logo
ಕನ್ನಡ ಸುದ್ದಿ  /  ಕರ್ನಾಟಕ  /  Mysuru News: ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಅಲ್ಲ: ಎಚ್.ವಿಶ್ವನಾಥ್‌ ತಿರುಗೇಟು

Mysuru News: ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಅಲ್ಲ: ಎಚ್.ವಿಶ್ವನಾಥ್‌ ತಿರುಗೇಟು

HT Kannada Desk HT Kannada

May 19, 2023 07:15 AM IST

ಎಚ್‌ ವಿಶ್ವನಾಥ್‌

  • Mysuru News: ಕಾಂಗ್ರೆಸ್‌ - ಜೆಡಿಎಸ್‌ ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಅವರು ಕಾರಣ ಅಲ್ಲ ಎಂದು ಎಂಎಲ್‌ಸಿ ಎಚ್‌.ವಿಶ್ವನಾಥ್‌ ಗುರುವಾರ ಹೇಳಿದ್ದಾರೆ. ಆ ಮೂಲಕ ಡಾ.ಕೆ.ಸುಧಾಕರ್‌ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಎಚ್‌ ವಿಶ್ವನಾಥ್‌
ಎಚ್‌ ವಿಶ್ವನಾಥ್‌ (HT Kannada File Photo)

ʻರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಅವರೇ ಪ್ರೇರಣೆʼ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಮಾಡಿದ್ದ ಟ್ವೀಟ್‌ಗೆ ಹಳ್ಳಿಹಕ್ಕಿ ಹೆಚ್.ವಿಶ್ವನಾಥ್ ತಿರುಗೇಟು ನೀಡಿದ್ದು, ಸುಧಾಕರ್ ಆರೋಪ ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Tumkur News: ತುಮಕೂರು ಜಿಲ್ಲೆಯಲ್ಲಿ ಜಾಲಿ ಮುಳ್ಳಿನ ಮೇಲೆ ಕುಣಿಯುವ ದೇವರನ್ನು ರೇಗಿಸಿ ಚಾಟಿ ಏಟು ತಿನ್ನುವ ಮಜಾ !

Bagalkot News: ಚುನಾವಣೆಗೆ ಹೊರಟ ಸಿಬ್ಬಂದಿ ಮುಧೋಳದಲ್ಲಿ ಕುಸಿದು ಬಿದ್ದು ಸಾವು

Mysuru News: ಬಿಸಿಲಬೇಗೆ ನಾಗರಹೊಳೆಯಿಂದ ಹೊರ ಬಂದು ತೋಟದ ಮನೆಯಲ್ಲಿ ಗಡದ್ದಾಗಿ ಮಲಗಿದ ಹುಲಿರಾಯ

ಬೆಂಗಳೂರು: ಅಲೆನ್ ಕೆರಿಯರ್ ಇನ್‌ಸ್ಟಿಟ್ಯೂಟ್‌ಗೆ 1.4 ಲಕ್ಷ ರೂಪಾಯಿ ದಂಡ, ವಿದ್ಯಾರ್ಥಿ ಕೇಳದ ಕೋರ್ಸ್‌ಗೆ ಸೇರಿಸಿದ ಪ್ರಕರಣ

