ಕರ್ನಾಟಕದ ಟಾಪ್‌ 10 ಆರ್‌ಟಿಒ ಕೋಡ್‌ಗಳು ಯಾವುವು? ಆರ್‌ಟಿಒ ಕೋಡ್‌ ನೋಡಿ ಊರು ಕಂಡು ಹಿಡಿಯಿರಿ, ಕೆಎ 01ರಿಂದ ಕೆಎ 71ರ ತನಕ ಇಲ್ಲಿದೆ ವಿವರ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದ ಟಾಪ್‌ 10 ಆರ್‌ಟಿಒ ಕೋಡ್‌ಗಳು ಯಾವುವು? ಆರ್‌ಟಿಒ ಕೋಡ್‌ ನೋಡಿ ಊರು ಕಂಡು ಹಿಡಿಯಿರಿ, ಕೆಎ 01ರಿಂದ ಕೆಎ 71ರ ತನಕ ಇಲ್ಲಿದೆ ವಿವರ

ಕರ್ನಾಟಕದ ಟಾಪ್‌ 10 ಆರ್‌ಟಿಒ ಕೋಡ್‌ಗಳು ಯಾವುವು? ಆರ್‌ಟಿಒ ಕೋಡ್‌ ನೋಡಿ ಊರು ಕಂಡು ಹಿಡಿಯಿರಿ, ಕೆಎ 01ರಿಂದ ಕೆಎ 71ರ ತನಕ ಇಲ್ಲಿದೆ ವಿವರ

ಆರ್‌ಟಿಒ ಕೋಡ್‌ಗಳ (RTO Code in Karnataka) ಕುರಿತು ಆಸಕ್ತಿ ಉಳ್ಳವರಿಗೆ ಕರ್ನಾಟಕ ರಾಜ್ಯೋತ್ಸವ 2024ರ ಸಮಯದಲ್ಲಿ ಕರ್ನಾಟಕದ ಟಾಪ್‌ 10 (ಕೆಎ 1ರಿಂದ ಕೆಎ 10ರ ತನಕದ ಆರ್‌ಟಿಒ ಕಚೇರಿ (Regional Transport Offices) ಮತ್ತು ಕೋಡ್‌ಗಳ ವಿವರ ಇಲ್ಲಿದೆ. ಉಳಿದಂತೆ ಸಂಕ್ಷಿಪ್ತವಾಗಿ ಕೆಎ 71 ಅಥನಿವರೆಗೆ ವಿವರವೂ ಇಲ್ಲಿದೆ.

ಕರ್ನಾಟಕದ ಆರ್‌ಟಿಒ ಕೋಡ್‌ ನೋಡಿ ಊರು ಕಂಡು ಹಿಡಿಯಿರಿ, ಕೆಎ 01ರಿಂದ ಕೆಎ 71ರ ತನಕ ಇಲ್ಲಿದೆ ವಿವರ
ಕರ್ನಾಟಕದ ಆರ್‌ಟಿಒ ಕೋಡ್‌ ನೋಡಿ ಊರು ಕಂಡು ಹಿಡಿಯಿರಿ, ಕೆಎ 01ರಿಂದ ಕೆಎ 71ರ ತನಕ ಇಲ್ಲಿದೆ ವಿವರ

