ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Traditional Knowledge Of India: ಮಳೆ ಮುನ್ಸೂಚನೆ ಕುರುಬರು ಹೇಗೆ ಪಡ್ಕೊಳ್ತಾರೆ!

Traditional knowledge of India: ಮಳೆ ಮುನ್ಸೂಚನೆ ಕುರುಬರು ಹೇಗೆ ಪಡ್ಕೊಳ್ತಾರೆ!

Traditional knowledge of India: ನಮ್ಮ ದೇಶದ ಕುರಿಗಾಹಿಗಳು ಸಹ ಯಾವಾಗ ಮಳೆ ಬೀಳುತ್ತದೆ ಎಂದು ಊಹಿಸುತ್ತಾರೆ. ಹವಾಮಾನ ಮುನ್ಸೂಚನೆಯಲ್ಲಿ ಭಾರತೀಯರ ಜ್ಞಾನವು ಶ್ಲಾಘನೀಯವಾದುದು ಎಂದು ಐಸಿಎಚ್‌ಆರ್‌ ಸದಸ್ಯ ಕಾರ್ಯದರ್ಶಿ ಉಮೇಶ್‌ ಅಶೋಕ್‌ ಕದಂ ವಿವರಿಸಿದ್ದಾರೆ. ವಿವರ ವರದಿ ಇಲ್ಲಿದೆ.

ಮಳೆ ಮುನ್ಸೂಚನೆ ಕುರುಬರು ಹೇಗೆ ಪಡ್ಕೊಳ್ತಾರೆ! (ಸಾಂಕೇತಿಕ ಚಿತ್ರ)
ಮಳೆ ಮುನ್ಸೂಚನೆ ಕುರುಬರು ಹೇಗೆ ಪಡ್ಕೊಳ್ತಾರೆ! (ಸಾಂಕೇತಿಕ ಚಿತ್ರ) (unsplash)

ಭಾರತ ವಿಶ್ವಗುರು ಆಗಿತ್ತು. ಇದನ್ನು ಸಾಬೀತು ಮಾಡುವ ಇತಿಹಾಸ ಸಂಶೋಧನಾ ಕೆಲಸಕ್ಕೆ ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ (ICHR) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಒಟ್ಟಾಗಿ ಕೆಲಸ ಮಾಡಲಿವೆ. ಈ ನಿಟ್ಟಿನಲ್ಲಿ ಶೀಘ್ರವೇ ಒಂದು ಒಡಂಬಡಿಕೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಈ ನಡುವೆ, ಈ ವಿಚಾರ ದೃಢೀಕರಿಸಿದ ಐಸಿಎಚ್‌ಆರ್‌ ಸದಸ್ಯ ಕಾರ್ಯದರ್ಶಿ ಉಮೇಶ್‌ ಅಶೋಕ್‌ ಕದಂ, "ಹವಾಮಾನ ಮುನ್ಸೂಚನೆಯಲ್ಲಿ ಭಾರತೀಯರ ಜ್ಞಾನವು ಶ್ಲಾಘನೀಯವಾಗಿದೆ ... ನಮ್ಮ ಕುರುಬರು ಸಹ ಯಾವಾಗ ಮಳೆ ಬೀಳುತ್ತದೆ ಎಂದು ಊಹಿಸಬಹುದು. ಅವರ ಕುರಿಗಳು ಮತ್ತು ಮೇಕೆಗಳು ನೆಲದ ವಾಸನೆ ನೋಡಲು ಪ್ರಾರಂಭಿಸಿದಾಗ, ಕುರುಬರಿಗೆ ಮುಂದಿನ ಆರು ಗಂಟೆಗಳಲ್ಲಿ ಮಳೆಯಾಗುತ್ತದೆ ಎಂಬುದು ತಿಳಿಯುತ್ತಿತ್ತು ಎಂಬುದನ್ನು ವಿವರಿಸಿದ್ದಾರೆ.

