ಮೈಸೂರು ಅರಸರಿಗೆ ಮಕ್ಕಳಾಗದಿರಲಿ ಎನ್ನುವ ಕಥೆ; ಯದುವೀರ್ ಒಡೆಯರ್ 2ನೇ ಪುತ್ರನ ಜನನದಿಂದ ಕಳಚೀತೆ 400 ವರ್ಷದ ಶಾಪ ವಿಮೋಚನೆ
Oct 11, 2024 02:10 PM IST
ಮೈಸೂರು ರಾಜವಂಶಸ್ಥರ ಈಗಿನ ಕುಟುಂಬ
- ಮೈಸೂರು ರಾಜವಂಶಸ್ಥರಿಗೆ ಮಕ್ಕಳಿಗೆ ಸಂಬಂಧಿಸಿದ ಪುರಾತನ ಶಾಪವೊಂದಿದೆ. ಅದು ಯದುವೀರ್‌ಗೆ ಏಳು ವರ್ಷದ ಹಿಂದೆ ಮಗುವಾದಾಗ ಬದಲಾಗಿತ್ತು. ಈಗ ಮತ್ತೆ ಎರಡನೇ ಮಗುವಾಗುವ ಮೂಲಕ ಮತ್ತೊಮ್ಮೆ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಮೈಸೂರು: ತಲಕಾಡು ಮರಳಾಗಲಿ, ಮಾಲಂಗಿ ಮದುವೆಯಾಗಲಿ, ಮೈಸೂರು ದೊರೆಗೆ ಮಕ್ಕಳಾಗದಿರಲಿ ಎನ್ನುವುದು 400 ವರ್ಷಕ್ಕೂ ಹಳೆಯದಾದ ನಂಬಿಕೆಯ ಸಾಲುಗಳು. ಇದು ಮೈಸೂರಿನ ಯದುವಂಶರನ್ನು ಆಧರಿಸಿ ಹೇಳುವ ಕಥನ. ಅಂದರೆ ಒಂದು ತಲೆಮಾರಿನ ನಂತರ ಮತ್ತೊಂದು ತಲೆಮಾರಿಗೆ ಮಕ್ಕಳಾಗುವುದಿಲ್ಲ ಎನ್ನುವ ಶಾಪ ಎಂಬ ನಂಬಿಕೆ ಮೈಸೂರು ಭಾಗದಲ್ಲಿದೆ. ಇದು ಶತಮಾನಗಳಿಂದ ನಡೆದುಕೊಂಡೇ ಬಂದಿದೆ. ನಮ್ಮ ಕಣ್ಣ ಮುಂದೆಯೇ ಇದು ಸಾಬೀತು ಕೂಡ ಆಗಿದೆ. ರಾಜವಂಶಸ್ಥರಿಗೆ ಮಕ್ಕಳಾಗದೇ ನಂತರ ಮಕ್ಕಳಾಗಿರುವ ಪ್ರಸಂಗ ಕಂಡಿದ್ದೇವೆ. ಇದಕ್ಕೆ ಇತಿಶ್ರೀ ಇಡುವ ರೀತಿಯಲ್ಲಿ ರಾಜವಂಶಸ್ಥ ಯದುವೀರ್ ಒಡೆಯರ್ ಅವರು ಏಳು ವರ್ಷದ ಹಿಂದೆಯೇ ನಡೆದುಕೊಂಡಿದ್ದಾರೆ. ಈಗ ಮತ್ತೊಮ್ಮೆ ಅಂತಹ ಮತ್ತೊಂದು ಸನ್ನಿವೇಶ ಎದುರಾಗಿದೆ.
ಪ್ರಪಂಚದಾದ್ಯಂತದ ಯಾವುದೇ ಊರು, ದೇಶ , ವಂಶಗಳಲ್ಲಿ ದಂತಕಥೆಗಳು, ಪುರಾಣಗಳು ಮತ್ತು ಕಥೆಗಳು ಸಂಸ್ಕೃತಿಗಳ ಭಾಗವಾಗಿದೆ. ಅನೇಕ ಜಾನಪದವು ತಲೆಮಾರುಗಳಿಂದ ಉಳಿದುಕೊಂಡಿವೆ. ಅದು ಮುಂದುವರೆದುಕೊಂಡು ಹೋಗುತ್ತದೆ. ಜನರು ಅವುಗಳನ್ನು ಪ್ರಶ್ನಿಸುವುದಿಲ್ಲ ಕೂಡ. ಏಕೆಂದರೆ ಇಂತಹ ನಂಬಿಕೆಗಳು ಕೆಲವೊಮ್ಮೆ ನಿಜವೂ ಆಗಿರುತ್ತದೆ. ಅದರಲ್ಲೂ ಭಾರತದಲ್ಲಿ ಇಂತಹ ನಂಬಿಕೆಗಳನ್ನು ಕೊಂಚ ಹೆಚ್ಚವೇ ನಂಬುವುದುಂಟು.