ರಸ್ತೆಯಲ್ಲಿ ಸಾವಿರಾರು ಲಕ್ಷಾಂತರ ವಾಹನಗಳು ಸಾಗುತ್ತ ಇರುತ್ತವೆ. ಆದರೆ, ಆ ವಾಹನಗಳ ಆರ್‌ಟಿಒ ಕೋಡ್‌ ನೋಡಿದ ತಕ್ಷಣ ಕೆಲವರು "ಓ ಇದು ನಮ್ಮ ಊರಿನವರು, ಇದು ಬೆಂಗಳೂರಿನ ಗಾಡಿ, ಇದು ಮೈಸೂರಿನ ಬಂಡಿ, ಇದು ಹುಬ್ಬಳ್ಳಿ ಕಾರು" ಎಂದು ಗುರುತಿಸಿಬಿಡುತ್ತಾರೆ. ವಾಹನ ನೋಡಿ ಇದು ಎಲ್ಲಿಯದು ಎಂದು ಗುರುತಿಸಲು ನೆರವು ನೀಡುವುದು ವಾಹನಗಳ ನಂಬರ್‌ಪ್ಲೇಟ್‌ನಲ್ಲಿರುವ ಆರ್‌ಟಿಒ ಕೋಡ್‌. ಕರ್ನಾಟಕದಲ್ಲಿ ಹಲವು ಪ್ರಾದೇಶಿಕ ಸಾರಿಗೆ ಕಚೇರಿಗಳು ಇವೆ. ಕನ್ನಡ ರಾಜ್ಯೋತ್ಸವ 2024ರ ಪ್ರಯುಕ್ತ ಕರ್ನಾಟಕದ ಟಾಪ್‌ 10 ಪಟ್ಟಿ ಮಾಲಿಕೆಯಲ್ಲಿ ಕೆಎ 01ರಿಂದ ಕೆಎ 10ರವರೆಗಿನ ವಿವರ ಪಡೆಯೋಣ. ಉಳಿದ ಆರ್‌ಟಿಒ ಕೋಡ್‌ಗಳ ಕುರಿತು ಸಂಕ್ಷಿಪ್ತ ವಿವರವೂ ಇಲ್ಲಿದೆ.

ಕರ್ನಾಟಕದ ಟಾಪ್‌ 10 ಆರ್‌ಟಿಒ ಆಫೀಸ್‌, ಆರ್‌ಟಿಒ ಕೋಡ್‌ (ಕೆಎ 01ರಿಂದ ಕೆಎ 10ರ ತನಕ)

  1. ಬೆಂಗಳೂರು ಸೆಂಟ್ರಲ್ - ಕೋರಮಂಗಲ (ಕೆಎ-01)
  2. ಬೆಂಗಳೂರು ಪಶ್ಚಿಮ - ರಾಜಾಜಿನಗರ (ಕೆಎ-02)
  3. ಬೆಂಗಳೂರು ಪೂರ್ವ - ಇಂದಿರಾನಗರ (ಕೆಎ-03)
  4. ಬೆಂಗಳೂರು ಉತ್ತರ - ಯಶವಂತಪುರ (ಕೆಎ-04)
  5. ಬೆಂಗಳೂರು ದಕ್ಷಿಣ - ಜಯನಗರ (ಕೆಎ-05)
  6. ತುಮಕೂರು (ಕೆಎ-06)
  7. ಕೋಲಾರ (ಕೆಎ-07)
  8. ಕೋಲಾರ ಗೋಲ್ಡ್ ಫೀಲ್ಡ್ಸ್ (ಕೆಜಿಎಫ್) (ಕೆಎ-08)
  9. ಮೈಸೂರು ಪಶ್ಚಿಮ (ಕೆಎ-09)
  10. ಚಾಮರಾಜನಗರ (ಕೆಎ-10)

ಇವು ಕೆಎ 01ರಿಂದ ಕೆಎ 10ರವರೆಗಿನ ಆರ್‌ಟಿಒ ಆಫೀಸ್‌ಗಳು ಮತ್ತು ಆರ್‌ಟಿಒ ಕೋಡ್‌ಗಳು. ಆಸಕ್ತಿ ಇರುವವರು ಇನ್ನುಳಿದ ಆರ್‌ಟಿಒ ಕೋಡ್‌ಗಳ ವಿವರವನ್ನೂ ಈ ಮುಂದೆ ಪಡೆಯಬಹುದು.

