logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Rains: ಬೆಂಗಳೂರು, ದಕ್ಷಿಣ ಕನ್ನಡ, ತುಮಕೂರು ಸಹಿತ ಹಲವೆಡೆ ಇಂದು ಭಾರೀ ಮಳೆ ಮುನ್ಸೂಚನೆ, 7 ಜಿಲ್ಲೆಗಳಲ್ಲಿ ಅಲರ್ಟ್‌ ಘೋಷಣೆ

Karnataka Rains: ಬೆಂಗಳೂರು, ದಕ್ಷಿಣ ಕನ್ನಡ, ತುಮಕೂರು ಸಹಿತ ಹಲವೆಡೆ ಇಂದು ಭಾರೀ ಮಳೆ ಮುನ್ಸೂಚನೆ, 7 ಜಿಲ್ಲೆಗಳಲ್ಲಿ ಅಲರ್ಟ್‌ ಘೋಷಣೆ

Umesha Bhatta P H HT Kannada

Aug 19, 2024 06:32 AM IST

google News

Bangalore Rains ಬೆಂಗಳೂರು ಸೇರಿದಂತೆ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಸೋಮವಾರ ಭಾರೀ ಮಳೆ ಮುನ್ಸೂಚನೆಯಿದೆ.

    • Rain in Karnataka ಕರ್ನಾಟಕದಲ್ಲಿ ನೈರುತ್ಯ ಮುಂಗಾರು ಕರಾವಳಿ, ಮಧ್ಯಕರ್ನಾಟಕ ಭಾಗದಲ್ಲಿ( Karnataka Rains) ಮತ್ತೆ ಚುರುಕಾಗಿದೆ. ಸೋಮವಾರವೂ ಬೆಂಗಳೂರು( Banalore Rains) ಸಹಿತ ಏಳು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌( Yellow Alert) ಇದೆ.
Bangalore Rains  ಬೆಂಗಳೂರು ಸೇರಿದಂತೆ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಸೋಮವಾರ ಭಾರೀ ಮಳೆ ಮುನ್ಸೂಚನೆಯಿದೆ.
Bangalore Rains ಬೆಂಗಳೂರು ಸೇರಿದಂತೆ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಸೋಮವಾರ ಭಾರೀ ಮಳೆ ಮುನ್ಸೂಚನೆಯಿದೆ.

ಬೆಂಗಳೂರು: ಕರ್ನಾಟಕ ಕರಾವಳಿ,ಮಲೆನಾಡು ಸೇರಿದಂತೆ ನಾನಾ ಭಾಗಗಳಲ್ಲಿ ಭಾರೀ ಮಳೆ ನಾಲ್ಕೈದು ದಿನದಿಂದ ಆಗುತ್ತಿದೆ. ಅದರಲ್ಲೂ ಮಧ್ಯ ಕರ್ನಾಟಕ ಭಾಗದಲ್ಲೂ ಈಗ ನೈರುತ್ಯ ಮುಂಗಾರು ಚುರುಕುಗೊಂಡಿದೆ. ಆಗಸ್ಟ್‌ 19ರ ಸೋಮವಾರದಂದು ಬೆಂಗಳೂರು ನಗರ,ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಕೋಲಾರ, ಚಿತ್ರದುರ್ಗ, ತುಮಕೂರು ಸೇರಿದಂತೆ ಏಳು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಏಳು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್‌ ಅನ್ನು ಕೂಡ ಘೋಷಣೆ ಮಾಡಲಾಗಿದೆ. ಕರಾವಳಿ ಹಾಗೂ ಮಧ್ಯಕರ್ನಾಟಕ,ಬೆಂಗಳೂರು ಭಾಗದಲ್ಲಿ ಗುಡುಗು ಸಹಿತ ಭಾರೀ ಮಳೆ ಸೋಮವಾರ ಸುರಿಯಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕೇಂದ್ರವು ಮುನ್ನೆಚ್ಚರಿಕೆಯನ್ನು ನೀಡಿದೆ. ಉಡುಪಿ, ರಾಮನಗರ ಜಿಲ್ಲೆಗಳಲ್ಲೂ ಭಾರೀ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮಳೆ ಹೇಗಿದೆ

ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರೀ ಮಳೆ ಸುರಿಯುವ ಮುನ್ಸೂಚನೆಯನ್ನು ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹೆಚ್ಚಿನ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಂಭವವಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಭಾರೀ ಮಳೆ ಗುಡುಗು ಸಹಿತ ಆಗಬಹುದು. ಕರ್ನಾಟಕದ ದಕ್ಷಿಣ ಒಳನಾಡು ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ಹಗೂ ಉತ್ತರ ಒಳನಾಡು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗಬಹುದು. ಗುಡುಗು ಕೂಡ ಇರಬಹುದು ಎಂದು ತಿಳಿಸಲಾಗಿದೆ.

ಕರ್ನಾಟಕದ ಕರಾವಳಿ ಭಾಗದಲ್ಲಿ ಮಳೆ ಮುಂದಿನ ಒಂದು ವಾರ ಕಾಲವೂ ಇರಲಿದೆ. ಒಳನಾಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆಯು ತಿಳಿಸಿದೆ.

ತುಮಕೂರಲ್ಲಿ ಉತ್ತಮ ಮಳೆ

ಶನಿವಾರ ಹಾಗೂ ಭಾನುವಾರದಂದು ತುಮಕೂರು ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿದೆ. ನೈರುತ್ಯ ಮುಂಗಾರು ಮಳೆ ಭಾನುವಾರ ಒಳನಾಡಿನಲ್ಲಿ ಸಾಮಾನ್ಯವಾಗಿದ್ದರೆ ಕರ್ನಾಟಕದ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ದುರ್ಬಲವಾಗಿತ್ತು. ಆದರೆ ಅಲ್ಲಲ್ಲಿ ಮಳೆಯಾದ ವರದಿಯೂ ಈ ಭಾಗದಲ್ಲಿ ಆಗಿದೆ.

ಅತಿ ಹೆಚ್ಚು ಮಳೆ ಸುರಿದ ಪ್ರದೇಶಗಳಲ್ಲಿ ತುಮಕೂರು ಜಿಲ್ಲೆಯ ಬರಗೂರು ಸೇರಿದೆ. ಇಲ್ಲಿ 7 ಸೆ.ಮೀನಷ್ಟು ಮಳೆಯಾಗಿದೆ. ಇದಲ್ಲದೇ ತುಮಕೂರು ಜಿಲ್ಲೆ ಹೊಸಕೋಟೆ, ಕುಣಿಗಲ್‌,ಪಾವಗಡ, ಮಧುಗಿರಿ, ಶಿರಾ, ತಿಪಟೂರಿನಲ್ಲೂ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ, ಕದ್ರಾ, ಯಲ್ಲಾಪುರ, ಕ್ಯಾಸಲ್‌ ರಾಕ್‌, ಗೇರುಸೊಪ್ಪ, ಮುಂಡಗೋಡ, ಕೃವಾರ, ಉಡುಪಿ ಜಿಲ್ಲೆ ಸಿದ್ದಾಪುರ, ಕಾರ್ಕಳ, ಕೋಟ, ಬೀದರ್‌ ಜಿಲ್ಲೆ ಮಂಠಾಳ, ಔರಾದ್‌, ಭಾಲ್ಕಿ, ಚಿತ್ರದುರ್ಗ ಜಿಲ್ಲೆ ಹಿರಿಯೂರು, ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು, ತೊಂಡೇಭಾವಿ, ಚಿಕ್ಕಬಳ್ಳಾಪುರ ನಗರ, ಮಂಡ್ಯ, ದಾವಣಗೆರೆ ಜಿಲ್ಲೆ ಹೊನ್ನಾಳಿ, ಚನ್ನಗಿರಿ, ಮಂಡ್ಯದ ಬೆಳ್ಳೂರು, ಚಾಮರಾಜನಗರ, ಕಲಬುರಗಿ ಜಿಲ್ಲೆ ಯಡ್ರಾಮಿ, ರಾಯಚೂರು ಜಿಲ್ಲೆ ಸಿಂಧನೂರು, ಬೆಳಗಾವಿ ಜಿಲ್ಲೆ ಸಂಕೇಶ್ವರ, ಚಿಕ್ಕಮಗಳೂರು ಜಿಲ್ಲೆ ಎನ್‌ಆರ್‌ ಪುರ, ಚಿತ್ರದುರ್ಗ ಜಿಲ್ಲೆ ಬಿ ದುರ್ಗ, ಬೆಂಗಳೂರು ನಗರದಲ್ಲೂ ಮಳೆಯಾಗಿದೆ.

