logo
ಕನ್ನಡ ಸುದ್ದಿ  /  ಕರ್ನಾಟಕ  /  ಕನ್ನಡ ರಾಜ್ಯೋತ್ಸವ 2024:100 ವರ್ಷ ಪೂರೈಸಿದ ಮೈಸೂರು ವಿವಿ ಸೇರಿ ಕರ್ನಾಟಕದಲ್ಲಿರುವ ವಿಶ್ವವಿದ್ಯಾಲಯಗಳೆಷ್ಟು, 10 ಅಂಶಗಳ ಮೂಲಕ ತಿಳಿಯೋಣ

ಕನ್ನಡ ರಾಜ್ಯೋತ್ಸವ 2024:100 ವರ್ಷ ಪೂರೈಸಿದ ಮೈಸೂರು ವಿವಿ ಸೇರಿ ಕರ್ನಾಟಕದಲ್ಲಿರುವ ವಿಶ್ವವಿದ್ಯಾಲಯಗಳೆಷ್ಟು, 10 ಅಂಶಗಳ ಮೂಲಕ ತಿಳಿಯೋಣ

Umesha Bhatta P H HT Kannada

Oct 28, 2024 03:52 PM IST

google News

ಕರ್ನಾಟಕದಲ್ಲಿ ಉನ್ನತ ಶಿಕ್ಷಣ ನೀಡುತ್ತಿರುವ ವಿಶ್ವವಿದ್ಯಾನಿಲಯಗಳು 80 ಇವೆ.

  • ಕನ್ನಡ ರಾಜ್ಯೋತ್ಸವ 2024 (Karnataka Rajyotsava 2024) ಪ್ರಯುಕ್ತ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಕರ್ನಾಟಕದ ವಿಶ್ವವಿದ್ಯಾಲಯಗಳ ಕಿರುಪರಿಚಯ ಕಟ್ಟಿಕೊಡಲು ಪ್ರಯತ್ನಿಸಿದೆ. ಇದರಂತೆ, 100 ವರ್ಷ ಪೂರೈಸಿದ ಮೈಸೂರು ವಿವಿಯಿಂದ ಹಿಡಿದು ಬೆಂಗಳೂರು, ಮಂಗಳೂರು ವಿವಿ ತನಕ 80 ವಿವಿಗಳು ಕರ್ನಾಟಕದಲ್ಲಿವೆ. ಅವುಗಳ ವಿವರ 10 ಅಂಶಗಳ ಮೂಲಕ ತಿಳಿಯೋಣ.

