logo
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಹವಾಮಾನ: ಬೀದರ್, ವಿಜಯಪುರ, ಕಲಬುರಗಿ ಚಳಿಗೆ ತತ್ತರಿಸಿದ ಜನ, ಬೆಂಗಳೂರಲ್ಲೂ ರಾತ್ರಿ ಮೈ ನಡುಕದ ಚಳಿ, ಮುಂಜಾನೆ ಮಂಜು

ಕರ್ನಾಟಕ ಹವಾಮಾನ: ಬೀದರ್, ವಿಜಯಪುರ, ಕಲಬುರಗಿ ಚಳಿಗೆ ತತ್ತರಿಸಿದ ಜನ, ಬೆಂಗಳೂರಲ್ಲೂ ರಾತ್ರಿ ಮೈ ನಡುಕದ ಚಳಿ, ಮುಂಜಾನೆ ಮಂಜು

Umesh Kumar S HT Kannada

Dec 18, 2024 07:00 AM IST

google News

ಕರ್ನಾಟಕ ಹವಾಮಾನ: ಬೀದರ್, ವಿಜಯಪುರ, ಕಲಬುರಗಿ ಚಳಿಗೆ ಜನ ತತ್ತರಿಸಿದ್ದು, ಬೆಂಗಳೂರಲ್ಲೂ ರಾತ್ರಿ ಮೈ ನಡುಕದ ಚಳಿ, ಮುಂಜಾನೆ ಮಂಜು ಕಾಡಬಹುದು ಎಂದು ಹವಾಮಾನ ಮುನ್ಸೂಚನೆ ವರದಿ ವಿವರಿಸಿದೆ.

  • Karnataka Weather: ಕರ್ನಾಟಕದಲ್ಲಿಇಂದು (ಡಿಸೆಂಬರ್ 18) ಒಣಹವೆ ಇರಲಿದ್ದು, ಚಳಿಗಾಲದ ಚಳಿ ಎಲ್ಲೆಡೆ ಅನುಭವಕ್ಕೆ ಬರಲಿದೆ. ಬೀದರ್, ವಿಜಯಪುರ, ಕಲಬುರಗಿ ಚಳಿಗೆ ಜನ ತತ್ತರಿಸಿದ್ದು, ಇಂದು ಕೂಡ ವಿಪರೀತ ಶೀತದ ಅಲೆಗಳು ಇರಲಿವೆ. ಇನ್ನು ಬೆಂಗಳೂರಲ್ಲಿ ಇಂದು ಕೂಡ ರಾತ್ರಿ ಮೈನಡುಕದ ಚಳಿ ಇರಲಿದ್ದು, ಮುಂಜಾನೆ ಮಂಜು ಕಾಡಲಿದೆ. ಕರ್ನಾಟಕ ಹವಾಮಾನ ವಿವರ ಇಲ್ಲಿದೆ.

ಕರ್ನಾಟಕ ಹವಾಮಾನ: ಬೀದರ್, ವಿಜಯಪುರ, ಕಲಬುರಗಿ ಚಳಿಗೆ ಜನ  ತತ್ತರಿಸಿದ್ದು, ಬೆಂಗಳೂರಲ್ಲೂ ರಾತ್ರಿ ಮೈ ನಡುಕದ ಚಳಿ, ಮುಂಜಾನೆ ಮಂಜು ಕಾಡಬಹುದು ಎಂದು ಹವಾಮಾನ ಮುನ್ಸೂಚನೆ ವರದಿ ವಿವರಿಸಿದೆ.
ಕರ್ನಾಟಕ ಹವಾಮಾನ: ಬೀದರ್, ವಿಜಯಪುರ, ಕಲಬುರಗಿ ಚಳಿಗೆ ಜನ ತತ್ತರಿಸಿದ್ದು, ಬೆಂಗಳೂರಲ್ಲೂ ರಾತ್ರಿ ಮೈ ನಡುಕದ ಚಳಿ, ಮುಂಜಾನೆ ಮಂಜು ಕಾಡಬಹುದು ಎಂದು ಹವಾಮಾನ ಮುನ್ಸೂಚನೆ ವರದಿ ವಿವರಿಸಿದೆ.