ಈ ಸಂಬಂಧ ಮೇ 18 ರಂದು ಮೈಸೂರಿನಲ್ಲಿ ಮಾತನಾಡಿರುವ ಅವರು, ಈ ಮಾತನ್ನು ಸುಧಾಕರ್‌ ಅವರು ಚುನಾವಣೆ ಸಂದರ್ಭದಲ್ಲಿ ಹೇಳಿದ್ದರೆ ಗೌರವ ಇರುತ್ತಿತ್ತು. ಸೋತು ಸುಣ್ಣ ಆದ ಮೇಲೆ ಈ ರೀತಿ ಹೇಳುತ್ತಿರುವುದರಿಂದ ಸ್ವತಃ ಅವರೇ ನಗೆಪಾಟಲಾಗುತ್ತಾರೆ. ಮಾಜಿ ಸಚಿವ ಸುಧಾಕರ್ ಜೊತೆ ಬಿಜೆಪಿ ಸರ್ವನಾಶದತ್ತ ಬಂದಿದೆ. ಡಾ.ಕೆ.ಸುಧಾಕರ್ರನ್ನು ದುಡ್ಡು ಇಲ್ಲದ ಯುವಕನೊಬ್ಬ ಸೋಲಿಸಿದ್ದಾನೆ. ಸಿದ್ದರಾಮಯ್ಯ ಪ್ರೇರಣೆ ಇದ್ದಿದ್ದರೆ ಅವತ್ತೇ ಸುಧಾಕರ್ ಹೇಳಬೇಕಿತ್ತು ಎಂದು ಸುಧಾಕರ್‌ಗೆ ಎಂಎಲ್ಸಿ ಹೆಚ್.ವಿಶ್ವನಾಥ್ ತಿರುಗೇಟು ನೀಡಿದ್ದಾರೆ.

ಈಗ ತಾವೇನೋ ಸತ್ಯ ಹೇಳುತ್ತಿದ್ದಾರೆ ಎಂಬ ಹಮ್ಮಿನಿಂದ ಸುಧಾಕರ್‌ ಈ ರೀತಿ ಟ್ವೀಟ್‌ ಮಾಡಿದ್ದಾರೆ. ಅವರು ಸತ್ಯ ಹೇಳುತ್ತಿದ್ದೇನೆಂದು ಬರೀ ಪೋಸು ಕೊಡುತ್ತಿದ್ದಾರಷ್ಟೆ. ಆದರೆ ಇದರಲ್ಲಿ ಏನೂ ಹುರುಳಿಲ್ಲ. ಸುಧಾಕರ್‌ ಅವರು ಈಗ ಸೋತು ಸುಣ್ಣ ಆಗಿದ್ದಾರೆ. ಅವರನ್ನು ದುಡ್ಡು ಇಲ್ಲದ ಯುವಕನೊಬ್ಬ ಸೋಲಿಸಿದ್ದಾನೆ. ರಾಜಕಾರಣಕ್ಕೆ ಹೊಸಬ ಆತ. ಬರೀ ಮಾತಿನಲ್ಲೇ ಸುಧಾಕರ್‌ ಅವರನ್ನು ಸೋಲಿಸಿದ್ದಾನೆ. ಸುಧಾಕರ್ ಆರೋಪ ಸತ್ಯಕ್ಕೆ ದೂರವಾದ ವಿಚಾರ. ನಾನೇ 17 ಜನರ ನಾಯಕನಾಗಿದ್ದೆ. ಸಿದ್ದರಾಮಯ್ಯ ಪ್ರೇರಣೆ ಇದ್ದಿದ್ದರೆ ಅವತ್ತೇ ಹೇಳಬೇಕಿತ್ತು. ಇದೆಲ್ಲಾ ಸುಳ್ಳು. ಸತ್ಯ ನನಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ʻJDS-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ನಮ್ಮ ಸಮಸ್ಯೆ ಬಗ್ಗೆ, ನಮಗೆ ಆಗುತ್ತಿದ್ದ ಅನ್ಯಾಯಗಳ ಬಗ್ಗೆ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಬಳಿ ಪ್ರಸ್ತಾಪ ಮಾಡುತ್ತಿದ್ದೆವು. ಸಿದ್ದರಾಮಯ್ಯ ಆಗ ಈ ಸರ್ಕಾರದಲ್ಲಿ ನನ್ನ ಮಾತು ನಡೆಯುತ್ತಿಲ್ಲ. ನನ್ನ ಕ್ಷೇತ್ರ, ಜಿಲ್ಲೆಯ ಕೆಲಸಗಳೇ ಆಗುತ್ತಿಲ್ಲ ಎಂದು ಹೇಳುತ್ತಿದ್ದರು. 2019ರ ಲೋಕಸಭಾ ಚುನಾವಣೆವರೆಗೂ ಸಹಿಸಿಕೊಳ್ಳಿ. ಲೋಕಸಭಾ ಚುನಾವಣೆ ಮುಗಿದ ಬಳಿಕ ಮೈತ್ರಿ ಸರ್ಕಾರ ಇರಲ್ಲ. ಹೆಚ್ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಇರಲು ಬಿಡಲ್ಲ ಎಂದು ಹೇಳ್ತಿದ್ದರು. ಸಿದ್ದರಾಮಯ್ಯ ಶಾಸಕರಿಗೆ ಸಮಾಧಾನ ಹೇಳಿ ಕಳುಹಿಸುತ್ತಿದ್ದರು. ಕಾರ್ಯಕರ್ತರು, ಮುಖಂಡರನ್ನು ಉಳಿಸಿಕೊಳ್ಳಲು ರಿಸ್ಕ್ ತೆಗೆದುಕೊಂಡ್ವಿ. ರಾಜೀನಾಮೆ ನೀಡಿ ಮತ್ತೆ ಜನರಿಂದ ಆರಿಸಿ ಬಂದು ಮಂತ್ರಿಗಳಾದೆವು. ನಮ್ಮ ಈ ನಡೆಯಲ್ಲಿ ಸಿದ್ದರಾಮಯ್ಯ ಪ್ರೇರಣೆ ಇದೆ. ಇದನ್ನು ಪರೋಕ್ಷ ಅಥವಾ ಅಪರೋಕ್ಷ ಪಾತ್ರ ಇಲ್ಲ ಎನ್ನಲು ಸಾಧ್ಯವೇ?ʼ ಎಂದು ಟ್ವೀಟ್ ಮೂಲಕ ಸಿದ್ದರಾಮಯ್ಯ ವಿರುದ್ಧ ಡಾ.ಸುಧಾಕರ್ ಆರೋಪ ಮಾಡಿದ್ದರು.

