logo
ಕನ್ನಡ ಸುದ್ದಿ  /  ಕರ್ನಾಟಕ  /  ಕನ್ನಡ ರಾಜ್ಯೋತ್ಸವ 2024: ಅಡಕೆಯಿಂದ ಬೆಣ್ಣೆದೋಸೆವರೆಗೆ; ಮಧ್ಯ ಕರ್ನಾಟಕದ ಬಗ್ಗೆ ನೀವು ತಿಳಿಯಬೇಕಾದ 10 ವಿಶಿಷ್ಟ ಸಂಗತಿಗಳು

ಕನ್ನಡ ರಾಜ್ಯೋತ್ಸವ 2024: ಅಡಕೆಯಿಂದ ಬೆಣ್ಣೆದೋಸೆವರೆಗೆ; ಮಧ್ಯ ಕರ್ನಾಟಕದ ಬಗ್ಗೆ ನೀವು ತಿಳಿಯಬೇಕಾದ 10 ವಿಶಿಷ್ಟ ಸಂಗತಿಗಳು

Umesha Bhatta P H HT Kannada

Oct 28, 2024 04:44 PM IST

google News

ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆ ಭಾಗ ಹೊಂದಿರುವ ಮಧ್ಯ ಕರ್ನಾಟಕದ ಮಹತ್ವದ ಪ್ರದೇಶವೂ ಹೌದು.

    • ಕನ್ನಡ ರಾಜ್ಯೋತ್ಸವ 2024 (karnataka rajyotsava 2024) ಪ್ರಯುಕ್ತ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಕರ್ನಾಟಕದ ಪ್ರಮುಖ ಭಾಗವಾಗಿರುವ ಮಧ್ಯ ಕರ್ನಾಟಕದ 10 ವಿಶೇಷ ಸಂಗತಿಗಳ ಪಟ್ಟಿ ಮಾಡಿದೆ. ಕರ್ನಾಟಕದ ವಾಣಿಜ್ಯ ನಗರಿಯೂ ಆಗಿರುವ ದಾವಣಗೆರೆ, ಕೋಟೆ ನಗರಿ ಚಿತ್ರದುರ್ಗ, ಮಲೆನಾಡಿನ ಭಾಗವಾದ ಶಿವಮೊಗ್ಗ ಒಂದಷ್ಟು ಪ್ರದೇಶಗಳು ಮಧ್ಯಕರ್ನಾಟಕವಾಗಿ ಗುರುತಿಸಿಕೊಂಡಿವೆ.
ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆ ಭಾಗ ಹೊಂದಿರುವ ಮಧ್ಯ ಕರ್ನಾಟಕದ ಮಹತ್ವದ ಪ್ರದೇಶವೂ ಹೌದು.
ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆ ಭಾಗ ಹೊಂದಿರುವ ಮಧ್ಯ ಕರ್ನಾಟಕದ ಮಹತ್ವದ ಪ್ರದೇಶವೂ ಹೌದು.
  1. ಕರ್ನಾಟಕ ಮೊದಲು ಮೈಸೂರು ಕರ್ನಾಟಕ, ಮುಂಬೈ ಕರ್ನಾಟಕ, ಹೈದ್ರಾಬಾದ್‌ ಕರ್ನಾಟಕ ಎನ್ನುವ ಮೂರು ಭಾಗವಾಗಿತ್ತು. ಏಕೀಕರಣದ ನಂತರ ಸಮಗ್ರ ಕರ್ನಾಟಕವಾಗಿ ರೂಪುಗೊಂಡಿತು. ಈಗಿನ ಮಧ್ಯ ಕರ್ನಾಟಕದ ಜಿಲ್ಲೆಗಳು ಇದ್ದುದು ಮೈಸೂರು ಕರ್ನಾಟಕದಲ್ಲಿಯೇ. ಶಿವಮೊಗ್ಗ, ಚಿತ್ರದುರ್ಗ ಸಹಿತ ಕೆಲವು ಜಿಲ್ಲೆಗಳನ್ನು ಮಧ್ಯ ಕರ್ನಾಟಕದಲ್ಲಿ ಗುರುತಿಸಲಾಗುತ್ತಿತ್ತು. ಎರಡೂವರೆ ದಶಕಗಳ ಹಿಂದೆ ಚಿತ್ರದುರ್ಗದಿಂದ ಬೇರ್ಪಟ್ಟು ದಾವಣಗೆರೆಯೂ ರಚನೆಯಾಗಿರುವುದರಿಂದ ಅದನ್ನೇ ಮಧ್ಯ ಕರ್ನಾಟಕ ಎಂದು ಗುರುತಿಸಲಾಗುತ್ತದೆ.
  2. ಮಧ್ಯ ಕರ್ನಾಟಕದಲ್ಲಿ ಈಗ ಮಲೆನಾಡು ಭಾಗವೂ ಸೇರಿದಂತೆ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳು ಬರುತ್ತವೆ. ಕಿತ್ತೂರು ಕರ್ನಾಟಕದ ಭಾಗವಾಗಿರುವ ಹಾವೇರಿ ಜಿಲ್ಲೆಯ ಕೆಲವು ಭಾಗಗಳೂ ಮಧ್ಯ ಕರ್ನಾಟಕ ಎಂದೇ ಕರೆಯಲಾಗುತ್ತದೆ. ಈ ಭಾಗದಲ್ಲೇ ಕರ್ನಾಟಕದ ರಾಜಧಾನಿ ಮಾಡಿ ಎನ್ನುವ ಬೇಡಿಕೆಯೂ ಹಳೆಯದು.
  3. ದಾವಣಗೆರೆ ಜಿಲ್ಲೆ ವಾಣಿಜ್ಯ ನಗರಿಯಾಗಿ ಹೆಸರು ಪಡೆದಿದೆ. ಒಂದು ಕಾಲಕ್ಕೆ ಹತ್ತಿ ಗಿರಣಿಗಳು, ಕಾಟನ್‌ ಮಿಲ್‌ ಗಳಿಂದ ಇಲ್ಲಿ ಬಟ್ಟೆಗೆ ಭಾರೀ ಬೇಡಿಕೆಯಿತ್ತು. ಆನಂತರ ಕಾಟನ್‌ ಮಿಲ್‌ಗಳು ಮಾಯವಾಗಿ ಈಗ ಶಿಕ್ಷಣ ನಗರಿಯಾಗಿ, ಜವಳಿ ವಹಿವಾಟು ನಗರ, ಬೆಣ್ಣೆ ದೋಸೆ ನಗರಿಯಾಗಿ ದಾವಣಗೆರೆ ಬದಲಾಗಿದೆ.

