Karnataka Bandh: ದಕ್ಷಿಣ ಕನ್ನಡದಲ್ಲಿ ಬಂದ್ ಇರಲ್ಲ, ಕರ್ನಾಟಕ ಬಂದ್‌ಗೆ ಪ್ರತಿಭಟನೆಯ ಮೂಲಕ ಬೆಂಬಲ ಎಂದ ಸಂಘಟನೆಗಳು
Sep 28, 2023 10:07 PM IST
ದಕ್ಷಿಣ ಕನ್ನಡದಲ್ಲಿ ಬಂದ್ ಇರಲ್ಲ, ಕರ್ನಾಟಕ ಬಂದ್‌ಗೆ ಪ್ರತಿಭಟನೆಯ ಮೂಲಕ ಬೆಂಬಲ ಎಂದು ವಿವಿಧ ಸಂಘಟನೆಗಳು ಹೇಳಿವೆ, (ಸಾಂಕೇತಿಕ ಚಿತ್ರ)
ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಸಂಘಟನೆಗಳು ಕರ್ನಾಟಕ ರಾಜ್ಯ ಬಂದ್ ಗೆ ಬೆಂಬಲ ಸೂಚಿಸಿಲ್ಲ. ದಕ್ಷಿಣ ಕನ್ನಡದಲ್ಲಿ ಬ್ಯಾಂಕ್, ಸರಕಾರಿ ಕಚೇರಿಗಳು, ಖಾಸಗಿ ಕಚೇರಿಗಳು ನಿರಾತಂಕವಾಗಿ ನಡೆಯಲಿದೆ.
ಮಂಗಳೂರು: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವ ವಿಚಾರದಲ್ಲಿ ಸರಕಾರದ ನಿಲುವನ್ನು ವಿರೋಧಿಸಿ ನಾಳೆ ರಾಜ್ಯ ಬಂದ್ ಗೆ ಕರೆ ನೀಡಲಾಗಿದೆ. ಆದರೆ ಕರ್ನಾಟಕ ಬಂದ್ ಗೆ ರಾಜ್ಯದ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಯಾವುದೆ ಬೆಂಬಲ ವ್ಯಕ್ತವಾಗಿಲ್ಲ
ಕಾವೇರಿ ಹೋರಾಟದ ಕಾವು ದಿನದಿಮದ ದಿನಕ್ಕೆ ಏರಿಕೆಯಾಗುತ್ತಿದ್ದು, ಸರಕಾರದ ಮನವಿಗೂ ಮಣಿಯದೆ ಕನ್ನಡ ಪರ ಮತ್ತು ರೈತ ಸಂಘಟನೆಗಳು ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಿದೆ. ಬಂದ್ ನಿರ್ಧರವನ್ನು ಕೈ ಬಿಡಲು ಡಿಸಿಎಂ ಮತ್ತು ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಮನವಿ ಮಾಡಿದ್ದರೂ ಇದನ್ನು ಕನ್ನಡಪರ ಮತ್ತು ರೈತ ಪರ ಸಂಗಟನೆಗಳು ಒಪ್ಪದೆ ಬಂದ್ ಮಾಡಲು ನಿರ್ಧರಿಸಿದೆ.
Karnataka Bandh Live Updates: ನಾಳೆ ಕರ್ನಾಟಕ ಬಂದ್, ಬೆಂಗಳೂರು ನಗರ ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಿಗೆ ನಾಳೆ ರಜೆ, ಹೋಟೆಲ್ಗಳೂ ಇರಲ್ಲ
ಆದರೆ ಈ ನಿರ್ಧಾರಕ್ಕೆ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಸಂಘಟನೆಗಳು ಕರ್ನಾಟಕ ರಾಜ್ಯ ಬಂದ್ ಗೆ ಬೆಂಬಲ ಸೂಚಿಸಿಲ್ಲ. ದಕ್ಷಿಣ ಕನ್ನಡದಲ್ಲಿ ಬ್ಯಾಂಕ್, ಸರಕಾರಿ ಕಚೇರಿಗಳು, ಖಾಸಗಿ ಕಚೇರಿಗಳು ನಿರಾತಂಕವಾಗಿ ನಡೆಯಲಿದೆ. ಇನ್ನು ಬಂದ್ ಯಶಸ್ವಿಯಾಗಬೇಕಾದರೆ ಸಾರಿಗೆ ಸಂಚಾರ ಸಂಪೂರ್ಣ ಬಂದ್ ಆಗಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಗಳ ಪ್ರಾಬಲ್ಯವಿದೆ. ಖಾಸಗಿ ಬಸ್ ಗಳು ಬಂದ್ ನಡೆಸುವ ಸಾಧ್ಯತೆ ತೀರಾ ಕಡಿಮೆ. ಇನ್ನು ಸರಕಾರಿ ಬಸ್ ಗಳು ಇಲ್ಲಿ ನಿರಾತಂಕವಾಗಿ ಓಡಾಟ ನಡೆಸಲಿದೆ.
