logo
ಕನ್ನಡ ಸುದ್ದಿ  /  ಕರ್ನಾಟಕ  /  Bjp Campaign: ಲೋಕ ಸಮರದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಗುರಿ; ಕರ್ನಾಟಕದಲ್ಲಿ ತಳಮಟ್ಟದಿಂದ ಪ್ರಚಾರಕ್ಕೆ ಬಿಜೆಪಿ ರಣತಂತ್ರ

BJP Campaign: ಲೋಕ ಸಮರದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಗುರಿ; ಕರ್ನಾಟಕದಲ್ಲಿ ತಳಮಟ್ಟದಿಂದ ಪ್ರಚಾರಕ್ಕೆ ಬಿಜೆಪಿ ರಣತಂತ್ರ

Raghavendra M Y HT Kannada

Mar 22, 2024 09:23 PM IST

google News

ಮಾರ್ಚ್ 18ರ ಸೋಮವಾರ ಶಿವಮೊಗ್ಗದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ಪಕ್ಷದ ಅಭ್ಯರ್ಥಿ ಬಿವೈ ರಾಘವೇಂದ್ರ ಪರ ಪ್ರಚಾರ ನಡೆಸಿದರು.

    • BJP Campaign: ಕರ್ನಾಟಕದಲ್ಲಿ ಹೆಚ್ಚಿನ ಲೋಕಸಭೆ ಸ್ಥಾನಗಳನ್ನು ಗೆಲ್ಲೋಕೆ ಬಿಜೆಪಿ ಹಲವು ರಣತಂತ್ರಗಳನ್ನು ರೂಪಿಸುತ್ತಿದೆ. ಇದರಲ್ಲಿ ತಳಮಟ್ಟದಿಂದ ಪ್ರಚಾರವೂ ಒಂದು. ಕೇಸರಿ ಪಕ್ಷದ ಕ್ಯಾಂಪೇನ್ ವಿವರ ಇಲ್ಲಿದೆ.  (ವರದಿ: ಎಚ್. ಮಾರುತಿ)
ಮಾರ್ಚ್ 18ರ ಸೋಮವಾರ ಶಿವಮೊಗ್ಗದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ಪಕ್ಷದ ಅಭ್ಯರ್ಥಿ ಬಿವೈ ರಾಘವೇಂದ್ರ ಪರ ಪ್ರಚಾರ ನಡೆಸಿದರು.
ಮಾರ್ಚ್ 18ರ ಸೋಮವಾರ ಶಿವಮೊಗ್ಗದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ಪಕ್ಷದ ಅಭ್ಯರ್ಥಿ ಬಿವೈ ರಾಘವೇಂದ್ರ ಪರ ಪ್ರಚಾರ ನಡೆಸಿದರು. (PTI)

ಬೆಂಗಳೂರು: ರಾಜಕೀಯ ತಂತ್ರಗಾರಿಕೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಮೀರಿಸುವ ಮತ್ತೊಂದು ಪಕ್ಷ ಇರಲಿಕ್ಕಿಲ್ಲ. ಪ್ರತಿ ಚುನಾವಣೆಯಲ್ಲೂ ಒಂದಿಲ್ಲೊಂದು ತಂತ್ರಗಾರಿಕೆಯನ್ನು ಹೆಣೆಯುತ್ತಲೇ ಇರುತ್ತದೆ. ಇದೇ ಕಾರಣಕ್ಕೆ ದೇಶದ ಉದ್ದಗಲಕ್ಕೂ ಬಿಜೆಪಿ ಅಸ್ತಿತ್ವವನ್ನು ಕಾಣಬಹುದು. ಕರ್ನಾಟಕದ 28 ಲೋಕಸಭಾ ಮತ್ತು 224 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಬಲವಾಗಿ ನೆಲೆಯೂರಿದೆ. ಇಂತಹ ತಂತ್ರಗಾರಿಕೆ ಇಲ್ಲದೆ 25 ಸ್ಥಾನಗಳನ್ನು ಗೆಲ್ಲಲು ಸಾಧ್ಯವೇ ಇರಲಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಸಣ್ಣ ಸಣ್ಣ ಗ್ರಾಮಗಳನ್ನು ತಲುಪಲು ಬಿಜೆಪಿ ವಿಶಿಷ್ಟ ತಂತ್ರಗಾರಿಕೆಯನ್ನು ರೂಪಿಸಿದೆ. ಇಂತಹ ಗ್ರಾಮ, ಹಳ್ಳಿಗಳಲ್ಲಿ ವೇದಿಕೆ, ಮೈಕ್‌ಗಳಿಲ್ಲದೆ ಅನೌಪಚಾರಿಕವಾಗಿ ಸಭೆ ನಡೆಸಿ ಮತದಾರರಿಗೆ ಹತ್ತಿರವಾಗುವ ಮತ್ತು ಅವರನ್ನು ಪಕ್ಷದತ್ತ ಸೆಳೆಯಲು ಬಯಸಿದೆ. ಏಪ್ರಿಲ್ 15 ರೊಳಗೆ ಇಂತಹ ಸಭೆಗಳನ್ನು ಮುಗಿಸುವ ಗುರಿಯನ್ನು ಹಾಕಿಕೊಂಡಿದೆ.

