ಕನ್ನಡ ರಾಜ್ಯೋತ್ಸವ 2024: ಕರ್ನಾಟಕದ ವಿಭಿನ್ನ ಸಂಗ್ರಹಣೆಯ 10 ಪ್ರಸಿದ್ಧ ಮ್ಯೂಸಿಯಂಗಳು ಯಾವುದಿರಬಹುದು
- ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್ ಟೈಮ್ಸ್ ಕನ್ನಡವು ಕರ್ನಾಟಕದ ವಿಭಿನ್ನ, ಪ್ರಮುಖ ವಸ್ತು ಸಂಗ್ರಹಾಯಲಗಳ ಪಟ್ಟಿ ಮಾಡಿದೆ.
- ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್ ಟೈಮ್ಸ್ ಕನ್ನಡವು ಕರ್ನಾಟಕದ ವಿಭಿನ್ನ, ಪ್ರಮುಖ ವಸ್ತು ಸಂಗ್ರಹಾಯಲಗಳ ಪಟ್ಟಿ ಮಾಡಿದೆ.
(1 / 11)
ಕರ್ನಾಟಕ ಹಲವು ಕಲೆ, ವಿಭಿನ್ನತೆಗಳ ಸಂಗ್ರಹ. ಇತಿಹಾಸವನ್ನು ತಿಳಿಯಬೇಕೆಂದರೆ ವಸ್ತು ಪ್ರದರ್ಶನ ಬೇಕೇ ಬೇಕು. ಅಂತಹ ವಿಭಿನ್ನ ವಸ್ತು ಪ್ರದರ್ಶನ( museums) ಕರ್ನಾಟಕದಲ್ಲಿವೆ. ಇದು ಬೆಂಗಳೂರಿನ ಚಿತ್ರಕಲಾ ಪರಿಷತ್ ನ ಕಲಾ ನೋಟ.
(2 / 11)
ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು ಪ್ರಾಣಿ ಸಂಗ್ರಹಾಲಯದ ಮ್ಯೂಸಿಯಂ ಆಕರ್ಷಣೀಯ. ಆರು ದಶಕದ ಹಿಂದೆಯೇ ಆರಂಭಗೊಂಡಿರುವ ಇಲ್ಲಿ ಎರಡು ಸಾವಿರಕ್ಕೂ ಅಧಿಕ ಪ್ರಾಣಿಗಳ ಮಾಹಿತಿ ಇದೆ.
(3 / 11)
ಧರ್ಮಸ್ಥಳದ ಮಂಜುನಾಥೇಶ್ವರ ವಸ್ತು ಸಂಗ್ರಹಾಲಯ ವಿಭಿನ್ನತೆಗಳ ಸಂಗಮ. ಅದರಲ್ಲೂ ಬಗೆಬಗೆಯ ಕಾರುಗಳ ಸಂಗ್ರಹ ಮಂಜೂಶಾದಲ್ಲಿ ಗಮನ ಸೆಳೆಯುತ್ತದೆ. ಪುರಾತನ (ವಿಂಟೇಜ್) ಕಾರುಗಳು, ದೇವಾಲಯದ ರಥಗಳು ಮತ್ತು ಪ್ರಾಚೀನ ಕಲಾಕೃತಿಗಳನ್ನು ಪ್ರದರ್ಶಿಸುತ್ತದೆ.
(4 / 11)
ರಾಮನಗರದ ಹೊರ ವಲಯದಲ್ಲಿರುವ ಜನಪದ ಲೋಕ ಕರ್ನಾಟಕದ ಜನಪದ ವೈವಿಧ್ಯದ ಸಂಗಮ,ಬೆಂಗಳೂರು-ಮೈಸೂರು ಹೆದ್ದಾರಿ ರಾಮನಗರದಿಂದ 4 ಕಿ.ಮೀ. ಜನಪದ ಲೋಕವು ಕರ್ನಾಟಕದ ಹಳ್ಳಿಯ ಜಾನಪದ ಕಲೆಗಳ ವಿಶೇಷ ಪ್ರದರ್ಶನವನ್ನು ಹೊಂದಿರುವ ವಸ್ತುಸಂಗ್ರಹಾಲಯ. ಇದು ಕರ್ನಾಟಕ ಜನಪದ ಪರಿಷತ್ತಿನ ಅಧೀನದಲ್ಲಿದೆ. ವಸ್ತುಸಂಗ್ರಹಾಲಯದಲ್ಲಿ 5,000 ಜಾನಪದ ಕಲಾಕೃತಿಗಳ ಪ್ರದರ್ಶನ ವೀಕ್ಷಣೆಗೆ ಅವಕಾಶವಿದೆ.