Karnataka Weather: ಕರ್ನಾಟಕದಲ್ಲಿ ಇಂದು (ಡಿಸೆಂಬರ್ 18) ಒಣಹವೆ ಇರಲಿದೆ. ನಿನ್ನೆಯಂತೆ ಬೀದರ್, ವಿಜಯಪುರ, ಕಲಬುರಗಿ ಜಿಲ್ಲೆಗಳಲ್ಲಿ ವಿಪರೀತ ಚಳಿ ಇರಬಹುದಾದರೂ, ತೀವ್ರತೆ ಕಡಿಮೆಯಾಗಲಿದ್ದು, ತಾಪಮಾನ ಸಾಮಾನ್ಯಕ್ಕಿಂತ ಸಾಮಾನ್ಯಕ್ಕಿಂತ 4 - 5 ಡಿಗ್ರಿ ಸೆಲ್ಶಿಯಸ್ ಕಡಿಮೆ ಆಗಬಹುದು. ಹೀಗಾಗಿ ಈ ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಇತ್ತೀಚಿನ ಹವಾಮಾನ ಮುನ್ಸೂಚನೆ ವರದಿ ವಿವರಿಸಿದೆ. ಇದಲ್ಲದೆ, ಯಾದಗಿರಿ, ರಾಯಚೂರು, ಬಾಗಲಕೋಟೆಗಳಲ್ಲಿ ಕೂಡ ಶೀತ ಗಾಳಿಯ ಅಲೆಗಳು ಇರಲಿದ್ದು ಅವುಗಳ ತೀವ್ರತೆ ಕಡಿಮೆ ಇರುವ ಕಾರಣ ಚಳಿಯ ಪ್ರಮಾಣ ಕಡಿಮೆಯಾಗಬಹುದು ಎಂದು ವರದಿ ವಿವರಿಸಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು ಹವಾಮಾನ ಇಂದು; ಮುಂಜಾನೆ ಮಂಜು, ರಾತ್ರಿ ಚಳಿ, ನಾಳೆ ಮಳೆ

ಬೆಂಗಳೂರಲ್ಲಿ ನಾಳೆ (ಡಿಸೆಂಬರ್ 19) ಬೆಳಗ್ಗೆ ತನಕ ಮೋಡ ಕವಿದ ವಾತಾವರಣ ಇರಲಿದೆ. ಕೆಲವು ಕಡೆ ಸೂರ್ಯನ ಬೆಳಕು ಕಾಣಬಹುದು. ಕೆಲವು ಕಡೆಗಳಲ್ಲಿ ಮುಂಜಾನೆ ಮಂಜು ಕವಿದ ವಾತಾವರಣ ಇರಲಿದ್ದು, ಇಬ್ಬನಿ ಬೀಳಬಹುದು. ಇನ್ನು ಕೆಲವೆಡೆ ಹಗುರ ಮಳೆಯೂ ಆಗಬಹುದು. ರಾತ್ರಿ ವೇಳೆ ತಾಪಮಾನ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಶಿಯಸ್ ಕಡಿಮೆಯಾಗಬಹುದು. ಹೀಗಾಗಿ ಚಳಿ ಅನುಭವಕ್ಕೆ ಬರಬಹುದು. ನಾಳೆ, ನಾಡಿದ್ದು ಮಳೆ ನಿರೀಕ್ಷಿಸಬಹುದು ಎಂದು ಹವಾಮಾನ ಮುನ್ಸೂಚನೆ ವರದಿ ಹೇಳಿದೆ.

ಬೆಂಗಳೂರು ನಗರದಲ್ಲಿ ಇಂದು ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಶಿಯಸ್ ಇರಬಹುದು. ನಿನ್ನೆ (ಡಿಸೆಂಬರ್ 17) ಗರಿಷ್ಠ ತಾಪಮಾನ 27.2 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 15.5 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ವಿಜ್ಞಾನಿ ಡಾ ರಾಜವೇಲ್ ಮಣಿಕ್ಕಮ್ ತಿಳಿಸಿದ್ದಾರೆ.

ತಾಪಮಾನ ಎಲ್ಲಿ ಎಷ್ಟು: ಬೆಂಗಳೂರು ನಗರ - ಗರಿಷ್ಠ 28, ಕನಿಷ್ಠ 16 ಡಿಗ್ರಿ ಸೆಲ್ಶಿಯಸ್‌, ಕಲಬುರಗಿ ಗರಿಷ್ಠ 33, ಕನಿಷ್ಠ 13, ಬೆಳಗಾವಿ ಗರಿಷ್ಠ 29, ಕನಿಷ್ಠ 9 ಡಿಗ್ರಿ ಸೆಲ್ಶಿಯಸ್‌, ಗದಗ ಗರಿಷ್ಠ 29, ಕನಿಷ್ಠ 13, ಚಿತ್ರದುರ್ಗ ಗರಿಷ್ಠ 28 ಡಿಗ್ರಿ ಸೆಲ್ಶಿಯಸ್‌, ಕನಿಷ್ಠ 12 ಡಿಗ್ರಿ ಸೆಲ್ಶಿಯಸ್ ದಾಖಲಾಗಬಹುದು.