ಕರ್ನಾಟಕದಲ್ಲಿ ಉನ್ನತ ಶಿಕ್ಷಣ ನೀಡುತ್ತಿರುವ ವಿಶ್ವವಿದ್ಯಾನಿಲಯಗಳು 80 ಇವೆ.
ಕರ್ನಾಟಕದಲ್ಲಿ ಉನ್ನತ ಶಿಕ್ಷಣ ನೀಡುತ್ತಿರುವ ವಿಶ್ವವಿದ್ಯಾನಿಲಯಗಳು 80 ಇವೆ.
  1. ಕರ್ನಾಟಕದಲ್ಲಿ ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಮಹತ್ವ ಸಿಕ್ಕಿದೆ. ಮೈಸೂರು ಮಹಾರಾಜರ ಕಾಲದಲ್ಲಿಯೇ ಆರಂಭಗೊಂಡ ಮೈಸೂರು ವಿಶ್ವವಿದ್ಯಾನಿಲಯದ ನಂತರ ಎಲ್ಲಾ ಭಾಗದಲ್ಲೂ ವಿಶ್ವವಿದ್ಯಾನಿಲಯ ಆರಂಭಗೊಂಡಿವೆ. ಈಗ ಹಲವು ವಿಷಯಾಧರಿತ ವಿಶ್ವವಿದ್ಯಾನಿಲಯಗಳೂ ರೂಪುಗೊಂಡಿವೆ. ಈಗ 41 ವಿಶ್ವವಿದ್ಯಾನಿಲಯಗಳು ಸರ್ಕಾರದ ವ್ಯಾಪ್ತಿಯಲ್ಲಿದ್ದರೆ, ಖಾಸಗಿ ವಿಶ್ವವಿದ್ಯಾನಿಲಯ, ಡೀಮ್ಡ್‌, ಕೇಂದ್ರೀಯ ವಿಶ್ವವಿದ್ಯಾನಿಲಯ ಸೇರಿ ಒಟ್ಟು 80 ವಿಶ್ವವಿದ್ಯಾನಿಲಯ ಕರ್ನಾಟಕದಲ್ಲಿವೆ.
  2. ಕರ್ನಾಟಕದಲ್ಲಿ 1916 ರಲ್ಲಿ ಮೊದಲು ಆರಂಭಗೊಂಡಿದ್ದು ಮೈಸೂರು ವಿಶ್ವವಿದ್ಯಾನಿಲಯ. ಮೈಸೂರಿನ ಮಹಾರಾಜರಾಗಿದ್ದ ಕೃಷ್ಣರಾಜ ಒಡೆಯರ್‌ ಅವರು ಆರಂಭಿಸಿದ ವಿಶ್ವವಿದ್ಯಾನಿಲಯವಿದು. ಶತಮಾನವನ್ನು ಪೂರೈಸಿ ಸಹಸ್ರಾರು ಜನರ ಬದುಕಿಗೆ ದಾರಿ ದೀವಿಗೆಯಾಗಿದೆ ಈ ಐತಿಹಾಸಿಕ ವಿಶ್ವವಿದ್ಯಾನಿಲಯ. ಈಗ ಮೈಸೂರು ವಿವಿ ಮಂಡ್ಯ, ಹಾಸನ ಹಾಗೂ ಚಾಮರಾಜನಗರ ವಿಶ್ವವಿದ್ಯಾನಿಲಯವಾಗಿ ಪ್ರತ್ಯೇಕಗೊಂಡಿದೆ.
  3. ಉತ್ತರ ಕರ್ನಾಟಕದಲ್ಲಿ ಮೊದಲು ಆರಂಭಗೊಂಡಿದ್ದು ಕರ್ನಾಟಕ ವಿಶ್ವವಿದ್ಯಾನಿಲಯ. ಮಹಾರಾಷ್ಟ್ರ ಭಾಗಕ್ಕೆ ಶಿಕ್ಷಣಕ್ಕೆಂದು ಹೋಗುತ್ತಿದ್ದುದನ್ನು ತಡೆಯಲು ಕರ್ನಾಟಕ ವಿವಿಯನ್ನು 1956ರಲ್ಲಿ ಆರಂಭಿಸಲಾಯಿತು. ಇದು ಕೂಡ ಏಳು ದಶಕವನ್ನು ಪೂರೈಸುವತ್ತ ಹೆಜ್ಜೆ ಇಟ್ಟಿದೆ. ಕರ್ನಾಟಕ ವಿಶ್ವವಿದ್ಯಾನಿಲಯ ಈಗ ಬೆಳಗಾವಿ, ಹಾವೇರಿ, ಬಾಗಲಕೋಟೆ ವಿವಿಯಾಗಿ ವಿಭಜನೆಯಾಗಿದೆ.

