ಸಿಎಂ ಪತ್ನಿ ಪಾರ್ವತಿ ವಿರುದ್ಧ ಮತ್ತೊಂದು ಭೂ ಅಕ್ರಮದ ಆರೋಪ; ಸಿದ್ದರಾಮಯ್ಯಗೆ ಏಕಕಾಲಕ್ಕೆ ಎರಡೆರಡು ಕಡೆ ತೀವ್ರ‌ ವಿಚಾರಣೆ
ಕನ್ನಡ ಸುದ್ದಿ  /  ಕರ್ನಾಟಕ  /  ಸಿಎಂ ಪತ್ನಿ ಪಾರ್ವತಿ ವಿರುದ್ಧ ಮತ್ತೊಂದು ಭೂ ಅಕ್ರಮದ ಆರೋಪ; ಸಿದ್ದರಾಮಯ್ಯಗೆ ಏಕಕಾಲಕ್ಕೆ ಎರಡೆರಡು ಕಡೆ ತೀವ್ರ‌ ವಿಚಾರಣೆ

ಸಿಎಂ ಪತ್ನಿ ಪಾರ್ವತಿ ವಿರುದ್ಧ ಮತ್ತೊಂದು ಭೂ ಅಕ್ರಮದ ಆರೋಪ; ಸಿದ್ದರಾಮಯ್ಯಗೆ ಏಕಕಾಲಕ್ಕೆ ಎರಡೆರಡು ಕಡೆ ತೀವ್ರ‌ ವಿಚಾರಣೆ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ದಾಖಲೆಗಳ ಪರಿಶೀಲನೆ ಚುರುಕುಗೊಂಡ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ವಿರುದ್ಧ ಮತ್ತೊಂದು ಭೂಕಬಳಿಕೆ ಆರೋಪ ಕೇಳಿ ಬಂದಿದೆ.

ಸಿಎಂ ಪತ್ನಿ ಪಾರ್ವತಿ ವಿರುದ್ಧ ಮತ್ತೊಂದು ಭೂ ಅಕ್ರಮದ ಆರೋಪ; ಸಿದ್ದರಾಮಯ್ಯಗೆ ಏಕಕಾಲಕ್ಕೆ ಎರಡೆರಡು ಕಡೆ ತೀವ್ರ‌ ವಿಚಾರಣೆ
ಸಿಎಂ ಪತ್ನಿ ಪಾರ್ವತಿ ವಿರುದ್ಧ ಮತ್ತೊಂದು ಭೂ ಅಕ್ರಮದ ಆರೋಪ; ಸಿದ್ದರಾಮಯ್ಯಗೆ ಏಕಕಾಲಕ್ಕೆ ಎರಡೆರಡು ಕಡೆ ತೀವ್ರ‌ ವಿಚಾರಣೆ

ಮೈಸೂರು: ಮುಡಾ ಹಗರಣದ ತನಿಖೆ ತೀವ್ರಗೊಂಡ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ವಿರುದ್ಧ ಮತ್ತೊಂದು ಭೂ ಅಕ್ರಮದ ಆರೋಪ ಕೇಳಿ ಬಂದಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ 20 ಗುಂಟೆ ಜಾಗವನ್ನು 2023ರ ಸೆಪ್ಟೆಂಬರ್​ 29ರಂದು ಪಾರ್ವತಿ ಅವರು ರಿಜಿಸ್ಟ್ರಾರ್ ಮೂಲಕ ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಮೈಸೂರಿನ ಕೆ ಆರ್​ಎಸ್ ರಸ್ತೆಯಲ್ಲಿರುವ‌ ಸರ್ವೇ ನಂಬರ್ 454ರ ಗಣೇಶ್ ದೀಕ್ಷಿತ್ ಎಂಬವರಿಗೆ ಸೇರಿದ 4 ಎಕರೆ 11 ಗುಂಟೆ ಜಾಗವಿದ್ದು, ಅದರಲ್ಲಿ 20 ಗುಂಟೆ ಜಾಗವನ್ನು ಖರೀದಿ ಮಾಡಿದ್ದಾರೆ. ಆದರೆ ಪಾರ್ವತಿ ಅವರು ಖರೀದಿಸಿದ 20 ಗುಂಟೆ (21,771,99 ಚದರಡಿ ಜಾಗ) ಪೈಕಿ 8,998 ಚದರಡಿ ಜಾಗ ರಸ್ತೆ ಮತ್ತು ಪೈಪ್ ಲೈನ್​ಗೆ ಸೇರಿದ್ದ ಜಾಗವಾಗಿತ್ತು. 