ಕರ್ನಾಟಕ ಹವಾಮಾನ ಇಂದು; ಬೀದರ್, ವಿಜಯಪುರ, ಕಲಬುರಗಿಯಲ್ಲಿ ಶೀತದ ಅಲೆ

ಕರ್ನಾಟಕದಲ್ಲಿ ಒಣಹವೆ ಇರಲಿದ್ದು, ಉತ್ತರ ಒಳನಾಡು ಭಾಗದ ವಿಜಯಪುರ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಶೀತ ಅಲೆಗಳ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಕರ್ನಾಟಕದ ಒಳಭಾಗದ ಮೇಲೆ ಪ್ರತ್ಯೇಕವಾದ ಸ್ಥಳಗಳಲ್ಲಿ ಆಳವಿಲ್ಲದ ಮಂಜು/ ದಟ್ಟ ಮಂಜು ಕಾಡಬಹುದು ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ವಿಜ್ಞಾನಿ ಡಾ ಎನ್ ಪುವಿಯರಸನ್‌ ತಿಳಿಸಿದ್ದಾರೆ.

ನಾಳೆ (ಡಿಸೆಂಬರ್ 19) ಕೋಲಾರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನವು ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಕರಾವಳಿ ಕರ್ನಾಟಕ ಮತ್ತು ಉತ್ತರ ಒಳ ಕರ್ನಾಟಕದ ಮೇಲೆ ಒಣ ಹವೆ ಹೆಚ್ಚಾಗಿರಲಿದೆ. ಕರ್ನಾಟಕದ ಒಳಭಾಗದ ಮೇಲೆ ಪ್ರತ್ಯೇಕವಾದ ಸ್ಥಳಗಳಲ್ಲಿ ಆಳವಿಲ್ಲದ ಮಂಜು/ ದಟ್ಟ ಮಂಜು ಕಾಡಬಹುದು ಎಂದು ಹವಾಮಾನ ಮುನ್ಸೂಚನೆ ವರದಿ ಹೇಳಿದೆ.

ಮುಳಬಾಗಿಲು ತಾಲೂಕು ಮುನ್ನೂರು ಗ್ರಾಮದಲ್ಲಿ 12.5 ಮಿಮೀ ಮಳೆ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (KSNDMC) ರಾಜ್ಯದಾದ್ಯಂತ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಾಪಿಸಿದ ಮಳೆ ಮಾಪನ ಕೇಂದ್ರಗಳಲ್ಲಿ ಮಾಹಿತಿ ಪ್ರಕಾರ, ನಿನ್ನೆ ಬೆಳಗ್ಗೆ 8.30ರ ತನಕ ಕೋಲಾರ, ಶಿವಮೊಗ್ಗ, ಉಡುಪಿ ಜಿಲ್ಲೆಗಳ ಕೆಲವೆಡೆ ಮಳೆಯಾಗಿದೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ಮುನ್ನೂರು ಗ್ರಾಪಂ ವ್ಯಾಪ್ತಿಯಲ್ಲಿ 12.5 ಮಿಮೀ ಮಳೆಯಾಗಿದೆ. ಇದಲ್ಲದೆ, 28 ಜಿಲ್ಲೆಗಳಲ್ಲಿ ಚಿತ್ರದುರ್ಗ, ಕೊಪ್ಪಳ, ಚಾಮರಾಜನಗರ, ವಿಜಯಪುರ, ಬೀದರ್, ಹಾಸನ, ತುಮಕೂರು, ಬಾಗಲಕೋಟೆ, ಚಿಕ್ಕಬಳ್ಳಾಪುರ, ಕೊಡಗು, ಬೆಂಗಳೂರು ಗ್ರಾಮಾಂತರ, ರಾಮನಗರ, ಬಳ್ಳಾರಿ, ಮಂಡ್ಯ, ಚಿಕ್ಕಮಗಳೂರು, ಉತ್ತರಕನ್ನಡ, ಗದಗ, ಹಾವೇರಿ, ದಾವಣಗೆರೆ, ದಕ್ಷಿಣ ಕನ್ನಡ, ಕಲಬುರಗಿ, ಬೆಳಗಾವಿ, ಮೈಸೂರು, ಬೆಂಗಳೂರು ನಗರ, ರಾಯಚೂರು, ಯಾದಗಿರಿ,ವಿಜಯನಗರ, ಮತ್ತು ಧಾರವಾಡ ಒಣಹವೆ ದಾಖಲಾಗಿರುವುದಾಗಿ ಹವಾಮಾನ ವರದಿ ವಿವರಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