logo
ಕನ್ನಡ ಸುದ್ದಿ  /  ಕರ್ನಾಟಕ  /  ಮುಡಾ ಪ್ರಕರಣ; ಪ್ರತಿವಾದಿಗಳಿಗೆ ನೋಟಿಸ್‌ ಜಾರಿ, ಜನವರಿ 25ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಮುಡಾ ಪ್ರಕರಣ; ಪ್ರತಿವಾದಿಗಳಿಗೆ ನೋಟಿಸ್‌ ಜಾರಿ, ಜನವರಿ 25ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

Prasanna Kumar P N HT Kannada

Dec 05, 2024 02:07 PM IST

google News

ಮುಡಾ ಪ್ರಕರಣ; ಪ್ರತಿವಾದಿಗಳಿಗೆ ನೋಟಿಸ್‌ ಜಾರಿ, ಜನವರಿ 25ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

    • MUDA Case: ಮುಡಾ ಕೇಸ್​​ಗೆ ರಾಜ್ಯಪಾಲರ ಅನುಮತಿ ಎತ್ತಿ ಹಿಡಿದಿದ್ದ ಏಕಾಂಗಿ ನ್ಯಾಯಾಧೀಶರ ಆದೇಶವನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ಸಲ್ಲಿಸಿದ ಮೇಲ್ಮನವಿಯಲ್ಲಿ ಹೈಕೋರ್ಟ್ ಗುರುವಾರ (ಡಿಸೆಂಬರ್ 5) ರಾಜ್ಯ ಸರ್ಕಾರ ಮತ್ತು ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಮುಡಾ ಪ್ರಕರಣ; ಪ್ರತಿವಾದಿಗಳಿಗೆ ನೋಟಿಸ್‌ ಜಾರಿ, ಜನವರಿ 25ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌
ಮುಡಾ ಪ್ರಕರಣ; ಪ್ರತಿವಾದಿಗಳಿಗೆ ನೋಟಿಸ್‌ ಜಾರಿ, ಜನವರಿ 25ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾ (ಮುಡಾ) ನಿವೇಶನ ಹಂಚಿಕೆ ಪ್ರಕರಣದ ಮೊದಲ ಆರೋಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರಕರಣದ ನಾಲ್ಕನೇ ಆರೋಪಿ ದೇವರಾಜು ಅವರು ಏಕಸದಸ್ಯ ಪೀಠದ ಆದೇಶ ರದ್ದು ಕೋರಿ ಸಲ್ಲಿಸಿರುವ ಅರ್ಜಿ ಪ್ರಕರಣದಲ್ಲಿ ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಪ್ರಕರಣವನ್ನು 2025ರ ಜನವರಿ 25ಕ್ಕೆ ಮುಂದೂಡಿದೆ.

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್​​ಗೆ ನೀಡಿದ್ದ ಅನುಮತಿಯನ್ನು ಎತ್ತಿ ಹಿಡಿದಿದ್ದ ಏಕಸದಸ್ಯ ಪೀಠದ ಆದೇಶ ರದ್ದು ಕೋರಿ ಸಿಎಂ ಸಿದ್ದರಾಮಯ್ಯ ಮತ್ತು ದೇವರಾಜು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ಹೈಕೋರ್ಟ್‌ನಲ್ಲಿ ಇಂದು ಆರಂಭವಾಯಿತು.

ವಿಚಾರಣೆ ನಡೆಸಿದ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಎನ್​​ವಿ ಅಂಜಾರಿಯಾ ಮತ್ತು ಕೆವಿ ಅರವಿಂದ್‌ ಅವರ ದ್ವಿಸದಸ್ಯ ಪೀಠ ಪ್ರತಿವಾದಿಗಳಿಗೆ ನೋಟಿಸ್ ನೀಡಿ 2025ರ ಜನವರಿ 25ಕ್ಕೆ ವಿಚಾರಣೆಯನ್ನು ಮುಂದೂಡಿತು. ಮುಖ್ಯಮಂತ್ರಿ ಮತ್ತಿತರರ ವಿರುದ್ಧ ದೂರು ದಾಖಲಿಸಿರುವ ಪ್ರತಿವಾದಿಗಳಾದ ರಾಜ್ಯಪಾಲರ ಕಚೇರಿ, ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಅವರಿಗೆ ನೋಟಿಸ್‌ ನೀಡಿ ವಿಚಾರಣೆಯನ್ನು ಮುಂದೂಡಿದರು. ರಾಜ್ಯಪಾಲರು ಪ್ರಾಸಿಕ್ಯೂಷನ್​​ಗೆ ನೀಡಿದ್ದ ಅನುಮತಿಯನ್ನು ಸೆಪ್ಟಂಬರ್‌ 24ರಂದು ಏಕಸದಸ್ಯ ಪೀಠ ಎತ್ತಿ ಹಿಡಿದಿತ್ತು.