ಅಂತಹ ಒಂದು ಕಥೆಯು ಮೈಸೂರು ರಾಜಮನೆತನದ ಬಗ್ಗೆ ಹೇಳುತ್ತದೆ. ಅದು ದಶಕದ ಹಿಂದಿನವರೆಗೂ ಮುಂದುವರೆದಿತ್ತು. ಮೈಸೂರು ಒಡೆಯರ್, ಎಂದಿಗೂ ಸ್ವಾಭಾವಿಕ ಉತ್ತರಾಧಿಕಾರಿಯನ್ನು ಹೊಂದಿರಲಿಲ್ಲ. ಆದರೆ ನಂಬಿಕೆಯನ್ನು ಮುರಿದು, 2017 ಡಿಸೆಂಬರ್ 6 ರಂದು ರಾತ್ರಿ 9.32 ಕ್ಕೆ ಬೆಂಗಳೂರಿನಲ್ಲಿ ಒಡೆಯರ್‌ಗೆ ಯುವ ಕುಮಾರ ಜನಿಸಿದ. 54 ವರ್ಷಗಳ ನಂತರ ಕುಟುಂಬದಲ್ಲಿ ಜನಿಸಿದ ಮೊದಲ ಮಗು ಇದಾಗಿದ್ದು, ಈ ನವಜಾತ ಶಿಶು 400 ವರ್ಷಗಳ ಶಾಪವನ್ನು ಕೊನೆಗೊಳಿಸುತ್ತದೆ ಎಂದು ಜನರು ಆಶಿಸಿದ್ದರು. ಏಕೆಂದರೆ ಯದುವೀರ್‌ಗೆ ಜನಿಸಿದ ಮಗು ಹಿಂದಿನ ನಂಬಿಕೆಯ ಭಾಗವಾಗಿಯೇ ನೋಡಲಾಗಿತ್ತು. ಕೃಷ್ಣರಾಜ ಒಡೆಯರ್ ಗೆ ಮಕ್ಕಳಿಲ್ಲದೇ ಅವರ ಸಹೋದರನ ಪುತ್ರ ಜಯಚಾಮರಾಜ ಒಡೆಯರ್ ಅವರನ್ನು ದತ್ತು ಪಡೆಯಲಾಗಿತ್ತು. ಅವರ ಪುತ್ರ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಅವರಿಗೆ ಮಕ್ಕಳಾಗಲಿಲ್ಲ. ಅವರು ಕಾಲವಾದ ನಂತರ ಒಡೆಯರ್ ಅವರ ಅಕ್ಕನ ಮೊಮ್ಮಗ ಯದುವೀರ್ ಅವರನ್ನು ಪ್ರಮೋದಾದೇವಿ ದತ್ತು ಪಡೆದುಕೊಂಡಿದ್ದರು. ಅವರ ಕುಟುಂಬಕ್ಕೆ ಮೊದಲ ಮಗುವಿನ ನಂತರ ಈಗ ಎರಡನೇ ಗಂಡು ಮಗು ಸೇರಿದೆ. ಈ ಮೂಲಕ ಹಿಂದಿನ ನಂಬಿಕೆಯ ಕುರಿತಾದ ಭಿನ್ನ ಚರ್ಚೆಗೂ ದಾರಿ ಮಾಡಿಕೊಟ್ಟಿದೆ.
