logo
ಕನ್ನಡ ಸುದ್ದಿ  /  ಕರ್ನಾಟಕ  /  Mysore News: ಪ್ರೇಮಿಸಿ ವಿವಾಹವಾಗಿದ್ದ ಮೈಸೂರು ಮಹಿಳೆ ನೇಣಿಗೆ ಶರಣು, ಪತಿ -ಪತ್ನಿ ನಡುವೆ ಕಲಹದ ಶಂಕೆ

Mysore News: ಪ್ರೇಮಿಸಿ ವಿವಾಹವಾಗಿದ್ದ ಮೈಸೂರು ಮಹಿಳೆ ನೇಣಿಗೆ ಶರಣು, ಪತಿ -ಪತ್ನಿ ನಡುವೆ ಕಲಹದ ಶಂಕೆ

Umesha Bhatta P H HT Kannada

Nov 18, 2024 08:08 PM IST

google News

ಮೈಸೂರಿನಲ್ಲಿ ಕುಟುಂಬ ಕಲಹದ ಕಾರಣದಿಂದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

    • ಮೈಸೂರಿನಲ್ಲಿ ಪ್ರೇಮಿಸಿ ವಿವಾಹವಾಗಿ ಕೆಲ ದಿನಗಳಿಂದ ನಗರದಲ್ಲಿ ವಾಸವಿದ್ದ ದಂಪತಿಗಳ ಕಲಹ ಪತ್ನಿ ಆತ್ಮಹತ್ಯೆಯಲ್ಲಿ ಅಂತ್ಯಗೊಂಡಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.
ಮೈಸೂರಿನಲ್ಲಿ ಕುಟುಂಬ ಕಲಹದ ಕಾರಣದಿಂದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೈಸೂರಿನಲ್ಲಿ ಕುಟುಂಬ ಕಲಹದ ಕಾರಣದಿಂದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೈಸೂರು: ಎರಡು ವರ್ಷದ ಹಿಂದೆಯಷ್ಟೇ ಪ್ರೀತಿಸಿ ಮದುವೆಯಾಗಿದ್ದ ಮೈಸೂರಿನ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪತಿ ಪತ್ನಿ ನಡುವೆ ಕಲಹ ಏರ್ಪಟ್ಟು ಪತ್ನಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮೈಸೂರಿನ ಹಳೆ ಕೆಸರೆಯಲ್ಲಿ ಘಟನೆ ನಡೆದಿದ್ದು, ಕೋಮಲ (25) ಆತ್ಮಹತ್ಯೆಗೆ ಶರಣಾಗಿರುವ ಗೃಹಿಣಿ.

ಮೈಸೂರಿನ ಕೋಮಲ ಹಾಗೂ ರಾಜು ಅವರು ಪ್ರೀತಿಸಿ ವಿವಾಹವಾಗಿದ್ದರು. 8 ತಿಂಗಳ ಹಿಂದೆ ಹಳೆ ಕೆಸರೆಯಲ್ಲಿ ಬಾಡಿಗೆಗೆ ಮನೆ ಪಡೆದು ವಾಸವಿದ್ದ ದಂಪತಿ ಕೆಲಸಕ್ಕೆ ಹೋಗುತ್ತಿದ್ದರು. ಆದರೆ ಕೆಲವು ವಿಚಾರವಾಗಿ ಆಗಾಗ ಗಂಡ ಹೆಂಡತಿ ನಡುವೆ ಗಲಾಟೆ ನಡೆಯುತ್ತಲೇ ಇತ್ತು. ಭಾನುವಾರ ರಾತ್ರಿಯೂ ಜಗಳವಾಗಿತ್ತು. ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಆತ್ಮಹತ್ಯೆಯಲ್ಲಿ ಅಂತ್ಯವಾಗಿದೆ ಎನ್ನುವುದು ನೆರೆಹೊರೆಯವರ ಹೇಳಿಕೆ.

ಸ್ಥಳಕ್ಕೆ ಎನ್ ಆರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಎನ್ ಆರ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಎರಡು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಕೋಮಲ ಹಾಗೂ ರಾಜು ಭಾನುವಾರ ತಡ ರಾತ್ರಿ ಗಂಡ ಹೆಂಡತಿ ನಡುವೆ ಗಲಾಟೆಯಾಗಿತ್ತು. ಮನನೊಂದು ಕೋಮಲ ಆತ್ಮಹತ್ಯೆಗೆ ಶರಣಾಗಿದ್ದಾರೆ ಕುಟುಂಬದವರು ತಿಳಿಸಿದ್ದಾರೆ. ಈ ಕುರಿತು ವಿಚಾರಣೆ ನಡೆಯುತ್ತಿದೆ ಎಂದು ನರಸಿಂಹರಾಜ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮೈಸೂರು ತಲುಪಿದ ಮೂವರು ಯುವತಿಯರ ಮೃತ ದೇಹಗಳು

ಭಾನುವಾರ ಮಂಗಳೂರು ರೆಸಾರ್ಟ್ ನ ಈಜುಕೊಳದಲ್ಲಿ ಮೃತಪಟ್ಟಿದ್ದ ಮೂವರು ಯುವತಿಯರ ಪಾರ್ಥಿವ ಶರೀರಗಳನ್ನು ಮಂಗಳೂರಿನಿಂದ ಮೈಸೂರಿಗೆ ತರಲಾಯಿತು.

ಮೈಸೂರಿನ ಕುರುಬಾರಹಳ್ಳಿಯ ನಿಶ್ಚಿತ, ರಾಮಾನುಜ ರಸ್ತೆಯ ಪಾರ್ವತಿ, ವಿಜಯನಗರದ ಕೀರ್ತನ ಮೃತ ದುರ್ದೈವಿಗಳು. ಮಂಗಳೂರು ಹೊರವಲಯದ ಸೋಮೇಶ್ವರ ಸಮೀಪದ ವಾಜ್ಕೋ ರೆಸಾರ್ಟ್ ನ ಈಜುಕೊಳದಲ್ಲಿ ಮುಳುಗಿ ಈ ಮೂವರು ಯುವತಿಯರು ಸಾವನ್ನಪ್ಪಿದ್ದರು.

ಮೃತದೇಹಗಳನ್ನು‌ ಪ್ರತ್ಯೇಕವಾಗಿ ಅಂತಿಮ ಸಂಸ್ಕಾರ ಮಾಡಲು ಆಯಾ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಮೂರು ಕುಟುಂಬಗಳಿಗೆ ಮೃತ ದೇಹ ಹಸ್ತಾಂತರ ಮಾಡಿದಾಗ ಆಕ್ರಂದನ ಮುಗಿಲುಮುಟ್ಟಿತ್ತು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