logo
ಕನ್ನಡ ಸುದ್ದಿ  /  ಕರ್ನಾಟಕ  /  Mandya Sahitya Sammelana: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈ ಬಾರಿ 18 ದೇಶಗಳಿಂದ ಬರಲಿದ್ದಾರೆ ವಿದೇಶಿ ಕನ್ನಡಿಗರು

Mandya Sahitya Sammelana: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈ ಬಾರಿ 18 ದೇಶಗಳಿಂದ ಬರಲಿದ್ದಾರೆ ವಿದೇಶಿ ಕನ್ನಡಿಗರು

Umesha Bhatta P H HT Kannada

Dec 03, 2024 09:15 AM IST

google News

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ ಸಾಗತ ಸಮಿತಿ ಸಭೆ ಸೋಮವಾರ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸಚಿವ ಚಲುವರಾಯಸ್ವಾಮಿ,ಮಹೇಶ್‌ ಜೋಶಿ ಅಧ್ಯಕ್ಷತೆಯಲ್ಲಿ ನಡೆಯಿತು.

    • Mandya Sahitya Sammelana: ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರೂ ಪ್ರೀತಿಯಿಂದ ಬರುತ್ತಿದ್ದಾರೆ. ಯಾವ ದೇಶದಿಂದ ಬರಲಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.
ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ ಸಾಗತ ಸಮಿತಿ ಸಭೆ ಸೋಮವಾರ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸಚಿವ ಚಲುವರಾಯಸ್ವಾಮಿ,ಮಹೇಶ್‌ ಜೋಶಿ ಅಧ್ಯಕ್ಷತೆಯಲ್ಲಿ ನಡೆಯಿತು.
ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ ಸಾಗತ ಸಮಿತಿ ಸಭೆ ಸೋಮವಾರ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸಚಿವ ಚಲುವರಾಯಸ್ವಾಮಿ,ಮಹೇಶ್‌ ಜೋಶಿ ಅಧ್ಯಕ್ಷತೆಯಲ್ಲಿ ನಡೆಯಿತು.

ಮಂಡ್ಯ: ಮಂಡ್ಯದಲ್ಲಿ ಡಿಸೆಂಬರ್ 20, 21, 22 ರಂದು ಮೂರು ದಿನಗಳ ಕಾಲ ನಡೆಯುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಬಾರಿ ವಿದೇಶದಲ್ಲಿ ನೆಲೆಸಿರುವ ಕನ್ನಡಗಿರು ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸುಮಾರು 18 ದೇಶಗಳಿಂದ ಕನ್ನಡಿಗರು ಸಮ್ಮೇಳನದಲ್ಲಿ ಭಾಗಿಯಾಗುವುದಾಗಿ ಖಚಿತಪಡಿಸಿದ್ಧಾರೆ. ಈ ಸಂಬಂಧ ಕನ್ನಡ ಸಾಹಿತ್ಯ ಪರಿಷತ್‌ ನ ಅಧ್ಯಕ್ಷರಾದ ಡಾ.ಮಹೇಶ್‌ ಜೋಶಿ ಅವರಿಗೂ ಮಾಹಿತಿಯನ್ನೂ ನೀಡಿದ್ದಾರೆ. ಇನ್ನೂ ಬೇರೆ ಬೇರೆ ದೇಶದಲ್ಲಿ ನೆಲೆಸಿರುವ ಕನ್ನಡಿಗರು ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗುವುದಾದರೆ ಅವರಿಗೆ ಸಕ್ಕರೆ ನಾಡಿನಲ್ಲಿ ಅಕ್ಕರೆ ಸ್ವಾಗತ ನೀಡಿ ಕನ್ನಡ ಹಬ್ಬದ ಖುಷಿಯನ್ನು ಜಾಗತಿಕ ಮಟ್ಟದಲ್ಲೂ ಪಸರಿಸಲು ಕಸಾಪ ಮುಂದಾಗಿದೆ.