ಈ ಯೋಜನೆಯು ಸಮುದ್ರ ಸಂಚರಣೆ, ಹೊರತೆಗೆಯುವಿಕೆ ಮತ್ತು ಬಟ್ಟಿ ಇಳಿಸುವಿಕೆ, ಔಷಧ ಮತ್ತು ಸೌಂದರ್ಯವರ್ಧಕಗಳು ಮತ್ತು ನೀರಾವರಿ ಮತ್ತು ಜಲಸಂಪನ್ಮೂಲ ಕ್ಷೇತ್ರದಲ್ಲಿ ಭಾರತದ ಕೊಡುಗೆಯನ್ನು ಸಹ ಒಳಗೊಂಡಿದೆ.

ಶೂನ್ಯ, ಪೈ ಮೌಲ್ಯ ಜಗತ್ತಿಗೆ ಕೊಟ್ಟದ್ದೇ ಭಾರತ

ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ದಲ್ಲಿ ಭಾರತದ ಕೊಡುಗೆಯನ್ನು ವಿವರಿಸಿದ ICHR ನ ಸದಸ್ಯ ಕಾರ್ಯದರ್ಶಿ ಉಮೇಶ್‌ ಅಶೋಕ್‌ ಕದಂ, ಭಾರತೀಯ ಗಣಿತಜ್ಞರು ಗಣಿತದ “ಶೂನ್ಯ” ದ ಆಧಾರವನ್ನು ಜಗತ್ತಿಗೆ ನೀಡಿದ್ದಾರೆ ಮತ್ತು ಪೈ ಮೌಲ್ಯವನ್ನು ಲೆಕ್ಕ ಹಾಕಿದ್ದಾರೆ ಎಂದು ಹೇಳಿದರು.

“ಭಾರತ ಲೋಹಶಾಸ್ತ್ರ ಕ್ಷೇತ್ರಕ್ಕೆ ಕೊಡುಗೆ ನೀಡಿದೆ. ಉಕ್ಕನ್ನು ಹೇಗೆ ತಯಾರಿಸುವುದು ಮತ್ತು ಲೋಹಗಳನ್ನು ಬೆರೆಸುವುದು ಹೇಗೆ ಎಂಬುದನ್ನು ಭಾರತದಿಂದ ಜಗತ್ತು ಕಲಿತಿದೆ. ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳಲ್ಲಿ ಭಾರತದ ಕೊಡುಗೆಯೂ ಅಪಾರವಾಗಿದೆ. ಪ್ರಾಚೀನ ಕಾಲದಲ್ಲಿಯೂ ಸಹ, ಭಾರತವು ಸುಧಾರಿತ ಶಸ್ತ್ರಾಸ್ತ್ರ ಮತ್ತು ಯುದ್ಧಸಾಮಗ್ರಿ ತಂತ್ರಗಳನ್ನು ಹೊಂದಿತ್ತು, ಅದನ್ನು ಜಗತ್ತು ಬಹಳ ನಂತರ ಕಂಡುಹಿಡಿದಿದೆ. ಈ ಎಲ್ಲ ಜ್ಞಾನವು ಭಾರತದಿಂದ ಇತರ ಖಂಡಗಳಿಗೆ ಪ್ರಯಾಣಿಸಿದೆ.

ಮಾರ್ಕ್ಸ್‌ವಾದಿ ಇತಿಹಾಸಕಾರರು ಜಗದೀಶ್‌ಚಂದ್ರ ಬೋಸರನ್ನೇಕೆ ಮರೆತರು?

ಪರಿಸರ ವಿಜ್ಞಾನದ ಬಗ್ಗೆ ಮಾತನಾಡುವಾಗ "ಮಾರ್ಕ್ಸ್‌ವಾದಿ ಇತಿಹಾಸಕಾರರು" ಜಗದೀಶ್ ಚಂದ್ರ ಬೋಸ್ ಅವರಂತಹವರ ಬಗ್ಗೆ ಮಾತನಾಡಲಿಲ್ಲ. ಜಗದೀಶ್ ಚಂದ್ರ ಬೋಸ್ ಅವರು ಸಂಶೋಧನೆಗೆ ಪೇಟೆಂಟ್ ಮಾಡುವುದನ್ನು ಸಂಪೂರ್ಣವಾಗಿ ವಿರೋಧಿಸಿದ್ದರು. ಸಮಾಜದ ಒಳಿತಿಗಾಗಿ ಎಲ್ಲರಿಗೂ ಮುಕ್ತವಾಗಿ ಇಡುತ್ತೇನೆ ಎಂದು ಹೇಳಿದರು. ಆದರೆ ಇದು ನಿರ್ಲಕ್ಷಿಸಲ್ಪಟ್ಟಿದೆ.

