logo
ಕನ್ನಡ ಸುದ್ದಿ  /  ಕರ್ನಾಟಕ  /  Wayanad Elections: ಪ್ರಿಯಾಂಕಾ ಗಾಂಧಿ ಚುನಾವಣೆಗೆ ಕನ್ನಡತಿ ಐಎಎಸ್‌ ಅಧಿಕಾರಿಯೇ ಮುಖ್ಯಸ್ಥೆ: ಯಾರವರು ಗೊತ್ತೆ?

Wayanad Elections: ಪ್ರಿಯಾಂಕಾ ಗಾಂಧಿ ಚುನಾವಣೆಗೆ ಕನ್ನಡತಿ ಐಎಎಸ್‌ ಅಧಿಕಾರಿಯೇ ಮುಖ್ಯಸ್ಥೆ: ಯಾರವರು ಗೊತ್ತೆ?

Umesha Bhatta P H HT Kannada

Oct 23, 2024 04:25 PM IST

google News

ಕೇರಳದ ವಯನಾಡು ಜಿಲ್ಲಾಧಿಕಾರಿಯಾಗಿರುವ ಕನ್ನಡತಿ ಐಎಎಸ್‌ ಅಧಿಕಾರಿ ಡಿ.ಆರ್.ಮೇಘಶ್ರೀ ಅವರು ಪ್ರಿಯಾಂಕಾಗಾಂಧಿ ಸ್ಪರ್ಧಿಸಿರುವ ಚುನಾವಣೆಯ ಚುನಾವಣಾಧಿಕಾರಿಯಾಗಿದ್ದಾರೆ.

    • ಭಾರತದ ಗಮನ ಸೆಳೆದಿರುವ ಕೇರಳ ವಯನಾಡು ಲೋಕಸಭೆ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಕಣಕ್ಕಿಳಿದಿದ್ದರೆ, ಈ ಚುನಾವಣೆ ಉಸ್ತುವಾರಿ ಹೊತ್ತವರು ಕನ್ನಡತಿ ಐಎಎಸ್‌ ಅಧಿಕಾರಿ. ಅದರ ವಿವರ ಇಲ್ಲಿದೆ.
ಕೇರಳದ ವಯನಾಡು ಜಿಲ್ಲಾಧಿಕಾರಿಯಾಗಿರುವ ಕನ್ನಡತಿ ಐಎಎಸ್‌ ಅಧಿಕಾರಿ ಡಿ.ಆರ್.ಮೇಘಶ್ರೀ ಅವರು ಪ್ರಿಯಾಂಕಾಗಾಂಧಿ ಸ್ಪರ್ಧಿಸಿರುವ ಚುನಾವಣೆಯ ಚುನಾವಣಾಧಿಕಾರಿಯಾಗಿದ್ದಾರೆ.
ಕೇರಳದ ವಯನಾಡು ಜಿಲ್ಲಾಧಿಕಾರಿಯಾಗಿರುವ ಕನ್ನಡತಿ ಐಎಎಸ್‌ ಅಧಿಕಾರಿ ಡಿ.ಆರ್.ಮೇಘಶ್ರೀ ಅವರು ಪ್ರಿಯಾಂಕಾಗಾಂಧಿ ಸ್ಪರ್ಧಿಸಿರುವ ಚುನಾವಣೆಯ ಚುನಾವಣಾಧಿಕಾರಿಯಾಗಿದ್ದಾರೆ.

