ಕನ್ನಡ ರಾಜ್ಯೋತ್ಸವ 2024: ಭಾರತೀಯ ಸೇನೆ ಸೇರಿದ ಕರ್ನಾಟಕದ ಹೆಮ್ಮೆ ಮುಧೋಳ ನಾಯಿ ತಳಿ ಬಗ್ಗೆ ನೀವು ತಿಳಿಯಬೇಕಾದ 10 ಅಂಶಗಳಿವು
Oct 25, 2024 08:50 PM IST
ಕರ್ನಾಟಕದ ಮುಧೋಳ ತಳಿಗೆ ಹೊರ ರಾಜ್ಯಗಳಲ್ಲೂ ಬೇಡಿಕೆ ಹೆಚ್ಚಿದೆ,
ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್ ಟೈಮ್ಸ್ ಕನ್ನಡವು ಕರ್ನಾಟಕದ ಹೆಮ್ಮೆಯ ಮುಧೋಳ ತಳಿಯ ನಾಯಿಯ ಬೆಳವಣಿಗೆ ಹಾದಿ, ಅವುಗಳ ವಿಶೇಷತೆಯ ಮಾಹಿತಿಯನ್ನು ಇಲ್ಲಿ ನೀಡಿದೆ.
ಕರ್ನಾಟಕದ ಮುಧೋಳ ತಳಿಗೆ ಹೊರ ರಾಜ್ಯಗಳಲ್ಲೂ ಬೇಡಿಕೆ ಹೆಚ್ಚಿದೆ,
- ಉತ್ತರ ಕರ್ನಾಟಕದ ಕೃಷ್ಣಾ- ಘಟಪ್ರಭಾ ನದಿ ತೀರದ, ಕಬ್ಬಿನ ನಾಡು ಮುಧೋಳ ರನ್ನ ನಾಡು ಎಂದೇ ಜನಜನಿತ. ಮುಧೋಳ ಇವೆಲ್ಲದರ ನಡುವೆ ಶ್ವಾನದಿಂದಲೂ ಜನಪ್ರಿಯ. ಇಲ್ಲಿನ ಮುಧೋಳ ತಳಿ ನಾಯಿಯಿಂದಾಗಿ ಕರ್ನಾಟಕ ಮಾತ್ರವಲ್ಲದೇ ಭಾರತದಲ್ಲಿ ಈ ಊರು ಹೆಸರು ಪಡೆದಿದೆ.
- ಮುಧೋಳ ತಾಲ್ಲೂಕಿನ ರಾಜವಂಶಸ್ಥ ಮಾಲಾಜಿ ರಾವ್ ಘೋರ್ಪಡೆ ಅವರು ಶತಮಾನದ ಹಿಂದೆಯೇ ಮುಧೋಳ ತಳಿಯ ಶ್ವಾನಕ್ಕೆ ಹೆಚ್ಚಿನ ಒತ್ತು ನೀಡಿದರು. ತಮ್ಮ ಸಂಸ್ಥಾನದಲ್ಲಿ ಈ ತಳಿ ನಾಯಿಗಳನ್ನು ಬಳಸುತ್ತಿದ್ದರು. ಅವುಗಳ ಪುನರುತ್ಥಾನ, ತಳಿ ಸಂವರ್ಧನೆಗೆ ಒತ್ತು ನೀಡಿದರು. ಅವರು ಬ್ರಿಟೀಷ್‌ನ ಪ್ರತಿನಿಧಿಗಳ ಸಹಿತ ಹಲವರಿಗೆ ಉಡುಗೊರೆಯಾಗಿ ಮುಧೋಳ ತಳಿ ನಾಯಿಯನ್ನು ನೀಡುತ್ತಿದ್ದರು.
- ಇವು ಮೂಲವಾಗಿ ಮುಧೋಳದ ತಳಿಗಳೇ. ಇಲ್ಲಿನ ಊರುಗಳಲ್ಲಿ ಕಂಡು ಬರುತ್ತವೆ. ಸಾಮಾನ್ಯ ನಾಯಿಗಳಿಗೂ ಇವುಗಳಿಗೂ ವ್ಯತ್ಯಾಸವಿದೆ. ಮುಧೋಳ ನಾಯಿ ಗಮನ ಸೆಳೆಯುವುದು ಅದರ ಎತ್ತರ ಹಾಗೂ ತೆಳುವಾದ ನಡುಕಟ್ಟು, ತೀಕ್ಷ್ಣ ವೀಕ್ಷಣೆಯ ಕಾರಣದಿಂದ. 270 ಡಿಗ್ರಿವರೆಗಿನ ದೃಷ್ಟಿ ಸೂಕ್ಷ್ಮತೆ ಹೊಂದಿರುವುದು ಈ ಶ್ವಾನಗಳ ವಿಶೇಷ ವಿಶಿಷ್ಟ ದೈಹಿಕ ರಚನೆಯ ಕಾರಣ ಗಂಟೆಗೆ ಐವತ್ತು ಕಿಮೀ ವೇಗದಲ್ಲಿ ಓಡಬಲ್ಲವು ವಯಸ್ಕ ಶ್ವಾನಗಳ ದೇಹತೂಕ 22ರಿಂದ 28 ಕೆಜಿ ಇರುತ್ತದೆ. ಇದನ್ನು ಮನೆಯಲ್ಲಿ ವಿಚಕ್ಷಣೆಗೆ ಹಾಗೂ ರಕ್ಷಣೆಗೆ ಬಳಕೆ ಮಾಡಿಕೊಂಡು ಬರಲಾಗುತ್ತಿದೆ.