(5 / 11)
ಮೈಸೂರಿನ ರಾಜವಂಶಸ್ಥರ ಸುಪರ್ದಿಯ ಜಗನ್ಮೋಹನ ಅರಮನೆ ವಸ್ತು ಸಂಗ್ರಹಾಲವು ವಿಭಿನ್ನವಾಗಿದೆ. ಈ ಅರಮನೆಯಲ್ಲಿ ವಸ್ತು ಸಂಗ್ರಹಾಲಯವು 1915ರಿಂದ ಪ್ರಾರಂಭವಾಯಿತು. ಮೈಸೂರು ಶೈಲಿಯ ತೈಲ ವರ್ಣ ಚಿತ್ರಗಳನ್ನೊಳಗೊಂಡಿದೆ.ಈ ಗ್ಯಾಲರಿಯಲ್ಲಿ ತಿರುವಂಕೂರಿನ ರಾಜ ರವಿ ವರ್ಮರವರಿಂದ ರಚಿತವಾದ ತೈಲವರ್ಣ ಚಿತ್ರಗಳು ಪ್ರದರ್ಶಿಸಲ್ಪಟ್ಟಿವೆ. ಚೀನಾ, ಜಪಾನ್ ಇತರ ದೇಶಗಳ ಸುಪ್ರಿಸಿದ್ಧ ಚಿತ್ರಕಾರರ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಮೊಘಲ್, ರಜಪೂತ ಶೈಲಿಯ ಕಲಾತ್ಮಕ ವಸ್ತುಗಳು, ವಿವಿಧ ರೀತಿಯ ಗಡಿಯಾರಗಳ ಉತ್ತಮ ಸಂಗ್ರಹಗಳು, ಆಟಿಕೆಯ ಸಂಗ್ರಹಗಳು, ವಿವಿಧ ವಿವರಣೆಯನ್ನು ನೀಡುವ ವಸ್ತು ಸಂಗ್ರಹವು, ಕಲಾತ್ಮಕ ಪ್ರಪಂಚಕ್ಕೆ ಕೊಂಡೊಯ್ಯುತ್ತದೆ.
(6 / 11)
ಬೆಂಗಳೂರು ಎಚ್ಎಎಲ್ ಮ್ಯೂಸಿಯಂ ಆರು ದಶಕಗಳಿಂದ ಭಾರತೀಯ ವಾಯುಯಾನ ಉದ್ಯಮ ಮತ್ತು ಎಚ್‌ಎಎಲ್ ನ ಬೆಳವಣಿಗೆಯನ್ನು ಪ್ರದರ್ಶಿಸುತ್ತದೆ ಮ್ಯೂಸಿಯಂ ಏಷ್ಯಾದ ಅತಿದೊಡ್ಡ ಏರೋಸ್ಪೇಸ್ ಕಂಪನಿಗಳಲ್ಲಿ ಒಂದಾಗಿದೆ. ಭಾರತೀಯ ವಾಯುಯಾನ ಉದ್ಯಮ ಮತ್ತು HAL ನ ಪ್ರದರ್ಶನಗಳು. ವಿಮಾನ, ಹೆಲಿಕಾಪ್ಟರ್‌ಗಳು, ಎಂಜಿನ್ ಮಾದರಿಗಳು, ಫ್ಲೈಟ್ ಸಿಮ್ಯುಲೇಟರ್‌ಗಳು, ಅಣಕು ಏರ್ ಟ್ರಾಫಿಕ್ ಕಂಟ್ರೋಲ್ ಟವರ್‌ಗಳ ಮಾಹಿತಿ ಇಲ್ಲಿದೆ.
(7 / 11)
ಮೈಸೂರು ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ರೈಲ್ವೆ ಮ್ಯೂಸಿಯಂ ವಿಶೇಷ ಆಕರ್ಷಣೆ. ಇಲ್ಲಿ ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ವಿವಿಧ ಬಗೆಯ ರೈಲುಗಳು,ಎಂಜಿನಿಗಳ ಮಾದರಿಯಿದೆ. ರೈಲ್ವೆಯ ಪುರಾತನ ಮಾದರಿ ಹಾಗೂ ಬದಲಾದ ಕಾಲಘಟ್ಟದ ವಿವರ ನೀಡುತ್ತದೆ. ಕಿರು ರೈಲು ಪ್ರಯಾಣಕ್ಕೂ ಅವಕಾಶವಿದೆ.