ಬೆಂಗಳೂರು: ಕೇರಳದ ವಯನಾಡು ಲೋಕಸಭೆ ಉಪಚುನಾವಣೆ ಇಡೀ ಭಾರತದ ಗಮನ ಸೆಳೆಯಲಿದೆ. ಏಕೆಂದರೆ ಅಲ್ಲಿ ಚುನಾವಣೆ ಕಣದಲ್ಲಿರುವುದು ಪ್ರಧಾನಿಗಳಾಗಿದ್ದ ಜವಹರಲಾಲ್‌ ಮರಿ ಮೊಮ್ಮಗಳು, ಇಂದಿರಾಗಾಂಧಿ ಮೊಮ್ಮಗಳು ಹಾಗು ರಾಜೀವ್‌ ಗಾಂಧಿ ಮಗಳು ಪ್ರಿಯಾಂಕಾ ಗಾಂಧಿ. ಗಾಂಧಿ ಕುಟುಂಬದ ಕುಡಿ ಅಧಿಕೃತವಾಗಿ ರಾಜಕೀಯವಾಗಿ ಪ್ರವೇಶಿಸಿರುವ ಈ ಚುನಾವಣೆ ವಿಶೇಷ ಎನ್ನಿಸಲಿದೆ. ಈ ಚುನಾವಣೆಯನ್ನು ನಡೆಸುವುದೂ ಸವಾಲಿನ ಕೆಲಸವೇ. ಇಂತಹ ಭಾರತದ ಗಮನ ಸೆಳೆಯುತ್ತಿರುವ ವಯನಾಡು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಆಡಳಿತದ ಉಸ್ತುವಾರಿ ಹೊತ್ತವರು ಕನ್ನಡತಿ. ವಯನಾಡು ಜಿಲ್ಲಾಧಿಕಾರಿಯಾಗಿರುವ ಡಿ.ಆರ್‌. ಮೇಘಶ್ರೀ. ಅವರೇ ಉಮೇದುವಾರಿಕೆಯನ್ನು ಪ್ರಿಯಾಂಕಗಾಂಧಿ ಅವರಿಂದ ಸ್ವೀಕರಿಸಿದ್ದಾರೆ.

ಹೇಗಿರಲಿದೆ ಚುನಾವಣಾಧಿಕಾರಿ ನೇಮಕ

ಲೋಕಸಭೆ ಚುನಾವಣೆ ಅಥವಾ ವಿಧಾನಸಭೆ ಚುನಾವಣೆ ಆಯಾ ಜಿಲ್ಲೆಯ ವ್ಯಾಪ್ತಿಯ ಜಿಲ್ಲಾಧಿಕಾರಿಗಳಿಗೆ ಚುನಾವಣಾಧಿಕಾರಿಯಾಗಿರುತ್ತಾರೆ. ಅವರನ್ನು ಜಿಲ್ಲಾ ಚುನಾವಣಾಧಿಕಾರಿ ಡಿಇಒ ಎಂದೇ ಕರೆಯಲಾಗುತ್ತದೆ.

ಲೋಕಸಭೆ ಚುನಾವಣೆಗೆ ಜಿಲ್ಲಾಧಿಕಾರಿಯೇ ಉಮೇದುವಾರಿಕೆ ಸ್ವೀಕರಿಸಿದರೆ ವಿಧಾನಸಭೆ ಚುನಾವಣೆಗೆ ಉಪವಿಭಾಗಾಧಿಕಾರಿ ಹಂತದ ಅಧಿಕಾರಿ ನಾಮಪತ್ರಗಳನ್ನು ಅಭ್ಯರ್ಥಿಗಳಿಂದ ಪಡೆಯುತ್ತಾರೆ. ಆದರೆ ಚುನಾವಣೆ ನಿರ್ವಹಣೆ ವಿಚಾರದಲ್ಲಿ ಡಿಸಿಯದ್ದೇ ಮುಖ್ಯ ಪಾತ್ರ. ಅಂತಹ ಅಧಿಕಾರವನ್ನು ಕೇಂದ್ರ ಚುನಾವಣೆ ಆಯೋಗ ನೀಡಿದೆ.

ಈ ಬಾರಿ ಲೋಕಸಭೆ ಚುನಾವಣೆ ಪ್ರಕಟವಾದಾಗ ವಯನಾಡು ಜಿಲ್ಲಾಧಿಕಾರಿ ಆಗಿರುವವರು ಡಿ.ಆರ್.ಮೇಘಶ್ರೀ. ಸಹಜವಾಗಿ ಅವರೇ ಜಿಲ್ಲಾ ಚುನಾವಣಾಧಿಕಾರಿಯೂ ಆಗಿದ್ದಾರೆ.

ಹೊಸ ಅನುಭವ

ಐದು ತಿಂಗಳ ಹಿಂದೆ ಲೋಕಸಭೆ ಚುನಾವಣೆ ನಡೆದಾಗ ರಾಹುಲ್‌ ಗಾಂಧಿ ಕಣದಲ್ಲಿದ್ದರು. ಆಗ ಮೇಘಶ್ರೀ ಅವರು ವಯನಾಡು ಡಿಸಿಯಾಗಿರಲಿಲ್ಲ. ಆಗ ರೇಣುರಾಜ್‌ ಡಿಸಿಯಾಗಿ ಚುನಾವಣೆ ನಡೆಸಿದ್ದರು. ಜುಲೈ ಮೊದಲ ವಾರದಲ್ಲಿ ಅವರನ್ನು ಕೇರಳ ರಾಜ್ಯ ಸರ್ಕಾರ ವಯನಾಡು ಡಿಸಿಯಾಗಿ ನೇಮಿಸಿತ್ತು.

