logo
ಕನ್ನಡ ಸುದ್ದಿ  /  ಕರ್ನಾಟಕ  /  Mysore News: ಮೈಸೂರು ಮುಡಾ ಹಗರಣಗಳ ತನಿಖೆಗೆ ಆಗ್ರಹಿಸಿ ಮಾಜಿ ನೌಕರನ ಕಪ್ಪು ಪಟ್ಟಿ ಧರಣಿ, ಸರ್ಕಾರದ ನಡೆಗೆ ಆಕ್ರೋಶ

Mysore News: ಮೈಸೂರು ಮುಡಾ ಹಗರಣಗಳ ತನಿಖೆಗೆ ಆಗ್ರಹಿಸಿ ಮಾಜಿ ನೌಕರನ ಕಪ್ಪು ಪಟ್ಟಿ ಧರಣಿ, ಸರ್ಕಾರದ ನಡೆಗೆ ಆಕ್ರೋಶ

Umesha Bhatta P H HT Kannada

Nov 07, 2024 04:48 PM IST

google News

ಮೈಸೂರಿನಲ್ಲಿ ಮುಡಾದಲ್ಲಿನ ಬದಲಿ ನಿವೇಶನ ಹಗರಣ, ಆಡಳಿತ ಸರಿಪಡಿಸಲು ಒತ್ತಾಯಿಸಿ ಮಾಜಿ ನೌಕರರೊಬ್ಬರು ವಿಭಿನ್ನವಾಗಿ ಪ್ರತಿಭಟಿಸಿದರು.

    • ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಹಗರಣಗಳ ತನಿಖೆ, ಆಡಳಿತ ಸರಿಪಡಿಸಲು ಆಗ್ರಹಿಸಿ ಮಾಜಿ ನೌಕರ ಕಪ್ಪು ಪಟ್ಟಿ ಧರಣಿ ನಡೆಸಿದ್ದಾರೆ. 
ಮೈಸೂರಿನಲ್ಲಿ ಮುಡಾದಲ್ಲಿನ ಬದಲಿ ನಿವೇಶನ ಹಗರಣ, ಆಡಳಿತ ಸರಿಪಡಿಸಲು ಒತ್ತಾಯಿಸಿ ಮಾಜಿ ನೌಕರರೊಬ್ಬರು ವಿಭಿನ್ನವಾಗಿ ಪ್ರತಿಭಟಿಸಿದರು.
ಮೈಸೂರಿನಲ್ಲಿ ಮುಡಾದಲ್ಲಿನ ಬದಲಿ ನಿವೇಶನ ಹಗರಣ, ಆಡಳಿತ ಸರಿಪಡಿಸಲು ಒತ್ತಾಯಿಸಿ ಮಾಜಿ ನೌಕರರೊಬ್ಬರು ವಿಭಿನ್ನವಾಗಿ ಪ್ರತಿಭಟಿಸಿದರು.

ಮೈಸೂರು: ಹಗರಣಗಳಿಂದ ನಲುಗಿ ಹೋಗಿರುವ ಶತಮಾನದ ಹಿನ್ನೆಲೆಯ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಅವ್ಯವಸ್ಥೆ, ಹಗರಣಗಳ ಸರಮಾಲೆ ಖಂಡಿಸಿ ಮುಡಾದ ಮಾಜಿ ನೌಕರರೊಬ್ಬರು ವಿಭಿನ್ನವಾಗಿ ಪ್ರತಿಭಟಿಸಿದರು. ಇಷ್ಟೆಲ್ಲಾ ಹಗರಣಗಳಾದರೂ ಇದನ್ನು ಸರಿಪಡಿಸಿ ಜನಮುಖಿ ಆಡಳಿತ ನೀಡಲು ಒತ್ತು ನೀಡುವ ಬದಲು ಇನ್ನಷ್ಟು ಹಾಳು ಮಾಡುವ ಕೆಲಸ ಮಾಡಲಾಗುತ್ತಿದೆ. ಖಾಸಗಿಯವರ ಬಡಾವಣೆಗಳಿಗೆ ಒಪ್ಪಿಗೆ ನೀಡುವ ಉದ್ದೇಶದಿಂದಲೇ ಮುಡಾ ಸಭೆಯನ್ನು ಕರೆಯಲಾಗಿದೆ ಎಂದು ಆರೋಪಿಸಿ ಮುಡಾ ಮಾಜಿ ನೌಕರ ನಟರಾಜ್‌ ಎಂಬುವವರು ಏಕಾಂಗಿಯಾಗಿ ಗುರುವಾರ ಹೋರಾಟ ಮಾಡಿದರು. ಅದರಲ್ಲೂ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಸರ್ಕಾರದ ವಿರುದ್ದ ಆಕ್ರೋಶವನ್ನು ಹೊರ ಹಾಕಿದರು. ಈ ವೇಳೆ ಸಾರ್ವಜನಿಕರು ಅವರಿಗೆ ಬೆಂಬಲ ಸೂಚಿಸಿದರು.

