logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಪಬ್‌ಗಳಲ್ಲಿ ಇಂಗ್ಲಿಷ್-ಹಿಂದಿ ಹಾಡು ಹಾಕಂಗಿಲ್ಲ; ಕನ್ನಡ ಹಾಡೇ ಹಾಕುವಂತೆ ಸ್ಥಳೀಯರ ಒತ್ತಾಯ

ಬೆಂಗಳೂರು ಪಬ್‌ಗಳಲ್ಲಿ ಇಂಗ್ಲಿಷ್-ಹಿಂದಿ ಹಾಡು ಹಾಕಂಗಿಲ್ಲ; ಕನ್ನಡ ಹಾಡೇ ಹಾಕುವಂತೆ ಸ್ಥಳೀಯರ ಒತ್ತಾಯ

Jayaraj HT Kannada

Oct 02, 2024 02:08 PM IST

google News

ಬೆಂಗಳೂರು ಪಬ್‌ಗಳಲ್ಲಿ ಇಂಗ್ಲಿಷ್-ಹಿಂದಿ ಹಾಡು ಹಾಕಂಗಿಲ್ಲ; ಕನ್ನಡ ಹಾಡೇ ಹಾಕುವಂತೆ ಒತ್ತಾಯ

    • ಕನ್ನಡಿಗರ ಒತ್ತಡದ ನಂತರ ಬೆಂಗಳೂರು ನಗರದ ಪಬ್‌ಗಳಲ್ಲಿ ನಿಧಾನವಾಗಿ ಕನ್ನಡ ಹಾಡುಗಳು ಕೇಳಿಬರುತ್ತಿವೆ. ಈವರೆಗೆ ಇಂಗ್ಲಿಷ್‌ ಅಥವಾ ಹಿಂದಿ ಹಾಡುಗಳಿಗೆ ಸೀಮಿತವಾಗಿದ್ದ ಪಬ್‌ಗಳು ಕನ್ನಡ ಹಾಡುಗಳನ್ನು ಹಾಕಲು ಪ್ರಾರಂಭಿಸುತ್ತಿವೆ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.
ಬೆಂಗಳೂರು ಪಬ್‌ಗಳಲ್ಲಿ ಇಂಗ್ಲಿಷ್-ಹಿಂದಿ ಹಾಡು ಹಾಕಂಗಿಲ್ಲ; ಕನ್ನಡ ಹಾಡೇ ಹಾಕುವಂತೆ ಒತ್ತಾಯ
ಬೆಂಗಳೂರು ಪಬ್‌ಗಳಲ್ಲಿ ಇಂಗ್ಲಿಷ್-ಹಿಂದಿ ಹಾಡು ಹಾಕಂಗಿಲ್ಲ; ಕನ್ನಡ ಹಾಡೇ ಹಾಕುವಂತೆ ಒತ್ತಾಯ (Unsplash)

