logo
ಕನ್ನಡ ಸುದ್ದಿ  /  ಕರ್ನಾಟಕ  /  Makkala Sante: ಸಾಲಿಗೆ ಬಂದ ಅಂಕಿ ಕಲಿ; ಸಂತಿ ಮಾಡಿ ಲೆಕ್ಕ ಕಲಿ - ಶಾಲಾ ಆವರಣದಲ್ಲಿ ಮಕ್ಕಳ ಸಂತೆಯ ಕಲರವ

Makkala Sante: ಸಾಲಿಗೆ ಬಂದ ಅಂಕಿ ಕಲಿ; ಸಂತಿ ಮಾಡಿ ಲೆಕ್ಕ ಕಲಿ - ಶಾಲಾ ಆವರಣದಲ್ಲಿ ಮಕ್ಕಳ ಸಂತೆಯ ಕಲರವ

HT Kannada Desk HT Kannada

Nov 29, 2022 08:09 PM IST

ಶಾಲಾ ಆವರಣದಲ್ಲಿ ಮಕ್ಕಳ ಸಂತೆಯ ಒಂದು ನೋಟ

  • Makkala Sante: ಧಾರವಾಡ ಜಿಲ್ಲೆಯ , ಧಾರವಾಡ ಹಾಗೂ ಕಲಘಟಗಿ ತಾಲೂಕಿನ ಆಯ್ದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಗಳಲ್ಲಿ ಶಾಲಾ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಮಕ್ಕಳ ಸಂತೆ (ಮೆಟ್ರಿಕ್‌ ಮೇಳ)ಯನ್ನು ಆಯೋಜಿಸಿತ್ತು. ಇದರ ಸಚಿತ್ರ ವರದಿ ಇಲ್ಲಿದೆ.  

ಶಾಲಾ ಆವರಣದಲ್ಲಿ ಮಕ್ಕಳ ಸಂತೆಯ ಒಂದು ನೋಟ
ಶಾಲಾ ಆವರಣದಲ್ಲಿ ಮಕ್ಕಳ ಸಂತೆಯ ಒಂದು ನೋಟ

ಧಾರವಾಡ ಜಿಲ್ಲೆಯ , ಧಾರವಾಡ ಹಾಗೂ ಕಲಘಟಗಿ ತಾಲೂಕಿನ ಆಯ್ದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟ್‌ ಶಾಲಾ ಶಿಕ್ಷಣದ ಭಾಗವಾಗಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂತೆ (ಮೆಟ್ರಿಕ್ ಮೇಳ) ಗಳನ್ನು ಆಯೋಜಿಸಿದೆ.

ಟ್ರೆಂಡಿಂಗ್​ ಸುದ್ದಿ

Hassan Sex Scandal; ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್‌ ಲೈಂಗಿಕ ದೌರ್ಜನ್ಯ ಕೇಸ್‌ ಏನಾಯಿತು, ಇದುವರೆಗಿನ 10 ಪ್ರಮುಖ ಅಂಶಗಳು

ನೂರಾರು ವಿದ್ಯಾರ್ಥಿಗಳ ನೆನಪಿನಂಗಳದಲ್ಲಿ ಉಳಿದಿರುವ ಗುರುಮಾತೆ; ದಿವಂಗತ ವಿದ್ಯಾ ಸರಸ್ವತಿ ಚೂಂತಾರು - ವ್ಯಕ್ತಿ ವ್ಯಕ್ತಿತ್ವ ಅಂಕಣ

Hassan Scandal: ವಾಟ್ಸ್‌ ಆಪ್‌ ಮೂಲಕವೂ ವಿಡಿಯೋ ಹಂಚಿದರೆ ಕ್ರಮ, ಎಸ್‌ಐಟಿ ಎಚ್ಚರಿಕೆ

ಸೋಮವಾರ ರಾತ್ರಿಯಿಂದ 108 ಆಂಬುಲೆನ್ಸ್ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ಆರೋಗ್ಯ ಸೇವೆಯಲ್ಲಿ ವ್ಯತ್ಯಯ; ಅವರ ಬೇಡಿಕೆಗಳೇನು?