ಮೂರು ತಿಂಗಳ ಹಿಂದೆ ವಯನಾಡಿನಲ್ಲಿ ಸಂಭವಿಸಿದ ಭಾರೀ ಮಳೆ, ಪ್ರವಾಹದ ವೇಳೆಯೂ ಅವಿರತವಾಗಿ ಕೆಲಸ ಮಾಡಿ ಗಮನ ಸೆಳೆದಿದ್ದರು ಮೇಘಶ್ರೀ. ಪ್ರಧಾನಿ ನರೇಂದ್ರ ಮೋದಿ ಅವರೇ ಖುದ್ದು ಸ್ಥಳ ಪರಿಶೀಲನೆಗೆ ಬಂದಾಗ ಮಾಹಿತಿ ಒದಗಿಸಿದ್ದವರು ಇದೇ ಜಿಲ್ಲಾಧಿಕಾರಿ, ಕನ್ನಡತಿ ಮೇಘಶ್ರೀ ಅವರೇ.

ಯಾರು ಮೇಘಶ್ರೀ

ಮೇಘಶ್ರೀ ಅವರು ಮೂಲಕ ಚಿತ್ರದುರ್ಗ ಜಿಲ್ಲೆಯವರು. ಚಳ್ಳಕೆರೆ ತಾಲ್ಲೂಕಿನ ದೊಡ್ಡೇರಿ ಗ್ರಾಮದವರು.ತಂದೆ ರುದ್ರಮುನಿ ಬ್ಯಾಂಕ್‌ ಅಧಿಕಾರಿಯಾಗಿ ನಿವೃತ್ತರಾಗಿದ್ದಾರೆ. ಚಿತ್ರದುರ್ಗದಲ್ಲಿಯೇ ಶಿಕ್ಷಣ ಪಡೆದು ನಂತರ ಎಂಜಿನಿಯರ್‌ ಆಗಿ ಕೆಲ ಕಾಲ ಕೆಲಸ ಮಾಡಿದ್ದ ಮೇಘಶ್ರೀ ಅವರಿಗೆ ಚಿತ್ರದುರ್ಗದಲ್ಲಿ ತಮ್ಮ ಮನೆಯ ಬಳಿಯೇ ಇದ್ದ ಡಿಸಿ ಕಚೇರಿ, ಅಲ್ಲಿನ ವ್ಯವಸ್ಥೆ ನೋಡಿ ತಾವೂ ಡಿಸಿಯಾಗಬೇಕು ಎಂದುಕೊಂಡವರು. ಶಾಲಾ ದಿನಗಳಲ್ಲಿಯೇ ಕಂಡ ಕನಸಿನಂತೆ ತಯಾರಿಯನ್ನೂ ನಡೆಸಿದರು. ಇದರಲ್ಲಿ ಯಶಸ್ವಿಯಾದರು.

ಎರಡನೇ ಪ್ರಯತ್ನದಲ್ಲಿ ಅಂದರೆ 2016ರಲ್ಲಿ ಯುಪಿಎಸ್‌ಸಿಯಲ್ಲಿ ತೇರ್ಗಡೆ ಹೊಂದಿದರು. ಅವರಿಗೆ ಸಿಕ್ಕಿದ್ದು ಕೇರಳ ಕೇಡರ್‌. ಅಲ್ಲಿಯೇ ಎಂಟು ವರ್ಷದಿಂದ ಕಲಸಮಾಡುತ್ತಿದ್ದಾರೆ. ನಾಲ್ಕು ತಿಂಗಳಿನಿಂದ ಕೇರಳದ ವಯನಾಡು ಡಿಸಿಯಾಗಿದ್ದು, ಈಗ ಹೈಪ್ರೊಫೈಲ್‌ ಚುನಾವಣೆಯ ಉಸ್ತುವಾರಿ ಹೊತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