ದೇವರಾಜ್ ವಿರುದ್ಧ ಆರೋಪ ಇಲ್ಲ

ಪ್ರಕರಣದ ನಾಲ್ಕನೇ ಆರೋಪಿ ಭೂ ಮಾಲೀಕ ದೇವರಾಜು ಪರ ವಕೀಲ ದುಷ್ಯಂತ್‌ ದವೆ ವಾದ ಮಂಡಿಸಿ 80 ವರ್ಷದ ದೇವರಾಜು ಅವರ ವಿರುದ್ಧ ಯಾವುದೇ ಆರೋಪ ಇಲ್ಲ. ಆದರೂ, ನಮ್ಮ ಕಕ್ಷಿದಾರ ದೇವರಾಜ್​ಗೆ ತೊಂದರೆ ಆಗುತ್ತಿದ್ದು, ಇವರಿಗೆ ಕಾನೂನಿನ ರಕ್ಷಣೆ ನೀಡಬೇಕು ಎಂದರು. ದೇವರಾಜು ವಿರುದ್ಧ ರಾಜ್ಯಪಾಲರ ಆದೇಶದಲ್ಲಿ ಉಲ್ಲೇಖ ಇಲ್ಲ. 2004ರಲ್ಲಿ ಜಮೀನು ಮಾರಾಟ ಮಾಡಿದ್ದಾರೆ. 2024ರಲ್ಲಿ ಇಷ್ಟೆಲ್ಲ ಬೆಳವಣಿಗೆ ಆಗುತ್ತದೆ ಎಂದು ದೇವರಾಜ್‌ ಅವರಿಗೆ ತಿಳಿದಿರಲಿಲ್ಲ. ವಂಚನೆ ಆರೋಪದಡಿ ದೇವರಾಜ್‌ ವಿರುದ್ದ ತನಿಖೆಗೆ ಆದೇಶಿಸಲಾಗಿದೆ. 80ನೇ ಇಳಿ ವಯಸ್ಸಿನಲ್ಲಿ ದೇವರಾಜ್‌ ರಾಜಕೀಯ ದಾಳಿಗೆ ಸಿಲುಕಿದ್ದಾರೆ ಎಂದು ವಾದಿಸಿದರು.

ನ್ಯಾಯಪೀಠದ ಗಮನಕ್ಕೆ ತಂದಿದ್ದೇನು ವಕೀಲರು?

ದೇವರಾಜು ಜಮೀನು ಮಾಲೀಕ ಎನ್ನಲು ಕಂದಾಯ ದಾಖಲೆಗಳಿವೆ. ಜಮೀನು ಡಿನೋಟಿಫಿಕೇಷನ್‌ ಆದಾಗ ಜಮೀನಿನ ಮೌಲ್ಯ ರೂ. 3ಲಕ್ಷ. ಈಗ 56 ಕೋಟಿ ಆಗಿದೆ ಎಂದು ಹೈಕೋರ್ಟ್‌ ಆದೇಶದಲ್ಲಿದೆ. ರೈತರು ಡಿನೋಟಿಫಿಕೇಷನ್‌ ಅರ್ಜಿ ಸಲ್ಲಿಸಿದ್ದ ಅವಧಿಯನ್ನು ಸರ್ಕಾರ ಪರಿಗಣಿಸುತ್ತದೆ. 1998ರಲ್ಲಿ ಏನಾಯಿತು ಎಂಬುದನ್ನು 2024ರಲ್ಲಿ ತೀರ್ಮಾನಿಸಲಾಗುವುದಿಲ್ಲ. ಮುಡಾ ಈ ಭೂಮಿ ವಶಕ್ಕೆ ಪಡೆಯುವಾಗ ದೇವರಾಜ್‌ ಹೆಸರಲ್ಲಿಯೇ ಇತ್ತು. ನಂತರ ದೇವರಾಜ್‌ ಈ ಜಮೀನು ಮಾರಾಟ ಮಾಡಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಸಿಎಂ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಆರಂಭಿಸಿ ಏಕಸದಸ್ಯ ಪೀಠದ ತಪ್ಪುಗಳನ್ನು ವಾದಿಸಬೇಕಿದೆ. 17A ಅನುಮತಿ ನೀಡಿರೋದು ತಪ್ಪಾಗಿದೆ. 17A ಉಲ್ಲಂಘನೆ ಆಗಿರೋದು ಸ್ಪಷ್ಟವಾಗಿದೆ. ಆದ್ರೆ ಇದನ್ನೇ ಏಕಸದಸ್ಯ ಪೀಠ ಎತ್ತಿ ಹಿಡಿದಿದೆ. ರಾಜ್ಯಪಾಲರು ಸಚಿವ ಸಂಪುಟ ಸಲಹೆ ಅನುಸಾರ ನಡೆಯಬೇಕು. ಸಂಪುಟ ಸಲಹೆಯನ್ನು ರಾಜ್ಯಪಾಲರು ಪರಿಗಣಿಸಿಲ್ಲಎಂದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