ಮಕ್ಕಳ ಸಂತೆಯ ಮೂರು ಭಿನ್ನ ನೋಟದ ದೃಶ್ಯಗಳು

ಇಂತಹ ಮೇಳಗಳು ಮಕ್ಕಳಲ್ಲಿ ವ್ಯವಹಾರಿಕ ಜ್ಞಾನವನ್ನು ವೃದ್ಧಿಸುವುದರ ಜತೆಗೆ, ಅಳತೆ ಮತ್ತು ಪ್ರಮಾಣಗಳ ಅರಿವು, ಬಂಡವಾಳ ಹೂಡಿಕೆ ಮತ್ತು ಲಾಭ, ನಷ್ಟಗಳ ಅರಿವು, ಸಂವಹನ ಕೌಶಲ್ಯದ ವೃದ್ಧಿ, ವಸ್ತುಗಳ ಬೆಲೆ ನಿರ್ಧಾರ ಕೌಶಲ್ಯ, ಒಂದು ಕಾರ್ಯದ ಹಿಂದಿನ ಶ್ರಮವನ್ನು ಅರ್ಥೈಸಿಕೊಳ್ಳುವುದು, ವ್ಯವಹಾರದಲ್ಲಿ ಗಣಿತದ ಮೂಲ ಕ್ರಿಯೆಗಳ ಬಳಕೆ, ನಿತ್ಯ ಜೀವನದಲ್ಲಿ ಗಣಿತ ಬಳಕೆ, ಪ್ಲಾಸ್ಟಿಕ್ ಚೀಲ ಮುಕ್ತ ಸಂತೆಗಳ ನಿರ್ವಹಣೆಯ ಬಗೆ, ಗ್ರಾಹಕ ಮತ್ತು ವ್ಯಾಪಾರಿಗಳ ನಡುವಿನ ಸಂವಹನ ಕೌಶಲ್ಯ ಮತ್ತು ಗ್ರಾಹಕರನ್ನು ಕಾಯ್ದುಕೊಳ್ಳುವ ಕಲೆಯನ್ನು ಕರಗತ ಮಾಡಿಸುವುದಲ್ಲದೇ ಮಕ್ಕಳಲ್ಲಿ ಸ್ವಾವಲಂಬಿ ಭಾವನೆಯನ್ನು ಗಟ್ಟಿಗೊಳಿಸುತ್ತವೆ.

ಶಾಲಾ ಆವರಣದಲ್ಲಿ ನಡೆದ ಮಕ್ಕಳ ಸಂತೆಯಲ್ಲಿ ವ್ಯಾಪಾರ ವಹಿವಾಟು, ಲೆಕ್ಕಾಚಾರ

ಎಸ್.ವಿ.ವೈ.ಎಮ್ ನ ಶಾಲಾ ಶಿಕ್ಷಣ ಕಾರ್ಯಕ್ರಮವು ಜಾರಿಯಿರುವ 25 ಪ್ರಾಥಮಿಕ ಶಾಲೆಗಳಲ್ಲಿ ಮೆಟ್ರಿಕ್ ಮೇಳಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈಗಾಗಲೇ ಕಲಘಟಗಿ ತಾಲೂಕಿನ ಮುತ್ತಗಿ, ಸಂಗಮೇಶ್ವರ, ಧಾರವಾಡ ಗ್ರಾಮೀಣ ತಾಲೂಕಿನ ನರೇಂದ್ರ , ಮನಗುಂಡಿ, ಮಾದನಬಾವಿ, ಕುರುಬಗಟ್ಟಿ, ಮುಮ್ಮಿಗಟ್ಟಿ , ಕರಡಿಗುಡ್ಡ, ತಡಕೋಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂತೆ ಜರುಗಿದ್ದು , 862 ಮಕ್ಕಳು , 20 ಕ್ಕೂ ಹೆಚ್ಚು ಶಿಕ್ಷಕರು, ಎಸ್.ಡಿ.ಎಮ್.ಸಿ ಸದಸ್ಯರನ್ನು ಒಳಗೊಂಡು 128 ಕ್ಕೂ ಹೆಚ್ಚು ಪಾಲಕರು ಮಕ್ಕಳ ಸಂತೆಯಲ್ಲಿ ಭಾಗಿಯಾಗಿದ್ದಾರೆ.