ಬೆಂಗಳೂರು : ಉದ್ಯಾನ ನಗರಿ ಬೆಂಗಳೂರಿನಲ್ಲಿ ಕನ್ನಡ ಪರ ಹೋರಾಟಗಳು ಹೆಚ್ಚಾಗುತ್ತಿವೆ. ಅಲ್ಲದೆ ಉತ್ತರ ಭಾರತೀಯರು ಮತ್ತು ಕನ್ನಡಿಗರು ಎಂಬ ವಾದ ವಿವಾದಗಳು ಕೂಡಾ ಕೇಳಿ ಬರುತ್ತಿದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂಬುದು ಕನ್ನಡಿಗರ ವಾದ. ಉತ್ತರ ಭಾರತೀಯರ ಅಥವಾ ಅನ್ಯ ಭಾಷಿಕರು ಕನ್ನಡವನ್ನು ಗೌರವಿಸಬೇಕು ಹಾಗೂ ಮಾತನಾಡಲು ಕಲಿಯಬೇಕು ಎಂಬುದು ಕರ್ನಾಟಕದವರ ನಿರೀಕ್ಷೆ. ನಗರದ ಪಬ್‌ಗಳಲ್ಲಿಯೂ ಇದೇ ರೀತಿಯ ವಾತಾವರಣ ಸೃಷ್ಟಿಯಾಗಿದೆ. ಈ ಕುರಿತು ವ್ಯಕ್ತಿಯೊಬ್ಬ ಆರೋಪ ಮಾಡಿದ್ದಾರೆ. ತಾನು ಕುಳಿತಿದ್ದ ಪಬ್‌ನಲ್ಲಿ ಕನ್ನಡ ಪರ ಹೋರಾಟಗಾರರು ಬಂದು ಅಡ್ಡಿಪಡಿಸಿದ್ದಾರೆ. ಪಬ್‌ನಲ್ಲಿ ಇಂಗ್ಲಿಷ್ ಅಥವಾ ಹಿಂದಿ ಹಾಡು ಹಾಕುವ ಬದಲು ಕನ್ನಡ ಹಾಡುಗಳನ್ನು ಹಾಕುವಂತೆ ಆಡಳಿತ ಮಂಡಳಿಯನ್ನು ಒತ್ತಾಯಿಸಿರುವ ಘಟನೆ ನಡೆದಿದೆ. ಸ್ಥಳೀಯರ ಒತ್ತಡಕ್ಕೆ ಮಣಿದು ನಗರದ ಪಬ್‌ಗಳು ನಿಧಾನವಾಗಿ ಕನ್ನಡ ಹಾಡುಗಳನ್ನು ಮಾತ್ರ ಹಾಕಲು ಪ್ರಾರಂಭಿಸುತ್ತಿವೆ ಎಂದು ಅವರು ಹೇಳಿದ್ದಾರೆ.

ಅಭಯ್‌ಜೀತ್ ಎಜೆ ಎಂಬ ವ್ಯಕ್ತಿ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. "ನಾನು ಬೆಂಗಳೂರಿನ ಪಬ್‌ನಲ್ಲಿ ಪಾನೀಯ ಕುಡಿಯಲು ಕುಳಿತಿದ್ದೆ. ಈ ವೇಳೆ ಸ್ಥಳೀಯರ ಗುಂಪು ಬಂದಿದೆ. ಪಬ್ ಮ್ಯಾನೇಜ್‌ಮೆಂಟ್ ಕನ್ನಡ ಹಾಡನ್ನು ಮಾತ್ರ ಹಾಕಬೇಕು ಎಂಬುದು ಅವರ ಒತ್ತಾಯವಾಗಿತ್ತು. ಬೆಂಗಳೂರಿನ ಕೆಲವು ಜನರ ಒತ್ತಾಯದಿಂದಾಗಿ ಪಬ್‌ಗಳು ಇಂಗ್ಲಿಷ್ ಹಾಡುಗಳನ್ನು ಹಾಕುತ್ತಿಲ್ಲ ಎಂದು ಹೇಳಿದ್ದಾರೆ.

ತಾನು ಭಾರತ ದೇಶದಲ್ಲಿಯೇ ಇದ್ದೇನಾ ಅಥವಾ ಬೇರೆ ಯಾವುದಾದರೂ ದೇಶದಲ್ಲಿ ಇದ್ದೇನೆಯೇ ಎಂದು ವ್ಯಕ್ತಿ ಪ್ರಶ್ನಿಸಿದ್ದಾರೆ. “ಬೆಂಗಳೂರು ನಗರದಲ್ಲಿ ಈ ರೀತಿ ಆಗುತ್ತಿರುವುದು ಹೊಸ ವಿಷಯ. ಪಬ್‌ಗಳಲ್ಲಿ ಇಂಗ್ಲಿಷ್ ಅಥವಾ ಹಿಂದಿ ಹಾಡು ಹಾಕುವುದು ಅವರಿಗೆ ಇಷ್ಟವಿಲ್ಲ. ನಾವು ಭಾರತ ಅಥವಾ ಬೆಂಗಳೂರಿನಲ್ಲಿದ್ದೇವೋ, ಅಥವಾ ಬೇರೆ ದೇಶದಲ್ಲೋ? ನನಗಿದು ಅರ್ಥವಾಗುತ್ತಿಲ್ಲ” ಎಂದು ಅಭಯ್‌ಜೀತ್ ಹೇಳಿದ್ದಾರೆ.