ಇದನ್ನೂ ಓದಿರಿ: ಕನ್ನಡ ರಾಜ್ಯೋತ್ಸವ 2024: ಕರ್ನಾಟಕದ ವಿಭಿನ್ನ ಸಂಗ್ರಹಣೆಯ 10 ಪ್ರಸಿದ್ಧ ಮ್ಯೂಸಿಯಂಗಳು ಯಾವುದಿರಬಹುದು - ಮುಧೋಳ ಹೌಂಡ್ ಮೂಲತಃ ಬೇಟೆ ನಾಯಿ. ಜೋತಾಡುವ ಕಿವಿಗಳ ಶಿಕಾರಿ ನಾಯಿಗಳನ್ನು ‘ಹೌಂಡ್’ ಎಂದು ಕರೆಯುವುದು ವಾಡಿಕೆ. ಕೆಲವರು ತೋಟಗಳನ್ನು ಕಾಯಲು ಮುಧೋಳ ತಳಿಯನ್ನು ಬಳಸಿಕೊಂಡು ಬರುತ್ತಿದ್ದಾರೆ. ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ, ತೆಲಂಗಾಣ ಸಹಿತ ಹಲವು ರಾಜ್ಯಗಳಲ್ಲಿ ಈಗಲೂ ಮುಧೋಳ ನಾಯಿ ಬಳಕೆಯಲ್ಲಿವೆ.
- ಒಂದು ಮುಧೋಳ ತಳಿ ನಾಯಿ ಮರಿ ಬೆಲೆ 15 ಸಾವಿರ ದಿಂದ 20 ಸಾವಿರ ರೂ.ವರೆಗೂ ಬೆಲೆ ಬಾಳುತ್ತದೆ. ದೊಡ್ಡ ನಾಯಿಗೆ ಮೂರರಿಂದ ನಾಲ್ಕು ಪಟ್ಟು ಅಧಿಕ. ಮರಿ ಇದ್ದಾಗಲೇ ಇದನ್ನು ಖರೀದಿಸಿ ಸಾಕುವವರು ಅಧಿಕ. ಮುಧೋಳ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ತಳಿ ನಾಯಿ ಸಾಕುವವರು,ಮಾರಾಟ ಮಾಡುವವರ ದೊಡ್ಡ ಸಂಖ್ಯೆಯೇ ಇದೆ. ಇದು ಹಲವರ ಬದುಕಿಗೆ ಆಧಾರವೂ ಆಗಿದೆ. ಶ್ವಾನ ಪ್ರದರ್ಶನಕೂ ಕರೆದುಕೊಂಡು ಹೋಗಿ ಬಹುಮಾನ ಗೆದ್ದವರೂ ಇದ್ದಾರೆ.
- ಲೋಕಾಪುರದ ವೆಂಕಣ್ಣ ದುಂಡಪ್ಪ ನಾವದಗಿ ಅವರು ಅವರ ಮುತ್ತಜ್ಜನ ಕಾಲದಿಂದಲೂ ಮುಧೋಳ ಶ್ವಾನ ಸಾಕುತ್ತಿದ್ದಾರೆ. ನಲವತ್ತು ಐದು ದಿನಗಳ ನಾಯಿ ಮರಿಗಳನ್ನು ಹದಿನೈದು ಸಾವಿರ ರೂಪಾಯಿಗಳಿಗೆ ಮಾರಾಟ ಮಾಡುತ್ತಾರೆ. ಬೆಂಗಳೂರು , ಮಂಗಳೂರು , ಮುಂಬೈ , ಮದುರೈ , ಮಾತ್ರವಲ್ಲದೆ ಚೀನಾ , ಅಬುದಾಬಿ , ಬಾಂಗ್ಲಾದೇಶ ಸೇರಿ ಅನೇಕ ದೇಶಗಳಿಗೆ ಮುಧೋಳ ನಾಯಿಗಳು ಖರೀದಿಯಾಗಿವೆ.