ಶಾಲಾ ಆವರಣದಲ್ಲಿ ನಡೆದ ಮಕ್ಕಳ ಸಂತೆಯಲ್ಲಿ ಮಕ್ಕಳದ್ದೇ ಕಾರುಬಾರು

ಭವಿಷ್ಯದಲ್ಲಿ ಮಿಕ್ಕ 16 ಶಾಲೆಗಳಲ್ಲೂ ಮಕ್ಕಳ ಸಂತೆಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವುದರ ಜತೆಗೆ ಮಕ್ಕಳಲ್ಲಿ ವ್ಯವಹಾರಿಕ ಜ್ಞಾನವನ್ನು ಬಿತ್ತುವ ಗುರಿಯನ್ನು ಹೊಂದಿದೆ.

ಗಮನಿಸಬಹುದಾದ ಇತರೆ ಸುದ್ದಿಗಳು

Floating farms in Bangladesh: ತೇಲುವ ತೆಪ್ಪಗಳಲ್ಲಿ ಬೆಳೆಯುತ್ತಿವೆ ಸೌತೆ, ಸೋರೆ, ಮೂಲಂಗಿ! 2 ಶತಮಾನ ಹಳೆಯ ಜಲಕೃಷಿ ವಿಶೇಷ

ಚಂಡಮಾರುತಗಳು, ಪ್ರವಾಹಗಳು, ಭಾರೀ ಮಳೆ, ಕೀಟಗಳ ಏಕಾಏಕಿ. ನೈಋತ್ಯ ಬಾಂಗ್ಲಾದೇಶದ ರೈತರ ಗುಂಪು ಎಲ್ಲದಕ್ಕೂ ಹೆಬ್ಬೆರಳು ನೀಡಿದೆ. ಸಂಪೂರ್ಣವಾಗಿ ನೀರಿನಲ್ಲಿ ತೇಲುತ್ತಾ ಅತ್ಯುತ್ತಮ ಕೃಷಿ ಮಾಡುತ್ತಿದ್ದಾರೆ. ಆದರೆ ಈ ವಿಧಾನವು ಹೊಸದಲ್ಲ. ಸುಮಾರು 200 ವರ್ಷಗಳಷ್ಟು ಹಳೆಯದಾದ ಈ ವಿಧಾನವು ಕೃಷಿಯ ಭವಿಷ್ಯವೇ? ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ.

ಸಿಕ್ಕಾಪಟ್ಟೆ ಅಸಿಡಿಟಿಯಾ? ಆಯುರ್ವೇದದ 5 ಬೆಸ್ಟ್‌ ಪರಿಹಾರ; ಒಂದನ್ನು ಟ್ರೈ ಮಾಡಿ, ಅಡ್ಡಪರಿಣಾಮ ಇಲ್ಲ

Ayurvedic Remedies for Acidity: ಹೆವಿಯಾಗಿ ಏನನ್ನಾದರೂ ತಿಂದ ನಂತರ ಅಸಿಡಿಟಿ ಸಮಸ್ಯೆ ಶುರುವಾಯಿತಾ? ಈ ಸಮಸ್ಯೆಗೆ ಆಯುರ್ವೇದದಲ್ಲಿ ಸರಳ ಪರಿಹಾರವಿದೆ. ಒಂದನ್ನು ಟ್ರೈಮಾಡಿ ನೋಡಿ. ಅಡ್ಡಿಪರಿಣಾಮ ಇಲ್ಲ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ.

Traditional knowledge of India: ಮಳೆ ಮುನ್ಸೂಚನೆ ಕುರುಬರು ಹೇಗೆ ಪಡ್ಕೊಳ್ತಾರೆ!

Traditional knowledge of India: ನಮ್ಮ ದೇಶದ ಕುರಿಗಾಹಿಗಳು ಸಹ ಯಾವಾಗ ಮಳೆ ಬೀಳುತ್ತದೆ ಎಂದು ಊಹಿಸುತ್ತಾರೆ. ಹವಾಮಾನ ಮುನ್ಸೂಚನೆಯಲ್ಲಿ ಭಾರತೀಯರ ಜ್ಞಾನವು ಶ್ಲಾಘನೀಯವಾದುದು ಎಂದು ಐಸಿಎಚ್‌ಆರ್‌ ಸದಸ್ಯ ಕಾರ್ಯದರ್ಶಿ ಉಮೇಶ್‌ ಅಶೋಕ್‌ ಕದಂ ವಿವರಿಸಿದ್ದಾರೆ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ.

    ಹಂಚಿಕೊಳ್ಳಲು ಲೇಖನಗಳು