ವ್ಯಕ್ತಿಗೆ ಕನ್ನಡಿಗರ ತರಾಟೆ

ಈ ಪೋಸ್ಟ್ ವೈರಲ್ ಆಗಿದೆ. ಅದಾದ ಬೆನ್ನಲ್ಲೇ ಕನ್ನಡ ಹಾಡುಗಳನ್ನು ಕೇಳಿದ ನಂತರ ನೀವು ಬೇರೆ ದೇಶದಲ್ಲಿದ್ದೀರಾ ಎಂದು ಕೇಳಿದ ವ್ಯಕ್ತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಕನ್ನಡಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

2016ರಲ್ಲಿ ಕನ್ನಡ ಹಾಡುಗಳನ್ನು ಹಾಕುವಂತೆ ಪಬ್‌ನವರಿಗೆ ಹೇಳಿದ್ದಕ್ಕೆ, ಪಬ್‌ ಮ್ಯಾನೇಜ್‌ಮೆಂಟ್‌ ವ್ಯಕ್ತಿಯನ್ನು ಹೊರಹೋಗುವಂತೆ ಹೇಳಿದ ಬಗ್ಗೆ ವ್ಯಕ್ತಿಯೊಬ್ಬರು ನೆನಪಿಸಿದ್ದಾರೆ. '2016ರಲ್ಲಿ ನಾನು ಸ್ನೇಹಿತರೊಂದಿಗೆ ಇಂದಿರಾನಗರದ ಪಬ್‌ಗೆ ಹೋಗಿದ್ದೆ. ನಾವು ಆಗಷ್ಟೇ ಪದವಿ ಪಡೆದಿದ್ದೆವು. ನಾವೆಲ್ಲರೂ ಇತ್ತೀಚೆಗಷ್ಟೇ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದೆವು. ಡಿಜೆ ಅವರು ಇಂಗ್ಲಿಷ್ ಮತ್ತು ಹಿಂದಿ ಹಾಡುಗಳನ್ನು ಮಾತ್ರವೇ ಹಾಕುತ್ತಿದ್ದರು. ಸ್ವಲ್ಪ ಸಮಯದ ನಂತರ ನಾವು ಕನ್ನಡ ಹಾಡುಗಳನ್ನು ಕೂಡಾ ಹಾಕುವಂತೆ ಡಿಜೆಗೆ ವಿನಂತಿಸಿದೆವು. ಆದರೆ, ಅವರು ನಮ್ಮನ್ನು ಹೊರಹೋಗುವಂತೆ ಹೇಳಿದರು. ಕಾಲ ಹೇಗೆ ಬದಲಾಗಿದೆ ನೋಡಿ" ಎಂದು ವ್ಯಕ್ತಿ ಹೇಳಿದ್ದಾರೆ.

ಕನ್ನಡವೂ ಭಾರತದ ಒಂದು ರಾಷ್ಟ್ರೀಯ ಭಾಷೆ. ಇತರ ಭಾಷೆಗಳಷ್ಟೇ ಆದ್ಯತೆ, ಸಮಾನ ಪ್ರಾಮುಖ್ಯತೆಯನ್ನು ಕನ್ನಡಕ್ಕೂ ನೀಡಬೇಕು ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ. "ಈ ವ್ಯಕ್ತಿಗೆ ತಾನು ವಾಸಿಸುವ ಭಾರತದ ರಾಷ್ಟ್ರೀಯ ಭಾಷೆಗಳಲ್ಲಿ ಕನ್ನಡವೂ ಒಂದು ಎಂಬುದು ಗೊತ್ತಿಲ್ಲ" ಎಂದು ಅವರು ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