logo
ಕನ್ನಡ ಸುದ್ದಿ  /  ಕರ್ನಾಟಕ  /  ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 40 ರೂ.ಗೂ ಉಂಟು ಶ್ರೇಷ್ಠ ಪುಸ್ತಕಗಳು; ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಂಗ ಮುದ್ರಣಕ್ಕೆ ಈಗಲೂ ಬೇಡಿಕೆ

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 40 ರೂ.ಗೂ ಉಂಟು ಶ್ರೇಷ್ಠ ಪುಸ್ತಕಗಳು; ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಂಗ ಮುದ್ರಣಕ್ಕೆ ಈಗಲೂ ಬೇಡಿಕೆ

Umesha Bhatta P H HT Kannada

Dec 22, 2024 09:00 AM IST

google News

ಮಂಡ್ಯ ಕನ್ನಡ ಸಮ್ಮೇಳನದಲ್ಲಿ ಮೈಸೂರು ವಿವಿ ಪ್ರಸಾರಾಂಗದ ಮಳಿಗೆ ಹಾಗೂ ಪ್ರಕಟಣೆಗಳು.

    • Mandya Sahitya Sammelana: ಮಂಡ್ಯದಲ್ಲಿ ನಡೆದಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮೇಳದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ವಿಶಿಷ್ಟ ಪುಸ್ತಕಗಳಿಗೆ ಬೇಡಿಕೆ ಅಧಿಕ. ಕಾರಣವಾದರೂ ಏನು.
ಮಂಡ್ಯ ಕನ್ನಡ ಸಮ್ಮೇಳನದಲ್ಲಿ ಮೈಸೂರು ವಿವಿ ಪ್ರಸಾರಾಂಗದ ಮಳಿಗೆ ಹಾಗೂ ಪ್ರಕಟಣೆಗಳು.
ಮಂಡ್ಯ ಕನ್ನಡ ಸಮ್ಮೇಳನದಲ್ಲಿ ಮೈಸೂರು ವಿವಿ ಪ್ರಸಾರಾಂಗದ ಮಳಿಗೆ ಹಾಗೂ ಪ್ರಕಟಣೆಗಳು.

ಮಂಡ್ಯ: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಮಳಿಗೆಗಳಲ್ಲಿ ಬಹುತೇಕ ಪುಸ್ತಕಗಳದ್ದೇ ಕಾರುಬಾರು. ನೂರಕ್ಕೂ ಹೆಚ್ಚು ಪ್ರಕಾಶನದವರು ತಮ್ಮ ಮಳಿಗೆಗಳನ್ನು ಸ್ಥಾಪಿಸಿದರೆ ಕೆಲವು ಮಳಿಗೆಗಳಲ್ಲಿ ಎಲ್ಲಾ ಪ್ರಕಾಶನದ ಪುಸ್ತಕಗಳುಸಿಗುತ್ತಿವೆ. ಆದರೆ ಈ ಎಲ್ಲಾ ಮಳಿಗೆಗಳಲ್ಲಿ ಹೆಚ್ಚು ಗಮನ ಸೆಳೆಯುವುದು ಹಾಗೂ ಜನ ಖರೀದಿಸುವುದು ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಪ್ರಕಟಣೆಯನ್ನು. ಏಕೆಂದರೆ ಪ್ರಸಾರಾಂಗ ಬಹುತೇಕ 90 ವರ್ಷದಿಂದ ವಿಭಿನ್ನ ಕೃತಿಗಳನ್ನು ಪ್ರಕಟಿಸಿದೆ. ಪ್ರಸಿದ್ದ ವಿದ್ವಾಂಸರು, ಪಂಡಿತರು ಪ್ರಸಾರಾಂಗಕ್ಕೆ ಪುಸ್ತಕ ಬರೆದುಕೊಟ್ಟಿದ್ದಾರೆ. ಇವುಗಳೆಲ್ಲದರ ಜತೆಯಲ್ಲಿಯೇ ದರ ಇನ್ನೂ ನೂರು ರೂ. ಕೂಡ ದಾಟದ ಹಲವಾರು ಪುಸ್ತಕಗಳು ಇಲ್ಲಿ ಲಭ್ಯ, ಕಿರು ಹಾಗೂ ಮಾಹಿತಿ ಪೂರ್ಣ ಪುಸ್ತಕಗಳ ಜತೆಯಲ್ಲಿ ಪ್ರಸಾರಾಂಗ ಪ್ರಕಟಿಸಿರುವ ಎಪಿಗ್ರಾಫಿಯಾಕ್ಕಂತೂ ಈಗಲೂ ಬಲು ಬೇಡಿಕೆ.