ಮಂಡ್ಯ ವಿಶ್ವವಿದ್ಯಾಲಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಸಭೆಯಲ್ಲಿ ಸಮ್ಮೇಳನಕ್ಕೆ ಒಟ್ಟು 18 ದೇಶಗಳಿಂದ ವಿದೇಶಿ ಕನ್ನಡಿಗರು ಆಗಮಿಸುತ್ತಿದ್ದು, ಅವರು ಈಗಾಗಲೇ ಟಿಕೆಟ್ ಬುಕ್ ಮಾಡಿರುವ ಬಗ್ಗೆ ಮಾಹಿತಿಯಿದೆ. ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಬೇಕೆಂದು ತೀರ್ಮಾನಿಸಲಾಗಿದೆ. ಸಮ್ಮೇಳನದ ಪ್ರತಿಯೊಂದು ಕೆಲಸವು ಸುಸೂತ್ರವಾಗಿ ನಡೆಯುತ್ತಿದ್ದು, ಅತ್ಯಂತ ಯಶಸ್ವಿಯಾಗಿ ದಾಖಲೆಯನ್ನು ನಿರ್ಮಿಸುವ ರೀತಿಯಲ್ಲಿ ಕನ್ನಡಿಗರ ಹಬ್ಬವನ್ನು ಆಚರಿಸೋಣ ಎಂದರು.

ಸಮ್ಮೇಳನದ ಎಲ್ಲಾ ಕೆಲಸಗಳು ಕ್ರಿಯಾಯೋಜನೆಯ ಪ್ರಕಾರ ನಡೆಯುತ್ತಿದೆ. ಈ ಬಾರಿ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿ ಅನೇಕ ವಿಷಯಗಳಲ್ಲಿ ವಿಶೇಷತೆಯಿದೆ. ಅವುಗಳನ್ನು ಸಮ್ಮೇಳನದಲ್ಲಿ ತಿಳಿಸುವ ದ್ವಾರಗಳನ್ನು ನಿರ್ಮಿಸಬೇಕೆಂದುಕೊಳ್ಳಲಾಗಿದೆ ಎನ್ನುವ ಮಾಹಿತಿಯನ್ನು ಜೋಶಿ ನೀಡಿದರು.

ಅರ್ಥಪೂರ್ಣವಾಗಿ ಆಯೋಜಿಸಿ

ಸಭೆಯಲ್ಲಿ ಭಾಗಿಯಾಗಿದ್ದ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರು. ಇದುವರೆಗೂ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಹಲವಾರು ಸಭೆ, ಕಾರ್ಯಕ್ರಮಗಳು ನಡೆದು ಪೂರ್ಣ ಸಿದ್ಧತೆಯ ಬಗ್ಗೆ ಚರ್ಚಿಸಲಾಗಿದೆ. ಇಂದಿನ ಸಭೆಯಲ್ಲಿ ಸಮ್ಮೇಳನಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ವಿಚಾರಗಳನ್ನು ಚರ್ಚಿಸಿ ಎಲ್ಲರೂ ಒಳ್ಳೆಯ ಸಲಹೆಗಳನ್ನು ನೀಡಿದ್ದೀರ. ಕನ್ನಡ ಭಾಷೆಯನ್ನು ಅತ್ಯಂತ ಹೆಚ್ಚು ಮಾತನಾಡುವ ಜಿಲ್ಲೆ ಮಂಡ್ಯವಾಗಿದ್ದು, ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಸಲಹೆ ನೀಡಿದರು.