    ಇದನ್ನೂ ಓದಿರಿ: ನೀವು ಭೇಟಿ ನೀಡಬಹುದಾದ ಕರ್ನಾಟಕದ 10 ಜಲಪಾತಗಳು
  4. ಚಿತ್ರದುರ್ಗವೂ ಐತಿಹಾಸಿಕ ಕೋಟೆ ನಗರಿ. ಒನಕೆ ಓಬವ್ವ, ಮದಕರಿ ನಾಯಕರ ಆಡಳಿತದ ಕಾಲಘಟ್ಟಗಳು, ಪುರಾತನ ಕೋಟೆಯೇ ಇಲ್ಲಿಯ ಆಕರ್ಷಣೆ, ಬರದ ಜಿಲ್ಲೆಯೆಂದೇ ಕರೆಯಲ್ಪಡುವ ಚಿತ್ರದುರ್ಗಕ್ಕೆ ಭದ್ರಾ ನೀರು ಪ್ರಯತ್ನ ಇನ್ನು ನಿಂತಿಲ್ಲ.
  5. ಶಿವಮೊಗ್ಗ ಮಲೆನಾಡು ಪ್ರದೇಶ ಹೊಂದಿದ್ದರೂ ಅರಮಲೆನಾಡಿನ ಭಾಗವೂ ಅಧಿಕವಾಗಿದೆ. ಶಿಕಾರಿಪುರ, ಸೊರಬ ಸಹಿತ ಹಲವು ಭಾಗಗಳು ದಾವಣಗೆರೆ ಭಾಗದೊಂದಿಗೂ ನಂಟು ಉಳಿಸಿಕೊಂಡಿದೆ. ಜನರಿಗೆ ಶಿವಮೊಗ್ಗ- ದಾವಣಗೆರೆಯ ಒಡನಾಟ ಹಿಂದಿನಿಂದಲೂ ಇದೆ. ಈಗ ಆಸ್ಪತ್ರೆ, ಮಕ್ಕಳ ಶಿಕ್ಷಣ ವಿಚಾರವಾಗಿ ಎರಡೂ ನಗರಗಳೂ ಈ ಭಾಗದವರಿಗೆ ಹತ್ತಿರವೇ.
  6. ಅಡಕೆ ಈ ಭಾಗದ ಪ್ರಮುಖ ಬೆಳೆ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಲ್ಲಿ ಹಿಂದಿನ ದಶಕಗಳಿಗೆ ಹೋಲಿಸಿದರೆ ಅಡಕೆ ಪ್ರಮಾಣ ಅಧಿಕವಾಗಿದೆ. ಎಲ್ಲರೂ ಅಡಿಕೆ ತೋಟ ಮಾಡುವವರೇ. ಅಡಕೆಯಿಂದ ಈ ಭಾಗದ ಜನರ ಬದುಕೂ ಬದಲಾಗಿದೆ. ಚಿತ್ರದುರ್ಗದ ಭೀಮಸಮುದ್ರವನ್ನು ಅಡಕೆ ಪ್ರಮುಖ ಊರು ಎಂದೇ ಗುರುತಿಸಲಾಗುತ್ತದೆ. ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಹೊಳಲ್ಕೆರೆ ತಾಲ್ಲೂಕುಗಳಲ್ಲಿ ಅಡಕೆ ಬೆಳೆ ಹೆಚ್ಚು.