    ಇದನ್ನೂ ಓದಿರಿ: ಕನ್ನಡ ರಾಜ್ಯೋತ್ಸವವನ್ನು ಕರಾಳ ದಿನವನ್ನಾಗಿ ಆಚರಿಸಲು ಕನ್ನಡ ಮಾಧ್ಯಮ ಖಾಸಗಿ ಶಾಲೆಗಳ ನಿರ್ಧಾರ: ಅನುದಾನಕ್ಕೆ ಆಗ್ರಹ
  4. ಬೆಂಗಳೂರು ರಾಜಧಾನಿಯಾಗಿದ್ದರಿಂದ ಹಾಗೂ ಈ ಭಾಗದವರಿಗೆ ಶಿಕ್ಷಣದ ಮಹತ್ವ ಅರಿತು ಬೆಂಗಳೂರು ವಿಶ್ವವಿದ್ಯಾನಿಲಯ ಸ್ಥಾಪನೆಯಾಯಿತು. 1964ರಲ್ಲಿ ಆರಂಭಗೊಂಡ ವಿಶ್ವವಿದ್ಯಾನಿಲಯ ಕೂಡ ಆರು ದಶಕ ಪೂರೈಸಿದೆ. ಹಳೆಯ ಬೆಂಗಳೂರು ವಿಶ್ವವಿದ್ಯಾನಿಲಯವು ಬಳಿಕ ಬೆಂಗಳೂರು ತುಮಕೂರು, ಕೋಲಾರದ ಜತೆಗೆ ಬೆಂಗಳೂರಿನಲ್ಲಿಯೇ ಮೂರು ವಿಶ್ವವಿದ್ಯಾನಿಲಯವಾಗಿ ವಿಭಜನೆಗೊಂಡಿದೆ.
  5. ಕರಾವಳಿ ಭಾಗದವರೂ ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಕ್ಕೆ ಹೋಗುವುದನ್ನು ತಪ್ಪಿಸಲು ಮಂಗಳೂರು ವಿಶ್ವವಿದ್ಯಾನಿಲಯವನ್ನು 1980 ರಲ್ಲಿ ಆರಂಭಿಸಲಾಯಿತು. ಈಗಿನ ಕಲ್ಯಾಣ ಕರ್ನಾಟಕದಲ್ಲಿ 1984 ರಲ್ಲಿ ಕಲಬುರಗಿ ವಿಶ್ವವಿದ್ಯಾನಿಲಯ, ಮಲೆನಾಡು ಭಾಗದವರಿಗೆ ಶಿಕ್ಷಣ ನೀಡಲು ಶಿವಮೊಗ್ಗದ ಶಂಕರಘಟ್ಟದಲ್ಲಿ ಕುವೆಂಪು ವಿಶ್ವವಿದ್ಯಾನಿಲಯ ಸ್ಥಾಪನೆಯಾಯಿತು. ಈಗ ಕಲಬುರಗಿ ವಿವಿ ರಾಯಚೂರು, ಬಳ್ಳಾರಿ, ಕೊಪ್ಪಳ ವಿವಿಯಾಗಿ ವಿಭಜನೆಯಾಗಿದ್ದರೆ, ಮಂಗಳೂರು ವಿಶ್ವವಿದ್ಯಾನಿಲಯದಿಂದ ಕೊಡಗು ಪ್ರತ್ಯೇಕಗೊಂಡು ವಿಶ್ವವಿದ್ಯಾನಿಲಯ ರೂಪ ಪಡೆದಿದೆ. ಕುವೆಂಪು ವಿವಿಯಿಂದ ಬೇರೆಯಾಗಿ ದಾವಣಗೆರೆ ವಿಶ್ವವಿದ್ಯಾನಿಲಯ ರಚನೆಯಾಗಿದೆ.

    ಇದನ್ನೂ ಓದಿರಿ: ಇಂತಹ ಅವಮಾನವನ್ನು ನಮ್ಮ ಕನ್ನಡಿಗ ಹಾಡುಗಾರರು ಹೇಗೆ ಸಹಿಸಿಕೊಂಡರು, ಏಕೆ ಸಹಿಸಿಕೊಂಡರು?; ಲೇಖಕ ರಂಗಸ್ವಾಮಿ ಮೂಕನಹಳ್ಳಿ ಅವರಿಂದ ಒಳನೋಟ
  6. ಕರ್ನಾಟಕದಲ್ಲಿ ಕನ್ನಡಕ್ಕೆ ಮಾನ್ಯತೆ ಸಿಗಬೇಕು. ಸಂಶೋಧನೆ ಚಟುವಟಿಕೆ ವಿಸ್ತರಣೆಯಾಗಬೇಕು ಎನ್ನುವ ಕಾರಣದಿಂದ ಹಂಪಿಯನ್ನು ಕನ್ನಡ ವಿಶ್ವವಿದ್ಯಾನಿಲಯ ಸ್ಥಾಪಿಸಲಾಯಿತು. ಆನಂತರ ಮೈಸೂರಿನಲ್ಲಿ ಸಂಗೀತ ಹಾಗೂ ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ, ಬಾದಾಮಿಯಲ್ಲಿ ಲಲಿತ ಕಲೆಗಳ ವಿಶ್ವವಿದ್ಯಾನಿಲಯ ಸ್ಥಾಪಿಸಲಾಗಿದೆ. ಹಾವೇರಿ ಸಮೀಪದ ಗೋಟಗೋಡಿಯಲ್ಲಿ ಜನಪದ ವಿಶ್ವವಿದ್ಯಾನಿಲಯ ರೂಪುಗೊಂಡಿದೆ
  7. ವೈದ್ಯಕೀಯ ಶಿಕ್ಷಣಕ್ಕೆ ರಾಮನಗರದಲ್ಲಿ ರಾಜೀವ್‌ ಗಾಂಧಿ ವೈದ್ಯಕೀಯ ಶಿಕ್ಷಣಗಳ ವಿಶ್ವವಿದ್ಯಾನಿಲಯ, ತಾಂತ್ರಿಕ ಶಿಕ್ಷಣಕ್ಕೆ ಬೆಳಗಾವಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯಗಳು ಆರಂಭಗೊಂಡು ದಶಕಗಳೇ ಕಳೆದಿವೆ.
  8. ಕೃಷಿ, ತೋಟಗಾರಿಕೆ, ಪಶು ವೈದ್ಯಕೀಯ ಸೇವೆಗಳಿಗೆ ಪ್ರತ್ಯೇಕ ವಿವಿಗಳು ಕರ್ನಾಟಕದಲ್ಲಿವೆ. ಬೆಂಗಳೂರು, ಧಾರವಾಡ, ಶಿವಮೊಗ್ಗ, ರಾಯಚೂರು ಕೃಷಿ ವಿಶ್ವವಿದ್ಯಾನಿಲಯಗಳು, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾನಿಲಯ, ಬೀದರ್‌ನಲ್ಲಿ ಪಶುವೈದ್ಯ ಸೇವೆಗಳ ವಿಶ್ವವಿದ್ಯಾನಿಲಯವಿದೆ.