ಸಂಶೋಧನೆ, ಪುರಾವೆ ಸಂಗ್ರಹ ಮತ್ತು ವಿಷಯ ಮಂಡನೆ ಎಲ್ಲದರ ವಿಧಾನವೂ ವೈಜ್ಞಾನಿಕವಾಗಿರುತ್ತದೆ. ಭೂವಿಜ್ಞಾನಿಗಳು, ಭೂಗೋಳಶಾಸ್ತ್ರಜ್ಞರು, ಗಣಿತಜ್ಞರು ಮತ್ತು ಎಂಜಿನಿಯರ್‌ಗಳ ತಂಡವು ಒಳಹರಿವು ಮತ್ತು ಸಲಹೆಗಳನ್ನು ನೀಡುತ್ತದೆ. ಭಾರತವು ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಜಗತ್ತಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಯಾವ ನಿಖರವಾದ ಕೊಡುಗೆಯನ್ನು ನೀಡಿದೆ ಎಂಬುದರ ಸರಿಯಾದ ಐತಿಹಾಸಿಕ ತಿಳುವಳಿಕೆಯನ್ನು ಹೊಂದಲು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಯಾವತ್ತಿಗೂ 'ವಿಶ್ವ ಗುರು' ಎಂಬುದನ್ನು ಸ್ಥಾಪಿಸುವ ಉದ್ದೇಶ ನಮ್ಮದು ಎಂದು ಕದಂ ವಿವರಿಸಿದರು.

ಭಾಷಾ ಮೂಲ ಇತಿಹಾಸ ಆಧರಿಸಿ ಭಾರತದ ಇತಿಹಾಸ ಮರುರಚನೆ; ಮಾರ್ಚ್‌ನಲ್ಲಿ 1ನೇ ಸಂಪುಟ ಬಿಡುಗಡೆ ಎಂದ ICHR

ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ (ICHR) ಭಾರತದ ಇತಿಹಾಸ "ಮರುರಚನೆ" ಪ್ರಾರಂಭಿಸಿದೆ. ಸಿಂಧೂ ಕಣಿವೆಯ ನಾಗರೀಕತೆಯ ಕಾಲದಿಂದ ಇಂದಿನವರೆಗಿನ ಇತಿಹಾಸ ಸ್ಥಳೀಯ ಭಾಷೆಗಳು ಮತ್ತು ಲಿಪಿಗಳಲ್ಲಿ ಲಭ್ಯವಿರುವ ಮೂಲಗಳನ್ನು ಬಳಸಿಕೊಂಡು ಈ ಕೆಲಸ ಮಾಡಲಿದೆ. ಇತಿಹಾಸದ ಪುಟಗಳಲ್ಲಿ ತಪ್ಪಿ ಹೋಗಿರುವ ರಾಜವಂಶ ಮತ್ತು ಯುರೋಪ್‌ ಕೇಂದ್ರಿತ ಮನಸ್ಥಿತಿಯಿಂದ ರಚಿಸುವಾಗ ತಪ್ಪಾಗಿರುವ ವಾಸ್ತವಾಂಶಗಳನ್ನು ಸರಿಪಡಿಸುವ ಕೆಲಸ ಈ ಯೋಜನೆಯಲ್ಲಿ ನಡೆಯಲಿದೆ ಎಂದು ಐಸಿಎಚ್‌ಆರ್‌ ಮೂಲಗಳು ಇತ್ತೀಚೆಗೆ ತಿಳಿಸಿವೆ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ

IPL_Entry_Point