ಶತಮಾನವನ್ನು ಪೂರೈಸಿರುವ ಮೈಸೂರು ವಿಶ್ವವಿದ್ಯಾನಿಲಯದ ಪ್ರಕಟಣ ವಿಭಾಗ ಪ್ರಸಾರಾಂಗವೂ ಶತಮಾನಕ್ಕೆ ಸಮೀಪಿಸುತ್ತಿದೆ. ಜ್ಞಾನ ಪ್ರಸಾರದ ಸದುದ್ದೇಶದಿಂದ 22 ಮೇ 1933 ರಲ್ಲಿ ಸ್ಥಾಪನೆಯಾದ ಪ್ರಸಾರಾಂಗ ಈಗಲೂ ವಿಶಿಷ್ಟ ಹಾಗೂ ಅನನ್ಯ ಕೆಲಸಗಳಿಂದಲೇ ಗಮನ ಸೆಳೆದಿದೆ. ಈವರೆಗೂ ಕುವೆಂಪು, ದೇಜಗೌ, ಪ್ರಭುಶಂಕರ, ಅರವಿಂದ ಮಾಲಗತ್ತಿ ಸಹಿತ ಇಪ್ಪತ್ತಕ್ಕೂ ಹೆಚ್ಚು ನಿರ್ದೇಶಕರು ಪ್ರಸಾರಾಂಗದ ಪರಂಪರೆಗೆ ಹಿರಿಮೆ ತಂದವರು.

2800ಕ್ಕೂ ಹೆಚ್ಚು ಗ್ರಂಥ

ಮೈಸೂರು ವಿಶ್ವವಿದ್ಯಾನಿಲಯದ ಜ್ಞಾನ ಎಲ್ಲೆಡೆ ಪಸರಿಸಬೇಕು, ಯಾವುದೇ ಒಂದು ವಿಶ್ವವಿದ್ಯಾನಿಲಯದ ಕೆಲಸ ಕೇವಲ ನಾಲ್ಕು ಗೋಡೆಗಳ ಮಧ್ಯೆ ಪಾಠ ಕಲಿಸುವುದಲ್ಲ. ಅದರ ಧ್ಯೇಯ ಹಳ್ಳಿಯ ಅನಕ್ಷರಸ್ಥರನ್ನು ವಿದ್ಯಾವಂತರನ್ನಾಗಿ ಮಾಡಿದಾಗ ಮಾತ್ರ ಅದು ಸಾಫಲ್ಯತೆಯನ್ನು ಕಂಡುಕೊಳ್ಳುತ್ತದೆ. ಪ್ರಸಾರಾಂಗವು 91 ವರ್ಷಗಳಿಂದಲೂ ಪ್ರಚಾರೋಪನ್ಯಾಸ, ಪಠ್ಯಪುಸ್ತಕ ಮತ್ತು ವಿಷಯಾಧಾರಿತ ಪುಸ್ತಕಗಳ ಪ್ರಕಟಣೆಯ ಜವಾಬ್ದಾರಿಯನ್ನು ಹಲವು ಆಯಾಮಗಳಲ್ಲಿ ಮುನ್ನಡೆಸಿಕೊಂಡು ಬಂದಿದೆ.

ಇದುವರೆಗೂ 2800ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದು ಒಂದು ಇತಿಹಾಸ.ಪ್ರಬುದ್ಧ ಕರ್ಣಾಟಕ, ಮಾನವಿಕ ಕರ್ಣಾಟಕ ಮತ್ತು ವಿಜ್ಞಾನ ಕರ್ಣಾಟಕ ಎಂಬ ನಿಯತಕಾಲಿಕೆಗಳನ್ನು ಪ್ರಸಾರಾಂಗವು ಪ್ರಕಟಿಸುತ್ತಾ ಬಂದಿದ್ದು ಪ್ರಬುದ್ಧ ಕರ್ಣಾಟಕ ನೂರು ವರ್ಷ ಹಾಗೂ ಮಾನವಿಕ ಕರ್ನಾಟಕ ಮತ್ತು ವಿಜ್ಞಾನ ಕರ್ನಾಟಕ 50 ವರ್ಷಗಳನ್ನು ಪೂರೈಸಿವೆ. ಎಫಿಗ್ರಾಫಿಯಾದಂತಹ ಕೆಲಸ ಎಲ್ಲಿಯೂ ಆಗಿಲ್ಲ.