ಈ ಹಿಂದೆಯು ಕಾವೇರಿ ಹೋರಾಟಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಮುಖ್ಯವಾಗಿ ತುಳುನಾಡು ಆಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾವೇರಿ ನೀರಿನ ಬಳಕೆಯಾಗುವುದಿಲ್ಲ. ಹಿಂದೆ ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ನಡೆದ ಹೋರಾಟದ ಸಂದರ್ಭದಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೆ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಈ ಬಾರಿಯು ಇದೇ ರೀತಿ ಇರುವ ಸಾಧ್ಯತೆ ಇದೆ.
ಇನ್ನು ಖಾಸಗಿ ಬಸ್ ಮಾಲಕರು ಕರ್ನಾಟಕ ರಾಜ್ಯ ಬಂದ್ ದಿನ ಬಸ್ ಗಳ ಓಡಾಟವನ್ನು ನಡೆಸಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಖಾಸಗಿ ಸಿಟಿ ಬಸ್ ಮಾಲಕರ ಸಂಘದ ಮಾಜಿ ಅಧ್ಯಕ್ಷ ದಿಲ್ ರಾಜ್ ಆಳ್ವ ಅವರು ನೈತಿಕವಾಗಿ ಬೆಂಬಲ ಇರುತ್ತದೆ.ಬಂದ್ ಆಗಲಿ ಪ್ರತಿಭಟನೆ ಇರುವುದಿಲ್ಲ. ಕಾವೇರಿ ಸಮಸ್ಯೆ ಸ್ಥಳೀಯ ಮಟ್ಟದಲ್ಲಿ ಹೋರಾಟಗಳಾಗುತ್ತದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿಷಯ ಬಂದಾಗ ಎತ್ತಿನಹೊಳೆ ಬೇಡ ಎಂದಾಗ ಅಲ್ಲಿನ ಜನರು ಬೇಕು ಎಂದು ಪ್ರತಿಪಾದಿಸಿದರು. ತುಳು ರಾಜ್ಯದ ಎರಡನೇ ಭಾಷೆ ಆಗಬೇಕೆಂದು ಚರ್ಚೆ ಹುಟ್ಟಿದಾಗ ಸದನದಲ್ಲಿ ದೈವ ದೇವರ ವಿಚಾರವನ್ನು ತಮಾಷೆ ಮಾಡಿದರು. ಆದ ಕಾರಣ ನೈತಿಕವಾಗಿ ಬೆಂಬಲ ಇರುತ್ತದೆ. ಆದರೆ ಯಾವುದೇ ರೀತಿಯ ಪ್ರತಿಭಟನೆ ಮಾಡುವುದಿಲ್ಲ. ಯಾವ ಸಂಘಟನೆಗಳು ಕೂಡ ನಮ್ಮ ಬೆಂಬಲ ಯಾಚಿಸಿಲ್ಲ. ಆದ ಕಾರಣ ಬಂದಗ ನಡೆಯುವುದಿಲ್ಲ ಎಂದರು.
ಇನ್ನು ನಾಳೆ ಬಂದ್ ನಡೆಯದೆ ಇದ್ದರೂ ಶನಿವಾರ ಧರಣಿಯ ಮೂಲಕ ಬೆಂಬಲವನ್ನು ವಿದ್ಯಾರ್ಥಿ ಸಂಘ ಘೋಷಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಕಾವೇರಿ ನೀರಿಗಾಗಿ ಪ್ರತಿಭಟನೆಯು ಶನಿವಾರ ಮಧ್ಯಾಹ್ನ 1 ಗಂಟೆಗೆ ನಗರದ ಮಿನಿವಿಧಾನಸೌಧ ಎದುರುಗಡೆ ಆಯೋಜಿಸಿದೆ.
(ವರದಿ - ಹರೀಶ್ ಮಾಂಬಾಡಿ)