ಏನೇ ಇದ್ದರೂ ಗಮನಕ್ಕೆ ತನ್ನಿ

ಕೃಷಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಮಾತನಾಡಿ ಸಭೆಯಲ್ಲಿ ನೀಡಿರುವ ಎಲ್ಲಾ ಸಲಹೆಗಳನ್ನು ಪರಿಗಣಿಸಿ ಅಳವಡಿಸಿಕೊಳ್ಳಲಾಗುವುದು. ಸಮ್ಮೇಳನಕ್ಕೆ ಇನ್ನೂ ಹೆಚ್ಚಿನ ಅನುದಾನಕ್ಕೆ ಬೇಡಿಕೆಯಿಟ್ಟಿದ್ದು ಹೆಚ್ಚಿನ ಅನುದಾನ ನೀಡಲು ಮುಂದಾಗಿ ಸಮ್ಮೇಳನದ ಸಕಲ ಸಿದ್ಧತೆಯನ್ನು ಮಾಡಲಾಗುವುದು. ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಯಾವುದೇ ವಿಷಯಗಳು ಕಂಡು ಬಂದಲ್ಲಿ ಕೂಡಲೇ ನಮ್ಮ ಗಮನಕ್ಕೆ ತನ್ನಿ. ಎಲ್ಲರೂ ಸೇರಿ ಸಮ್ಮೇಳನವನ್ನು ಯಶಸ್ವಿ ಮಾಡೋಣ ಎನ್ನುವ ಮನವಿ ಮಾಡಿಕೊಂಡರು.

ವಿಶೇಷ ಬಸ್‌ ಸೇವೆ

ವಿಶೇಷ ಬಸ್ ವ್ಯವಸ್ಥೆ ಸಮ್ಮೇಳನಕ್ಕೆ ಆಗಮಿಸಲು ಮೈಸೂರು, ಬೆಂಗಳೂರು ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕೇಂದ್ರ ಸ್ಥಳದಲ್ಲಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರಿಗೆ ಪ್ರಯಾಣವು ಉಚಿತವಾಗಿದ್ದು, ಪುರುಷರು ಟಿಕೆಟ್ ಪಡೆದು ವಿಶೇಷ ಬಸ್ ನಲ್ಲಿ ಪ್ರಯಾಣಿಸಬಹುದು ಎಂದು ಸಚಿವರು ತಿಳಿಸಿದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಹಳ ಅರ್ಥಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲು ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಅನಾವಶ್ಯಕ ಚರ್ಚೆಗೆ ಆಸ್ಪದ ನೀಡದೆ ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎನ್ನುವುದು ಸಚಿವರ ವಿವರಣೆ.

ಸಭೆಯಲ್ಲಿ ಶಾಸಕರಾದ ಮಧು ಜಿ ಮಾದೇಗೌಡ, ವಿವೇಕಾನಂದ, ಪಿ ರವಿಕುಮಾರ್, ಎಬಿ ರಮೇಶ ಬಂಡಿಸಿದ್ದೇಗೌಡ, ಪಿಎಂ ನರೇಂದ್ರಸ್ವಾಮಿ, ಹೆಚ್. ಟಿ ಮಂಜು, ಕೆ ಎಂ ಉದಯ, ಮಾಜಿ ಸಂಸದೆ ಸುಮಲತಾ ಅಂಬರೀಶ್, ಮಾಜಿ ವಿಧಾನ ಪರಿಷತ್ ಶಾಸಕ‌ ಮರಿತೀಬ್ಬೆಗೌಡ, ಮಾಜಿ ಶಾಸಕ ಕೆ ಅನ್ನದಾನಿ, ಶ್ರೀಕಂಠೇಗೌಡ, , ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖ್ ತನ್ವಿರ್ ಆಸೀಫ್, ಕಸಾಪ ಸಂಚಾಲಾಕಿ ಡಾ ಮೀರಾಶಿವಲಿಂಗಯ್ಯ, ನಗರಸಭೆ ಅಧ್ಯಕ್ಷ ಎಂ ವಿ ಪ್ರಕಾಶ್, ಕ.ಸಾಪ ಕಾರ್ಯದರ್ಶಿ ಕೃಷ್ಣೆಗೌಡ, ಹರ್ಷ, ಅಪ್ಪಾಜಪ್ಪ ಮತ್ತಿತರು ಭಾಗಿಯಾದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