ಕಳೆದ ವರ್ಷ ಜೂನ್ 2016 ರಲ್ಲಿ ವಿವಾಹವಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ಕುಮಾರಿ ಅವರು ಮರು ವರ್ಷವೇ ಕುಟುಂಬದ ಹೊಸ ಸದಸ್ಯರನ್ನು ಸ್ವಾಗತಿಸಿದರು. ಪ್ರಮೋದಾ ದೇವಿಯ ದತ್ತುಪುತ್ರರಾದ ರಾಜ ಒಡೆಯರ 27ನೇ ವಂಶಸ್ಥರಾದ ಯದುವೀರ್ ಅವರು ಡುಂಗರಪುರದ ರಾಜ ದಂಪತಿಗಳಾದ ಹರಶ್ವರ್ಧನ್ ಸಿಂಗ್ ಮತ್ತು ಮಹೇಶಿ ಕುಮಾರಿ ಅವರ ಪುತ್ರಿಯನ್ನು ವಿವಾಹವಾಗಿದ್ದರು. ಯದುವೀರ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಗಂಡು ಮಗುವಿನ ಚಿತ್ರವನ್ನು ಅನಾವರಣಗೊಳಿಸಿದ್ದರು''ರಾಜಮಾತೆ ಪ್ರಮೋದಾ ದೇವಿಯ ಈ ಚಿತ್ರವನ್ನು ತನ್ನ ಮೊಮ್ಮಗನೊಂದಿಗೆ ಹಂಚಿಕೊಳ್ಳಲು ತುಂಬಾ ಸಂತೋಷವಾಗಿದೆ'' ಎಂದು ಬರೆದುಕೊಂಡಿದ್ದರು. ಈಗ ಅಂತಹದೇ ಚಿತ್ರ ಹಾಕುವ ಸನ್ನಿವೇಶ ಸದ್ಯಕ್ಕಂತೂ ಇಲ್ಲ. ಏಕೆಂದರೆ ದಸರಾ ಚಟುವಟಿಕೆಗಳು ನಡೆದಿವೆ. ದಸರಾ ಮುಗಿದ ಮೇಲೆ ಅಜ್ಜಿ ಎರಡನೇ ಮೊಮ್ಮಗನ ಫೋಟೋ ಹಾಕಬಹುದು.
400 ವರ್ಷಗಳಷ್ಟು ಹಳೆಯದಾದ ಒಡೆಯರ್ ರಾಜವಂಶದ ಮೇಲೆ ಶಾಪವಿದೆ, ಅವರು ನೈಸರ್ಗಿಕ ಉತ್ತರಾಧಿಕಾರಿಗಳೊಂದಿಗೆ ಆಶೀರ್ವದಿಸುವುದಿಲ್ಲ. ಶಾಪವು 1612 ರ ಹಿಂದಿನದು, ಒಡೆಯರ್ ಪ್ರದೇಶವನ್ನು ವಶಪಡಿಸಿಕೊಂಡಾಗ ಮತ್ತು ಶ್ರೀರಂಗಪಟ್ಟಣದ ಹೊರಹೋಗುವ ರಾಜನ ಹೆಂಡತಿ ಅಲೆಮಾಲೆಮ್ಮ ಕಾವೇರಿ ನದಿಯ ತಲಕಾಡು ಎಂಬ ಸಣ್ಣ ಪಟ್ಟಣಕ್ಕೆ ಎಲ್ಲಾ ರಾಜ ಆಭರಣಗಳೊಂದಿಗೆ ಓಡಿಹೋದಳು. ರಾಜನ ಸೈನಿಕರು ಆಭರಣಗಳನ್ನು ಮರಳಿ ಪಡೆಯಲು ಅವಳನ್ನು ಹಿಂಬಾಲಿಸಿದರು ಆದರೆ ಅಲೆಮಲೆಮ್ಮ ಒಡೆಯರ್‌ಗಳನ್ನು ಬಾಗಿಸಿ ನದಿಗೆ ಹಾರಿದಳು. ಆಗ ತಲಕಾಡು ಮರಳಾಗಲಿ, ಮಾಲಂಗಿ ಮದುವೆಯಾಗಲಿ, ಮೈಸೂರು ದೊರೆಗೆ ಮಕ್ಕಳಾಗದಿರಲಿ ಎಂದದು ಹೇಳಿದ್ದಳು ಎನ್ನುವುದನ್ನು ಹಲವಾರು ಕೃತಿಗಳು ಉಲ್ಲೇಖಸಿವೆ. ಇತಿಹಾಸ ತಜ್ಞ ಪ್ರೊ.ಪಿ.ವಿ.ನಂಜರಾಜ ಅರಸ್ ಕೂಡ ಈ ಸಂಬಂಧ ಕೃತಿಯೊಂದನ್ನು ಹೊರ ತಂದಿದ್ದಾರೆ. ಅದರಲ್ಲಿ ಈ ಕಥಾನಕದ ಸಂಪೂರ್ಣ ವಿವರವಿದೆ.
ಈಗ ಎರಡನೇ ಮಗು ಜನಿಸಿರುವುದರಿಂದ ಮುಂದೆ ಯದುವೀರ್ ಅವರ ಇಬ್ಬರು ಪುತ್ರರಲ್ಲಿ ಗಂಡು ಮಗುವಾದರೆ ಈ ಶಾಪ ಕೊನೆಗಾಣಬಹುದು. ಅದಕ್ಕೆ ಮುಂದಿನ ಮೂರು ದಶಕದವರೆಗೂ ಕಾಯಬೇಕು. ಹಿಂದಿನ ರಾಜವಂಶಸ್ಥರು ಕಾದ ಹಾಗೆ !