ಬೆಂಗಳೂರು ನಗರದಲ್ಲಿ ಹೇಗೆ?

ಬೆಂಗಳೂರು ನಗರದಲ್ಲಿಯೂ ಮುಂದಿನ ಒಂದು ವಾರ ಮಳೆಯಿದೆ. ಎರಡು ದಿನಗಳ ಕಾಲ ಭಾರೀ ಮಳೆಯಾಗಲಿದ್ದು. ಯಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ಉಳಿದಂತೆ ಮುಂದಿನ ಒಂದು ವಾರದ ಅವಧಿಯಲ್ಲಿ ಮೋಡ ಕವಿದ ವಾತಾವರಣ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಇರಲಿದೆ. ಗುಡುಗು ಮಿಶ್ರಿತ ಮಳೆಯನ್ನು ನಿರೀಕ್ಷಿಸಬಹುದು. ತಾಪಮಾನದಲ್ಲೂ ಕೊಂಚ ಏರಿಕೆಯಾಗಿದ್ದು ಗರಿಷ್ಠ ಉಷ್ಣಾಂಶವು 31 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ಉಷ್ಣಾಂಶವು 22 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಮಂಡ್ಯ, ಚಾಮರಾಜನಗರದಲ್ಲಿ ಬಿಸಿಲು

ಮಳೆ ಅಲ್ಲಲ್ಲಿ ಇದ್ದರೂ ಕೆಲವು ಭಾಗದಲ್ಲಿ ಬಿಸಿಲು ಏರಿಕೆ ಕಂಡಿದೆ. ಉತ್ತರ ಕರ್ನಾಟಕದ ಕಲಬುರಗಿ ಅಲ್ಲದೇ ಮಂಡ್ಯ, ಚಾಮರಾಜನಗರದಲ್ಲೂ ಗರಿಷ್ಠ ಉಷ್ಣಾಂಶದಲ್ಲಿ ಏರಿಕೆ ಕಂಡು ಬಂದಿದೆ.

ಭಾನುವಾರ ಕಲಬುರಗಿಯಲ್ಲಿ 33.8 ಡಿಗ್ರಿ ಸೆಲ್ಸಿಯಸ್‌ ಇದ್ದರೆ, ಮಂಡ್ಯದಲ್ಲಿ 33.6 ಡಿಗ್ರಿ, ಚಾಮರಾಜನಗರದಲ್ಲಿ 33.2 ಡಿಗ್ರಿ ದಾಖಲಾಗಿದೆ. ಕೊಪ್ಪಳದಲ್ಲಿ 33.2 ಡಿಗ್ರಿ, ಇದ್ದರೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 32.6 ಡಿಗ್ರಿ ಇತ್ತು. ಕಾರವಾರ ಹಾಗೂ ಶಿರಾಲಿಯಲ್ಲಿ 32.4 ಡಿಗ್ರಿ ಸೆಲ್ಸಿಯಸ್‌, ಹಾವೇರಿಯಲ್ಲಿ 31.4 ಡಿಗ್ರಿ. ಬಾಗಲಕೋಟೆಯಲ್ಲಿ 31 ಡಿಗ್ರಿ, ಧಾರವಾಡದಲ್ಲಿ 30.4 ಡಿಗ್ರಿ. ಗದಗದಲ್ಲಿ 30.5 ಡಿಗ್ರಿ ಉಷ್ಣಾಂಶವಿತ್ತು, ಮೈಸೂರಿನಲ್ಲೂ 30.4 ಉಷ್ಣಾಂಶ ದಾಖಲಾಯಿತು. ಚಿಕ್ಕಮಗಳೂರಿನಲ್ಲಿ ಕಡಿಮೆ ಅಂದರೆ 26 ಡಿಗ್ರಿ ಸೆಲ್ಸಿಯಸ್‌ ಇತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