ರಸ್ತೆ ಮತ್ತು ಪೈಪ್ ಲೈನ್​ಗೆ ಸೇರಿದ್ದ ಜಾಗವನ್ನೂ ಸೇರಿಸಿಕೊಂಡು ತಮ್ಮ ಹೆಸರಿಗೆ ರಿಜಿಸ್ಟ್ರಾರ್ ಮಾಡಿಸಿಕೊಂಡಿದ್ದಾರೆ ಎಂದು ಆರ್​​ಟಿಐ ಕಾರ್ಯಕರ್ತ ಗಂಗರಾಜು ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಆರ್​​ಟಿಐ ಕಾರ್ಯಕರ್ತರು ಅರ್ಜಿ ಹಾಕುತ್ತಿದ್ದಂತೆ ಎಚ್ಚೆತ್ತ ಸಿಎಂ ಪತ್ನಿ ಪಾರ್ವತಿ ಅವರು, ಇದೇ ಆಗಸ್ಟ್​ 31ರಂದು ರಿಜಿಸ್ಟ್ರಾರ್ ತಿದ್ದುಪಡಿ ಮಾಡಿಸಿದ್ದಾರೆ. ರಸ್ತೆ ಮತ್ತು ಪೈಪ್ ಲೈನ್​ಗೆ ಸೇರಿದ್ದ ಜಾಗವನ್ನು ಬಿಟ್ಟು ಇನ್ನುಳಿದ 12,782 ಚದರಡಿ ಜಾಗಕ್ಕೆ ಮಾತ್ರ ರಿಜಿಸ್ಟ್ರಾರ್ ಮಾಡಿಸಿಕೊಂಡು ಅಕ್ರಮ ಎಸೆಗಿದ್ದಾರೆ. ಈ ಅಕ್ರಮದ ಕುರಿತು ರಾಜ್ಯಪಾಲರಿಗೆ ದೂರು ನೀಡುವುದಾಗಿ ತಿಳಿಸಿದ ಗಂಗರಾಜು, ಇದೇ ವೇಳೆ ದಾಖಲೆಗಳನ್ನು ಪ್ರದರ್ಶಿಸಿದರು.

ಸಿಎಂ ಸಿದ್ದರಾಮಯ್ಯಗೆ ಸಂಕಷ್ಟದ ಮೇಲೆ ಸಂಕಷ್ಟ

ಸಿಎಂ ಸಿದ್ದರಾಮಯ್ಯ ಅವರು ಏಕಕಾಲಕ್ಕೆ ಎರಡೆರಡು ಕಡೆ ತೀವ್ರ‌ ವಿಚಾರಣೆ ಎದುರಿಸಲಿದ್ದಾರೆ. ಲೋಕಾಯುಕ್ತದಲ್ಲೂ ಮುಡಾ ತನಿಖೆ ಚುರುಕುಗೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ರಾಯಚೂರು ಕಾಂಗ್ರೆಸ್ ಸಂಸದ ಹಾಗೂ ಅಂದು ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ಜಿ ಕುಮಾರನಾಯ್ಕ ವಿಚಾರಣೆ ಎದುರಿಸಿದ್ದಾರೆ. ಮುಡಾದಲ್ಲಿ 50:50 ಅನುಪಾತದಡಿ ನಿವೇಶನ ಹಂಚಿಕೆ ಮಾಡುವಾಗ ಹಗರಣ ಪ್ರಕರಣಕ್ಕೆ ಮೈಸೂರು ಲೋಕಾಯುಕ್ತ ಎಸ್​ಪಿ ಟಿಜೆ ಉದೇಶ್ ಅವರಿಂದ ವಿಚಾರಣೆ ನಡೆಯುತ್ತಿದೆ. ಪಾರ್ವತಿ ಹೆಸರಿಗೆ ಭೂ ಪರಿವರ್ತನೆ ಮಾಡಿದ ವೇಳೆ ಜಿ ಕುಮಾರನಾಯ್ಕ ಮೈಸೂರು ಜಿಲ್ಲಾಧಿಕಾರಿ ಆಗಿದ್ದರು. ಮೂರು ತಾಸು ವಿಚಾರಣೆ ಎದುರಿಸಿದ್ದು, ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಮತ್ತೊಂದೆಡೆ ಇಡಿ ಅಧಿಕಾರಿಗಳಿಂದಲೂ ತನಿಖೆ ತೀವ್ರಗೊಂಡಿದೆ.

Whats_app_banner