ನಿಘಂಟು, ಎಪಿಗ್ರಾಫಿಯಾ

ಇಂಗ್ಲಿಷ್ - ಕನ್ನಡ ನಿಘಂಟು ಅಪರೂಪದ ರೀತಿಯ ಬೌದ್ಧಿಕ ಸಾಹಸವೆಂದೇ ಹೇಳಲಾಗುತ್ತದೆ. ಮೈಸೂರು ವಿಶ್ವವಿದ್ಯಾನಿಲಯವು ಈ ನಿಘಂಟಿನ ಪ್ರಕಟಣೆಯ ಮೂಲಕ ವಿದ್ವಾಂಸರು ಮತ್ತು ಸಾಮಾನ್ಯ ಜನರ ಅಭಿಮಾನವನ್ನು ಗಳಿಸಿದೆ. ಇಂತಹ ಕೆಲಸವನ್ನು ಭಾರತದ ಇತರ ಭಾಷೆಗಳಲ್ಲೂ ಆಗಿಲ್ಲ.

ಇದಲ್ಲದೇ ಸಾಮಾನ್ಯರಿಗೂ ಅಸಾಮಾನ್ಯ ಸಂಗತಿಗಳು ತಿಳಿಯಬೇಕು ಎನ್ನುವ ಉದ್ದೇಶದೊಂದಿಗೆ ಹಲವಾರು ಕೃತಿಗಳನ್ನು ಪ್ರಸಾರಾಂಗ ಮರುಮುದ್ರಣ ಗೊಳಿಸುತ್ತಲೇ ಇದೆ. ಇದರಲ್ಲಿ ಭಾಷೆ, ಪರಿಸರ, ಕೃಷಿ, ಸಾಹಿತ್ಯ ಸಹಿತ ಹಲವು ವಿಷಯಗಳು, ವ್ಯಕ್ತಿ ಪರಿಚಯದಂತಹ ಮಾಲಿಕೆಗಳು ಗಮನ ಸೆಳೆದಿವೆ. ಇವುಗಳನ್ನು ಖರೀದಿಸಲು ಸಾವಿರಾರು ರೂ. ವ್ಯಯ ಮಾಡುವ ಅಗತ್ಯವೇ ಇಲ್ಲ. ಪುಟ್ಟ ಪುಟ್ಟ ಹಾಗೂ ಮಹತ್ವದ ಕೃತಿಗಳಿಗೆ ಈಗಲೂ ದರ ನೂರು. ರೂ ಒಳಗೆ ಇದೆ.