ಇದಕ್ಕೆ ದನಿಗೂಡಿಸಿದ್ದ ಎಸ್.ಟಿ.ಸೋಮಶೇಖರ್‌ ಅವರು, ಮಾನ್ಯ ಸಿದ್ದರಾಮಯ್ಯನವರು ಸಮ್ಮಿಶ್ರ ಸರ್ಕಾರದ ದಿನಗಳಲ್ಲಿ ಶಾಸಕರಲ್ಲಿ ತೋಡಿಕೊಳ್ಳುತ್ತಿದ್ದ ಅಸಹಾಯಕತೆ, ಕೊಡುತ್ತಿದ್ದ ಆಶ್ವಾಸನೆ ಇದೇ ಎಂಬುದು ಸತ್ಯ. ಸಿದ್ದರಾಮಯ್ಯನವರ ಅಸಹಾಯಕತೆ ಸಹ ನಾವು ಪಕ್ಷ ಬಿಡಲು ಒಂದು ಪ್ರೇರಣೆಯಾಯಿತು ಎಂದರೆ ಅದು ತಪ್ಪಾಗಲಾರದು. ಸಹ ಇದನ್ನೇ ಹೇಳಿದ್ದರು ಎಂದು ಟ್ವೀಟ್‌ ಮಾಡಿದ್ದರು. ಇನ್ನು ಎಂಎಲ್‌ಸಿ ಎಚ್.ವಿಶ್ವನಾಥ್‌ ತಾವು ಗುಂಪಾಗಿ ಪಕ್ಷಾಂತರ ಮಾಡಿದ್ದ ಸಂಬಂಧ ಬಾಂಬೆ ಡೇಸ್‌ ಪುಸ್ತಕ ಬರೆದಿರುವುದಾಗಿ ಹಾಗೂ ಅದನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ವೀರಭದ್ರಪ್ಪ ಬಿಸ್ಲಳ್ಳಿಯವರು ಬರೆದ ʻಬಾಂಬೆ ರಿಟರ್ನ್‌ ಡೇಸ್‌ʼ ಪುಸ್ತಕವನ್ನು ಕೆಲ ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿತ್ತು.

    ಹಂಚಿಕೊಳ್ಳಲು ಲೇಖನಗಳು