ಗುರುವಾರ ಬೆಳಿಗ್ಗೆ ದಾಖಲೆಗಳೊಂದಿಗೆ ಮುಡಾ ಕಚೇರಿ ಎದುರು ಆಗಮಿಸಿದ ನಟರಾಜ್‌ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ಆರಂಭಿಸಿದರು. ಜೆಎಲ್‌ ಬಿ ರಸ್ತೆಯಲ್ಲಿರುವ ಮುಡಾ ಕಚೇರಿಯ ಆವರಣದಲ್ಲಿ ಪ್ರತಿಭಟನೆ ನಡೆಸಿ ಅಲ್ಲಿ ಆಗುತ್ತಿರುವ ಅವ್ಯವಸ್ಥೆ ಕುರಿತು ಮಾಹಿತಿ ನೀಡಿದರು.ಅಲ್ಲದೇ ರಾಜ್ಯಪಾಲರ ಸಹಿತ ಹಿರಿಯ ಅಧಿಕಾರಿಗಳಿಗೂ ದೂರು ನೀಡಿರುವುದಾಗಿಯೂ ನಟರಾಜ್ ಹೇಳಿದರು.

ನಿರಂತರ ಅಕ್ರಮ ಆರೋಪ

ಕೆಲವು ದಿನಗಳಿಂದ ಮುಡಾದಲ್ಲಿ ಬರೀ ಅನ್ಯಾಯವೇ ನಡೆಯುತ್ತಿದೆ. ಜನ ಸಾಮಾನ್ಯರಿಗೆ ನಿವೇಶನ, ಸೂರು ನೀಡಬೇಕಾದ ಮುಡಾದಲ್ಲಿ ಪ್ರತಿಷ್ಠಿತರು ಬದಲಿ ನಿವೇಶನದ ಹೆಸರಿನಲ್ಲಿ ಭಾರೀ ಅಕ್ರಮ ನಡೆಸಿದ್ದಾರೆ. ಇದನ್ನು ಮೊದಲು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಮುಡಾದ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಕಣ್ಣಿಗೆ ಕಪ್ಪುಬಟ್ಟೆ ಕಟ್ಟಿಕೊಂಡು ತಮ್ಮ ಆಕ್ರೋಶವನ್ನು ಹೊರ ಹಾಕಿದ ಅವರು, ಕಳೆದ 10 ವರ್ಷದಿಂದ ಮುಡಾದಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇನೆ. ಆದರೂ ಏನೂ ಪ್ರಯೋಜನವಾಗಿಲ್ಲ. ಇನ್ನೂ ಅಕ್ರಮಗಳು ಹೆಚ್ಚುತ್ತಲೇ ಇವೆ ಎಂದು ಬೇಸರಿಸಿದರು.

ಈ ಸಭೆಯಾದರೂ ಏಕೆ

ಮುಡಾದಲ್ಲಿ ನಾಲ್ಕು ಸಾವಿರ ಕೋಟಿಗಿಂತ ಹೆಚ್ಚಿನ ಹಗರಣ ನಡೆದಿದೆ. ಮುಡಾ ಹಗರಣ ಹೊರ ಬಂದ ಮೇಲೆ ಮೊದ‌ಲ‌ ಸಭೆ ಇಂದು ನಡೆಯುತ್ತಿದೆ. ಅದರಲ್ಲೂ 167 ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ. ಖಾಸಗಿ ಲೇಔಟ್ ಗಳ ಟೌನ್ ಪ್ಲ್ಯಾನಿಂಗ್ ಗೆ ಅನುಮತಿ ನೀಡುವುದಕ್ಕೋಸ್ಕರವೇ ಈ ಸಭೆ ನಡೆಯುತ್ತಿದೆ ಎಂದು ಆರೋಪಿಸಿದರು.

ಮುಡಾದ ಹಗರಣದ ಬಗ್ಗೆ ಯಾರು ಕೂಡ ಚರ್ಚೆ ಮಾಡುತ್ತಿಲ್ಲ. ಹಗರಣದ ಬಗ್ಗೆ ಒಂದೇ ಒಂದು ಚರ್ಚೆಯಾಗುತ್ತಿಲ್ಲ. ಮುಡಾ ಹಗರಣದ ಹಿಂದೆ ಹಿರಿಯ ಸದಸ್ಯರುಗಳ ಕೈವಾಡ ಇದೆ ಎಂಬ ಮಾಹಿತಿ ಇದೆ. ಅವರ ಹೆಸರನ್ನು ನಾನು ಬಹಿರಂಗ ಮಾಡೋದಿಲ್ಲ. ನಿಮಗೆ ಶಕ್ತಿ ಇದ್ದರೆ ವೀಡಿಯೋ ನನಗೆ ಕೊಡಿಸಿ. ಯಾರು ಏನೆಲ್ಲಾ ಮಾತನಾಡಿದ್ದಾರೆ ಎನ್ನುವುದನ್ನು ಜಗತ್ತಿಗೆ ತಿಳಿಸುತ್ತೇನೆ. ಎಂದು ಆಗ್ರಹಿಸಿದರು.

ಪ್ರತಿಭಟನೆ ಏಕೆ

ಮುಡಾ ಅಕ್ರಮದ ಬಗ್ಗೆ ಯಾವುದೇ ಕ್ರಮ ಆಗುವುದಿಲ್ಲ ಎಂಬುದೇ ಪ್ರತಿಭಟನೆಯ ಉದ್ದೇಶ. ಕೂಡಲೇ ಉನ್ನತ ಮಟ್ಟದಲ್ಲಿ ತನಿಖೆಯಾಗಿ ತಪ್ಪಿತಸ್ಥರ ವಿರುದ್ದ ಕ್ರಮ ಆಗಬೇಕು. ಮುಡಾ ಜನಸಾಮಾನ್ಯರ ಪರವಾಗಿ ಕೆಲಸ ಮಾಡಬೇಕು ಎಂದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