    ಇದನ್ನೂ ಓದಿರಿ: ಕನ್ನಡ ರಾಜ್ಯೋತ್ಸವ 2024: ಕಡಲತೀರದ ಹೆಮ್ಮೆ, ಅದ್ಭುತ ಸ್ವರಮಾಧುರ್ಯ ಹೊಂದಿರುವ ಆಯ್ದ 10 ಯಕ್ಷಗಾನ ಭಾಗವತರು ಇವರು
  9. ದೂರ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ಮೈಸೂರು ವಿವಿಯಲ್ಲಿ ಆರಂಭಿಸಿದ ಅಂಚೆ ತೆರವಿನ ವಿಭಾಗವೇ ಈಗ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ. ಎರಡೂವರೆ ದಶಕದ ಅವಧಿಯನ್ನು ಪೂರೈಸಿ ಲಕ್ಷಾಂತರ ಶಿಕ್ಷಣ ವಂಚಿತರು ಉನ್ನತ ಶಿಕ್ಷಣ ಪಡೆಯಲು ಕರಾಮುವಿ ನೆರವಾಗಿದೆ. ಮಹಿಳೆಯರಿಗೂ ಶಿಕ್ಷಣ ಸಿಗಬೇಕು ಎನ್ನುವ ಮಹದಾಸೆಯೊಂದಿಗೆ ವಿಜಯಪುರದಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವನ್ನು ಎರಡು ದಶಕದ ಹಿಂದೆಯೇ ಆರಂಭಿಸಲಾಯಿತು. ಈಗ ಕರ್ನಾಟಕ ಹಲವು ಕಾಲೇಜುಗಳ ಸಂಯೋಜನೆಯೊಂದಿಗೆ ಮಹಿಳೆಯ ಶಿಕ್ಷಣದ ಬೇಡಿಕೆಗಳನ್ನು ಈ ವಿಶ್ವವಿದ್ಯಾನಿಲಯ ಒದಗಿಸುತ್ತಿದೆ.
  10. ಕರ್ನಾಟಕದಲ್ಲಿ ಖಾಸಗಿಯಾಗಿಯೂ ಹಲವಾರು ವಿಶ್ವವಿದ್ಯಾನಿಲಯಗಳು ತಮ್ಮದೇ ನೆಲೆಗಟ್ಟಿನಲ್ಲಿ ರೂಪುಗೊಂಡಿವೆ. 27 ಖಾಸಗಿ ವಿಶ್ವವಿದ್ಯಾನಿಲಯ, 11 ಡೀಮ್ಡ್‌ ವಿಶ್ವವಿದ್ಯಾನಿಲಯ, ಕಲಬುರಗಿಯಲ್ಲಿ ಕೇಂದ್ರ ವಿಶ್ವವಿದ್ಯಾನಿಲಯವೂ ಇದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