(8 / 11)
ಬೆಂಗಳೂರು ಸರ್ಕಾರಿ ವಸ್ತುಸಂಗ್ರಹಾಲಯ 1865ರಲ್ಲಿ ಆರಂಭಗೊಂಡಿದೆ. ಒಂದೂವರೆ ಶತಮಾನಕ್ಕೂ ಮಿಗಿಲಾದ ಇತಿಹಾಸವಿದ್ದು. ಈಗಲೂ ಹಳೆಯ ಆಭರಣಗಳು, ಶಿಲ್ಪಕಲೆಗಳು, ನಾಣ್ಯಗಳು ಮತ್ತು ಶಾಸನಗಳು ಸೇರಿದಂತೆ ಪುರಾತತ್ವ ಮತ್ತು ಭೂವೈಜ್ಞಾನಿಕ ಕಲಾಕೃತಿಗಳ ಅಪರೂಪದ ಸಂಗ್ರಹವನ್ನು ಹೊಂದಿದೆ. ಈ ವಸ್ತುಸಂಗ್ರಹಾಲಯವು ಹಲ್ಮಿಡಿ ಶಾಸನಕ್ಕೆ ನೆಲೆಯಾಗಿದೆ , ಇದುವರೆಗೆ ಕಂಡುಬಂದಿರುವ ಅತ್ಯಂತ ಪ್ರಾಚೀನ ಕನ್ನಡ ಶಾಸನವಾಗಿದೆ
(9 / 11)
ಖ್ಯಾತ ಲೇಖಕ, ಮಾಲ್ಗುಡಿ ಡೇಸ್ ಖ್ಯಾತಿಯ ಆರ್.ಕೆ.ನಾರಾಯಣ್ ನಿವಾಸ ಈಗ ಮೈಸೂರಿನಲ್ಲಿ ಮ್ಯೂಸಿಯಂ ಆಗಿ ಮಾರ್ಪಟ್ಟಿದೆ. ಮೈಸೂರು ಮಹಾನಗರ ಪಾಲಿಕೆಯ ನಿರ್ವಹಣೆಯ ಈ ಮ್ಯೂಸಿಯಂನಲ್ಲಿ ಆರ್‌ಕೆ ನಾರಾಯಣ್ ಅವರ ಫೋಟೊ. ಕಾದಂಬರಿ, ಬಳಸಿದ ವಸ್ತುಗಳು ಹಾಗೂ ಸಾಹಿತ್ಯ ಒಡನಾಟ ನೆನಪಿಸುವ ಮಾಹಿತಿಯಿದೆ,
(10 / 11)
ಶಿವಮೊಗ್ಗದ ಸರ್ಕಾರಿ ವಸ್ತುಸಂಗ್ರಹಾಲಯ (ಶಿವಪ್ಪ ನಾಯಕ ಅರಮನೆ) ಪುರಾತತ್ವ ಮತ್ತು ಭೂವೈಜ್ಞಾನಿಕ ಕಲಾಕೃತಿಗಳ ಸಂಗ್ರಹ. 17 ನೇ ಶತಮಾನದ ಕರಾವಳಿ ಪ್ರದೇಶಗಳ ಮುಖ್ಯಸ್ಥ ಮತ್ತು ವಿಜಯನಗರ ಸಾಮ್ರಾಜ್ಯದ ಉತ್ತರಾಧಿಕಾರಿ ಶಿವಪ್ಪ ನಾಯಕನ ಅರಮನೆಯ ನಿವಾಸ. ವಸ್ತುಸಂಗ್ರಹಾಲಯವು ಅರಮನೆ ಪ್ರಾಂಗಣದಲ್ಲಿದೆ ಹಲವಾರು ಸೊಗಸಾದ ಕೆತ್ತನೆಯ ಶಿಲ್ಪಗಳನ್ನು ಹೊಂದಿದ್ದು ಆಕರ್ಷಕವಾಗಿದೆ.
ಇತರ ಗ್ಯಾಲರಿಗಳು