ರಿಯಾಯಿತಿ ಮಾರಾಟ

ಪ್ರಸಾರಾಂಗದ ಮಾರಾಟ ವಿಭಾಗದಲ್ಲಿ ಕೆಲಸದ ದಿನಗಳಲ್ಲಿ ನಿಯಮಿತ ಮಾರಾಟದ ಹೊರತಾಗಿ, ವರ್ಷವಿಡೀ ಹರಡಿರುವ ವಿವಿಧ ಸ್ಥಳಗಳಲ್ಲಿ ನಡೆಯುವ ಕೆಲವು ಪ್ರಮುಖ ಪ್ರದರ್ಶನಗಳಲ್ಲಿ ಹೆಚ್ಚಿನ ಪ್ರಮಾಣದ ಪುಸ್ತಕಗಳನ್ನು ಮಾರಾಟ ಮಾಡಲಾಗುತ್ತದೆ. ಈ ಪ್ರದರ್ಶನಗಳು ವಾರ್ಷಿಕ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತ್ರ ಪ್ರಸಾರಾಂಗದ ಮಳಿಗೆ ಇದ್ದೇ ಇರುತ್ತದೆ. ರಿಯಾಯಿತಿ ನಂತರವೂ ಪುಸ್ತಕ ಬೆಲೆ ಅತಿ ಕಡಿಮೆಗೆ ಸಿಗುವುದು ಇಲ್ಲಿಯೇ. ಯುಗಾದಿ, ಗಣೇಶ ಚತುರ್ಥಿ, ದಸರಾ ಮತ್ತು ದೀಪಾವಳಿ ಹಬ್ಬದ ಅವಧಿಯಲ್ಲಿ ನಮ್ಮನ್ನು ಶೇ. 50 ರಿಯಾಯಿತಿಯಲ್ಲಿ ಮಾರಾಟ ಮಾಡಲಾಗುತ್ತದೆ. ಇಡೀ ನವೆಂಬರ್ ಅನ್ನು 'ರಾಜ್ಯೋತ್ಸವ ತಿಂಗಳು' ಎಂದು ಘೋಷಿಸಲಾಗಿದೆ ಮತ್ತು ಕೆಲವು ವಿನಾಯಿತಿಗಳೊಂದಿಗೆ ಎಲ್ಲಾ ಪುಸ್ತಕಗಳನ್ನು ತಿಂಗಳಾದ್ಯಂತ ಶೇ. 33.33 ರಿಯಾಯಿತಿಯಲ್ಲಿ ಮಾರಾಟ ಮಾಡಲಾಗುತ್ತದೆ ಎನ್ನುವುದು ಪ್ರಸಾರಾಂಗದ ನಿರ್ದೇಶಕರು ನೀಡುವ ವಿವರಣೆ.

ಆನ್‌ಲೈನ್‌ಗೂ ಒತ್ತು

ಆನ್‌ಲೈನ್‌ ಮೂಲಕವೂ ಮಾರಾಟ ಮಾಡುವ ನಿಟ್ಟಿನಲ್ಲಿ ಪ್ರಸಾರಾಂಗ ಯೋಜಿಸುತ್ತಿದೆ. ಎಲ್ಲಾ ಪುಸ್ತಕಗಳ ಡಿಜಿಟೈಸೇಶನ್, ಪ್ರಕಟಣೆ ಮತ್ತು ನಿಯತಕಾಲಿಕೆಗಳು. ಮುದ್ರಣ ಆವೃತ್ತಿಗಳೊಂದಿಗೆ ವಿಶ್ವವಿದ್ಯಾಲಯದ ಜರ್ನಲ್‌ಗಳ ಆನ್‌ಲೈನ್ ಆವೃತ್ತಿಯನ್ನು ತರುವುದು. ಪದವಿ ಹಂತದಲ್ಲಿ ವಿವಿಧ ವಿಷಯಗಳ ಪಠ್ಯಪುಸ್ತಕಗಳನ್ನು ಪ್ರಕಟಿಸುವುದು. ವಿಜ್ಞಾನ ಮತ್ತು ತಂತ್ರಜ್ಞಾನ, ನಿರ್ವಹಣೆ ಮತ್ತು ಇತರ ವೃತ್ತಿಪರ ಕ್ಷೇತ್ರಗಳಲ್ಲಿ ಪುಸ್ತಕಗಳನ್ನು ಬರೆಯಲು ವಿಶೇಷ ಒತ್ತು ನೀಡುವ ಮೂಲಕ ಕನ್ನಡದಲ್ಲಿ ಯುವ ಬರಹಗಾರರನ್ನು ಉತ್ತೇಜಿಸುವುದು. ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ಇ-ಪೋರ್ಟಲ್ ಅನ್ನು ವಿನ್ಯಾಸಗೊಳಿಸುವುದು ಮತ್ತು ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿ ಹೋಸ್ಟ್ ಮಾಡುವುದು ಹೆಚ್ಚಿನ ಮೌಲ್ಯ ಮತ್ತು ಬೇಡಿಕೆಯಿರುವ ಎಲ್ಲಾ ಪುಸ್ತಕಗಳ ಮರುಮುದ್ರಣಕ್ಕೂ ಯೋಜಿಸಲಾಗುತ್ತಿದೆ.

ಹೆಚ್ಚಿನ ಮಾಹಿತಿಗೆ: 0821 - 2415311, 2419387, 2419370

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