    ಇದನ್ನೂ ಓದಿರಿ: ಕನ್ನಡ ರಾಜ್ಯೋತ್ಸವ 2024: ಐತಿಹಾಸಿಕ ನಿರ್ಧಾರ ತೆಗೆದುಕೊಂಡ ಕರ್ನಾಟಕದ 10 ಮುಖ್ಯಮಂತ್ರಿಗಳು; ಅರಸರ ಭೂ ಕ್ರಾಂತಿ, ಸಿದ್ದರಾಮಯ್ಯರ ತೆರಿಗೆ ನೀತಿ
  7. ಪ್ರವಾಸೋದ್ಯಮದ ವಿಚಾರದಲ್ಲೂ ಈ ಭಾಗ ಆಕರ್ಷಣೀಯ ತಾಣಗಳನ್ನು ಹೊಂದಿದೆ. ಚಿತ್ರದುರ್ಗದ ಕೋಟೆ, ಜೋಗಿಮಟ್ಟಿ, ವಾಣಿವಿಲಾಸಸಾಗರ ಜಲಾಶಯ, ನಾಯಕನಹಟ್ಟಿ ಇಲ್ಲಿನ ಪ್ರಮುಖ ತಾಣಗಳು. ದಾವಣಗೆರೆ ಜಿಲ್ಲೆಯಲ್ಲಿ ಸಂತೇಬೆನ್ನೂರು ಪುಷ್ಕರಣಿ, ಏಷಿಯಾದ ಅತಿ ದೊಡ್ಡ ಕೆರೆಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಶಾಂತಿ ಸಾಗರ ಕೆರೆ, ಹರಿಹರದ ಹರಿಹರೇಶ್ವರ ದೇವಸ್ಥಾನ ಪ್ರಮುಖವಾದವು.
  8. ದಾವಣಗೆರೆ ಎಂದರೆ ಬೆಣ್ಣೆ ದೋಸೆ ಎನ್ನುವ ಹೆಸರು ಸೇರಿಕೊಂಡಿದೆ. ದಾವಣಗೆರೆಯ ಯಾವುದೇ ಪ್ರಮುಖ ರಸ್ತೆಗೆ ಹೋದರು ಕನಿಷ್ಟ ಒಂದೆರಡು ಬೆಣ್ಣೆ ದೋಸೆ ಹೊಟೇಲ್‌ ಸಿಗುತ್ತವೆ. ಅಷ್ಟರ ಮಟ್ಟಿಗೆ ಬೆಣ್ಣೆ ದೋಸೆ ಜನರಿಗೆ ಹತ್ತಿರವಾಗಿದೆ. ದಾವಣಗೆರೆ ಹೆಸರಲ್ಲೇ ಬೆಂಗಳೂರು ಸಹಿತ ಹಲವು ಊರುಗಳಲ್ಲಿ ಬೆಣ್ಣೆ ಹೊಟೇಲ್‌ಗಳು ರೂಪುಗೊಂಡಿವೆ.
  9. ಭದ್ರಾ ಜಲಾಶಯ ಈ ಭಾಗದವರ ಜೀವನಾಡಿ. ಐದು ದಶಕದ ಹಿಂದೆ ಚಿಕ್ಕಮಗಳೂರು- ಶಿವಮೊಗ್ಗ ಜಿಲ್ಲೆಯ ಗಡಿ ಭಾಗದ ಲಕ್ಕವಳ್ಳಿಯಲ್ಲಿ ರೂಪಿಸಿರುವ ಭದ್ರಾ ಜಲಾಶಯದಿಂದಾಗಿ ದಾವಣಗೆರೆ ಹಲವು ಭಾಗಗಳಲ್ಲಿ ಕೃಷಿ ಭೂಮಿ ವಿಸ್ತರಣೆ ಕಂಡಿದೆ. ಭತ್ತದ ಜತೆಗೆ ಅಡಕೆ ಈ ಭಾಗದವರ ಬದುಕಿಗೆ ಆಸರೆಯಾಗಿದೆ.

    ಇದನ್ನೂ ಓದಿರಿ: ಕನ್ನಡ ರಾಜ್ಯೋತ್ಸವ 2024: ಕಡಲತೀರದ ಹೆಮ್ಮೆ, ಅದ್ಭುತ ಸ್ವರಮಾಧುರ್ಯ ಹೊಂದಿರುವ ಆಯ್ದ 10 ಯಕ್ಷಗಾನ ಭಾಗವತರು ಇವರು
  10. ರಾಜಕೀಯವಾಗಿಯೂ ಈ ಭಾಗ ಮಹತ್ವ ಹೊಂದಿದೆ. ಮಧ್ಯ ಕರ್ನಾಟಕದವರೂ ಹೆಚ್ಚು ಸಿಎಂಗಳಾಗಿದ್ದಾರೆ. ಚಿತ್ರದುರ್ಗದ ಎಸ್.ನಿಜಲಿಂಗಪ್ಪ, ಚನ್ನಗಿರಿಯ ಜೆ.ಎಚ್.ಪಟೇಲ್‌, ಶಿಕಾರಿಪುರದ ಬಿ.ಎಸ್‌.ಯಡಿಯೂರಪ್ಪ, ಸೊರಬದ ಎಸ್.ಬಂಗಾರಪ್ಪ ಸಿಎಂ ಆಗಿ ಆಡಳಿತ ನಡೆಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