ಇದನ್ನೂ ಓದಿರಿ: ಕನ್ನಡ ರಾಜ್ಯೋತ್ಸವ 2024: ಕರ್ನಾಟಕದ 10 ಪ್ರಸಿದ್ಧ ಕ್ರೀಡಾಂಗಣಗಳಿವು; ಚಿನ್ನಸ್ವಾಮಿ ಮೈದಾನ ಮಾತ್ರವಲ್ಲ, ಇವೂ ಫೇಮಸ್ - ಮುಧೋಳ ಸಮೀಪದ ತಿಮ್ಮಾಪುರದಲ್ಲಿ ಮುಧೋಳ ಶ್ವಾನ ತಳಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಕರ್ನಾಟಕ ಸರ್ಕಾರದ ಪಶು ಸೇವೆಗಳ ಇಲಾಖೆಯ ಮೂಲಕವೂ ಪ್ರೋತ್ಸಾಹ ಧನ ನೀಡಿ ಹಲವು ಕುಟುಂಬಗಳಿಗೆ ಆಸರೆಯೂ ಆಗಿದೆ.
- ನರೇಂದ್ರ ಮೋದಿಯವರ ಭದ್ರತಾ ತಂಡದಲ್ಲಿ ಸ್ಥಾನ ಪಡೆದಿವೆ ಮುಧೋಳ ನಾಯಿ. ಈ ಮುಧೋಳ ತಳಿ ನಾಯಿಗಳನ್ನು ಭಾರತೀಯ ಸೇನೆಯ ಗಡಿ ಭಾಗದಲ್ಲಿ ಬಳಸಲಾಗುತ್ತದೆ.ನುಸುಳುಕೋರರನ್ನು ತಡೆಯಲು ಹಲವು ಕಡೆ ಮುಧೋಳ ತಳಿ ನಾಯಿಗಳು ಗಸ್ತು ತಿರುಗುತ್ತವೆ.
- ಕರ್ನಾಟಕದ ಅರಣ್ಯ ಇಲಾಖೆಯೂ ಈ ನಾಯಿಗಳನ್ನು ಬಳಸಲಾಗುತ್ತಿದೆ. ಕರ್ನಾಟಕದ ಬಂಡೀಪುರದಲ್ಲಿ ಮುಧೋಳ ತಳಿ ನಾಯಿಯೇ ಪ್ರಾಣಿ ಬೇಟೆಗಾರರ ವಿಚಕ್ಷಣೆಯಲ್ಲಿ ನಿರತರಾಗಿವೆ. ಅಸ್ಸಾಂ ಅರಣ್ಯ ಹಾಗೂ ಪೊಲೀಸ್ ಇಲಾಖೆಯಲ್ಲೂ ಬಳಕೆಯಾಗುತ್ತಿವೆ.
- ಮುಧೋಳ್ ಹೌಂಡ್ ಭಾರತದ ಎಲ್ಲಾ ಪ್ರಾಣಿ ಮತ್ತು ಪಕ್ಷಿ ತಳಿಗಳನ್ನು ದಾಖಲಿಸುವ ನ್ಯಾಷನಲ್ ಬ್ಯೂರೋ ಆಫ್ ಅನಿಮಲ್ ಜೆನೆಟಿಕ್ ರಿಸೋರ್ಸಸ್ (NBAGR) ನಿಂದ ಗುರುತಿಸಲ್ಪಟ್ಟ ಸ್ಥಳೀಯ ತಳಿಗಳ ಎಲೈಟ್ ಲೀಗ್‌ಗೆ ಪ್ರವೇಶಿಸಿದೆ.ಮುಧೋಳ ನಾಯಿಗೆ ಸರ್ಕಾರಿ ಸಂಸ್ಥೆಯಿಂದ ಅಧಿಕೃತ ಮಾನ್ಯತೆ ಸಿಕ್ಕಿರುವುದು ಇದೇ ಮೊದಲು. ಈ ಎಲ್ಲಾ ವರ್ಷಗಳಲ್ಲಿ, ಹೆಚ್ಚು ಬೇಡಿಕೆಯಿರುವ ನಾಯಿ ತಳಿಯನ್ನು ಕೆನಲ್ ಕ್ಲಬ್‌ಗಳಂತಹ ಖಾಸಗಿ ಏಜೆನ್ಸಿಗಳು ಮಾತ್ರ ಗುರುತಿಸಿರುವುದು ವಿಶೇಷ.