  • ಮಂಡ್ಯ (ಕೆಎ-11)
  • ಮಡಿಕೇರಿ (ಕೆಎ-12)
  • ಹಾಸನ (ಕೆಎ-13)
  • ಶಿವಮೊಗ್ಗ (ಕೆಎ-14)
  • ಸಾಗರ (ಕೆಎ-15)
  • ಚಿತ್ರದುರ್ಗ (ಕೆಎ-16)
  • ದಾವಣಗೆರೆ (ಕೆಎ-17)
  • ಚಿಕ್ಕಮಗಳೂರು (ಕೆಎ-18)
  • ಮಂಗಳೂರು (ಕೆಎ-19)
  • ಉಡುಪಿ (ಕೆಎ-20)
  • ಪುತ್ತೂರು (ಕೆಎ-21)
  • ಬೆಳಗಾವಿ (ಕೆಎ-22)
  • ಚಿಕ್ಕೋಡಿ (ಕೆಎ-23)
  • ಬೈಲಹೊಂಗಲ (ಕೆಎ-24)
  • ಧಾರವಾಡ (ಕೆಎ-25)
  • ಗದಗ (ಕೆಎ-26)
  • ಹಾವೇರಿ (ಕೆಎ-27)
  • ಬಿಜಾಪುರ (ಕೆಎ-28)
  • ಬಾಗಲಕೋಟೆ (ಕೆಎ-29)
  • ಕಾರವಾರ (ಕೆಎ-30)
  • ಸಿರ್ಸಿ (ಕೆಎ-31)
  • ಕಲಬುರಗಿ (ಕೆಎ-32)
  • ಯಾದಗಿರಿ (ಕೆಎ-33)
  • ಬಳ್ಳಾರಿ (ಕೆಎ-34)
  • ಹೊಸಪೇಟೆ (ಕೆಎ-35)
  • ರಾಯಚೂರು (ಕೆಎ-36)
  • ಕೊಪ್ಪಳ (ಕೆಎ-37)
  • ಬೀದರ್ (ಕೆಎ-38)
  • ಭಾಲ್ಕಿ (ಕೆಎ-39)
  • ಚಿಕ್ಕಬಳ್ಳಾಪುರ (ಕೆಎ-40)
  • ಜ್ಞಾನಭಾರತಿ (ಕೆಎ-41)
  • ರಾಮನಗರ (ಕೆಎ-42)
  • ದೇವನಹಳ್ಳಿ (ಕೆಎ-43)
  • ತಿಪಟೂರು (ಕೆಎ-44)
  • ಹುಣಸೂರು (ಕೆಎ-45)
  • ಸಕಲೇಶಪುರ (ಕೆಎ-46)
  • ಹೊನ್ನಾವರ (ಕೆಎ-47)
  • ಜಮಖಂಡಿ (ಕೆಎ-48)
  • ಗೋಕಾಕ್ (ಕೆಎ-49)
  • ಯಲಹಂಕ (ಕೆಎ-50)
  • ಎಲೆಕ್ಟ್ರಾನಿಕ್ಸ್ ಸಿಟಿ (ಕೆಎ-51)
  • ನೆಲಮಂಗಲ (ಕೆಎ-52)
  • ಕೃಷ್ಣರಾಜಪುರಂ (ಕೆಎ-53)
  • ನಾಗಮಂಗಲ (ಕೆಎ-54)
  • ಮೈಸೂರು ಪೂರ್ವ (ಕೆಎ-55)
  • ಬಸವಕಲ್ಯಾಣ (ಕೆಎ-56)
  • ಶಾಂತಿನಗರ (ಕೆಎ-57)
  • ಚಾಮರಾಜಪೇಟೆ (ಕೆಎ-58)
  • ಬನಶಂಕರಿ (ಕೆಎ-59)
  • ಆರ್‌ಟಿ ನಗರ (ಕೆಎ-60)
  • ಮಾರತಹಳ್ಳಿ (ಕೆಎ-61)
  • ಸುರತ್ಕಲ್‌ (ಕೆಎ-62)
  • ಹುಬ್ಬಳ್ಳಿ (ಕೆಎ-63)
  • ಮಧುಗಿರಿ - ತುಮಕೂರು ಜಿಲ್ಲೆ (ಕೆಎ-64)
  • ದಾಂಡೇಲಿ (ಕೆಎ-65)
  • ತರೀಕೆರೆ - ಚಿಕ್ಕಮಗಳೂರು ಜಿಲ್ಲೆ (ಕೆಎ-66)
  • ಸೇಡಂ (ಕೆಎ 67)
  • ರಾಣೆಬೆನ್ನೂರು ಹಾವೇರಿ (ಕೆಎ 68)
  • ರಾಣೆಬೆನ್ನೂರು (ಕೆಎ 69)
  • ಬಂಟ್ವಾಳ (ಕೆಎ 70)
  • ಅಥನಿ (ಕೆಎ 71)

ಇದನ್ನೂ ಓದಿ: HSRP Online: ನಿಮ್ಮ ವಾಹನಕ್ಕೆ ಫಟಾಫಟ್ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ನೋಂದಣಿ ಮಾಡಿಸಿ, ಈ ಹಂತಹಂತದ ಗೈಡ್‌ ಅನುಸರಿಸಿ

Whats_app_banner