logo
ಕನ್ನಡ ಸುದ್ದಿ  /  ಕರ್ನಾಟಕ  /  ಬಿಪಿಎಲ್ ಕುಟುಂಬಗಳ ಆರೋಗ್ಯ ವಿಮೆಗಾಗಿ ಇಂಧನ ಮೇಲೆ ವ್ಯಾಟ್ ವಿಧಿಸಲು ಕರ್ನಾಟಕ ಸರ್ಕಾರ ಪ್ಲಾನ್

ಬಿಪಿಎಲ್ ಕುಟುಂಬಗಳ ಆರೋಗ್ಯ ವಿಮೆಗಾಗಿ ಇಂಧನ ಮೇಲೆ ವ್ಯಾಟ್ ವಿಧಿಸಲು ಕರ್ನಾಟಕ ಸರ್ಕಾರ ಪ್ಲಾನ್

Raghavendra M Y HT Kannada

Dec 10, 2023 04:05 PM IST

google News

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್

  • ರಾಜ್ಯ ಸರ್ಕಾರ ಬಿಪಿಎಲ್ ಕುಟುಂಬಗಳಿಗೆ ಗುಡ್ ನ್ಯೂಸ್ ನೀಡಿದೆ. ಆದರೆ ಇದು ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲಿದೆ. ಬಡವರಿಗೆ ಆರೋಗ್ಯ ವಿಮಾ ಯೋಜನೆಗಾಗಿ ಇಂಧನ ಮೇಲೆ 50 ಪೈಸೆ ಸೆಸ್ ವಿಧಿಸಲು ಮುಂದಾಗಿದೆ.

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ಕಾಂಗ್ರೆಸ್ ಸರ್ಕಾರ ತಮ್ಮ ಗ್ಯಾರಂಟಿಗಳ ಜಾರಿಗಾಗಿ ಆರ್ಥಿಕ ಸವಾಲುಗಳನ್ನು ಎದುರಿಸಿದೆ ಎಂಬ ವಿಪಕ್ಷದವರ ಆರೋಪಗಳ ಬೆನ್ನಲ್ಲೇ ಬಿಪಿಎಲ್ ಕುಟುಂಬಗಳ ಆರೋಗ್ಯ ವಿಮೆಗಾಗಿ ಹಣವನ್ನು ಹೊಂದಿಸಲು ಸರ್ಕಾರ ಹೊಸ ಮಾರ್ಗವನ್ನು ಕಂಡುಕೊಂಡಿದೆ. ಇದು ವಾಹನ ಸವಾರರ ಅಸಮಾಧಾನಕ್ಕೆ ಕಾರಣವಾಗಿದೆ.

ಕರ್ನಾಟಕದಲ್ಲಿರುವ 1.8 ಕೋಟಿ ಬಡತನ ರೇಖೆಗಿಂತ ಕೆಳಗಿನರುವ-ಬಿಪಿಎಲ್ ಕಾರ್ಡುದಾರರಿಗೆ ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೊಳಿಸಲು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಮಾರಾಟವಾಗುವ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 50 ಪೈಸೆಯಿಂದ 1 ರೂಪಾಯಿವರೆಗೆ ಸೆಸ್ ವಿಧಿಸಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

ಯೋಜನೆ ಸಾಕಷ್ಟು ಹಣದ ಅವಶ್ಯಕತೆ ಇದೆ. ಹೀಗಾಗಿ ಹಣದ ಕ್ರೂಢೀಕರಣಕ್ಕಾಗಿ ಇಂಧನ ಮೇಲೆ ಸೆಸ್ ವಿಧಿಸಲು ಪ್ಲಾನ್ ಮಾಡುತ್ತಿದೆ. ಸಾರಿಗೆ ಕಾರ್ಮಿಕರಿಗೆ ಈ ಸಾಮಾಜಿಕ ಭದ್ರತಾ ಯೋಜನೆಯನ್ನು ಇತ್ತೀಚೆಗೆ ಆರಂಭಿಸಲಾಗಿತ್ತು. ಇದೀಗ ಕಾರ್ಮಿಕ ಇಲಾಖೆಯು ಆರೋಗ್ಯ ವಿಮಾ ಯೋಜನೆಯನ್ನು 1.8 ಕೋಟಿ ಬಿಪಿಎಲ್ ಕುಟುಂಬಗಳಿಗೆ ವಿಸ್ತರಿಸಲು ಸಜ್ಜಾಗಿದೆ.

ವಿಮಾ ಯೋಜನೆಯಲ್ಲಿ ಒಬ್ಬ ವ್ಯಕ್ತಿಗೆ ಎಷ್ಟು ವಿಮಾ ಮೊತ್ತ ಸಿಗುತ್ತೆ?

