ಕರ್ನಾಟಕ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಡಿಸೆಂಬರ್‌ನಲ್ಲಿ ಬಿಡುಗಡೆ ಸಾಧ್ಯತೆ; ಸದ್ಯದ ತಾತ್ಕಾಲಿಕ ವೇಳಾಪಟ್ಟಿ ಹೀಗಿದೆ
Nov 28, 2024 08:45 AM IST
ಕರ್ನಾಟಕ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಡಿಸೆಂಬರ್‌ನಲ್ಲಿ ಬಿಡುಗಡೆ ಸಾಧ್ಯತೆ; ಸದ್ಯದ ತಾತ್ಕಾಲಿಕ ವೇಳಾಪಟ್ಟಿ ವಿವರ (ಸಾಂಕೇತಿಕ ಚಿತ್ರ)
Karnataka SSLC Exam Date: ಕರ್ನಾಟಕ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಡಿಸೆಂಬರ್‌ನಲ್ಲಿ ಬಿಡುಗಡೆ ಸಾಧ್ಯತೆ ಇದೆ. ಇದಕ್ಕೆ ಸಂಬಂಧಿಸಿದ ಮಹತ್ವದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌ಇಎಬಿ) ಸಭೆ ನಿನ್ನೆ (ನವೆಂಬರ್ 27) ನಡೆಯಿತು. ಸದ್ಯದ ತಾತ್ಕಾಲಿಕ ವೇಳಾಪಟ್ಟಿ ಮತ್ತು ಪೂರಕ ವಿವರ ಇಲ್ಲಿದೆ.
Karnataka SSLC Exam Date: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (ಕೆಎಸ್‌ಇಎಬಿ) ಪ್ರಸಕ್ತ ಶೈಕ್ಷಣಿಕ ವರ್ಷ (2024-25)ದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಸಂಬಂಧ ಬೆಂಗಳೂರಿನಲ್ಲಿ ನಿನ್ನೆ (ನವೆಂಬರ್ 27) ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಈ ಕುರಿತು ತೀರ್ಮಾನಿಸಲಾಗಿದ್ದು, 25 ದಿನಗಳ ಅವಧಿಯಲ್ಲಿ ವಾರ್ಷಿಕ ಪರೀಕ್ಷೆ ಮುಗಿಸಲು ಮಂಡಲಿ ನಿರ್ಧರಿಸಿದೆ. 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಈಗಾಗಲೇ ಮಂಡಳಿ ದಿನಾಂಕ ನಿಗದಿಪಡಿಸಿತ್ತು. ಇದರಂತೆ, 2025ರ ಮಾರ್ಚ್ 24 ರಿಂದ ಏಪ್ರಿಲ್ 17ರ ತನಕ ಪರೀಕ್ಷೆ ನಡೆಯಲಿದೆ ಎಂದು ತಾತ್ಕಾಲಿಕ ವೇಳಾಪಟ್ಟಿಯಲ್ಲಿ ಕೆಎಸ್‌ಇಎಬಿ ತಿಳಿಸಿತ್ತು.
ಮೊದಲ ಭಾಷೆ ಎಂದರೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ (ಎನ್‌ಸಿಆರ್‌ಟಿ), ಸಂಸ್ಕೃತ ಭಾಷೆಗಳು. ದ್ವಿತೀಯ ಭಾಷೆ ಎಂದರೆ ಇಂಗ್ಲಿಷ್, ಕನ್ನಡ ಭಾಷೆಗಳು. ತೃತೀಯ ಭಾಷೆ ಎಂದರೆ ಹಿಂದಿ, ಕನ್ನಡ, ಇಂಗ್ಲಿಷ್, ಪರ್ಷಿಯನ್, ಅರೇಬಿಕ್, ತುಳು, ಉರ್ದು, ಸಂಸ್ಕೃತ, ಕೊಂಕಣಿ, ಎನ್‌ಎಸ್‌ಕ್ಯೂಎಫ್ ವಿಷಯಗಳ ಪರೀಕ್ಷೆ ನಡೆಯಲಿದೆ.
ಕರ್ನಾಟಕ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ; ತಾತ್ಕಾಲಿಕ ವೇಳಾಪಟ್ಟಿ
2025ರ ಮಾರ್ಚ್ 24 ಸೋಮವಾರ - ಗಣಿತ ಶಾಸ್ತ್ರ
ಮಾರ್ಚ್ 28 ಶುಕ್ರವಾರ ಇಂಗ್ಲಿಷ್ (ದ್ವಿತೀಯ ಭಾಷೆ)
ಏಪ್ರಿಲ್ 1 ಮಂಗಳವಾರ ವಿಜ್ಞಾನ
ಏಪ್ರಿಲ್ 4 ಶುಕ್ರವಾರ ಸಮಾಜ ಶಾಸ್ತ್ರ
ಏಪ್ರಿಲ್ 7 ಸೋಮವಾರ ಕನ್ನಡ (ಮೊದಲ ಭಾಷೆ)
ಏಪ್ರಿಲ್ 11 ಶುಕ್ರವಾರ ಹಿಂದಿ (ತೃತೀಯ ಭಾಷೆ)
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಸಭೆಯಲ್ಲಿ ಏನಾಯಿತು
ಕರ್ನಾಟಕದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕಾಯಂಗೊಳಿಸುವ ವಿಚಾರವೂ ನಿನ್ನೆ (ನವೆಂಬರ್ 27) ನಡೆದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಸಭೆಯಲ್ಲಿ ಚರ್ಚೆಗೆ ಒಳಗಾಗಿದೆ. ಇದಲ್ಲದೆ, ಪರೀಕ್ಷಾ ಸಿದ್ಧತೆ ವಿಚಾರವೂ ಚರ್ಚೆಗೆ ಬಂದಿದ್ದು, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಡಿಸೆಂಬರ್ ಮೊದಲು ಇಲ್ಲವೇ ಎರಡನೇ ವಾರ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು (KSEAB) ಅಧಿಕೃತ ವೇಳಾಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ಆಗ ಅಭ್ಯರ್ಥಿಗಳು ದಿನಾಂಕ, ಸಮಯ ಪರಿಶೀಲಿಸಬೇಕು. ಈಗ ಬಿಡುಗಡೆಯಾಗಿರುವುದು ತಾತ್ಕಾಲಿಕ ವೇಳಾಪಟ್ಟಿಯಷ್ಟೆ. ಇದು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸಿದ್ಧತೆ ಅನುಕೂಲವಾಗಲಿ ಎಂದು ಪ್ರಕಟಿಸುವ ವೇಳಾಪಟ್ಟಿ ಎಂದು ಮೂಲಗಳು ತಿಳಿಸಿವೆ.