ಇಂತಹ ಸಭೆಗಳನ್ನು ಮರದ ಕೆಳಗೆ, ರಸ್ತೆ ಬದಿ ಅಥವಾ ಊರಿನ ಪ್ರಮುಖರ ಮನೆಗಳಲ್ಲಿ ಇಂತಹ ಸಭೆಗಳನ್ನು ನಡೆಸಲು ಪಕ್ಷ ಉದ್ದೇಶಿಸಿದೆ. ಇತ್ತೀಚೆಗೆ ಇಂತಹ ಸಭೆಗಳನ್ನು ನಡೆಸುವ ಸಂಬಂಧ ಪಕ್ಷದ ಪ್ರಮುಖರು ವಿವಿಧ ಘಟಕಗಳ ಪ್ರಮುಖರೊಂದಿಗೆ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ತಳಮಟ್ಟದ ಮತದಾರರನ್ನು ಸಂಪರ್ಕಿಸುವ ಯೋಜನೆ ರೂಪಿಸಿದೆ.

ಇಂತಹ ಸಭೆಗಳನ್ನು ನಡೆಸಲು ಪಕ್ಷದ ಎಲ್ಲ 22 ಪ್ರಕೋಷ್ಠಗಳ ಮುಖಂಡರನ್ನು ಪ್ರಚಾರ ಸಭೆಗಳಿಗೆ ನಿಯೋಜಿಸಲಿದೆ. ಮಹಿಳಾ, ರೈತ, ವೈದ್ಯ, ವಕೀಲ ವಿಭಾಗಗಳ ಜೊತೆಗೆ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳಾದ ಮೀನುಗಾರರು, ಹಾಲು ಉತ್ಪಾದಕರು ಮತ್ತು ಕುಶಲ ಕರ್ಮಿಗಳನ್ನು ಆಯಾ ಸಮುದಾಯದ ಮತದಾರರನ್ನು ಸೆಳೆಯಲು ಉದ್ದೇಶಿಸಿದೆ. ಹಳ್ಳಿ ಹಳ್ಳಿಗಳ ಮತದಾರರನ್ನು ಓಲೈಸಲು ಸ್ಥಳೀಯ ಪಂಚಾಯಿತಿ ಸದಸ್ಯರು ಮತ್ತು ಪದಾಧಿಕಾರಿಗಳನ್ನು ಬಳಸಿಕೊಳ್ಳಲಿದೆ. ಉಜ್ವಲ, ಜಲ ಜೀವನ್ ಮೊದಲಾದ ಯೋಜನೆಗಳ ಫಲಾನುಭವಿಗಳನ್ನು ಆಕರ್ಷಿಸಲು ಮಹಿಳಾ ಕಾರ್ಯಕರ್ತರನ್ನು ನಿಯೋಜಿಸಲು ಪಕ್ಷ ಉದ್ದೇಶಿಸಿದೆ.

ಬೃಹತ್ ಸಭೆಗಳ ಆಯೋಜನೆ

ಈ ಮಧ್ಯೆ ಚುನಾವಣೆ ಅಂಗವಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಬೃಹತ್ ಸಭೆಗಳನ್ನು ನಡೆಸಲು ತೀರ್ಮಾನಿಸಿದೆ. ಎಂಟು ವಿಭಾಗಗಳಲ್ಲಿ ಇಂತಹ ಸಭೆಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಈಗಾಗಲೇ ಕಲಬುರಗಿ ಮತ್ತು ಶಿವಮೊಗ್ಗದಲ್ಲಿ ಬೃಹತ್ ಸಮಾವೇಶಗಳು ಯಶಸ್ವಿಯಾಗಿವೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತಿತರ ಕೇಂದ್ರ ನಾಯಕರ ದಿನಾಂಕ ಸಿಕ್ಕರೆ ಇನ್ನೂ ಎರಡು ಮೂರು ಸಭೆಗಳನ್ನು ನಡೆಸಲು ರಾಜ್ಯ ನಾಯಕರು ಬಯಸಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.

ಸ್ಥಳೀಯ ಮಟ್ಟದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಭಿನ್ನಾಭಿಪ್ರಾಯಗಳು ಸಹಜ. ಆದ್ದರಿಂದ ಎರಡೂ ಪಕ್ಷಗಳ ನಡುವೆ ಸೌಹಾರ್ದತೆ ಮೂಡಿಸಲು ಸಮನ್ವಯ ಸಮಿತಿ ರಚಿಸಲು ವರಿಷ್ಠರು ಉದ್ದೇಶಿಸಿದ್ದಾರೆ. (ವರದಿ: ಎಚ್. ಮಾರುತಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