ಆರೋಗ್ಯ ವಿಮಾ ಯೋಜನೆಯಲ್ಲಿ ಪ್ರತಿ ವ್ಯಕ್ತಿಗೆ ಆರೋಗ್ಯ ಮತ್ತು ಅಪಘಾತದ ವಿಮೆಯಲ್ಲಿ ಅಂದಾಜು 25 ಲಕ್ಷ ರೂಪಾಯಿ ಸಿಗಲಿದೆ. ಸರ್ಕಾರ ಈ ಮೊತ್ತವನ್ನು ಸೆಸ್ ಮೂಲಕ ಜನರಿಂದಲೇ ವಸೂಲಿ ಮಾಡಲಿದೆ.

ಪ್ರಸ್ತುತ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ. ಇಂಧನದ ಮೇಲೆ ಕೇವಲ 50 ಪೈಸೆಯಿಂದ 1 ರೂಪಾಯಿ ಹೆಚ್ಚಳವಾದರೆ ಇದು ಗ್ರಾಹಕರ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ವಿಮಾನ ಪಾಲಿಸಿದಾರರಿಗೆ ಅಪಘಾತ ಮತ್ತು ಆರೋಗ್ಯ ರಕ್ಷಣೆಯಲ್ಲಿ 25 ಲಕ್ಷ ರೂಪಾಯಿ ಸಿಗಲಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ತಿಳಿಸಿದ್ದಾರೆ.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಥವಾ ಸಾರಿಗೆ ಕಾರ್ಮಿಕರಿಗೆ ಹೊಸದಾಗಿ ರಚನೆಯಾದ ಸಾರಿಗೆ ಮಂಡಳಿಯಂತಹ ಅಸ್ತಿತ್ವದಲ್ಲಿರುವ ಮಂಗಳಿಗಳ ವ್ಯಾಪ್ತಿಗೆ ಒಳಪಡದ ಅಸಂಘಟಿತ ವಲಯಗಳ ಮೇಲೆ ಆರಂಭದಲ್ಲಿ ಹೆಚ್ಚಿನ ಗಮನ ಹರಿಸಲಾಗುತ್ತದೆ.

ಅಸಂಘಟಿತ ವಲಯದ ಕಾರ್ಮಿಕರಿಗೆ ಈ ಯೋಜನೆಯಲ್ಲಿ ಮೊದಲ ಆದ್ಯತೆ ಎಂದು ಹೇಳಿದ್ದಾರೆ. ಸಾಮಾಜಿಕ ಭದ್ರತೆಯ ತುರ್ತು ಅಗತ್ಯವಿರುವ 43 ಅಸಂಘಟಿತ ವಲಯಗಳನ್ನು ಈಗಾಗಲೇ ನಾವು ಗುರುತ್ತಿಸಿದ್ದೇವೆ. ಯೋಜನೆಗೆ ಬೇಕಿರುವ ಹಣವನ್ನು ಸಂಗ್ರಹಿಸುವ ಮತ್ತು ಒದಗಿಸಲು ಸಾಧ್ಯವಾಗಿರುವ ಎಲ್ಲಾ ಮಾರ್ಗಗಗಳನ್ನೂ ಗುರಿಸಿದ್ದೇವೆ ಎಂದು ಸಚಿವ ಲಾಡ್ ಮಾಹಿತಿ ನೀಡಿದ್ದಾರೆ.

ಮಧ್ಯಮ ವರ್ಗರ್ಕೆ ಯೋಜನೆ ವಿಸ್ತರಿಸುವ ಅವಕಾಶ ಇದಿಯಾ?

ಸದ್ಯ ಕಾರ್ಮಿಕ ಇಲಾಖೆ ಈ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದ್ದು, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರಕ್ಕೆ ಸಲ್ಲಿಸುವ ಪ್ಲಾನ್ ಮಾಡಿಕೊಳ್ಳಲಾಗುತ್ತಿದೆ. ಮಧ್ಯಮ ವರ್ಗಕ್ಕೂ ಈ ಯೋಜನೆಯನ್ನು ವಿಸ್ತರಿಸುವುದನ್ನ ಸರ್ಕಾರ ಪರಿಗಣಿಸಿದರೂ ಈ ಆಯ್ಕೆಯ ಬಗ್ಗೆಯೂ ಸರ್ಕಾರ ಚಿಂತಿಸಲಿ ಎಂದಿದ್ದಾರೆ.

ಅಂಕಿ ಅಂಶಗಳ ಪ್ರಕಾರ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಪ್ರಸ್ತಾವಿತ ಸೆಸ್ ಹೆಚ್ಚಿಸಿದರೆ ಆರೋಗ್ಯ ಯೋಜನೆಯ ಅನುಷ್ಠಾನಕ್ಕೆ ಅನುಕೂಲವಾಗುತ್ತದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಪ್ರತಿ ವರ್ಷ 1,200 ರಿಂದ 1,500 ಕೋಟಿ ರೂಪಾಯಿಗಳನ್ನು ಸಂಗ್ರಹಿಸುವ ಗುರಿ ಇದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