌ ಪರಿಶೀಲಿಸುತ್ತಾರೆ. ಈ ರೀತಿ ರೈಲ್ವೆ ಟಿಕೆಟ್‌ ಪಿಎನ್‌ಆರ್‌ ಸ್ಟೇಟಸ್‌ ತಿಳಿಯಲು ಹಲವು ಅಪ್ಲಿಕೇಷನ್‌ಗಳು ನೆರವಾಗುತ್ತವೆ. ಇಂತಹ ಆಪ್‌ಗಳಲ್ಲಿ ಕೆಲವು ವಿಶೇಷ ಫೀಚರ್‌ಗಳು ಇರುವುದರಿಂದ ಬಳಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಇವುಗಳನ್ನು ಬಳಸುತ್ತಾರೆ.

ಟ್ರೈನ್‌ಮ್ಯಾನ್‌ (Trainman) ಮೊಬೈಲ್‌ ಆ್ಯಪ್‌ ಜನಪ್ರಿಯವಾಗಿದೆ. ರೈಲ್ವೆ ಟಿಕೆಟ್‌ನ ಪಿಎನ್‌ಆರ್‌ ಸ್ಟೇಟಸ್‌ ತಿಳಿಯಲು ಇದು ಅತ್ಯುತ್ತಮ ಆಪ್‌ ಎಂದು ಸಾಕಷ್ಟು ಬಳಕೆದಾರರು ಹೇಳುತ್ತಾರೆ. ಇದರಲ್ಲಿ ರೈಲಿನ ಲೈವ್‌ ರನ್ನಿಂಗ್‌ ಸ್ಟೇಟಸ್‌, ಪಿಎನ್‌ಆರ್‌ ಪ್ರಿಡಿಕ್ಷನ್‌, ಟ್ರೈನ್‌ಮಾಹಿತಿ ಎಲ್ಲವೂ ದೊರಕುತ್ತದೆ. ಇದರಲ್ಲಿ ಪಿಎನ್‌ಆರ್‌ ಪ್ರಿಡಿಕ್ಷನ್‌ ಎಂಬ ಆಯ್ಕೆಯೂ ಇದೆ. ಇದರ ಮೂಲಕ ಬಳಕೆದಾರರು ತಮಗೆ ಟಿಕೆಟ್‌ ದೊರಕುವ ಸಾಧ್ಯತೆ ಇದೆಯೇ ಇಲ್ಲವೇ ಎಂದು ಅಂದಾಜಿಸಬಹುದು.

ರೈಲ್‌ ಯಾತ್ರಿ(RailYatri): ಇದು ಕೂಡ ಇನ್ನೊಂದು ಜನಪ್ರಿಯ ರೈಲು ಟಿಕೆಟ್‌ ಆ್ಯಪ್‌ ಆಗಿದೆ. ಇದರಲ್ಲಿ ಪಿಎನ್‌ಆರ್‌ ಸ್ಟೇಟಸ್‌ ಸುಲಭವಾಗಿ ತಿಳಿದುಕೊಳ್ಳಬಹುದು. ಟ್ರೈನ್‌ ಟೈಮ್‌ಟೇಬಲ್‌, ಕೋಚ್‌ ಲೇಔಟ್‌, ಲೈವ್‌ ಟ್ರೇನ್‌ ಸ್ಟೇಟಸ್‌ ಮುಂತಾದ ಫೀಚರ್ಸ್‌ ದೊರಕುತ್ತದೆ.

ಕನ್‌ಫರ್ಮ್‌ಟಿಕೆಟ್‌ (ConfirmTkt): ವೈಯಕ್ತಿಕವಾಗಿ ನಾನು ಹೆಚ್ಚಾಗಿ ಬಳಸುವ ಆ್ಯಪ್‌ ಇದಾಗಿದೆ. ಇದರಲ್ಲಿ ರೈಲು ಟಿಕೆಟ್‌ ಬುಕ್ಕಿಂಗ್‌ ಮಾತ್ರವಲ್ಲದೆ ಟ್ರೈನ್‌ ಸ್ಟೇಟಸ್‌, ಲೈವ್‌ ಸ್ಟೇಟಸ್‌, ಪಿಎನ್‌ಆರ್‌ ಸ್ಟೇಟಸ್‌ ಚೆಕ್ಕಿಂಗ್‌ ಇತ್ಯಾದಿ ಹಲವು ಫೀಚರ್‌ಗಳು ಇವೆ.

ಇಕ್ಸಿಗೊ ಟ್ರೇನ್ಸ್‌ (Ixigo Trains): ಇದು ಇನ್ನೊಂದು ಜನಪ್ರಿಯ ಮೊಬೈಲ್‌ ಟಿಕೆಟ್‌ ಬುಕ್ಕಿಂಗ್‌ ಆ್ಯಪ್‌ ಆಗಿದೆ. ಇದರಲ್ಲಿಯೂ ಪಿಎನ್‌ಆರ್‌ ಸ್ಟೇಟಸ್‌ ಪರಿಶೀಲನೆ ಸೇರಿದಂತೆ ಹಲವು ಸೇವೆಗಳನ್ನು ಪಡೆಯಬಹುದು.

Whats_app_banner